
ಇದು ಫೆಬ್ರವರಿ ತಿಂಗಳ ಕೊನೆಯ ವಾರವಿದಾಗಿದೆ. ೨೩-೦೨-೨೦೨೫ರಿಂದ ೦೧-೦೩-೨೦೨೫ರವರೆಗೆ ಇರಲಿದೆ. ಬುಧನು ಮೀನ ರಾಶಿಯನ್ನು ಪ್ರವೇಶಿಸುವನು. ಇದು ಇವನ ನೀಚಸ್ಥಾನವಾದ ಕಾರಣ ಅವನಿಂದ ಸಿಗುವ ತಿಳಿವಳಿಕೆ, ಬಾಂಧವ್ಯ, ಭೂಮಿಯ ವ್ಯವಹಾರ ಎಲ್ಲವೂ ಅಸ್ತವ್ಯಸ್ತ. ಆಪ್ತರೇ ಶತ್ರುಗಳಂತೆ ಕಾಣಿಸುವುದು. ಇದೆಲ್ಲ ಈ ವಾರದ ಭವಿಷ್ಯ.
ಮೇಷ ರಾಶಿ: ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ನಿಮಗೆ ರಾಶಿ ಸ್ವಾಮಿ ತೃತೀಯದಲ್ಲಿ ಇರುವನು. ದುರ್ವಿಚಾರಕ್ಕೆ ಬೇಕಾದ ವ್ಯಕ್ತಿಗಳ ಸಹವಾಸ ಮಾಡಿಸುವನು. ನೀವು ಕಳೆದುಹೋದದ್ದರ ಬಗ್ಗೆ ಯೋಚಿಸುತ್ತಿದ್ದರೆ ನಿಮ್ಮ ಹತಾಶೆ ನಿಮ್ಮ ಆರೋಗ್ಯವನ್ನು ನಾಶಮಾಡಬಹುದು. ಬಯಸಿದರೆ ನಿಮ್ಮ ಉದ್ಯಮಕ್ಕೆ ಸರ್ಕಾರದಿಂದ ಧನಸಹಾಯ ಸಿಗಲಿದೆ. ಸಾಧ್ಯವಾದಷ್ಟೂ ವಿಶ್ರಾಂತಿ ತಗೆದುಕೊಳ್ಳಲು ಪ್ರಯತ್ನಿಸಿ. ಮನೆಯ ಅಗತ್ಯಗಳ ಜೊತೆ ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಯಾವುದೇ ಅಮೂಲ್ಯ ವಸ್ತುವನ್ನು ಖರೀದಿಸಬಹುದು. ನಿಮ್ಮ ಆಕರ್ಷಣೆ ಹಾಗೂ ವ್ಯಕ್ತಿತ್ವ ನೀವು ಹೊಸ ಸ್ನೇಹಿತರನ್ನು ಗಳಿಸಲು ಸಹಾಯ ಮಾಡುತ್ತದೆ. ಇಷ್ಟಪಟ್ಟ ಕಾರ್ಯದಿಂದ ಯಶಸ್ಸು ಖಂಡಿತವಾಗಿಯೂ ನಿಮ್ಮದಾಗಿದೆ. ನೀವು ಒಂದು ಬಾರಿ ಒಂದೇ ಹೆಜ್ಜೆಯಿಟ್ಟರೆ ಪ್ರಮುಖ ಬದಲಾವಣೆಯಾಗಲಿದೆ. ಶಕ್ತಿಸಹಿತನಾದ ಶಂಕರನನ್ನು ಪೂಜಿಸಿ.
ವೃಷಭ ರಾಶಿ: ಈ ರಾಶಿಯವರಿಗೆ ಈ ವಾರ ಶುಭವೆನ್ನಬೇಕು. ರಾಶಿಯ ಅಧಿಪತಿ ಉತ್ತಮ ಸ್ಥಾನದಲ್ಲಿ ಇದ್ದಾನೆ. ಪೂರ್ವಕರ್ಮ ಇವರ ಭೋಗಕ್ಕೆ ಸಹಾಯ ಮಾಡಲಿದೆ. ಹಣಕಾಸಿನ ಭಾಗವು ಉತ್ತಮವಾಗಿರುತ್ತದೆ ಆದರೆ ಇದರೊಂದಿಗೆ ನೀವು ನಿಮ್ಮ ಹಣವನ್ನು ವ್ಯರ್ಥವಾಗಿ ಖರ್ಚು ಮಾಡದಂತೆ ನೋಡಿಕೊಳ್ಳಬೇಕು. ನಿಮ್ಮ ಪ್ರೇಮಮಯ ವೀಕ್ಷಣೆಗಳನ್ನು ಅಭಿವ್ಯಕ್ತಿಗೊಳಿಸಿ. ಶ್ರೇಷ್ಠ ಜನರೊಡನೆ ಸಂಬಂಧ ನಿಮ್ಮಲ್ಲಿ ಒಳ್ಳೆಯ ವಿಚಾರಗಳು ಮತ್ತು ಯೋಜನೆಗಳನ್ನು ತರುತ್ತದೆ. ಮನೋರಂಜನೆಗೆ ಸಮಯವನ್ನು ಮೀಸಲಿಡುವಿರಿ. ಸೇವಾಮನೋಭಾವದಿಂದ ಉದ್ಯಮವನ್ನು ಮಾಡುವಿರಿ. ಇದರೊಂದಿಗೆ ನಿಮ್ಮ ಜೀವನ ಸಂಗಾತಿಗೆ ನಿಮ್ಮಿಂದ ಅಸಮಾಧಾನವಾಗುತ್ತದೆ ಏಕೆಂದರೆ ನೀವು ಅವರೊಂದಿಗೆ ಮಾತನಾಡಲು ನೀವು ಯಾವುದೇ ಆಸಕ್ತಿಯನ್ನು ತೋರಿಸುವುದಿಲ್ಲ. ಸುಖದಿಂದ ಇರಲು ಇಚ್ಛಿಸುವರು. ಕುಲದೇವರನ್ನು ಪೂಜಿಸಿ.
ಮಿಥುನ ರಾಶಿ: ರಾಶಿಚಕ್ರದ ಮೂರನೇ ರಾಶಿಯವರಿಗೆ ಅಶುಭ. ರಾಶಿಯ ಅಧಿಪತಿ ದಶಮದಲ್ಲಿ. ಉದ್ಯಮ ಅಥವಾ ಉದ್ಯೋಗದಲ್ಲಿ ಬಾರೀ ಒತ್ತಡ. ಸಾಕೇನಿಸುವ ಭಾವ ನಿಮ್ಮದಾಗಲಿದೆ. ನೀವು ನಿಮ್ಮ ನಿಯಂತ್ರಣದಲ್ಲಿ ಇರುವುದು ಒಳ್ಳೆಯದು. ನಿಮ್ಮ ಮಕ್ಕಳೂ ಕೂಡ ಮನೆಯಲ್ಲಿನ ಶಾಂತಿ ಸಾಮರಸ್ಯದ ವಾತಾವರಣವನ್ನು ಆವಾಹಿಸಿಕೊಳ್ಳುತ್ತಾರೆ. ಇದು ಪರಸ್ಪರ ಸಂಪರ್ಕದಲ್ಲಿ ನಿಮ್ಮ ಮಾತುಕತೆಗೆ ನಿಮಗೆ ಹೆಚ್ಚಿನ ಸ್ವಾಭಾವಿಕತೆ ಮತ್ತು ಸ್ವಾತಂತ್ರ್ಯ ನೀಡುತ್ತದೆ. ಮಕ್ಕಳಿಗೆ ನಿಮ್ಮದನ್ನು ಹಸ್ತಾಂತರಿಸಬಹುದು. ಸ್ನೇಹಿತರ ಸಮಸ್ಯೆಗಳು ನಿಮಗೆ ಕೆಟ್ಟದೆನಿಸುವಂತೆ ಮಾಡಬಹುದು. ಪ್ರೀತಿಯಲ್ಲಿ ನಿರಾಶೆ ನಿಮ್ಮನ್ನು ಕಂಗೆಡಿಸುವುದಿಲ್ಲ. ಕೆಲಸದಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ನಿಮ್ಮನ್ನು ಆಲಿಸುತ್ತಾರೆ. ಸ್ವಂತ ಉದ್ಯಮದಲ್ಲಿ ಆಸಕ್ತಿ ಹೆಚ್ಚಲಿದೆ. ನಾರಾಯಣ ಮಂತ್ರವನ್ನು ಮನನ ಮಾಡಿ.
ಕರ್ಕಾಟಕ ರಾಶಿ: ರಾಶಿ ಚಕ್ರದ ನಾಲ್ಕನೆಯ ರಾಶಿಯವರಿಗೆ ಶುಭಾಶುಭ. ನಿಮ್ಮ ತಿಳಿವಳಿಕೆಯೇ ನಿಮ್ಮನ್ನು ವಂಚಿಸುವುದು. ಹಣದ ಬಗ್ಗೆ ಕುಟುಂಬ ಸದಸ್ಯರಲ್ಲಿ ಗೊಂದಲ ಉಂಟಾಗಬಹುದು. ಉದ್ಯೋಗದಿಂದ ಬರಬೇಕಾದ ಹಣ ಬಾರದೇ ಇರುವುದು. ಹಣಕಾಸಿನ ವಿಷಯದ ಬಗ್ಗೆ ನೀವು ಕುಟುಂಬದ ಎಲ್ಲ ಸದಸ್ಯರಿಗೆ ಸ್ಪಷ್ಟವಾಗಿರಲು ಸಲಹೆ ನೀಡಬೇಕು. ವಿವಾಹದ ಮಾತುಕತೆಗಳು ಆದರೂ ಮುಂದುವರಿಯಲು ಅಡ್ಡಿಗಳು. ನಿಮ್ಮ ದೀರ್ಘಕಾಲದ ಜಗಳವನ್ನು ಪರಿಹರಿಸಿಕೊಳ್ಳಿ. ನಿಮ್ಮ ಕೆಲಸದ ಸ್ಥಳದಲ್ಲಿ ಇದ್ದಕ್ಕಿದ್ದಂತೆ ನಿಮ್ಮ ಕೆಲಸದ ತನಿಖೆ ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ತಪ್ಪು ಮಾಡಿದ್ದರೆ, ನೀವು ಅದನ್ನು ಪಾವತಿಸಬೇಕಾಗಬಹುದು. ಈ ರಾಶಿಚಕ್ರದ ವ್ಯಾಪಾರಿಗಳು ನಿಮ್ಮ ವ್ಯವಹಾರಕ್ಕೆ ಹೊಸ ನಿರ್ದೇಶನ ನೀಡುವ ಬಗ್ಗೆ ಯೋಚಿಸಬಹುದು. ನಿಮ್ಮ ಸಂಗಾತಿಯು ಉಗ್ರರೂಪವನ್ನು ತೋರಿಸುವರು. ರಾಜರಾಜೇಶ್ವರಿಯು ನಿಮ್ಮ ಸಂಕಟವನ್ನು ದೂರಮಾಡುವಳು.
ಸಿಂಹ ರಾಶಿ: ಈ ರಾಶಿಯವರಿಗೆ ಫೆಬ್ರವರಿಯ ಕೊನೆಯ ವಾರ ಸಾಧಾರಣವಾಗಿರುವುದು. ಅಷ್ಟಮದಲ್ಲಿ ಶುಕ್ರ, ಬುಧ ಹಾಗೂ ಚಂದ್ರರ ಸಮಾಗಮ. ಅಶುಭಸ್ಥಾನದಲ್ಲಿ ಶುಭಗ್ರಹರು. ಆರೋಗ್ಯದಲ್ಲಿ ತೊಂದರೆ. ಕಾಲಿಗೆ ಗಾಯ, ನೋವುಗಳು ಉಂಟಾಗುವುದು. ನಿಮ್ಮ ಆಕರ್ಷಣೆ ಹಾಗೂ ವ್ಯಕ್ತಿತ್ವ ನೀವು ಹೊಸ ಸ್ನೇಹಿತರನ್ನು ಗಳಿಸಲು ಸಹಾಯ ಮಾಡುತ್ತದೆ. ಮನೆಯಲ್ಲಿ ತೊಂದರೆಗಳು ಹುಟ್ಟಿಕೊಂಡರೂ ಸಣ್ಣ ಸಣ್ಣ ವಿಷಯಗಳಿಗೆ ನಿಮ್ಮ ಸಂಗಾತಿಯನ್ನು ಟೀಕಿಸುವುದನ್ನು ತಪ್ಪಿಸಿ. ಕೆಲಸದ ಪ್ರದೇಶದಲ್ಲಿ ಉತ್ತಮವಾಗಿ ಅನುಭವಿಸುವ ದಿನಗಳಿರುವುವು. ಉನ್ನತ ಸ್ಥಾನದ ಆಸೆ ತೋರಿಸಬಹುದು. ನಿಮ್ಮ ಸಹೋದ್ಯೋಗಿಗಳು ನಿಮ್ಮ ಕೆಲಸವನ್ನು ಪ್ರಶಂಸಿಸುತ್ತಾರೆ. ಆದಾಗ್ಯೂ ನಿಮ್ಮ ಮನೆಯ ಸದಸ್ಯರು ನಿಮ್ಮ ಏಕಾಗ್ರತೆಗೆ ಭಂಗ ಉಂಟುಮಾಡಬಹುದು. ರಾಜಕೀಯ ವ್ಯಕ್ತಿಗಳಿಂದ ನಿಮಗೆ ಪ್ರೇರಣೆಯಾಗಲಿದೆ. ಶನಿಗೆ ಎಳ್ಳೆಣ್ಣೆಯ ದೀಪವನ್ನು ಬೆಳಗಿ.
ಕನ್ಯಾ ರಾಶಿ: ಈ ವಾರದಲ್ಲಿ ನಿಮಗೆ ಅಧಿಕ ಶುಭದ ದಿನಗಳಿರಲಿವೆ. ರಾಶಿಯ ಅಧಿಕವಾಗಿ ನೀಚಸ್ಥಾನ ಗತನಾಗಿದ್ದು, ಶುಕ್ರನು ಉಚ್ಚಗತನಾಗಿ ನಿಮ್ಮ ಇಷ್ಟಾರ್ಥ ಸಿದ್ಧಿಗೆ ಸಹಕರಿಸುವನು. ಕಂಕಣಭಾಗ್ಯಕ್ಕೆ ಸೂಕ್ತ ಕಾಲ. ಸುಂದರ ಯುವತಿಯ ಜೊತೆ ವಿವಾಹ. ನೀವು ಹಣದ ಪ್ರಯೋಜನವನ್ನು ಪಡೆಯಬಹುದು. ಆದರೆ ಇದಕ್ಕಾಗಿ ನೀವು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಅತಿಥಿಗಳು ನಿಮ್ಮ ಮನೆಯನ್ನು ಒಂದು ಆಹ್ಲಾದಕರ ಮತ್ತು ಅದ್ಭುತ ಸಂಜೆಗಾಗಿ ಬಳಸಿಕೊಳ್ಳುತ್ತಾರೆ. ಉದ್ಯೋಗದಲ್ಲಿ ಹೊಸದೇನನ್ನೂ ನಿರೀಕ್ಷಿಸದೇ ಹಾಗೆಯೇ ಮುಂದುವರಿಯಿರಿ. ಅಸಂಬದ್ಧ ಕಾರ್ಯಕ್ಕೆ ಪ್ರೇರಣೆ ದೊರೆತೀತು. ವಸ್ತ್ರಗಳ ಖರೀದಿಯನ್ನು ಮಾಡುವಿರಿ. ಅವರ ಬಳಿ ಒಳ್ಳೆಯ ಅಭಿಪ್ರಾಯ ಇರಿಸಿಕೊಳ್ಳಲು ನಿಮ್ಮ ಕೆಲಸವನ್ನು ಚೆನ್ನಾಗಿ ಮಾಡಿ. ಪರಿಸ್ಥಿತಿ ನೀವು ಬಯಸಿದಂತೆ ಇರದೇ ಇರಬಹುದು. ಆದರೆ ನೀವು ನಿಮ್ಮ ಅರ್ಧಾಂಗಿಯ ಜೊತೆ ಒಂದು ಸುಂದರ ಸಮಯ ಕಳೆಯುತ್ತೀರಿ. ಕಷ್ಟವನ್ನು ಹಂಚಿಕೊಳ್ಳಿ ಇಷ್ಟುವಾದವರ ಬಳಿ.
ತುಲಾ ರಾಶಿ: ಇದು ಕೊನೆಯ ವಾರವಾಗಿದ್ದು, ರಾಶಿ ಅಧಿಪತಿ ಷಷ್ಠದಲ್ಲಿ ಇದ್ದಾನೆ. ಉಚ್ಚನಾಗುದ್ದರೂ ಪ್ರಯೋಜನವಾಗದು. ನೀವು ಹೆಚ್ಚೇನೂ ಮಾಡದೇ ಇತರರ ಗಮನ ಸೆಳೆಯಲು ಬೇಕಾದ ವ್ಯವಸ್ಥೆಗಳನ್ನು ಮಾತ್ರ ಇಟ್ಟುಕೊಳ್ಳುವಿರಿ. ನೀವು ಇನ್ನು ಮುಂದೆ ನಿಮ್ಮ ಕಾಮಪ್ರಚೋದಕ ಕಲ್ಪನೆಗಳ ಬಗ್ಗೆ ಕನಸು ಕಾಣಬೇಕಾಗಿಲ್ಲ. ಅವು ಇಂದು ನಿಜವಾಗಬಹುದು. ಬುಧನೂ ನೀಚನಾಗಿರುವ ಕಾರಣ ಬಂಧುಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ಶತ್ರುತ್ವ ಉಂಟಾಗುವುದು. ಉದ್ಯಮಶೀಲ ಜನರ ಸಹಭಾಗಿತ್ವದಲ್ಲಿ ಉದ್ಯಮಗಳನ್ನು ಪ್ರಾರಂಭಿಸಿ. ಜಲ ಸಂಬಂಧಿ ಉದ್ಯಮದಿಂದ ಆದಾಯ. ಈ ರಾಶಿಚಕ್ರದ ಜನರು ಒಂಟಿಯಾಗಿ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ. ನಿಮ್ಮ ಉಚಿತ ಸಮಯವನ್ನು ಬಳಸಿಕೊಂಡು ಮನೆಯನ್ನು ಸ್ವಚ್ಛಗೊಳಿಸುವಲ್ಲಿ ಕಳೆಯಬಹುದು. ಷಷ್ಠದ ಶುಕ್ರನನು ಸಂಪತ್ತನ್ನು ನಾಶಮಾಡುವನು. ಲಕ್ಷ್ಮೀಕಟಾಕ್ಷವನ್ನು ಪಡೆಯಿರಿ.
ವೃಶ್ಚಿಕ ರಾಶಿ: ರಾಶಿ ಚಕ್ರದ ಎಂಟನೆಯ ರಾಶಿಯವರಿಗೆ ಅಶುಭ. ರಾಶಿ ಅಧಿಪತಿ ಅಷ್ಟಮದಲ್ಲಿ ಹಾಗೂ ಅಷ್ಟಮದ ಅಧಿಪತಿ ನೀಚ. ಪಂಚಮದಲ್ಲಿ ಇರುವ ಕಾರಣ ವಿದ್ಯಾಭ್ಯಾಸಕ್ಕೆ ತಡೆ. ಹಣವು ವೃಥಾ ಪೋಲಾಗುವುದು. ನಿಮ್ಮ ವೆಚ್ಚಗಳನ್ನು ನಿಯಂತ್ರಿಸಲು ಪ್ರಯತ್ನಿಸಿ. ಪ್ರತಿಭೆಯ ಪ್ರದರ್ಶನಕ್ಕೆ ಯಾರಿಂದಲಾದರೂ ಅಡ್ಡಿ. ನೀವು ಪ್ರೀತಿಸುವವರಿಂದ ಉಡುಗೊರೆಗಳನ್ನು ಪಡೆಯುವಿರಿ. ಕಳೆದ ಸಂತೋಷದ ನೆನಪುಗಳು ನಿಮ್ಮನ್ನು ಇಲ್ಲದಂತೆ ಮಾಡುತ್ತ ಎಚ್ಚರದಿಂದಿರಿ. ಜನರೊಡನೆ ವ್ಯವಹರಿಸುವಾಗ ಬುದ್ಧಿವಂತಿಕೆ ಮತ್ತು ತಾಳ್ಮೆಯಿಂದಿರಿ. ಉದ್ಯಮದ ನಿಮಿತ್ತ ವಿದೇಶ ಪ್ರಯಾಣ ಸಾಧ್ಯತೆ. ಈ ವಾರದಲ್ಲಿ ನೀವು ಕಚೇರಿಯಿಂದ ಮನೆಗೆ ಹಿಂದಿರುಗಿ ನಿಮ್ಮ ನೆಚ್ಚಿನ ಕೆಲಸವನ್ನು ಮಾಡುವಿರಿ. ಇದರಿಂದ ನಿಮ್ಮ ಮನಸ್ಸು ಸಮಾಧಾನಗೊಳ್ಳುತ್ತದೆ. ಸುಬ್ರಹ್ಮಣ್ಯನ ದರ್ಶನ ಪಡೆಯಿರಿ.
ಧನು ರಾಶಿ: ಈ ವಾರಾದಲ್ಲಿ ರಾಶಿಯ ಅಧಿಪತಿ ದುರ್ಬಲ. ಚತುರ್ಥದಲ್ಲಿ ಬುಧನ ಆಗಮನ. ಬಂಧುಗಳಿಂದ ಅಪಮಾನ ಮತ್ತು ಕಲಹ. ಸುಖದ ಹಾನಿ. ನೀವು ಕೆಲಸದ ಒತ್ತಡದಿಂದ ಅನಾರೋಗ್ಯಕ್ಕೆ ಕಾರಣವಾಗಬಹುದು. ಆರಾಮವಾಗಿರಲು ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಜೊತೆಗಿರಿ. ಹೆಚ್ಚುವರಿ ಹಣವನ್ನು ಭೂಮಿಗೆ ಹೂಡಿಕೆ ಮಾಡಬೇಕು. ಮಕ್ಕಳು ಕ್ರೀಡೆ ಮತ್ತು ಇತರ ಹೊರಾಂಗಣ ಚಟುವಟಿಕೆಗಳಲ್ಲಿ ಹೆಚ್ಚು ಸಮಯ ಕಳೆಯುವಿರಿ. ನಿಮ್ಮ ಸಂಗಾತಿಗಳು ಬೆಂಬಲ ನೀಡುತ್ತಾರೆ ಹಾಗೂ ಸಹಾಯ ಮಾಡುತ್ತಾರೆ. ಕಾರ್ಯನಿರತ ದಿನಚರಿಯ ಹೊರೆತಾಗಿಯೂ ನೀವು ನಿಮಗಾಗಿ ಸಮಯವನ್ನು ಕೊಡಲು ಸಾಧ್ಯವಾಗುತ್ತದೆ. ಉದ್ಯಮದಲ್ಲಿ ಹಿನ್ನಡೆ, ಹೂಡಿಕೆಯಲ್ಲಿ ವಂಚನೆ ಅಥವಾ ಅಜ್ಞಾನದಿಂದ ಹೂಡಿಕರ. ಬಿಡುವಿನ ವೇಳೆಯಲ್ಲಿ ನೀವು ಕ್ರಿಯಾತ್ಮಕವಾಗಿ ಏನಾದರೂ ಮಾಡಬಹುದು. ಸಂಗಾತಿಯಿಂದ ಪ್ರಶಂಸೆ ಸಿಗಲಿದೆ. ಗುರುವಿನ ದರ್ಶನ ಅಗತ್ಯ.
ಮಕರ ರಾಶಿ: ಈ ತಿಂಗಳ ಕೊನೆಯ ವಾರದಲ್ಲಿ ನಿಮಗೆ ಮಿಶ್ರಫಲ. ದುಃಸ್ವಭಾವವದಿಂದ ಅಪಯಶಸ್ಸು. ನಿಮ್ಮ ಯಾವುದೇ ವಿಶ್ವಾಸಕ್ಕೆ ಅರ್ಹರಾದವರಿಂದ ಸಲಹೆಯನ್ನು ತೆಗೆದುಕೊಳ್ಳಬೇಕು. ನೀವು ಹೆಚ್ಚು ಪ್ರಯತ್ನ ಮಾಡಬೇಕಾಗಿ ಬಂದರೂ ಕೂಡ ಮಕ್ಕಳ ಸಂಗಡ ನಿಮ್ಮ ಬಿಡುವಿನ ಸಮಯ ಕಳೆಯಲು ಪ್ರಯತ್ನಿಸುವಿರಿ. ಉದ್ಯಮಾಧಿಪತಿ ಉನ್ನತ ಸ್ಥಾನದಲ್ಲಿ ನಿಮಗೂ ಸ್ಥಾನಮಾನವನ್ನು ಕೊಡುವನು. ಪ್ರೇಮಿಗಳು ಕುಟುಂಬದ ಭಾವನೆಗಳ ಬಗ್ಗೆ ತುಂಬ ಕಾಳಜಿ ಹೊಂದಿರುತ್ತಾರೆ. ನಿಮ್ಮ ಸಹೋದ್ಯೋಗಿಗಳು ನಿಮ್ಮ ಕೆಲಸವನ್ನು ಪ್ರಶಂಸಿಸುತ್ತಾರೆ ಮತ್ತು ನಿಮ್ಮ ಬಾಸ್ ಸಹ ನಿಮ್ಮ ಕೆಲಸದಿಂದ ಸಂತೋಷಪಡುತ್ತಾರೆ. ಆದಾಯವನ್ನು ಕೂಡಲೇ ನಿರೀಕ್ಷಿಸುವುದು ಬೇಡ. ನಿಮ್ಮ ಅನುಭವಗಳನ್ನು ಇತರರಿಗೆ ತಿಳಿಸುವ ಉತ್ಸಾಹವನ್ನು ನಿಯಂತ್ರಿಸಿ. ದೋಷನಿವೃತ್ತಿಗಾಗಿ ಗೋಗ್ರಾಸವನ್ನು ಕೊಡಿ.
ಕುಂಭ ರಾಶಿ: ರಾಶಿಚಕ್ರದ ಹನ್ನೊಂದನೆ ರಾಶಿಯವರಿಗೆ ಈ ವಾರ ಶುಭವಿಲ್ಲ. ನೀಚನಾದ ಬುಧನು ದ್ವೀತೀಯದಲ್ಲಿ ಇದ್ದು ಅರ್ಥವ್ಯವಸ್ಥೆಗೆ ತೊಂದರೆ. ಶುಕ್ರನೂ ಅಲ್ಲೇ ಇದ್ದು ಆರ್ಥಿಕವಾಗಿ ನೀವು ಸಾಕಷ್ಟು ಬಲವಾಗಿ ಕಾಣುವಿರಿ. ಒಂದು ಕುಟುಂಬದ ಒಟ್ಟಾಗುವಿಕೆಯಲ್ಲಿ ನೀವೇ ಕೇಂದ್ರಬಿಂದುವಾಗಿರುತ್ತೀರಿ. ನಿಮ್ಮ ಪ್ರೀತಿಪಾತ್ರರಿಂದ ಉಡುಗೊರೆ ಸ್ವೀಕರಿಸುವುದರಿಂದ ಇದು ರೋಮಾಂಚಕ ದಿನವಾಗಿರುತ್ತದೆ. ನೀವು ನಿಮ್ಮ ಸಂಗಾತಿಯ ಜೊತೆಗೆ ನಿಮ್ಮ ಜೀವನದ ಅತ್ಯುತ್ತಮ ಸಮಯವನ್ನು ಕಳೆಯುತ್ತೀರಿ. ಯಾರಿಗಾದರೂ ಸಿಗಬೇಕಾದ ವಸ್ತುಗಳನ್ನು ನೀವು ಕಿತ್ತುಕೊಳ್ಳಬೇಡಿ. ಸಪ್ತಮಾಧಿಪತಿ ಸ್ವರಾಶಿಯಲ್ಲಿ, ಆರೋಗ್ಯದಲ್ಲಿ ತೊಂದರೆ. ಅಶುಭವಾರ್ತೆಯಿಂದ ನಿಮಗೆ ದುಃಖವಗಲಿದೆ. ದ್ವಿತೀಯ ಚಂದ್ರನು ಸ್ತ್ರೀಯರಿಂದ ಸುಖ ಕೊಡಿಸುವನು.
ಮೀನ ರಾಶಿ: ಇದು ಈ ತಿಂಗಳ ಕೊನೆಯ ವಾರವಾಗಿದ್ದು ಮನೋವ್ಯಾಕುಲತೆ ಅಧಿಕವಾಗಿದೆ. ಆಪ್ತಸ್ನೇಹಿತನ ಸಹಾಯದಿಂದ ಕೆಲವು ವ್ಯಾಪಾರದಿಂದ ಹಣದ ಲಾಭ. ಸಪ್ತಮಾಧಿಪತಿ ನೀಚನಾಗಿದ್ದು ವೈವಾಹಿಕ ವಿಚಾರದಲ್ಲಿ ಹಿನ್ನಡೆ. ದಾಂಪತ್ಯದಲ್ಲಿ ಮನಸ್ತಾಪ, ಅಪನಂಬಿಕೆ, ತಿಳಿವಳಿಕೆಯಲ್ಲಿ ವೈಷಮ್ಯ ಬರುವುದು. ಈ ಹಣ ನಿಮ್ಮ ಅನೇಕ ಸಮಸೆಗಳನ್ನು ದೂರ ಮಾಡಬಹುದು. ಗುರುದಶೆಯವರಿಗೆ ಉದ್ಯಮವು ಕ್ಲಿಷ್ಟ ಎನಿಸಬಹುದು. ಕುಟುಂಬದ ಸದಸ್ಯರು ಬೆಂಬಲ ನೀಡಿದರೂ ತುಂಬ ಬೇಡಿಕೆಯಿಡುತ್ತಾರೆ. ನೀವು ಶ್ರಮ ಮತ್ತು ತಾಳ್ಮೆಯ ಮೂಲಕ ನಿಮ್ಮ ಗುರಿಗಳನ್ನು ತಲುಪುತ್ತೀರಿ. ಮನೆಯ ಸದಸ್ಯರಿಗೆ ಏನನ್ನಾದರೂ ಮನವರಿಕೆ ಮಾಡಲು ನಿಮ್ಮ ಸಾಕಷ್ಟು ಸಮಯ ಹೋಗಬಹುದು. ಚಂದ್ರನು ನಿಮಗೆ ಮನೋಬಲವನ್ನು ಕೊಡುವನು. ಉತ್ತಮ ವಸ್ತುಗಳು ಸಿಗುವ ಸಾಧ್ಯತೆ ಇದೆ. ಅಷ್ಟಲಕ್ಷ್ಮಿಯ ಸ್ತೋತ್ರ ಮಾಡಿ.
ಲೋಹಿತ ಹೆಬ್ಬಾರ್ – 8762924271 (what’s app only)