ಒಂದೇ ನಕ್ಷತ್ರ, ದೇವತೆಗಳು ಎರಡೂ… ಅದು ಯಾವ ನಕ್ಷತ್ರ ಗೊತ್ತಾ?
ವಿಶಾಖಾ ನಕ್ಷತ್ರ ಇದರ ದೇವತೆ ಒಬ್ಬರಲ್ಲ, ಇಬ್ಬರು ಇಂದ್ರ ಮತ್ತು ಅಗ್ನಿ. ತೋರಣದ ಆಕಾರದಲ್ಲಿ ಆಕಾಶದಲ್ಲಿ ಕಾಣುವ ಐದು ನಕ್ಷತ್ರಗಳ ಸಮೂಹವಿದು. ರಾಕ್ಷಸ ಗಣಕ್ಕೆ ಸೇರಿರುವ ಈ ನಕ್ಷತ್ರದ ನಾಮಾಕ್ಷರಗಳು ತಿ ತು ತೇ ತೋ. ಕಫ ಪ್ರಕೃತಿಯ ನಕ್ಷತ್ರ ಇದು. ತುಲಾ ಹಾಗೂ ವೃಶ್ಚಿಕದಲ್ಲಿ ಈ ನಕ್ಷತ್ರಗಳ ಹಂಚಿಕೆಯಾಗಿದೆ.

ನಕ್ಷತ್ರ ಪುಂಜಗಳಲ್ಲಿ ಹದಿನಾರನೇ ನಕ್ಷತ್ರ ಇದು ವಿಶಾಖಾ ನಕ್ಷತ್ರ. ಇದರ ದೇವತೆ ಒಬ್ಬರಲ್ಲ, ಇಬ್ಬರು ಇಂದ್ರ ಮತ್ತು ಅಗ್ನಿ. ತೋರಣದ ಆಕಾರದಲ್ಲಿ ಆಕಾಶದಲ್ಲಿ ಕಾಣುವ ಐದು ನಕ್ಷತ್ರಗಳ ಸಮೂಹವಿದು. ರಾಕ್ಷಸ ಗಣಕ್ಕೆ ಸೇರಿರುವ ಈ ನಕ್ಷತ್ರದ ನಾಮಾಕ್ಷರಗಳು ತಿ ತು ತೇ ತೋ. ಕಫ ಪ್ರಕೃತಿಯ ನಕ್ಷತ್ರ ಇದು. ತುಲಾ ಹಾಗೂ ವೃಶ್ಚಿಕದಲ್ಲಿ ಈ ನಕ್ಷತ್ರಗಳ ಹಂಚಿಕೆಯಾಗಿದೆ. ಹೀಗಿರುವ ನಕ್ಷತ್ರದಲ್ಲಿ ಜನಿಸಿದವರು ಎಂತಹವರಾಗಿರುತ್ತಾರೆ ಎನ್ನುವುದು ವಿಸ್ಮಯ. ಇವರಲ್ಲಿ ಅಧಿಕ ಶುಭಾಶುಭ ಗುಣಗಳನ್ನು ನೋಡಬಹುದು.
ಅಸೂಯೆ :
ಇವರಲ್ಲಿ ಇನ್ನೊಬ್ಬರ ಬಗ್ಗೆ ಅಸೂಯೆ ಪಡುವ ಗುಣ ಅಧಿಕ. ಯಾರ ಒಳ್ಳೆಯದನ್ನೂ ಕೂಡಲೇ ಸ್ವೀಕರಿಸಲಾರರು. ಇನ್ನೊಬ್ಬರ ಬಗ್ಗೆ ನಕಾರಾತ್ಮಕ ಅಂಶಗಳನ್ನು ಹುಡುಕುವರು.
ಆತಿ ಆಸೆ :
ಇವರ ಆಸೆ ಅಧಿಕವಾಗಿರುವುದು. ಬೇಕು ಬೇಡಗಳ ನಡುವೆ ಅಂತರವಿರದು. ಪರರ ಸ್ವತ್ತಿನ ಬಗ್ಗೆ ಲಕ್ಷ್ಯವಿರದು. ತನ್ನದಾಗಿಸಿಕೊಳ್ಳುವ ಸ್ವಾರ್ಥವಿರುವುದು.
ವಾಚಾಳಿ :
ಅಧಿಕ ಮಾತುಗಳನ್ನು ಆಡುವವರಾಗುವರು. ಅದಕ್ಕೆ ಕಾರಣ ಅಸತ್ಯ, ಕುಹಕ, ಚಾಡಿ ಎಲ್ಲವನ್ನೂ ರೂಢಿಸಿಕೊಂಡಿರುವರು. ಇದರ ಕಾರಣದಿಂದಲೇ ಪರರ ಜೊತೆ ಕಲಹವನ್ನು ನಡೆಸುವರು.
ಗರ್ವ :
ಅಹಂಕಾರಿಂದ ವ್ಯವಹರಿಸುವರು. ಹಿರಿಯರಿಗೆ ಕೊಡಬೇಕಾದ ಗೌರವವನ್ನು ಕೊಡರು. ಯಾರ ಜೊತೆಗೂ ವಿನಯಶೀಲರಾಗಿರರು.
ಪತ್ನಿಗೆ ವಶ :
ಎಂತಹ ಅಹಂಕಾರವಿದ್ದರೂ ಪತ್ನಿಯ ಮುಂದೆ ಇವರ ಯಾವ ದರ್ಪವೂ ನಡೆಯದು. ಆಕೆ ಹೇಳಿದಂತೆ ಕೇಳಿಕೊಂಡು, ಮಾಡಿಕೊಂಡು ಇರಬೇಕು.
ನಿಶ್ಶತ್ರು :
ಇವರ ಪ್ರಭಾವಕ್ಕೆ ಶತ್ರುಗಳು ಇರಲಾರರು. ಇದ್ದರೂ ಇವರ ಮಿತ್ರರಾಗುವರು ಅಥವಾ ತಟಸ್ಥರಾಗುವರು. ಶತ್ರುತ್ವವನ್ನು ಬೆಳೆಸರು.
ಅಧಿಕಕ್ರೋಧ :
ಬೇಗ ಸಿಟ್ಟುಗೊಳ್ಳುವವರು ಇವರು. ಸಣ್ಣ ವಿಚಾರಕ್ಕೂ ಕೋಪ ಹಾಗೂ ದೀರ್ಘಕಾಲ ಅದು ಉಳಿದುಕೊಳ್ಳುವುದು.
ಧಾತುಕ್ರಿಯಾ :
ಭೂಮಿಯ ಉತ್ಪನ್ನಗಳಿಂದ ಆದಾಯವನ್ನು ಪಡೆಯುವವರಾಗಿರುವರು. ಅಥವಾ ಅಂತಹ ಉತ್ಪನ್ನಗಳ ಮಾರಾಟದಿಂದ ಜೀವನ ನಿರ್ವಹಣೆ ಆಗಲಿದೆ.
ಮಿತ್ರಹೀನ :
ಯಾವದೇ ಮಿತ್ರರನ್ನು ಇಟ್ಟುಕೊಳ್ಳಲಾರರು. ಇವರ ಸ್ವಭಾವಕ್ಕೆ ಮಿತ್ರರೂ ದೂರಾಗುವರು. ಒಂಟಿಯಾಗಿ ಇರಬೇಕಾಗುವುದು.
ವೇಶ್ಯಸಹವಾಸ :
ಪರಸ್ತ್ರೀಯರ ಸಹವಾಸ ಅಧಿಕವಾಗಿರುವುದು. ವೇಶ್ಯೆಯ ಸಹವಾಸ ಅಥವಾ ವೇಶ್ಯೆಗೆ ಸಮಾಮವಾದ ವ್ಯಕ್ತಿಗಳ ಸಂಪರ್ಕ ಇರುವುದು.
ಇಂತಹ ವಿಲಕ್ಷಣ ಸ್ವಭಾವದವರು ಈ ವಿಶಾಖಾ ನಕ್ಷತ್ರದಲ್ಲಿ ಜನಿಸಿದವರು. ಇದಕ್ಕೆ ಕಾರಣ ಆ ನಕ್ಷತ್ರ ಅಧಿಪತಿಗಳು ಇಂದ್ರ ಹಾಗೂ ಅಗ್ನಿ. ಸಿಟ್ಟು, ಭೂಮಿಯ ಉತ್ಪನ್ನಗಳ ಮಾರಟ ಅಗ್ನಿಯ ಸ್ವಭಾವದ್ದಾರೆ, ಗರ್ವ, ನಿಶ್ಶತ್ರು, ಅತಿಯಾಸೆ, ಅಸೂಯೆ ಇವೆಲ್ಲ ಇಂದ್ರನ ಸ್ವಭಾವಕ್ಕೆ ಹೋಲುವುದಾಗಿದೆ. ಹಾಗಾಗಿ ಸ್ವಭಾವವೂ ಹಾಗೆಯೇ ಇರಲಿದೆ.
– ಲೋಹಿತ ಹೆಬ್ಬಾರ್ – 8762924271




