AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RR vs RCB: ಪವರ್‌ಪ್ಲೇನಲ್ಲಿ ರನ್ ಬಂದರೂ ಪ್ರಮುಖ 5 ವಿಕೆಟ್ ಕಳೆದುಕೊಂಡ ಆರ್​​ಸಿಬಿ

IPL 2026: ಐಪಿಎಲ್ 2026 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಪವರ್‌ಪ್ಲೇನಲ್ಲಿ ಆರಂಭಿಕ ಆಘಾತ ಎದುರಿಸಿತು. ಗುವಾಹಟಿಯ ಬರ್ಸಪರದಲ್ಲಿ ನಡೆದ ಮಳೆಪೀಡಿತ ಪಂದ್ಯದಲ್ಲಿ ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು 61 ರನ್ ಗಳಿಸಿತು. ಅರ್ಚರ್ ಮತ್ತು ಬಿಷ್ಣೋಯ್ ಬೌಲಿಂಗ್ ದಾಳಿಗೆ ಆರ್​ಸಿಬಿ ಬ್ಯಾಟ್ಸ್‌ಮನ್‌ಗಳು ಪರದಾಡಿದರು, ಇದು ತಂಡದ ಸ್ಕೋರ್‌ಗೆ ಹಿನ್ನಡೆ ನೀಡಿತು.

ಪೃಥ್ವಿಶಂಕರ
|

Updated on: Apr 10, 2026 | 9:27 PM

Share
2026 ರ ಐಪಿಎಲ್‌ನಲ್ಲಿ ತವರಿನಿಂದ ಹೊರಕ್ಕೆ ಮೊದಲ ಪಂದ್ಯವನ್ನಾಡಿದ ಆರ್​​ಸಿಬಿ, ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಿತ್ತು. ಮಳೆ ಪೀಡಿತ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ ಪವರ್‌ಪ್ಲೇನಲ್ಲಿ ಅಂದರೆ ಮೊದಲ 6 ಓವರ್​ಗಳಲ್ಲಿ 60 ರನ್ ಕಲೆಹಾಕಿತ್ತಾದರೂ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡಿತು.

1 / 5
ಎಂದಿನಂತೆ ಆರ್​ಸಿಬಿ ಪರ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದರು. ಇತ್ತ ರಾಜಸ್ಥಾನ್ ಪರ ಬೌಲಿಂಗ್ ಆರಂಭಿಸಿದ ಚೋಫ್ರಾ ಆರ್ಚರ್ ಮೊದಲ ಎಸೆತದಲ್ಲೇ ಫಿಲ್ ಸಾಲ್ಟ್ ಅವರ ವಿಕೆಟ್ ಪಡೆದರು. ಆರ್ಚರ್ ಎಸೆದ ಬೌನ್ಸರ್​ಗೆ ಸಾಲ್ಟ್ ಬಳಿ ಉತ್ತರವಿರಲಿಲ್ಲ. ಹೀಗಾಗಿ ಸಾಲ್ಟ್ ಕೀಪರ್ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು.

2 / 5
ಸಾಲ್ಟ್ ವಿಕೆಟ್ ಬಳಿಕ ಬಂದ ದೇವದತ್ ಪಡಿಕ್ಕಲ್ ಎಂದಿನಂತೆ ಕೊಹ್ಲಿ ಜೊತೆಗೂಡಿ ಉತ್ತಮ ಜೊತೆಯಾಟ ಕಟ್ಟುತ್ತಿದ್ದರು. ಹೀಗಾಗಿ ಮೊದಲ ಓವರ್​ನಲ್ಲಿ ವಿಕೆಟ್ ಬಿದ್ದರೂ ಈ ಜೋಡಿ 2 ಓವರ್​ಗಳ ಅಂತ್ಯಕ್ಕೆ 32 ರನ್ ಕಲೆಹಾಕಿತ್ತು. ಆರ್ಚರ್ ಎಸೆದ 3ನೇ ಓವರ್​ನಲ್ಲೂ 13 ರನ್ ಬಂದಿತ್ತಾದರೂ, ಕೊನೆಯ ಎಸೆತದಲ್ಲಿ ಪಡಿಕ್ಕಲ್ ವಿಕೆಟ್ ಉರುಳಿತು.

3 / 5
ಮೊದಲೆರಡು ಪಂದ್ಯಗಳಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದ ಪಡಿಕ್ಕಲ್ ಈ ಪಂದ್ಯದಲ್ಲಿ 14 ರನ್ ಬಾರಿಸಿ ಔಟಾದರು. ಆರಂಭಿಕ ಎರಡು ವಿಕೆಟ್ ಪತನದ ಬಳಿಕ ಕೊಹ್ಲಿ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿತ್ತು. ಅದರಂತೆ ಬ್ಯಾಟ್ ಬೀಸಿದ ಕೊಹ್ಲಿ 16 ಎಸೆತಗಳಲ್ಲಿ 32 ರನ್ ಕಲೆಹಾಕಿದರು. ಆದರೆ ಬಿಷ್ಣೋಯಿ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು.

4 / 5
ಹೀಗಾಗಿ ಆರ್​ಸಿಬಿ ಪವರ್ ಪ್ಲೇ ಅಂತ್ಯಕ್ಕೆ 61 ರನ್ ಕಲೆಹಾಕಿತ್ತಾದರೂ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಕೊಹ್ಲಿ ವಿಕೆಟ್ ಬಿದ್ದ ಬಳಿಕ ಬ್ಯಾಟಿಂಗ್​ನಲ್ಲಿ ಬಡ್ತಿ ಪಡೆದು ಬಂದಿದ್ದ ಕೃನಾಲ್ ಪಾಂಡ್ಯ ಹೆಚ್ಚು ಪರಿಣಾಮಕಾರಿಯಾಗದೆ ಕೇವಲ 1 ರನ್​ಗೆ ಪೆವಿಲಿಯನ್ ಸೇರಿಕೊಂಡರು. ಜಿತೇಶ್ ಶರ್ಮಾ ಕೂಡ ಹೆಚ್ಚು ಹೊತ್ತು ನಿಲ್ಲದೆ ಕೇವಲ 5 ರನ್​ಗಳಿಗೆ ವಿಕೆಟ್ ಒಪ್ಪಿಸಿದರು.

5 / 5
Follow Us
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು

ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!

ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್

ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ

ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್

ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ

ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ

‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ

ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ

ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು