AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ಜುಲೈ​ 06 ರಿಂದ 25 ರ ವರೆಗಿನ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ

ಜುಲೈ ತಿಂಗಳ ಎರಡನೇ ವಾರ 06-೦7-2025ರಿಂದ 22-07-2025ರವರೆಗೆ ಇರಲಿದೆ. ಶುಕ್ರನು ತನ್ನ ರಾಶಿಯಲ್ಲಿ ಇದ್ದು ಸುಖಕ್ಕೆ ಬೇಕಾದ ಎಲ್ಲವನ್ನು ಕೊಟ್ಟರೂ ಅನುಭವಿಸುವ ಮನೋಧರ್ಮ ಇಲ್ಲದೇ ಹಾಳಾಗುವುದು ಅಥವಾ ಅದನ್ನು ದುರುಪಯೋಗ ಮಾಡುಕೊಂಡು ಕೆಡುವುದು. ಇಷ್ಟದೇವರು ನಿಮಗೆ ಸೂಕ್ತ ಮಾರ್ಗವನ್ನು ತೋರಿಸುವನು. ಎಂದಿಗೂ ಮರೆಯಬಾರದು‌.

Weekly Horoscope: ಜುಲೈ​ 06 ರಿಂದ 25 ರ ವರೆಗಿನ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ
ಜ್ಯೋತಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ|

Updated on: Jul 06, 2025 | 1:33 AM

Share

ಜುಲೈ ತಿಂಗಳ ಎರಡನೇ ವಾರ 06-೦7-2025ರಿಂದ 22-07-2025ರವರೆಗೆ ಇರಲಿದೆ. ಶುಕ್ರನು ತನ್ನ ರಾಶಿಯಲ್ಲಿ ಇದ್ದು ಸುಖಕ್ಕೆ ಬೇಕಾದ ಎಲ್ಲವನ್ನು ಕೊಟ್ಟರೂ ಅನುಭವಿಸುವ ಮನೋಧರ್ಮ ಇಲ್ಲದೇ ಹಾಳಾಗುವುದು ಅಥವಾ ಅದನ್ನು ದುರುಪಯೋಗ ಮಾಡುಕೊಂಡು ಕೆಡುವುದು. ಇಷ್ಟದೇವರು ನಿಮಗೆ ಸೂಕ್ತ ಮಾರ್ಗವನ್ನು ತೋರಿಸುವನು. ಎಂದಿಗೂ ಮರೆಯಬಾರದು‌.

ಮೇಷ ರಾಶಿ: ಜುಲೈ ತಿಂಗಳ ಎರಡನೇ ವಾರದಲ್ಲಿ ನಿಮಗೆ ಶುಭ. ರಾಶಿಯ ಅಧಿಪತಿ ಮಿತ್ರನ ರಾಶಿಯಲ್ಲಿ ಸ್ಥಿತನಾಗಿದ್ದಾನೆ. ಆದರೆ ನಿಮ್ಮದಲ್ಲದ ವಿಚಾರದಲ್ಲಿ ಸಲಹೆಯನ್ನು ಕೊಡಲು ಹೋಗುವುದು ಬೇಡ. ಯಾರದೋ ಅಸೆಗೆ ನೀವು ಬಲಿಯಾಗುವಿರಿ. ಕೊನೆಗೆ ನಿಮ್ಮ ನಡುವಲ್ಲಿ ಬಿಟ್ಟು ಆನಂದಿಸುವರು. ಗೃಹ ನಿರ್ಮಾಣ ಕಾರ್ಯದಲ್ಲಿ ಅತಿಯಾದ ಗಡಿಬಿಡಿ ಬೇಡ. ಒಂದೊಂದೇ ಮೆಟ್ಟಿಲೇರಿ ತುದಿಯನ್ನು ಮುಟ್ಟಬೇಕು. ಮಕ್ಕಳ ಬಗ್ಗೆ ಹೆಮ್ಮೆ ಬರಲಿದೆ.‌ ಸಜ್ಜನರ ಸಹವಾಸ ಪಡೆಯಲು ಬಯಸುವಿರಿ. ಅನಪೇಕ್ಷಿತ ವಿಷಯವನ್ನು ಯಾರ ಜೊತೆಯೂ ಮಾತನಾಡಬೇಡಿ. ನಿಮ್ಮ‌‌ ಕೆಲಸದ ಬಗ್ಗೆ ಗಮನ ಹೆಚ್ಚಿರಲಿ. ಏಕಾಗ್ರತೆಯು ಭಂಗವಾಗಲು ನಿಮಗೆ ಅನೇಕ ಕಾರಣಗಳಿರವುದು. ಸ್ಕಂದನು ಪ್ರಸನ್ನನಾಗಲು ಸ್ತೋತ್ರ ಮಾಡಿ.

ವೃಷಭ ರಾಶಿ: ರಾಶಿ ಚಕ್ರದ ಎರಡನೇ ರಾಶಿಯವರಿಗೆ ಈ ವಾರ ಶುಭ. ರಾಶಿಯ ಅಧಿಪತಿ ಸ್ವಸ್ಥಾನದಲ್ಲಿ ಇದ್ದಾನೆ. ಆತ್ಮಬಲದಲ್ಲಿ ಕೊರತೆ ಇರದು. ನೀವು ಮಕ್ಕಳ ಜೊತೆ ಖುಷಿಯಿಂದ ಕಾಲ ಕಳೆಯುವಿರಿ. ಅನಿಸಿದ್ದನ್ನು ಹೇಳಿಕೊಂಡು ಮನಸ್ಸು ನಿರಾಳವಾಗಲಿದೆ. ವ್ಯವಹಾರದಿಂದ ವಂಚಿತರಾಗುವಿರಿ. ತಾಯಿಯು ನಿಮಗೆ ಬೇಕಾದ ಸಹಕಾರವನ್ನು ಕೊಡುವಳು. ಉಸಿರಾಟ ತೊಂದರೆ ಕಾಣಿಸಿಕೊಳ್ಳಬಹುದು. ಸಮಯಪಾಲನೆಯಲ್ಲಿ ಸೋಲುವಿರಿ. ಸುತ್ತಲಿನ ಸನ್ನಿವೇಶ ಸಂದರ್ಭವನ್ನು ನೋಡಿಕೊಂಡು ಮಾತನಾಡಬೇಕಾಗುವುದು. ಅನಿರೀಕ್ಷಿತ ಸುದ್ದಿಯು ಬರಬಹುದು. ನಿಮ್ಮ‌ ವಸ್ತುಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಮನೆಯವರ ಜೊತೆ ಸಮಯವನ್ನು ಕಳೆಯುವಿರಿ. ಮಂಗಲಗೌರಿಯನ್ನು ಉಪಾಸಿಸಿ.

ಮಿಥುನ ರಾಶಿ: ಈ ವಾರ ನಿಮಗೆ ಮಿಶ್ರಫಲ. ರಾಶಿಯ ಅಧಿಪತಿ ದ್ವಿತೀಯದಲ್ಲಿ ಇದ್ದಾನೆ. ಸಣ್ಣ ಮೊತ್ತವನ್ನು ಪಡೆಯಲು ಒಳ್ಳೆಯ ವಾರ. ನಿಮ್ಮ ಮಾತುಗಳು ಇನ್ನೊಬ್ಬರಲ್ಲಿ ಕರುಣೆಯನ್ನು ಉಂಟುಮಾಡುವುದು. ನಿಮ್ಮ ಕಾರ್ಯಪರತೆಯಿಂದ ಸಂಸ್ಥೆಯು ಯಶಸ್ಸನ್ನು ಸಾಧಿಸಬಹುದು. ನಿಮ್ಮ ಆಲೋಚನೆಗಳು ನಿಮ್ಮ ವ್ಯಕ್ತಿತ್ವವನ್ನು ರೂಪಿಸಿದೆ. ಸಂಗಾತಿಯ ನಡುವೆ ಭಿನ್ನಾಭಿಪ್ರಾಯಗಳು ಏಳಬಹುದು. ವಾಗ್ವಾದ ಹೆಚ್ಚು ನಡೆಯಲ್ಲಿದೆ. ತಾಯಿಯ ಜೊತೆ ವೈಮನಸ್ಸು ಬರುವುದು. ಒಬ್ಬರು ತಟಸ್ಥರಾಗಿ. ವಿದ್ಯಾರ್ಥಿಗಳು ಇಂದು ಖುಷಿಪಡಲಿದ್ದಾರೆ. ಮಾತಿನಲ್ಲಿ ಹೆಚ್ಚಿನ ಎಚ್ಚರವಿರಲಿ, ಕುಹುಕವಾಡುವುದು ನಿಮ್ಮ ಇಷ್ಟದವರ ಜೊತೆ ಸಮಯವನ್ನು ಕಳೆಯುವಿರಿ. ವಿವಾದವನ್ನು ಮಾಡಿಕೊಳ್ಳಲು ಹೋಗಬೇಡಿ. ನೃಸಿಂಹನು ನಿಮ್ಮ ಬಲವನ್ನು ಹೆಚ್ಚಿಸುವನು.

ಕರ್ಕಾಟಕ ರಾಶಿ: ಈ ತಿಂಗಳ ಎರಡನೇ ವಾರದಲ್ಲಿ ಮಿಶ್ರಫಲ. ಮಾನಸಿಕ ಏರಿಳಿತದಿಂದ ಕಷ್ಟ. ಯಾರ ಬಳಿಯೂ ಹೇಳಿಕೊಳ್ಳಲಾಗದೇ ತೊಳಲಾಟ. ನಿಮಗೆ ಸಾರ್ವಜನಿಕವಾಗಿ ಸ್ಥಾನಮಾನವನ್ನು ಪಡೆಯಲು ಹಂಬಲಿಸುವಿರಿ. ರಾಜಕಾರಣದ ಗಾಳಿ ಬೀಸಲಿದೆ. ಇದರಿಂದ ನೀವು ಪ್ರಭಾವಿತರೂ ಆಗಬಹುದು. ಆದಾಯದ ಮೂಲವನ್ನು ನೀವು ಗಟ್ಟಿ ಮಾಡಿಕೊಳ್ಳುವಿರಿ. ನಿಮ್ಮ ಸಹೋದರನ ಆರೋಗ್ಯದಲ್ಲಿ ಏರುಪೇರು. ಸಂಗಾತಿಯೇ ನಿಮ್ಮ ಕೆಲಸಗಳನ್ನು ಮಾಡಿಕೊಡಬಹುದು. ಸರ್ಕಾರದಲ್ಲಿ ಆಗಬೇಕಾದ ನಿಮ್ಮ ಕೆಲಸವು ವೇಗವಾಗಲಿದೆ. ಜೊತೆ ಇರುವವರ ಮೇಲೆ‌ ನಂಬಿಕೆ ಕಡಿಮೆ ಆದೀತು. ಸೇವಾ ಮನೋಭಾವದಿಂದ ನಿಮ್ಮೊಳಗೆ ಹರ್ಷ. ಕಾತ್ಯಾಯಿನಿಯನ್ನು ಕಷ್ಟ ಪರಿಹಾರಕ್ಕಾಗಿ ಸ್ತುತಿಸಿ.

ಸಿಂಹ ರಾಶಿ: ಇದು ಐದನೇ ರಾಶಿಯಾಗಿದ್ದು ಈ ವಾರದ ಯಶಸ್ವೀ ರಾಶಿಗಳಲ್ಲಿ ಇದೂ ಒಂದು. ಸಣ್ಣ ಪುಟ್ಟ ತೊಂದರೆಗಳಿಗೆ ನೀವು ಹಿಂದೆ ಹೆಜ್ಜೆ ಇಡುವ ಅವಶ್ಯಕತೆ ಇಲ್ಲ. ಧೈರ್ಯದಿಂದ ಮುನ್ನಡೆಯಿರಿ. ತಾನಾಗಿಯೇ ಬೇಕಾದುದು ಒದಗುವುದು. ಹಣಕಾಸಿನ ತೊಂದರೆಯನ್ನು ಸ್ನೇಹಿತರು ನೀಗಿಸುವರು. ಸಂಗಾತಿಯ ನಡುವಿನ ಕಲಹವನ್ನು ನೀವು ಸರಿ ಮಾಡಿಕೊಳ್ಳಿ. ಸುಳ್ಳಾಡಿ ಆತ್ಮವಂಚನೆಯನ್ನು ಮಾಡಿಕೊಳ್ಳಬೇಡಿ. ನಿಮ್ಮ ವಿರುದ್ಧ ಮಾತನಾಡಿಲ್ಲವೆಂದರೆ ನಿಮ್ಮ ಕ್ರಮ ಸರಿ ಇದೆ ಎಂದಲ್ಲ. ಬೇಸರವಾಗಬಾರದೆಂದೂ ಸುಮ್ಮನಿರುವರು. ನಿಮ್ಮ ವಾತಾರಣವು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು. ನೀರಿನಿಂದ ನೀವು ಭಯಪಡುವಿರಿ. ವೀರಭದ್ರನಿಗೆ ರುದ್ರಾಭಿಷೇಕ‌ ಮಾಡಿಸಿ.

ಕನ್ಯಾ ರಾಶಿ: ರಾಶಿ ಚಕ್ರದ ಐದನೇ ರಾಶಿಯವರಿಗೆ ಈ ವಾರ ಸುಖಾಸುಖ. ಬುಧನು ಏಕಾದಶದಲ್ಲಿ ಇದ್ದು ಸರಿಯಾದ ಸಮಯಕ್ಕೆ ಬುದ್ಧಿ ಸೂಚಿಸದೇ ಇದ್ದೀತು. ದುರ್ವ್ಯಸನವನ್ನು ರೂಢಿಸಿಕೊಳ್ಳುವ ಸಾಧ್ಯತೆ ಇದೆ. ಪಶ್ಚಾತ್ತಾಪದಿಂದ ನಿಮ್ಮ ತಪ್ಪುಗಳು ಸರಿಯಾಗಬಹುದು. ಆತ್ಮವಿಶ್ವಾಸವನ್ನು ಪ್ರಯತ್ನಪೂರ್ವಕವಾಗಿ ಬೆಳೆಸಿಕೊಳ್ಳಬೇಕಾಗುವುದು. ಕುಟಂಬದವರು ಸೇರಿಕೊಂಡು ಎಲ್ಲರ ಶ್ರೇಯಸ್ಸಿಗೆ ಧಾರ್ಮಿಕ ಕಾರ್ಯಗಳನ್ನು ಮಾಡುವರು. ಹೊಸ ವ್ಯವಹಾರವನ್ನು ಆರಂಭಿಸಿರುವವರಿಗೆ ಗೊಂದಲವಾಗಲಿದೆ. ದೊಡ್ಡವರ ವಿಚಾರದಲ್ಲಿ ನೀವು ತಗ್ಗಿ ಬಗ್ಗಿ ನಡೆಯಬೇಕಾದೀತು. ಕೋಪವನ್ನು ಕಡಿಮೆ ಮಾಡಿಕೊಂಡು ಕಾರ್ಯದಲ್ಲಿ ತೊಡಗಿಕೊಳ್ಳಿ. ಸಂಕಲ್ಪ ಸಹಿತವಾಗಿ ಗೋಗ್ರಾಸ ನೀಡಿ.

ತುಲಾ ರಾಶಿ: ಈ ವಾರ ನಿಮಗೆ ಅಶುಭ. ರಾಶಿಯೇ ಅಧಿಪತಿ ಅಶುಭ ಸ್ಥಾನದಲ್ಲಿ ಇರುವನು. ವಾಹನ ಚಾಲನೆ, ಭೋಗ ವಸ್ತುಗಳಿಂದ ದೂರವಿರಿ. ಜಾಗರೂಕತೆಯಿಂದ ಬಳಸಿ. ನಿಮ್ಮ ಮಾತುಗಳನ್ನು ಸ್ಪಷ್ಟವಾಗಿ ತಿಳಿಸಿ. ಗೋಡೆಯ ಮೇಲಿನ ದೀಪದಂತೆ ಆಗುವುದು ಬೇಡ. ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ಕೊಡುವುದು ಉತ್ತಮ. ಭೂಮಿಯ ವ್ಯವಹಾರವು ಅಲ್ಪ ಅಭಿವೃದ್ಧಿಯನ್ನು ಕಾಣಲಿದೆ. ಆರ್ಥಿಕ ಒತ್ತಡವು ಮನೆಯಲ್ಲಿ ಅಶಾಂತಿಯನ್ನು ಎಬ್ಬಿಸಬಹುದು. ನಿಮ್ಮ ಮನಸ್ಸಿನ ನಿಯಂತ್ರಣವು ನಿಮ್ಮ ಕೈಯಲ್ಲಿರಲಿ.‌ ತಂತ್ರಜ್ಞರು ವಿದೇಶ ಪ್ರವಾಸವನ್ನು ಮಾಡಿ ಬರುವರು. ನಿಮ್ಮವರನ್ನು ಬೀಳ್ಕೊಡಲು ನಿಮಗೆ ಕಷ್ಟವಾದೀತು. ಮಹಾಕಾಳಿಯನ್ನು ಆಪತ್ತಿನ ನಿವಾರಣೆಗೆ ಪ್ರಾರ್ಥಿಸಿ.

ವೃಶ್ಚಿಕ ರಾಶಿ: ನಿಮಗೆ ಈ ವಾರ ಶುಭಾಗಮನದ ಒಂದೊಂದೇ ಲಕ್ಷಣಗಳು ಕಾಣಿಸುವುವು. ಅಂದುಕೊಂಡ ಸಮಯಕ್ಕೆ ಕೆಲಸಗಳು ಆಗದು ಎಂದು ಬೇಸರವಾಗಿ, ಬೇಗನೆ ಮಾಡುವಿರಿ. ಅದೃಷ್ಟವನ್ನು ನಂಬಿ ಕಾರ್ಯದಲ್ಲಿ ಪ್ರವೃತ್ತರಾಗಿ. ಗೊತ್ತಿಲ್ಲದ ವಿಚಾರವನ್ನು ಪ್ರಸಾರ ಮಾಡುವುದು ಬೇಡ. ಅನೇಕ ದಿನಗಳಿಂದ ಉದ್ಯೋಗ ನಿರ್ವಹಣೆಯು ಬೇಸರ ತರಿಸಿದ್ದು ಹೊರ ಕಡೆ ಸುತ್ತಾಡುವ, ವಿರಾಮ ಪಡೆಯುವ ಮನಸ್ಸಾಗುವುದು. ಈ ವಾರ ನಿಮ್ಮ ಕೆಲಸವು ಅಡೆತಡೆಗಳಿಲ್ಲದೆ ಮುಂದೆ ಸಾಗುತ್ತದೆ. ಮನೆಯಲ್ಲಿ ನೀವು ಸಂಭ್ರಮವನ್ನು ಆಚರಿಸುವಿರಿ. ಕಾಲಕ್ಕೆ ಬೇಕಾದ ಮಾರ್ಗದರ್ಶನದ ಅಗತ್ಯವಿರಲಿದೆ. ಸೇನಾಪತಿಯಂತೆ ಎಲ್ಲದಕ್ಕೂ ಮುನ್ನಡೆಯುವಿರಿ.

ಧನ ರಾಶಿ: ಈ ರಾಶಿಯವರಿಗೆ ಈ ವಾರ ಅಪೂರ್ವ ಶುಭಗಳು. ರಾಶಿಯ ಅಧಿಪತಿ ಸಪ್ತಮದಲ್ಲಿ. ಸ್ಥಿರಾಸ್ತಿಯನ್ನು ಕೊಡುವ ಆಲೋಚನೆಯನ್ನು ಮಾಡುವಿರಿ. ಉತ್ತಮ‌ ಬೆಲೆಗೆ ಮಾರಾಟವೂ ಆಗುವುದು. ಮನೆಯ ಕೆಲಸದಿಂದ ನಿಮಗೆ ಅಧಿಕ ಶ್ರಮವೆನಿಸುವುದು. ನೆಮ್ಮದಿ ಸಿಕ್ಕು ಎಲ್ಲವೂ ಮಾಯಾಗುವುದು. ಮನೆಯಲ್ಲಿ ಇಂದು ಬಹಳ ಸಂತೋಷದಿಂದ ಇರುವಿರಿ. ಬಹಳ ಹಿಂದಿನ ಆಸೆಯನ್ನು ಸಂಗಾತಿಯು ಪೂರೈಸುವನು. ನಿಮ್ಮ ಅನಗತ್ಯ ಮಾತುಗಳಿಂದ ವಿವಾದವು ಹುಟ್ಟಬಹುದು. ನಿಮ್ಮದಲ್ಲದ ವಸ್ತುವಿನ ಬಗ್ಗೆ ನಿಮಗೆ ಚಿಂತೆ‌ ಬೇಡ. ಸಾಲದ ಮರುಪಾವತಿಗೆ ಸಮಯವನ್ನು ಕೇಳುವಿರಿ. ಗುರುದರ್ಶನದಿಂದ ಇನ್ನಷ್ಟು ಸ್ಫೂರ್ತಿ ಸಿಗುವುದು.

ಮಕರ ರಾಶಿ: ಈ ವಾರದಂದು ನಿಮಗೆ ಶುಭ. ರಾಶಿಯ ಅಧಿಪತಿ ಶನಿ ತೃತೀಯದಲ್ಲಿ ಸಂತೋಷದಲ್ಲಿ ಇದ್ದಾನೆ. ದ್ವೇಷ, ಕಲಹಗಳಿಗೆ ನಿಮಗೆ ಮನಸ್ಸಾಗದು. ಮೈಮರೆತು ತುರ್ತು ಕೆಲಸವನ್ನು ಹಾಗೆಯೇ ಇಟ್ಟುಕೊಳ್ಳುವಿರಿ. ಅಸಹಜ ವರ್ತನೆಯು ಮನೆಯಲ್ಲಿ ಸಂದೇಹಕ್ಕೆ ಕಾರಣವಾಗುವುದು. ಹಿರಿಯರನ್ನು ಅನಾದರದಿಂದ ನೋಡಬೇಡಿ. ಯಾರ ಜೊತೆಗೂ ಸೌಹಾರ್ದತೆ ಬೆಳೆಸಿಕೊಳ್ಳಲಾಗದು. ನಿಮ್ಮ ಅಸಮಾಧಾನವನ್ನು ಆಪ್ತರ ಬಳಿ ಹೇಳಿಕೊಳ್ಳಿ. ಉದ್ಯೋಗದಲ್ಲಿ ಎದುರಾದ ಸನ್ನಿವೇಶಗಳನ್ನು ಶಾಂತ ಮಾಡುವಿರಿ. ಸಿಟ್ಟಗೊಂಡರೂ ಬೇಗ ಉಪಶಮನವಾಗಿ ಸಹಜ ಸ್ಥಿತಿಗೆ ಬರುವಿರಿ. ಸ್ವಂತ್ರವಾಗಿ ಜೀವನ‌ವನ್ನು ಸಾಗಿಸುವ ನಿರ್ಧಾರವನ್ನು ಮಾಡುವಿರಿ. ಕೇಳದೇ ಇರುವವರಿಗೆ ಏನನ್ನೂ ಕೊಡಬೇಡಿ. ಕುಮಾರಿಯರಿಗೆ ಭೋಜನ ಮಾಡಿಸಿ.

ಕುಂಭ ರಾಶಿ: ಈ ವಾರ ಸಾಡೇ ಸಾಥ್ ನ ಪ್ರಭಾವದಿಂದ ಎಲ್ಲವೂ ಇಳಿಮುಖವಾಗಿ ಕಂಡರೂ ಭಯಪಡುವ ಅವಶ್ಯಕತೆ ಕಾಣಿಸದು. ವಸ್ತುಗಳ ಮಾರಾಟದ ನಿಮಿತ್ತ ನೀವು ಪರ ಊರಿಗೆ ಹೋಗಲಿದ್ದೀರಿ. ನಿಮಗೆ ವಿವಾಹವಾಗಿಲ್ಲ ಎಂಬ ಕೊರಗು ಕಾಡುವುದು. ವೈವಾಹಿಕ ಜೀವನಕ್ಕೆ ದೊಡ್ಡ ಪೆಟ್ಟು ಬೀಳುವುದು. ವಿವಾಹವಾಗಲು ಯಾರನ್ನಾದರೂ ನೀವೇ ಕೇಳುವ ಸ್ಥಿತಿ ಬರಲಿದೆ. ನಿಮ್ಮ ಸ್ವಭಾವಕ್ಕೆ ಹಿಂದಿಕೊಳ್ಳುವವರು ಸಿಗುವುದು ಕಷ್ಟವಾದೀತು. ಮಾಡುವ ಪ್ರಯಾಣದಲ್ಲಿ ಅಪರಿಚಿತರ ಸಖ್ಯವಾಗಲಿದೆ. ನಿಮ್ಮ ಎಲ್ಲ ವಿವರಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವುದು ಬೇಡ. ಇನ್ನೊಬ್ಬರ ಬಗ್ಗೆ ಅಸೂಯೆ ಉಂಟಾಗಬಹುದು. ದುರ್ಗಾದೇವಿಯನ್ನು ಅನನ್ಯ ಭಕ್ತಿಯಿಂದ ಶರಣಾಗಿ.

ಮೀನ ರಾಶಿ: ರಾಶಿ ಚಕ್ರದ ಕೊನೆಯ ರಾಶಿಗೆ ಈ ವಾರ ಮಿಶ್ರ ಫಲ. ರಾಶಿಯ ಅಧಿಪತಿ ಚತುರ್ಥದಲ್ಲಿ ಇದ್ದು ವಾಹನಾದಿ ಸುಖ ಕೊಟ್ಟರೂ ಅದನ್ನು ಅನುಭವಿಸುವ ಮನಸ್ಸು ನಿಮ್ಮಲ್ಲಿರದು. ಉಪಕಾರ ಮಾಡಲು ಹೋಗಿ ಆಪತ್ತಿನಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಸ್ನೇಹಿತರ ಜೊತೆ ನಿಮ್ಮ ನೋವನ್ನು ಹಂಚಿಕೊಳ್ಳುವಿರಿ. ತಂದೆಯ ಜೊತೆ ಸಮಾರಂಭಗಳಿಗೆ ಹೋಗುವಿರಿ. ಸ್ಥೂಲವಾದ ಲೆಕ್ಕಾಚಾರವನ್ನು ಇಟ್ಟುಕೊಂಡು ಮುಂದುವರೆಯಿರಿ. ವಾಹನ ದುರಸ್ತಿಗೆ ಹಣ ವ್ಯರ್ಥವಾಗಬಹುದು. ಮಕ್ಕಳು ನಿಮ್ಮ ಬಳಿ ನಾನಾ ಅನವಶ್ಯಕ ಪ್ರಶ್ನೆಗಳನ್ನು ಕೇಳುವರು. ನಿಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವಿರಿ. ಸ್ತ್ರೀಯರ ಮೇಲೆ ನಿಮಗೆ ಕರುಣೆ ಬರಬಹುದು.

ಲೋಹಿತ ಹೆಬ್ಬಾರ್ 8762924271 (what’s app only)

ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು