Weekly Horoscope: ಜೂನ್ 29 ರಿಂದ ಜುಲೈ 05 ರ ವರೆಗಿನ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ
ಜುಲೈ ತಿಂಗಳ ಮೊದಲನೇ ವಾರ 29-06-2025ರಿಂದ 05-07-2025ರವರೆಗೆ ಇರಲಿದೆ. ಬುಧನು ತನ್ನ ರಾಶಿಯನ್ನು ಬದಲಾಯಿಸಿದ್ದಾನೆ. ಸ್ವಕ್ಷೇತ್ರದಿಂದ ಶತ್ರುಕ್ಷೇತ್ರಕ್ಕೆ ಹೋಗಿದ್ದಾನೆ. ಶತ್ರುವಿನಿಂದ ಯಾವುದೇ ತೊಂದರೆ ಇಲ್ಲದೇ ಇದ್ದರೂ, ನೀವಾಗಿಯೇ ಶತ್ರುವನ್ನಾಡಿ ಮಾಡಿಕೊಳ್ಳುವವರಿದ್ದಾರೆ. ಅಂತಹವರು ಜಾಗರೂಕತೆಯಿಂದ ಇರಬೇಕು. ಬುಧ ದಶೆಯವರು ಬಹಳ ಜಾಗರೂಕತೆಯಿಂದ ಇರಬೇಕು. ಲಕ್ಷ್ಮೀನಾರಾಯಣರ ಆರಾಧನೆ, ಸ್ಮರಣೆಯಿಂದ ಶುಭ.

ಜುಲೈ ತಿಂಗಳ ಮೊದಲನೇ ವಾರ 29-06-2025ರಿಂದ 05-07-2025ರವರೆಗೆ ಇರಲಿದೆ. ಬುಧನು ತನ್ನ ರಾಶಿಯನ್ನು ಬದಲಾಯಿಸಿದ್ದಾನೆ. ಸ್ವಕ್ಷೇತ್ರದಿಂದ ಶತ್ರುಕ್ಷೇತ್ರಕ್ಕೆ ಹೋಗಿದ್ದಾನೆ. ಶತ್ರುವಿನಿಂದ ಯಾವುದೇ ತೊಂದರೆ ಇಲ್ಲದೇ ಇದ್ದರೂ, ನೀವಾಗಿಯೇ ಶತ್ರುವನ್ನಾಡಿ ಮಾಡಿಕೊಳ್ಳುವವರಿದ್ದಾರೆ. ಅಂತಹವರು ಜಾಗರೂಕತೆಯಿಂದ ಇರಬೇಕು. ಬುಧ ದಶೆಯವರು ಬಹಳ ಜಾಗರೂಕತೆಯಿಂದ ಇರಬೇಕು. ಲಕ್ಷ್ಮೀನಾರಾಯಣರ ಆರಾಧನೆ, ಸ್ಮರಣೆಯಿಂದ ಶುಭ.
ಮೇಷ ರಾಶಿ: ಜುಲೈ ತಿಂಗಳ ಮೊದಲ ವಾರದಲ್ಲಿ ನಿಮಗೆ ಶುಭ. ಬರಬೇಕಾದ ಹಣ ಕೈ ಸೇರುವುದು. ವಿದೇಶದ ವ್ಯವಹಾರದಲ್ಲಿ ಇರುವ ತೊಡಕುಗಳು ನಿವಾರಣೆಯಾಗಲಿದೆ. ಕಡಿಮೆ ಸ್ನೇಹಿತರನ್ನು ಹೊಂದಿದ್ದರೂ ಅವರನ್ನು ಬಹಳ ಚೆನ್ನಾಗಿ ಇಟ್ಟುಕೊಳ್ಳುವಿರಿ. ಅನಗತ್ಯ ಕಾರ್ಯಗಳತ್ತ ಮನಸ್ಸು ಹೋದರೂ ಮತ್ತೆ ಕಾರ್ಯದಲ್ಲಿ ಮಗ್ನರಾಗಿರಿ. ಮನೆಯಲ್ಲಿ ಸುಖವನ್ನು ಅನುಭವಿಸುವಿರಿ. ಸಂಗಾತಿಯು ನಿಮ್ಮ ಹಳೆಯ ವಿಚಾರವನ್ನು ಮತ್ತೆ ನೆನಪಿಸಿ ಮುಜುಗರವನ್ನು ಉಂಟುಮಾಡುವಳು. ಕೆಲಸದ ಸ್ಥಳದಲ್ಲಿ ಕೆಲವು ಕೆಲಸಗಳನ್ನು ಹೆಚ್ಚುವರಿಯಾಗಿ ಮಾಡಬೇಕಾದೀತು. ಪ್ರಣಯದ ವಿಚಾರವನ್ನು ನೀವು ನಿರ್ಲಜ್ಜೆಯಿಂದ ಹೇಳಿಕೊಳ್ಳುವಿರಿ. ನಿರೀಕ್ಷಿಸಿದಂತೆ ಎಲ್ಲವೂ ನಡೆಯುವುದು ಕಷ್ಟವಾದೀತು.
ವೃಷಭ ರಾಶಿ: ರಾಶಿ ಚಕ್ರದ ಎರಡನೇ ರಾಶಿಯವರಿಗೆ ಈ ವಾರ ಅಶುಭ. ಸಹೋದರೇ ಶತ್ರುಗಳಾಗಿ ನಿಮ್ಮ ಸಂತೋಷವನ್ನು ನಾಶ ಮಾಡುವರು. ಅದಕ್ಕಾಗಿ ಹಣವನ್ನು ಕಳೆದುಕೊಳ್ಳಬೇಕಾಗುವುದು. ನಿಮ್ಮನ್ನು ಮಾತುಗಳಿಂದ ಪೀಡಿಸಬಹುದು. ಆದರೆ ಮೌನವೇ ಹೆಚ್ಚು ಪ್ರಿಯವಾದೀತು. ನಿಮ್ಮ ಎರಡು ಬಗೆಯ ಮನಃಸ್ಥಿತಿಯು ಕೆಲವರಿಗೆ ಇಷ್ಟವಾಗದೇ ಹೋದೀತು. ಕುಟುಂಬದ ಹತ್ತಿರದವರನ್ನು ಕಳೆದುಕೊಳ್ಳಬಹುದು. ಆಪ್ತರಲ್ಲಿ ನಿಮ್ಮ ಮನಸ್ಸನ್ನು ಹಂಚಿಕೊಳ್ಳುವಿರಿ. ದಾಂಪತ್ಯದಲ್ಲಿ ಮಕ್ಕಳ ಕಾರಣದಿಂದ ಸಂತೋಷವನ್ನು ಕಾಣುವಿರಿ. ಕಾನೂನಿಗೆ ಸಂಬಂಧಿಸಿದ ವಿಚಾರಕ್ಕೆ ನಿಮಗೆ ಕೆಲವು ಸಂದೇಶಗಳನ್ನು ನಿವಾರಿಸಿಕೊಳ್ಳುವಿರಿ. ಧೈರ್ಯದಿಂದ ನೀವು ತೆಗೆದುಕೊಳ್ಳುವ ನಿರ್ಧಾರವು ಅಂತಿಮವಾಗಲಿದೆ.
ಮಿಥುನ ರಾಶಿ: ಜುಲೈ ತಿಂಗಳ ಮೊದಲ ವಾರದಲ್ಲಿ ನಿಮಗೆ ಶುಭ. ನಿಮ್ಮ ರಾಶಿಯ ಅಧಿಪತಿ ದ್ವಿತೀಯದಲ್ಲಿ ಇದ್ದಾನೆ. ಮಾತಿನಿಂದ ಆದಾಯ ಬರುವುದು. ಹಣ ಸಿಗುವ ಕಡೆ ಜಾಣ್ಮೆಯಿಂದ ಮಾತನಾಡುವಿರಿ. ಭಾವಪರವಶರಾಗಿ ನಿಮ್ಮ ಸುಖ, ದುಃಖಗಳನ್ನು ಹೇಳಿಕೊಳ್ಳುವಿರಿ. ತಾಯಿಯಿಂದ ಬೆಂಬಲ ಬರಲಿದೆ. ದಿನವನ್ನು ಉತ್ತಮವಾಗಿಸಿಕೊಳ್ಳಲು ನೀವು ಬಯಸುವಿರಿ. ಎಲ್ಲರ ಜೊತೆ ಪ್ರೀತಿಯಿಂದ ಮಾತನಾಡಲು ಇಷ್ಟಪಡುವಿರಿ. ನಿಮ್ಮ ಭಾವನೆಗಳಿಗೆ ಬೆಲೆ ಕೊಡುವವರನ್ನು ಹೆಚ್ಚು ಇಷ್ಟಪಡುವಿರಿ. ಸ್ವಾರ್ಥವನ್ನು ಬಿಟ್ಟು ಕೆಲಸ ಮಾಡಿದರೆ ಹೆಚ್ಚು ಒಳ್ಳೆಯದು. ಇದರಿಂದ ನಿಮ್ಮನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಾಗಬಹುದು. ಸಂಪತ್ತನ್ನು ಸದುಪಯೋಗ ಮಾಡಿಕೊಳ್ಳಲು ಮಾರ್ಗವನ್ನು ಹುಡುಕಿಕೊಳ್ಳಿ.
ಕರ್ಕಾಟಕ ರಾಶಿ: ಈ ವಾರದಲ್ಲಿ ಬುಧನ ಸಂಚಾರಿಂದ ನಿಮಗೆ ಅಶುಭ. ತಾಯಿಯ ಕಾರಣಕ್ಕೆ ಧನವನ್ನು ಖರ್ಚುಮಾಡುವಿರಿ. ಅನಾರೋಗ್ಯಕ್ಕೆ ಚಿಕಿತ್ಸೆ ಮಾಡಿಸಬೇಕಾಗಬಹುದು. ಬಹಳ ದಿನಗಳ ಅನಂತರ ನಿಮಗೆ ಒಳ್ಳೆಯವರ ಪ್ರೀತಿ ದೊರೆಯಲಿದೆ. ಇದು ನಿಮ್ಮ ಸಂತೋಷವನ್ನು ಹೆಚ್ಚು ಮಾಡುವುದು. ಕುಟುಂಬ ಹಲವಾರು ಕೆಲಸಗಳಿದ್ದರೂ ಅತ್ತ ಗಮನ ಹೋಗುವುದು ಕಷ್ಟವಾದೀತು. ನಕಾರಾತ್ಮಕ ಆಲೋಚನೆಗಳು ನಿಮಗೆ ಸಹಜವಾಗಿ ಇರಲಿದೆ. ನಿಮ್ಮ ಸಾಮರ್ಥ್ಯವನ್ನು ತೋರಿಸಲು ಸಕಾಲವಲ್ಲ. ನಿಮಗೆ ಗೊತ್ತಿಲ್ಲದ ನಿಮ್ಮದೇ ಸಂಗತಿಗಳು ನಿಮಗೆ ಅಚ್ಚರಿಯನ್ನು ತಂದುಕೊಟ್ಟೀತು. ಅಧಿಕಾರಯುತವಾದ ಮಾತುಗಳನ್ನು ಕಡಿಮೆ ಮಾಡಿ.
ಸಿಂಹ ರಾಶಿ: ರಾಶಿ ಚಕ್ರದ ಐದನೇ ರಾಶಿಯವರಿಗೆ ಮಿಶ್ರಫಲ. ನಿಮ್ಮ ಬಳಿ ಹಣ, ವ್ಯವಸ್ಥೆ, ಜನ, ಎಲ್ಲವೂ ಇದ್ದರೂ ಅಳು ಮಾತ್ರ ನಿಮ್ಮನ್ನು ಬಿಡದೇ ತಡೆದು ನಿಲ್ಲಿಸುವುದು. ವಿರೋಧಿಗಳ ನಡೆಯೇ ನೀವು ನಿಮ್ಮ ನಡೆಯನ್ನು ಬಿಡಲು ಒಪ್ಪುವುದಿಲ್ಲ. ಮನಃಸ್ಥಿತಿಯನ್ನು ಸಮತೋಲನವಾಗಿಡಲು ನಿಮಗೆ ಕಷ್ಟವಾದೀತು. ನಿಮ್ಮ ಎಲ್ಲ ಕೆಲಸಗಳೂ ಸಮಯಕ್ಕೆ ಸರಿಯಾಗಿ ಮುಗಿಸಿಕೊಳ್ಳುವುದು ಕಷ್ಟವಾಗುವುದು. ಸಹೋದರಿಯ ಮಾತನಲ್ಲಿ ನಿಮಗೆ ಕುಹಕವಿರುವುದು ಗೊತ್ತಾಗಿ ಜಗಳವಾಡುವಿರಿ. ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಲು ಇಚ್ಛಿಸುವಿರಿ. ನಿಮ್ಮ ಕೆಲಸದಲ್ಲಿರುವ ಒತ್ತಡ ತಾನಾಗಿಯೇ ತಗ್ಗಿದ ಅನುಭವವಾಗುವುದು.
ಕನ್ಯಾ ರಾಶಿ: ಜುಲೈ ತಿಂಗಳ ಮೊದಲ ವಾರದಲ್ಲಿ ನಿಮಗೆ ಶುಭ. ಮಾಡಬೇಕಾದ ಕೆಲಸಗಳಿಗೆ ಯಾರಿಂದಲಾದರೂ ಅನಿರೀಕ್ಷಿತ ಸಹಾಯ ಲಭ್ಯವಾಗಲಿದೆ. ನೀವು ದುಃಖದ ಅನಂತರ ಸುಖವಿದೆ ಎಂಬ ಕಾರಣಕ್ಕೆ ಎಲ್ಲ ನೋವನ್ನೂ ಸಹಿಸಿಕೊಳ್ಳುವಿರಿ. ನಿಮ್ಮ ಮನೋಭಾವಕ್ಕೆ ಬೆಂಬಲವೂ ಸಿಗುವುದು. ಕಷ್ಟಗಳು ಹಾಗೆಯೇ ಇದ್ದರೂ ಅದು ಅನುಭವಕ್ಕೆ ಬಾರದು. ಸಿಗಬೇಕಾದ ವಸ್ತುವನ್ನು ನೀವು ಬಹಳ ಪ್ರಯತ್ನದಿಂದ ಪಡೆಯಬೇಕಾದೀತು. ಸಂಸಾರದಲ್ಲಿ ಸಾರವಿಲ್ಲ ಎನ್ನಿಸಬಹುದು. ಭೂಮಿಯ ವ್ಯವಹಾರವು ಅಲ್ಪಮಟ್ಟಿಗೆ ಲಾಭ ಮಾಡುವುದು. ಕಾನೂನಿನ ಮಾರ್ಗದಲ್ಲಿ ನಿಮ್ಮ ಎಲ್ಲ ಕೆಲಸಗಳೂ ಇರಲಿ.
ತುಲಾ ರಾಶಿ: ಈ ರಾಶಿಯವರಿಗೆ ಈ ವಾರ ಶುಭ. ಬರುವ ಎಲ್ಲ ಸಂದರ್ಭವನ್ನೂ ಬಹಳ ಸಂತೋಷದಿಂದ ಸ್ವೀಕರಿಸುವಿರಿ. ಅದರ ಜೊತೆ ಬಾಳ್ವೆಯನ್ನೂ ನಡೆಸುವಿರಿ. ಯಾರಿಗೂ ಊಹಿಸಲಾಗದ ಮನಃಸ್ಥಿತಿ ನಿಮ್ಮದಾಗಲಿದೆ. ಸಿಗದೇ ಇರುವುದರ ಬಗ್ಗೆ ನಿಮಗೆ ಮೋಹ ಬೇಡ. ಇನ್ನೂ ಉತ್ತಮವಾದುದು ಸಿಗುತ್ತದೆ ಎಂಬ ಭರವಸೆಯನ್ನು ಇಟ್ಟುಕೊಳ್ಳಿ. ಮನಸ್ಸು ಶಾಂತವಾಗುವುದು. ಕೋಪವನ್ನು ಕಡಿಮೆ ಮಾಡಿಕೊಂಡರೂ ಇನ್ನಷ್ಟು ತಾಳ್ಮೆ ಅವಶ್ಯಕ. ನಿಮ್ಮಮನಸ್ಸಿಗೆ ಬಾರದೇ ನೀವು ಏನನ್ನೂ ಕೊಡಲು ಹೋಗಬೇಡಿ. ಇಂದು ಕೊಡುವ ಅಶ್ರದ್ಧೆಯ ದಾನವೂ ನಿಷ್ಪ್ರಯೋಜನವಾಗುವುದು.
ವೃಶ್ಚಿಕ ರಾಶಿ: ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಈ ವಾರ ಅಶುಭ. ಅನಾರೋಗ್ಯದಿಂದ ಯೋಜನೆಗಳು ವಿಫಲವಾಗಲಿವೆ. ನಿಮಗೆ ಕೇಳಿದ ಬಂದು ಮಾತುಗಳು ಅಪಮಾನಕರವಾಗಿದ್ದು ಏನನ್ನಾದರೂ ಮಾಡಬೇಕು ಎಂಬ ಹಂಬಲವು ಅತಿಯಾಗುವುದು. ಮನೆಯಿಂದ ಹೊರಗೆ ಅನಿವಾರ್ಯವಾಗಿ ಇರಬೇಕಾದೀತು. ಬಾಂಧವ್ಯವು ಅಂತರವನ್ನು ತರುವುದು. ಮಕ್ಕಳ ವಿಚಾರದಿಂದ ನಿಮಗೆ ದೂರುಗಳು ಬರಬಹುದು. ನಿಮ್ಮ ಉದ್ಯೋಗದ ನಿಮಗೆ ಅಸಮಾಧಾನ ಇರಲಿದೆ. ಎಲ್ಲರ ಜೊತೆ ಬೆರೆಯಲು ಇಚ್ಛಿಸಿದರೂ ನಿಮ್ಮನ್ನು ಯಾರೂ ಸೇರಿಸಿಕೊಳ್ಳರು. ನಿಮ್ಮ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಕೆಲವರಿಗೆ ಕಷ್ಟವಾದೀತು.
ಧನು ರಾಶಿ: ಜುಲೈ ತಿಂಗಳ ಮೊದಲ ವಾರದಲ್ಲಿ ನಿಮಗೆ ಶುಭ. ಯಾವುದಾರೂ ಒಂದು ಮಾರ್ಗದಿಂದ ಲಾಭವಾಗಲಿದೆ. ಮನಸ್ಸಿಗೆ ಬಂದಂತೆ ಮಾತನಾಡದೇ ಅರ್ಥವತ್ತಾದ ಮಾತುಗಳನ್ನು ಅಡುವುದು ಒಳ್ಳೆಯದು. ಸಂತಾನದಿಂದ ಆನಂದ ಇಮ್ಮಡಿಸುವುದು. ಕಛೇರಿಯಲ್ಲಿ ನಿಮ್ಮ ಮಾತುಗಳಿಗೆ ಅನಾದರವು ಸಿಗಲಿದೆ. ನಿಮಗೆ ಸರಿಯಾದ ಮಾರ್ಗದರ್ಶನ ಕೊರತೆಯಿಂದ ದಾರಿ ತಪ್ಪುವಿರಿ. ವ್ಯಾಪರವು ನಿಮಗೆ ಕೈ ಹಿಡಿಯದಂತೆ ತೋರುವುದು. ತಂತ್ರಜ್ಞರಾಗಿದ್ದರೆ ನಿಮಗೆ ಉದ್ಯೋಗವನ್ನು ಬಹಳ ಜಾಗರೂಕತೆಯಿಂದ ಮಾಡಬೇಕಾದೀತು. ದುಃಖದ ವಿಷಯವನ್ನು ನೀವು ಧೈರ್ಯವಾಗಿ ಕೇಳುವಿರಿ. ನಿಮ್ಮ ಕನಸನ್ನು ನೀವು ಯಾರಿಗೂ ಸದ್ಯ ಹೇಳುವುದು ಬೇಡ.
ಮಕರ ರಾಶಿ: ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಅಶುಭ. ಸಂಗಾತಿಯ ಜೊತೆ ಕಲಹ, ಮನಸ್ತಾಪಗಳೇ ಕಾಣಿಸುವುದು. ಎಲ್ಲ ವಿಚಾರಕ್ಕೂ ಪರಸ್ಪರ ವಿರೋಧವು ಬುಗಿಲೇಳುವುದು. ಯಾವುದನ್ನೂ ಸರಿಯಾಗಿ ಮಾಡಲು ಸಾಧ್ಯವಾಗದಷ್ಟು ನಿಮ್ಮ ಮನಸ್ಸು ಕೆಡಲಿದೆ. ಲೆಕ್ಕಾಚಾರದ ವಿಷಯದಲ್ಲಿ ನೀವು ಹಿಂದುಳಿದಿರುವುದು ಎಲ್ಲರಿಗೂ ಗೊತ್ತಾಗುವುದು. ಕುಟುಂಬದ ಭಿನ್ನಾಭಿಪ್ರಾಯವನ್ನು ನೀವೇ ಪರಿಹರಿಸಿಕೊಳ್ಳಿ. ನಿಮ್ಮ ಮೇಲಿನ ಗೌರವ ಹಾಗು ಪ್ರೀತಿಯು ಇತರರಿಗೆ ಹೆಚ್ಚಾಗಬಹುದು. ಪ್ರಯಾಣದಲ್ಲಿ ಸುಖವಿರಲಿದೆ. ದಾಂಪತ್ಯದಲ್ಲಿ ಸಣ್ಣ ಮನಸ್ತಾಪಗಳು ಬಂದರೂ ಅಲ್ಲಿಯೇ ಶಾಂತವಾಗುವುದು. ಧಾರ್ಮಿಕ ಆಸಕ್ತಿಯು ಇಂದು ಕಡಿಮೆ ಇರಲಿದೆ. ವಿದ್ಯಾರ್ಥಿಗಳು ಗೊಂದಲವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸುವಿರಿ.
ಕುಂಭ ರಾಶಿ: ಈ ತಿಂಗಳ ಮೊದಲ ವಾರದಲ್ಲಿ ನಿಮಗೆ ಶುಭ. ಶತ್ರುಗಳನ್ನು ಗೆಲ್ಲುವ ಸಾಧ್ಯತೆ ಇದೆ. ನಿಮ್ಮ ಮಾತಿನಿಂದ ಇನ್ನೊಬ್ಬರಿಗೆ ಬೇಸರಗವಾಗಲಿದ್ದು ಗೊತ್ತಾದ ಕೂಡಲೆ ಅದನ್ನು ನಿಲ್ಲಿಸಿ. ನಿಯಮ ಉಲ್ಲಂಘನೆ ಮಾಡಿ ದಂಡ ತುಂಬುವಿರಿ. ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸುವುದನ್ನು ಮಾಡುವಿರಿ. ಉದ್ಯೋಗದಿಂದ ಕೆಲವರನ್ನು ಕೈ ಬಿಡುವಿರಿ. ನಿಮಗೆ ಸಿಗುವ ಅವಕಾಶಗಳು ಬೇರೆಯವರ ಪಾಲಾಗಬಹುದು. ಅತಿಯಾದ ಉತ್ಸಾಹದಲ್ಲಿರುವ ನಿಮಗೆ ಮನೆಯವರ ಮಾತು ಉತ್ಸಾಹ ಭಂಗವನ್ನು ಮಾಡುವ ಸಾಧ್ಯತೆ ಇದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಸಹಾಯವನ್ನು ನೀವು ಕೇಳುವಿರಿ. ಒಬ್ಬೊಂಟಿಯಾಗಿರುವುದು ನಿಮಗೆ ಕಷ್ಟವಾದೀತು.
ಮೀನ ರಾಶಿ: ಈ ರಾಶಿಯವರಿಗೆ ಮೊದಲ ವಾರ ಮಿಶ್ರಫಲ. ಕುಟುಂಬದ ಸ್ತ್ರೀಯರ ಜೊತೆ ಕಲಹ. ನಿರುದ್ಯೋಗವು ನಿಮ್ಮ ಮನಸ್ಸಿಗೆ ಬಹಳ ಕಿರಿಕಿರಿಯಾಗಲಿದೆ. ಆಪ್ತರು ದೂರಾಗುವೆಉ. ಆಸಕ್ತಿಕರ ವಿಚಾರವನ್ನು ನೀವು ಇನ್ನೊಬ್ಬರ ಬಳಿ ಹೇಳಿಕೊಳ್ಳುವಿರಿ. ನಿಮ್ಮ ಮೇಲೆ ಕೆಲವು ಆಕ್ಷೇಪಗಳು ಬರಬಹುದು. ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಡಿಮೆಯಾಗಲಿದೆ. ಕಾರ್ಯದಲ್ಲಿ ಶ್ರದ್ಧೆಯು ಕಾರಣಾಂತರಗಳಿಂದ ಕಡಿಮೆ ಆಗಬಹುದು. ತಿಳಿವಳಿಕೆಯ ಕೊರತೆಯಿಂದ ನೀವು ಕಷ್ಟಪಡಬೇಕಾದೀತು. ಹಿತಶತ್ರುಗಳಿಂದ ಕೆಲವು ವಿಚಾರಕ್ಕೆ ತೊಂದರೆಯಾಗಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಿ ಅನಂತರ ಆಲಸ್ಯದಿಂದ ನೀವು ಸೋಲುವಿರಿ.
– ಲೋಹಿತ ಹೆಬ್ಬಾರ್ – 8762924271 (what’s app only)




