AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Love Horoscope: ಪ್ರೇಮ – ಪ್ರೀತಿ ಭವಿಷ್ಯ; ಈ ವಾರ ಈ ರಾಶಿಯ ಅವಿವಾಹಿತರಿಗೆ ಹೊಸ ಸಂಬಂಧದ ಪ್ರಸ್ತಾಪ ಬರಲಿದೆ

ಏಪ್ರಿಲ್ 12ರಿಂದ 18ರ ವರೆಗಿನ ಈ ವಾರದಲ್ಲಿ ನಿಮ್ಮ ಪ್ರೇಮ ಮತ್ತು ದಾಂಪತ್ಯ ಜೀವನ ಹೇಗಿರಲಿದೆ ಎಂಬುದರ ಸಂಪೂರ್ಣ ರಾಶಿಫಲ ಇಲ್ಲಿದೆ. ಹೊಸ ಪರಿಚಯಗಳು, ಹಳೆಯ ಸ್ನೇಹದ ಮರುಕಳಿಕೆ, ಸಂಬಂಧಗಳಲ್ಲಿನ ಏರಿಳಿತಗಳು ಹಾಗೂ ಕುಟುಂಬದೊಂದಿಗಿನ ಒಡನಾಟದ ಕುರಿತು ವಿವರವಾದ ಸಲಹೆಗಳನ್ನು ಪಡೆಯಿರಿ. ನಿಮ್ಮ ರಾಶಿಚಕ್ರದ ಪ್ರಕಾರ ಪ್ರೀತಿಯಲ್ಲಿನ ಸವಾಲುಗಳನ್ನು ಎದುರಿಸಲು ಮತ್ತು ಮಧುರ ಕ್ಷಣಗಳನ್ನು ಆನಂದಿಸಲು ಸಿದ್ಧರಾಗಿ.

Weekly Love Horoscope: ಪ್ರೇಮ - ಪ್ರೀತಿ ಭವಿಷ್ಯ; ಈ ವಾರ ಈ ರಾಶಿಯ ಅವಿವಾಹಿತರಿಗೆ ಹೊಸ ಸಂಬಂಧದ ಪ್ರಸ್ತಾಪ ಬರಲಿದೆ
Weekly Love Horoscope
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Apr 11, 2026 | 2:42 PM

Share

ಏಪ್ರಿಲ್ 12ರಿಂದ ಏಪ್ರಿಲ್ 18ರವರೆಗಿನ ಎರಡನೇ ವಾರವಾಗಿದ್ದು ಈ ವಾರದಲ್ಲಿ ಪರಿಚಿತವು ಪ್ರೇಮವಾಗಬಹುದು, ವರ್ತನೆ ನೇರವಾಗಿರಲಿ, ಅನುಮಾನಕ್ಕೆ ಆಸ್ಪದ ಬೇಡ. ಪ್ರೀತಿಯ ಕೊರತೆ ಕೆಲವರಿಗೆ ಆಗಲಿದ್ದು, ಮನಸ್ಸಿನೊಳಗೇ ದುಃಖಿಸಬೇಕಾಗುವುದು.

​ಮೇಷ:

​ಜೀವನ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಪ್ರೀತಿ ಗಟ್ಟಿಯಾಗಿರುತ್ತದೆ. ಅವಿವಾಹಿತರಿಗೆ ಹೊಸ ಸಂಬಂಧದ ಪ್ರಸ್ತಾಪ ಬರಬಹುದು. ಮಾತಿನಲ್ಲಿ ಸಂಯಮವಿರಲಿ, ಆಪ್ತತೆಯು ಹೆಚ್ಚಾಗಲಿದೆ.

​ವೃಷಭ:

​ಪ್ರೇಮ ಜೀವನದಲ್ಲಿ ಮಧುರವಾದ ಕ್ಷಣಗಳನ್ನು ಕಳೆಯುವಿರಿ. ಹಳೆಯ ಸ್ನೇಹಿತರ ಭೇಟಿ ಮನಸ್ಸಿಗೆ ಸಂತೋಷ ನೀಡುತ್ತದೆ. ದಾಂಪತ್ಯದಲ್ಲಿ ಪರಸ್ಪರ ಗೌರವ ಮತ್ತು ನಂಬಿಕೆ ವೃದ್ಧಿಯಾಗುವ ಸಮಯವಿದು.

​ಮಿಥುನ:

​ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆ ದೊರೆಯಬಹುದು. ಪ್ರೀತಿಯ ವಿಷಯದಲ್ಲಿ ಗೊಂದಲಗಳಿದ್ದರೆ ಈ ವಾರ ನಿವಾರಣೆಯಾಗಲಿವೆ. ಸ್ನೇಹ ಸಂಬಂಧಗಳು ಗಾಢವಾಗಲಿದ್ದು, ಪ್ರೇಮಿಗಳಿಗೆ ಮನೆಯವರ ಬೆಂಬಲ ಸಿಗಬಹುದು.

​ಕರ್ಕಾಟಕ:

ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ದಾಂಪತ್ಯದಲ್ಲಿನ ಕಹಿ ಮರೆತು ಹೊಸ ಆರಂಭಕ್ಕೆ ನಾಂದಿ ಹಾಡುವಿರಿ. ಭಾವನಾತ್ಮಕವಾಗಿ ಸಂಗಾತಿಗೆ ಹತ್ತಿರವಾಗುವಿರಿ. ಹೊಸ ಪರಿಚಯಗಳು ಸ್ನೇಹಕ್ಕೆ ತಿರುಗಲಿವೆ.

​ಸಿಂಹ:

​ಆಪ್ತ ಸಂಬಂಧಗಳಲ್ಲಿ ಸ್ವಲ್ಪ ಬಿಗುವಿನ ವಾತಾವರಣ ಇರಬಹುದು. ಅಹಂಕಾರ ಬಿಟ್ಟು ನಡೆದರೆ ಪ್ರೇಮ ಜೀವನ ಸುಖಮಯವಾಗಿರುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ತಾಳ್ಮೆ ಇಲ್ಲಿ ಅತಿ ಮುಖ್ಯ.

​ಕನ್ಯಾ:

​ನಿಮ್ಮ ಸಂವಹನ ಶೈಲಿಯಿಂದ ಪ್ರೀತಿ ಪಾತ್ರರ ಮನ ಗೆಲ್ಲುವಿರಿ. ಒಂಟಿಯಾಗಿರುವವರಿಗೆ ಆಕರ್ಷಕ ವ್ಯಕ್ತಿಗಳ ಭೇಟಿಯಾಗುವ ಸಾಧ್ಯತೆಯಿದೆ. ದಾಂಪತ್ಯದಲ್ಲಿ ಸುಖ-ಶಾಂತಿ ನೆಲೆಸಲಿದ್ದು, ಆಪ್ತತೆ ಹೆಚ್ಚಾಗಲಿದೆ.

​ತುಲಾ:

ಸಂಬಂಧಗಳಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ಸಂಗಾತಿಯ ಬೆಂಬಲ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಪ್ರೇಮಿಗಳು ವಿವಾಹದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಇದು ಸೂಕ್ತ ಸಮಯ. ಹಳೆಯ ಸ್ನೇಹ ಮರುಕಳಿಸಬಹುದು.

​ವೃಶ್ಚಿಕ:

​ಭಾವನಾತ್ಮಕವಾಗಿ ಸ್ವಲ್ಪ ಏರಿಳಿತಗಳಿರಬಹುದು. ಪ್ರೀತಿಪಾತ್ರರ ಮೇಲೆ ಸಂಶಯ ಬೇಡ, ಮುಕ್ತವಾಗಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ. ದಾಂಪತ್ಯದಲ್ಲಿ ರೊಮ್ಯಾಂಟಿಕ್ ಕ್ಷಣಗಳು ಹೆಚ್ಚಾಗಲಿವೆ.

​ಧನು:

ಹೊಸ ಸ್ನೇಹವು ಪ್ರೇಮಕ್ಕೆ ತಿರುಗುವ ಸಾಧ್ಯತೆಯಿದೆ. ಸಾಮಾಜಿಕ ಸಮಾರಂಭಗಳಲ್ಲಿ ಭಾಗವಹಿಸುವುದರಿಂದ ಸಂಬಂಧಗಳು ವೃದ್ಧಿಯಾಗುತ್ತವೆ. ಸಂಗಾತಿಯೊಡನೆ ದೂರದ ಪ್ರಯಾಣ ಕೈಗೊಳ್ಳುವ ಸಂಭವವಿದೆ.

​ಮಕರ:

​ಕೆಲಸದ ಒತ್ತಡದ ನಡುವೆಯೂ ಸಂಗಾತಿಗೆ ಸಮಯ ನೀಡುವಿರಿ. ದಾಂಪತ್ಯದಲ್ಲಿ ಪ್ರೀತಿ ಮತ್ತು ಜವಾಬ್ದಾರಿ ಸಮಾನವಾಗಿರುತ್ತದೆ. ಆಪ್ತ ಸ್ನೇಹಿತರ ಮಾರ್ಗದರ್ಶನ ನಿಮ್ಮ ಪ್ರೇಮ ಜೀವನಕ್ಕೆ ಸಹಕಾರಿಯಾಗಲಿದೆ.

​ಕುಂಭ:

ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಲು ಇದು ಸಕಾಲ. ನಿಮ್ಮ ಆಕರ್ಷಣೆ ಹೆಚ್ಚಾಗಲಿದ್ದು, ಪ್ರೇಮಿಗಳ ನಡುವೆ ಬಾಂಧವ್ಯ ಗಟ್ಟಿಯಾಗುತ್ತದೆ. ಸಂಗಾತಿಯಿಂದ ವಿಶೇಷ ಪ್ರೋತ್ಸಾಹ ಸಿಗಲಿದ್ದು, ನೆಮ್ಮದಿಯ ವಾರವಿದು.

​ಮೀನ:

​ಸಂಬಂಧಗಳಲ್ಲಿ ಮೃದುತ್ವವಿರಲಿ. ಸಂಗಾತಿಯ ಭಾವನೆಗಳಿಗೆ ಬೆಲೆ ಕೊಡಿ. ಸಣ್ಣ ವಿವಾದಗಳನ್ನು ಬೆಳೆಸಬೇಡಿ. ವಾರದ ಅಂತ್ಯಕ್ಕೆ ಪ್ರೇಮ ಜೀವನದಲ್ಲಿ ಹೊಸ ಚೈತನ್ಯ ಮೂಡಲಿದೆ ಮತ್ತು ಆಪ್ತತೆ ಹೆಚ್ಚಲಿದೆ.

– ಲೋಹಿತ ಹೆಬ್ಬಾರ್

Follow Us