Weekly Horoscope: ಜುಲೈ 20 ರಿಂದ 26 ರ ವರೆಗಿನ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ
ಜುಲೈ ತಿಂಗಳ ನಾಲ್ಕನೇ ವಾರ 20-07-2025ರಿಂದ 26-07-2025ರವರೆಗಿನ ಭವಿಷ್ಯ ಇರಲಿದೆ. ಈ ವಾರ ಸ್ವರಾಶಿಯಿಂದ ಶುಕ್ರನ ಬದಲಾವಣೆ ಆಗಲಿದ್ದು ಗುರುವಿನ ಸಂಯೋಗವಾಗಲಿದೆ. ರವಿ ಬುಧರ ಯೋಗವೂ ಆಗಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಕಾಣಿಸಲಿದ್ದು, ಮಕ್ಕಳ ವಿಚಾರದಲ್ಲಿ ವೈಮನಸ್ಯ ಬರಲಿದೆ. ಬ್ರಹ್ಮಚಾರಿಗಳಿಗೆ ಭೋಜನ ಮಾಡಿಸಿ.

ಜುಲೈ ತಿಂಗಳ ನಾಲ್ಕನೇ ವಾರ 20-07-2025ರಿಂದ 26-07-2025ರವರೆಗೆ ಇರಲಿದೆ. ಈ ವಾರ ಸ್ವರಾಶಿಯಿಂದ ಶುಕ್ರನ ಬದಲಾವಣೆ ಆಗಲಿದ್ದು ಗುರುವಿನ ಸಂಯೋಗವಾಗಲಿದೆ. ರವಿ ಬುಧರ ಯೋಗವೂ ಆಗಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಕಾಣಿಸಲಿದ್ದು, ಮಕ್ಕಳ ವಿಚಾರದಲ್ಲಿ ವೈಮನಸ್ಯ ಬರಲಿದೆ. ಬ್ರಹ್ಮಚಾರಿಗಳಿಗೆ ಭೋಜನ ಮಾಡಿಸಿ.
ಮೇಷ ರಾಶಿ: ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಈ ತಿಂಗಳ ಕೊನೆಯ ವಾರದಲ್ಲಿ ಆದಾಯಕ್ಕಿಂತ ಅಧಿಕವಾದ ಖರ್ಚನ್ನು ನೀವು ತೋರಿಸುವಿರಿ. ಈ ವಾರ ನಿಮ್ಮ ಪರೀಕ್ಷೆಯ ಕಾಲವಾಗಿರಲಿದ್ದು ಎಚ್ಚರಿಕೆಯಿಂದ ಮಾತನಾಡಿ. ಗುರು – ಹಿರಿಯರಲ್ಲಿ ಶ್ರದ್ಧೆ, ಗೌರವದ ಅಗತ್ಯವಿದೆ. ನೇರ ನುಡಿಯಿಂದ ಶತ್ರುಗಳು ಹುಟ್ಟಿಕೊಂಡಾರು. ವಾರದಲ್ಲಿ ಸಮಯಸ್ಫೂರ್ತಿಯಿಂದ ಕೆಲಸವನ್ನು ಮಾಡುವಿರಿ. ದುರಭ್ಯಾಸದಿಂದ ನಿಮಗೆ ತೊಂದರೆಗಳು ಕಾಣಿಸಿಕೊಳ್ಳುವುದು. ಶುಭವಾರ್ತೆಯ ನಿರೀಕ್ಷೆಯಲ್ಲಿ ಇರುವಿರಿ. ಈ ವಾರ ಸಂಗಾತಿಯ ಜೊತೆ ದೂರದ ಊರಿಗೆ ವಿಹಾರವನ್ನು ಮಾಡುವಿರಿ.
ವೃಷಭ ರಾಶಿ: ಈ ವಾರ ರಾಶಿ ಅಧಿಪತಿ ಬದಲಾವಣೆ ಆಗಲಿದೆ. ದ್ವೀತೀಯದಲ್ಲಿ ಇರುವ ಕಾರಣ ಹೊಸ ವಿಚಾರವನ್ನು ಹುಡುಕುವುದು ನಿಮಗೆ ಪ್ರಿಯವಾದುದಾಗಿದೆ. ನೇರ ಮಾತುಗಳು ನಿಮಗೆ ಸಹಿಸಲು ಅಶಕ್ಯವಾದ ನೋವನ್ನು ಕೊಡಲಿದೆ. ನೀವು ಊಹಿಸದಷ್ಟು ಸಂಗಾತಿಯ ಸ್ವಭಾವವು ಇರುವುದಿಲ್ಲ. ಇದು ನಿಮಗೆ ಅನಂತರ ಬೇಸರವನ್ನು ತರಿಸಬಹುದು. ಏಕಪಕ್ಷೀಯವಾಗಿ ನಿರ್ಧರಿಸದೇ ಎಲ್ಲರ ಅಭಿಪ್ರಾಯವನ್ನು ಪಡೆಯುವಿರಿ. ನಿಮ್ಮ ಕೆಲಸವು ಅನೇಕರಿಗೆ ಉಪಯೋಗವಾಗುವುದು. ನಿಮ್ಮ ಮಾತುಗಳು ಅಸ್ಪಷ್ಟವಾಗಿ ಇರಲಿದೆ. ತಾಳ್ಮೆಯಿಂದ ನೀವು ಜಯಗಳಿಸುವಿರಿ. ಅಧಿಕ ಒತ್ತಡವನ್ನು ನೀವು ಮಾಡಿಕೊಳ್ಳಲಾರಿರಿ.
ಮಿಥುನ ರಾಶಿ: ರಾಶಿ ಚಕ್ರದ ಮೂರನೇ ರಾಶಿಯವರಿಗೆ ಈ ವಾರದಲ್ಲಿ ನಿಮ್ಮವರ ಪ್ರೀತಿಯಲ್ಲಿ ನೀವು ಮನಸೋಲುವಿರಿ. ರಾಶಿಯ ಅಧಿಪತಿ ದ್ವಿತೀಯದಲ್ಲಿ ಇದ್ದು ನಿಮ್ಮ ಕೆಲಸವು ಶಿಸ್ತಿನದ್ದಾಗಿದ್ದು ಪ್ರಶಂಸೆಯೂ ಸಿಗಲಿದೆ. ನೀವು ಎಲ್ಲರ ನಡುವೆ ಅಂತರವನ್ನು ಕಾಯ್ದುಕೊಂಡು ವ್ಯವಹಾರವನ್ನು ನಡೆಸುವಿರಿ. ಬಂಧುಗಳ ಭೇಟಿಯಾಗಿ ಸಂತೋಷಪಡುವಿರಿ. ಬೆನ್ನು ನೋವಿಗೆ ಸರಿಯಾದ ಚಿಕಿತ್ಸೆಯು ಸಿಗಲಿದೆ. ಈ ವಾರ ಸಂಗಾತಿಯ ಪ್ರೀತಿಯಿಂದ ವಂಚಿತರಾಗಲಿದ್ದೀರಿ. ಕಷ್ಟವಾದರೂ ಕೆಲಸವನ್ನು ಮಾಡುವ ನಿಮ್ಮ ಒಪ್ಪಂದಕ್ಕೆ ಮೆಚ್ಚಿಗೆ ಸಿಗಲಿದೆ. ಹೂಡಿಕೆಯ ಹಣವನ್ನು ಪಡೆದುಕೊಳ್ಳುವಿರಿ. ನಿಮ್ಮ ಕೆಲಸಕ್ಕೆ ಮತ್ತಾರಿಗೋ ಹೆಸರು ಸಿಗಬಹುದು. ಹಳೆಯ ನೆನಪು ಕಾಡಬಹುದು.
ಕರ್ಕಾಟಕ ರಾಶಿ: ಈ ತಿಂಗಳ ನಾಲ್ಕನೇ ವಾರದಲ್ಲಿ ಮಹಿಳೆಯರು ತನ್ನ ತಾಯಿಯಿಂದ ಲಾಭವನ್ನು ನಿರೀಕ್ಷಿಸುವರು. ಏನನ್ನಾದರೂ ಮಾಡಬೇಕು ಎಂಬ ನಿಮ್ಮ ಹಂಬಲ ಅತಿಯಾಗಿರುವುದು. ಈ ವಾರ ಹೊಸ ವ್ಯಕ್ತಿಗಳ ಜೊತೆ ಸಂಬಂಧವನ್ನು ಬಯಸುವಿರಿ. ವೃತ್ತಿಯನ್ನು ಬಹಳ ಹಗುರಾಗಿ ಭಾವಿಸಿ ಕೆಲಸವನ್ನು ಮಾಡುವಿರಿ. ಸಮಯಕ್ಕೆ ಬೆಲೆ ಕೊಡುವುದು ಬಾರದು. ಈ ವಾರದಿಂದ ಕೆಲವು ಕಾರ್ಯವನ್ನು ನೀವು ಸರಳೀಕರಿಸಿಕೊಳ್ಳುವುದು ಉತ್ತಮ. ಮಾತನ್ನು ಅಹಂಕಾರದಿಂದ ಮಾತನಾಡಿದಂತೆ ಕೇಳುವುದು. ಸಂಯಮವನ್ನು ಬೆಳೆಸಿಕೊಳ್ಳುವ ಅಗತ್ಯ ಅತಿಯಾಗಿ ಇರಲಿದೆ. ಯಾರದೋ ಮಾತಿನಿಂದ ಎಲ್ಲವನ್ನೂ ಅನುಮಾನದ ದೃಷ್ಟಿಯಿಂದ ನೋಡುವುದನ್ನು ಅಭ್ಯಾಸ ಬರುವುದು.
ಸಿಂಹ ರಾಶಿ: ಸೂರ್ಯ ಆಧಿಪತ್ಯದ ಈ ರಾಶಿಗೆ ಈ ವಾರ ಶುಭವಿಲ್ಲ. ಅಶುಭ ಗ್ರಹಗಳು ಈ ರಾಶಿಯಲ್ಲಿ ಹಾಗೂ ರಾಶಿಯ ಅಧಿಪತಿ ದ್ವಾದಶದಲ್ಲಿ ಇರುವ ಕಾರಣ ಆತ್ಮಬಲದ ಕೊರತೆ ಕಾಣಿಸುವುದು. ನಿಮ್ಮ ಅಪೇಕ್ಷೆಗಳನ್ನು ನಿಯಂತ್ರಣದಲ್ಲಿ ಇರಿಸಿಕೊಂಡು ಎಂದಿನ ಕೆಲಸದಲ್ಲಿ ಪ್ರವೃತ್ತರಾಗುವಿರಿ. ಆಸ್ತಿಯ ಖರೀದಿಯಲ್ಲಿ ತಂದೆಯ ಕಡೆಯಿಂದ ನಿಮಗೆ ಸಿಂಹಪಾಲು ಸಿಗಲಿದೆ. ಗಂಭೀರವಾದ ಚರ್ಚೆಯಲ್ಲಿ ನಿಮ್ಮ ಹಾಸ್ಯಪ್ರಜ್ಞೆಯು ಇತರರಿಗೆ ನೋವುಂಟು ಮಾಡುವುದು. ಸಂಕೀರ್ಣವಾದ ಕೆಲಸವನ್ನು ಸರಳ ಮಾಡಿಕೊಳ್ಳುವುದು ನಿಮಗೆ ಕರಗತವಾಗಲಿದೆ. ನಿಮ್ಮ ಸಮಯವು ವ್ಯರ್ಥ ಎಂದನಿಸಬಹುದು. ಈ ವಾರದಲ್ಲಿಯೇ ನಿಮಗೆ ಬರಬೇಕಾದ ಹಣವನ್ನು ಬಲವಂತವಾಗಿ ಪಡೆದುಕೊಳ್ಳುವಿರಿ. ನಿಮಗೆ ಸರಿಯಾದ ನಿರ್ಧಾರಕ್ಕೆ ಬರಲು ಕಷ್ಟವಾದೀತು. ಆಪ್ತರ ಸಲಹೆಯನ್ನು ಪಡೆದುಕೊಳ್ಳಿ.
ಕನ್ಯಾ ರಾಶಿ: ಉದ್ಯೋಗದ ದೃಷ್ಟಿಯಿಂದ ಈ ವಾರ ಶುಭಕರ. ಶತ್ರುಗಳು ನಿಮ್ಮ ಮಿತ್ರರಾಗಲು ಬಯಸಬಹುದು. ನಿಮ್ಮ ಗಮನವು ಅವರ ಮೇಲಿರಲಿ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಸಮಯವನ್ನು ಕಳೆಯುವಿರಿ. ವಾಕ್ಚಾತುರ್ಯದಿಂದ ಆದಾಯ ಹೆಚ್ಚು. ಮಕ್ಕಳ ವಿವಾಹಕ್ಕೆ ಪೋಷಕರ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಿ ತೋರುವುದು. ವಿದ್ಯಾರ್ಥಿಗಳಿಗೆ ದುಡಿಮೆಯ ಬಗ್ಗೆ ಹೆಚ್ಚು ಆಸಕ್ತಿಯು ಹೆಚ್ಚಾಗಿ ಅಭ್ಯಾಸವನ್ನು ನಿಲ್ಲಿಸುವಿರಿ. ಬಂಧುಗಳ ಮನೆಯ ಸಮಾರಂಭಕ್ಕೆ ಹೋಗಲಿದ್ದೀರಿ. ದಾಂಪತ್ಯದಲ್ಲಿ ಮಾತಿನ ಬಿರುಸು ಅತಿಯಾಗಬಹುದು. ಕಬ್ಬಿಣದ ವ್ಯಾಪಾರವನ್ನು ಮಾಡಲು ಧನಸಹಾಯವು ಸಿಗಬಹುದು. ನಿಷ್ಠುರ ಮಾತುಗಳನ್ನು ಆಡಿ ಸಂಬಂಧವನ್ನು ಕಳೆದುಕೊಳ್ಳುವಿರಿ. ಈ ವಾರದಲ್ಲಿ ಆದ ಅಪಜಯವು ನಿಮಗೆ ಅಪಮಾನದಂತೆ ಆಗುವುದು.
ತುಲಾ ರಾಶಿ: ರಾಶಿ ಚಕ್ರದ ಏಳನೇ ರಾಶಿಯಬರಿಗೆ ರಾಶಿಯ ಅಧಿಪತಿ ಶುಕ್ರನ ಬದಲಾವಣೆಯಿಂದ ಪರಿವರ್ತನೆಯೂ ಸಾಧ್ಯವಾಗುವುದು. ನೀವು ಅಂದುಕೊಂಡಿದ್ದು ಆಗುತ್ತಿದ್ದರೂ ಯಥಾಚಿತ್ತದಂತೆ ಆಗದು. ಮಕ್ಕಳ ಕಾರಣದಿಂದ ನಿಮಗೆ ಕೆಟ್ಟ ಹೆಸರು ಬರಬಹುದು. ಯಾವ ಕೆಲಸದಲ್ಲಿಯೂ ಸಿಕ್ಕಿಹಾಕಿಕೊಳ್ಳದೇ ಇರುವಿರಿ. ಈ ವಾರ ಎಲ್ಲವನ್ನೂ ತಿಳಿದೂ ನೀವು ಸುಮ್ಮನಿರಲಾಗದು. ಅಧಿಕಾರಿಗಳ ವರ್ಗದಿಂದ ನಿಮಗೆ ಗೌರವ ಸಿಗಲಿದೆ. ನಿಮ್ಮವರಿಗೆ ನಿಮ್ಮ ಸರಿಯಾದ ಪರಿಚಯ ಆಗಿಲ್ಲವೆನಿಸುವುದು. ವ್ಯಾಪರವು ಒಂದೇ ಪರಿಮಾಣದಲಯ ಹೋಗುವುದು. ಈ ವಾರದಲ್ಲಿ ಆಗಾಗ ಸಂಗಾತಿಯ ಆರೋಗ್ಯವು ಕೆಡುವ ಸಾಧ್ಯತೆ ಇದೆ. ಆಹಾರ ಸೇವೆಯನ್ನು ಮಿತವಾಗಿ ಮಾಡಿ. ದುರ್ಗಾಮಾತೆಯನ್ನು ವಿಧವಾಗಿ ಅರ್ಚಿಸಿ.
ವೃಶ್ಚಿಕ ರಾಶಿ: ಜುಲೈ ತಿಂಗಳ ನಾಲ್ಕನೇ ವಾರದಲ್ಲಿ ಮಕ್ಕಳಿಂದ ಆಸ್ತಿಗೆ ಸಂಬಂಧಿಸಿದ ವಿಚಾರವನ್ನು ಪ್ರಸ್ತಾಪಿಸಿ ಒಪ್ಪಿಗೆ ಪಡೆಯುವಿರಿ. ದಿನದಿಂದ ದಿನಕ್ಕೆ ಸುಧಾರಿಸಿದ ಆರೋಗ್ಯವು ನಿಮಗೆ ಉತ್ಸಾಹವನ್ನು ಕೊಡಲಿದೆ. ಈ ವಾರದಲ್ಲಿ ಬರುವ ಜೀವನದ ಆಕಸ್ಮಿಕ ತಿರುವುಗಳಿಗೆ ನೀವು ಚಿಂತೆಗೆ ಒಳಗಾಗುವುದಿಲ್ಲ. ಹಣದ ಉಳಿತಾಯಕ್ಕೆ ಮಾರ್ಗವನ್ನು ಹುಡುಕುವಿರಿ. ಉದ್ಯೋಗದ ಕೆಲವು ಗೌಪ್ಯ ವಿಚಾರಗಳು ನಿಮಗೆ ಗೊತ್ತಾಗಬಹುದು. ವಿಷಯಾಸಕ್ತಿಯು ಅಧಿಕವಾಗಿ ಇರಲಿದೆ. ಸರ್ಕಾರದ ಕೆಲಸದಲ್ಲಿ ಹಿನ್ನಡೆಯಾಗಲಿದ್ದು ಬೇರೆಯವರ ಮೂಲಕ ಒತ್ತಡ ಹೇರಿ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಈ ವಾರ ಕೆಲವು ವ್ಯವಹಾರವು ನ್ಯಾಯವಲ್ಲದ ಮಾರ್ಗದಲ್ಲಿ ಯೋಚನೆಯಿಂದ ಸಾಗುವುದು.
ಧನು ರಾಶಿ: ಈ ರಾಶಿಯವರಿಗೆ ಈ ವಾರ ಉತ್ತಮವಾದುದಾಗಿದೆ. ನಿಮ್ಮ ಮನೆಯಲ್ಲಿ ಕೆಲಸವು ಹಲವು ದಿನಗಳಿಂದ ನಿಂತಿದ್ದು ಮತ್ತೆ ಆರಂಭವಾಗಲಿದೆ. ಇದು ನಿಮಗೆ ಅನಿರೀಕ್ಷಿತ ಆನಂದವನ್ನು ತರುವುಷು. ಬಹಳ ದಿನಗಳ ಅನಂತರ ತಂದೆಯ ಜೊತೆ ಮಾತನಾಡಿ ಅಪೂರ್ವ ನೆಮ್ಮದಿಯು ಪಡೆಯುವಿರಿ. ನಿಮ್ಮ ದೂರ ಪ್ರಯಾಣಕ್ಕೆ ಕುಟುಂಬದಿಂದ ಪೂರ್ಣ ಒಮ್ಮತ ಸಿಗದೇಹೋದೀತು. ಇನ್ನೊಬ್ಬರ ನೋವಿಗೆ ಸ್ಪಂದಿಸುವ ನಿಮ್ಮ ಗುಣವು ಹಲವವರಿಗೆ ಮೆಚ್ಚುಗೆಯಾಗುವುದು. ನಿಮಗೆ ಸಿಕ್ಕ ವ್ಯಕ್ತಿಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ನಿಮ್ಮ ಅಭಿಪ್ರಾಯವನ್ನು ಬಿಚ್ಚು ಮನಸ್ಸಿನಿಂದ ಹೇಳುವಿರಿ. ಸಾಹಸದ ಪ್ರವೃತ್ತಿಯು ಸದ್ಯಕ್ಕೆ ಬೇಡ. ನಿಮಗೆ ತಾಳ್ಮೆಯು ಕಡಿಮೆಯಿರುವುದು ಗೊತ್ತಾಗುವುದು.
ಮಕರ ರಾಶಿ: ಈ ವಾರದಲ್ಲಿ ಕೆಲವು ತೊಂದರೆಗಳು ಬರುವುದು. ಸಹೋದರನ ಸಹಾಕಾರವು ಸ್ವಲ್ಪಮಟ್ಟಿಗೆ ಅನುಕೂಲವಾಗುವುದು. ನೂತನ ವಾಹನದ ಖರೀದಿಯನ್ನು ಮಾಡುವ ಬಯಕೆಯು ಪೂರ್ಣಗೊಳ್ಳಬಹುದು. ಈ ವಾರ ಹಿತಶತ್ರು ನಿಮ್ಮ ಪತನವನ್ನೇ ನಿರೀಕ್ಷಿಸುತ್ತ ಅದಕ್ಕೆ ಬೇಕಾದುದನ್ನು ಮಾಡುವರು. ಮಕ್ಕಳಿಗಾಗಿ ನೀವು ಹಣವನ್ನು ಖರ್ಚು ಮಾಡುವಿರಿ. ವೈವಾಹಿಕ ಜೀವನ ಆನಂದದಿಂದ ಇರಲಿದೆ. ಪರಸ್ಪರ ದುಃಖವನ್ನು ಹಂಚಿಕೊಂಡ ದಂಪತಿಗಳ ಮನಸ್ಸು ಹಗುರಾಗುವುದು. ಈ ವಾರ ಪೂರ್ವಯೋಜಿತ ಕಾರ್ಯದ ಯಾದಿ ಮಾಡಿಕೊಂಡು ಕಾರ್ಯದಲ್ಲಿ ಮಗ್ನರಾಗಿ. ನಿಮ್ಮ ಸಂಪೂರ್ಣ ತಲ್ಲೀನತೆಯು ಕಾರ್ಯವನ್ನು ಮುಗಿಸಲು ಸಹಾಯಕವಾಗಲಿದೆ.
ಕುಂಭ ರಾಶಿ: ಈ ವಾರ ಹೊಸದಾಗಿ ಉದ್ಯೋಗಕ್ಕೆ ಸೇರಲಿರುವವೆಇಗೆ ಓಡಾಟ ವ್ಯರ್ಥವಾಗುವುದು. ಅಶುಭ ಸೂಚನೆಗಳನ್ನು ಗಮನಿಸಿಯೂ ಉದ್ಧಟತನದಿಂದ ಮುನ್ನುಗ್ಗುವಿರಿ. ಈ ವಾರ ಆಪ್ತರಾದ ಬಂಧುವನ್ನೊಬ್ಬರನ್ನು ಕಳೆದುಕೊಳ್ಳಲೂಬಹುದು. ಎಲ್ಲರೆದುರು ಮುಖಭಂಗವಾಗಬಹುದು. ವೈವಾಹಿಕ ಜೀವನದ ಕನಸನ್ನು ನೀವು ಕಾಣುವಿರಿ. ನಿಮ್ಮ ದೂರಾಲೋಚನೆಯು ವಾಸ್ತವಕ್ಕಿಂತ ದೂರವಿರುವುದು. ಏನನ್ನಾದರೂ ಸಾಧಿಸಬೇಕು ಎನ್ನುವ ಛಲವಿದ್ದರೂ ಅದು ಕೆಲ ಕಾಲವಷ್ಟೇ ಇದ್ದು ಮರೆಯಾಗಬಹುದು. ಸದಭಿರುಚಿಯು ನಿಮಗೆ ವರವಾಗಬಹುದು. ನಿಮ್ಮ ಭಾವವನ್ನು ಸಂಗಾತಿಯ ಮುಂದೆ ಪ್ರಕಟಗೊಳಿಸಿ.
ಮೀನ ರಾಶಿ: ಜುಲೈ ತಿಂಗಳ ನಾಲ್ಕನೇ ವಾರದಲ್ಲಿ ಶುಭ. ಕುಟುಂಬದವರು ನಿಮ್ಮ ಶ್ರೇಯಸ್ಸನ್ನು ಹಾರೈಸುವರು. ಶ್ರೇಷ್ಠ ವ್ಯಕ್ತಿಗಳ ಪೂರ್ಣ ಬೆಂಬಲ ನಿಮಗೆ ಸಿಗಲಿದೆ. ಪಾಲುದಾರಿಕೆಯಲ್ಲಿ ಹಣದ ವಿಚಾರವೇ ವಿವಾದಕ್ಕೆ ಕಾರಣವಾಗಲಿದೆ. ಕಾರ್ಯಗಳಲ್ಲಿ ಉಂಟಾದ ವಿಘ್ನವನ್ನು ಪುರುಷಪ್ರಯತ್ನದಿಂದ ನಿವಾರಣೆ ಮಾಡಿಕೊಳ್ಳುವಿರಿ. ಸಂಗಾತಿಯನ್ನು ಬೇಸರದಲ್ಲಿದ್ದು ನೀವು ಸಮಾಧಾನ ಮಾಡುವಿರಿ. ನಿಮಗೆ ಸಾಕಷ್ಟು ಸಮಯವುವ ಇರಲಿದ್ದು ಏನನ್ನೂ ಮಾಡದೇ ಕಾಲವನ್ನು ಕಳೆಯುವಿರಿ. ಈ ವಾರ ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಳ್ಳುವ ಹಂಬಲವಿರುವುದು. ನೀವು ಸಿದ್ಧತಗೆ ಹೆಚ್ಚು ಸಮಯವನ್ನು ತೆಗೆದುಕೊಳ್ಳುವಿರಿ. ನಿಮ್ಮ ಮೇಲೆ ಕೆಟ್ಟ ಕಣ್ಣುಗಳು ಬೀಳಬಹುದು. ಹನುಮಾನ್ ಚಾಲೀಸ್ ಪಠಿಸಿ.
– ಲೋಹಿತ ಹೆಬ್ಬಾರ್ – 8762924271 (what’s app only)
Published On - 1:03 am, Sun, 20 July 25




