
ಮಾರ್ಚ್ 08ರಿಂದ ಮಾರ್ಚ್ 14ರವರೆಗೆ ಪ್ರೇಮದಲ್ಲಿ, ದಾಂಪತ್ಯದಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದು. ಸತ್ತ್ವವುಳ್ಳದ್ದು ಉಳಿಯುವುದು. ನಿಸ್ಸತ್ತ್ವ ಅಳಿಯುವುದು. ಎಲ್ಲವೂ ನಿಮ್ಮ ನಡವಳಿಕೆ ಹಾಗೂ ಮಾತನ್ನು ಅವಲಂಬಿಸಿದೆ. ಶುಕ್ರನು ತನ್ನ ಉನ್ನತ ಸ್ಥಾನಕ್ಕೆ ಹೋದ ಕಾರಣ ಹಲವು ಶುಭವನ್ನು ನಿರೀಕ್ಷಿಸಬಹುದು.
ಮೇಷ: ಶುಕ್ರನ ಸಂಚಾರವು ಪ್ರೇಮಿಗಳಲ್ಲಿ ಹೊಸ ಉತ್ಸಾಹ ತುಂಬಲಿದೆ. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು, ಆದರೆ ಸಂವಹನದಿಂದ ಬಗೆಹರಿಯಲಿವೆ. ಅವಿವಾಹಿತರಿಗೆ ಮದುವೆಯ ಮಾತುಕತೆಗಳು ಅಂತಿಮವಾಗಬಹುದು. ವಿಚ್ಛೇದನ ಕೋರಿದವರಿಗೆ ನ್ಯಾಯಾಲಯದಿಂದ ಸಮಾಧಾನಕರ ವಾರ್ತೆ ಸಿಗುವ ಸಾಧ್ಯತೆಯಿದೆ.
ವೃಷಭ: ನಿಮ್ಮ ರಾಶ್ಯಾಧಿಪತಿ ಶುಕ್ರನ ಅನುಗ್ರಹದಿಂದ ಪ್ರೇಮ ಜೀವನವು ಮಧುರವಾಗಿರುತ್ತದೆ. ಸಂಗಾತಿಯ ನಡುವೆ ಪರಸ್ಪರ ವಿಶ್ವಾಸ ವೃದ್ಧಿಯಾಗಲಿದೆ. ವಿವಾಹ ಆಕಾಂಕ್ಷಿಗಳಿಗೆ ಉತ್ತಮ ಸಂಬಂಧಗಳು ಹುಡುಕಿ ಬರಲಿವೆ. ಹಳೆಯ ಕಹಿ ನೆನಪುಗಳನ್ನು ಮರೆತು ದಂಪತಿಗಳು ಹೊಸ ಜೀವನ ಆರಂಭಿಸಲು ಇದು ಸುಸಮಯ.
ಮಿಥುನ: ಈ ವಾರ ಪ್ರೀತಿಯ ವಿಷಯದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ತಪ್ಪು ತಿಳುವಳಿಕೆಯಿಂದ ವಿರಹ ಉಂಟಾಗಬಹುದು. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವಿಚ್ಛೇದನದ ಹಂತದಲ್ಲಿರುವವರು ಭಾವನಾತ್ಮಕವಾಗಿ ಕುಗ್ಗಬಹುದು. ಶಾಂತವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳಿತು.
ಕರ್ಕಾಟಕ: ಪ್ರೀತಿಯಲ್ಲಿರುವವರಿಗೆ ಮನೆಯವರ ಬೆಂಬಲ ಸಿಗಲಿದೆ. ವೈವಾಹಿಕ ಜೀವನದಲ್ಲಿ ಸಾಮರಸ್ಯವಿರುತ್ತದೆ. ಹೊಸ ಪ್ರೇಮ ಸಂಬಂಧಗಳು ಚಿಗುರಲಿವೆ. ವಿಚ್ಛೇದನಕ್ಕಾಗಿ ಕಾಯುತ್ತಿರುವವರಿಗೆ ಪ್ರಕ್ರಿಯೆಗಳು ವೇಗ ಪಡೆಯಬಹುದು. ಒಂಟಿ ಜೀವನ ನಡೆಸುತ್ತಿರುವವರಿಗೆ ಆಪ್ತ ಸ್ನೇಹಿತರಿಂದ ಪ್ರೇಮ ನಿವೇದನೆಯಾಗುವ ಸಾಧ್ಯತೆಯಿದೆ.
ಸಿಂಹ: ಸಂಗಾತಿಯೊಂದಿಗೆ ಪ್ರವಾಸಕ್ಕೆ ಹೋಗುವ ಯೋಗವಿದೆ. ಪ್ರೇಮ ಜೀವನದಲ್ಲಿ ಆಕರ್ಷಣೆ ಹೆಚ್ಚಾಗಲಿದೆ. ವಿವಾಹದ ವಿಚಾರದಲ್ಲಿ ಅಡೆತಡೆಗಳು ದೂರವಾಗಲಿವೆ. ವಿಚ್ಛೇದನದ ಪ್ರಕರಣಗಳಲ್ಲಿ ಅಂತಿಮ ತೀರ್ಪು ನಿಮ್ಮ ಪರವಾಗಿ ಬರುವ ಲಕ್ಷಣಗಳಿವೆ. ಒಟ್ಟಾರೆಯಾಗಿ ಸಂಬಂಧಗಳಲ್ಲಿ ಸುಧಾರಣೆ ಕಂಡುಬರಲಿದೆ.
ಕನ್ಯಾ: ಕೆಲಸದ ಒತ್ತಡದಿಂದ ಸಂಗಾತಿಗೆ ಸಮಯ ನೀಡಲು ಸಾಧ್ಯವಾಗದಿರಬಹುದು, ಇದು ಅಸಮಾಧಾನಕ್ಕೆ ಕಾರಣವಾಗಬಹುದು. ಮದುವೆ ಸಂಬಂಧಿತ ಮಾತುಕತೆಗಳಲ್ಲಿ ವಿಳಂಬವಾಗಬಹುದು. ಸಂಬಂಧ ಮುರಿಯುವ ಹಂತದಲ್ಲಿದ್ದರೆ ಹಿರಿಯರ ಮಧ್ಯಸ್ಥಿಕೆಯಿಂದ ಸುಧಾರಿಸಿಕೊಳ್ಳಲು ಪ್ರಯತ್ನಿಸಿ. ತಾಳ್ಮೆ ಅತಿ ಅಗತ್ಯ.
ತುಲಾ: ಶುಕ್ರನ ಪ್ರಭಾವದಿಂದ ನಿಮ್ಮ ಆಕರ್ಷಣೆ ಹೆಚ್ಚಲಿದೆ. ಪ್ರೀತಿಯ ಪ್ರಸ್ತಾಪಕ್ಕೆ ಇದು ಸಕಾಲ. ದಂಪತಿಗಳ ನಡುವೆ ಪ್ರೀತಿ ಮರುಕಳಿಸಲಿದೆ. ವಿವಾಹ ವಿಳಂಬವಾಗುತ್ತಿದ್ದವರಿಗೆ ಶುಭ ಸುದ್ಧಿ ಸಿಗಲಿದೆ. ವಿಚ್ಛೇದನದ ನಂತರ ಹೊಸ ಜೀವನ ಆರಂಭಿಸಲು ಬಯಸುವವರಿಗೆ ಸೂಕ್ತ ವ್ಯಕ್ತಿಯ ಪರಿಚಯವಾಗಬಹುದು.
ವೃಶ್ಚಿಕ: ಗುಪ್ತ ಪ್ರೇಮ ಸಂಬಂಧಗಳಿಂದ ದೂರವಿರುವುದು ಉತ್ತಮ. ದಾಂಪತ್ಯ ಜೀವನದಲ್ಲಿ ಸಣ್ಣ ಭಿನ್ನಾಭಿಪ್ರಾಯಗಳು ದೊಡ್ಡದಾಗದಂತೆ ನೋಡಿಕೊಳ್ಳಿ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದವರಿಗೆ ಕಾಯುವಿಕೆ ಅನಿವಾರ್ಯವಾಗಬಹುದು. ವಿವಾಹ ಆಕಾಂಕ್ಷಿಗಳು ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಿ.
ಧನು: ಈ ವಾರ ರೋಮ್ಯಾಂಟಿಕ್ ಕ್ಷಣಗಳನ್ನು ಕಳೆಯುವಿರಿ. ಪ್ರೇಮಿಗಳಿಗೆ ವಿವಾಹ ಯೋಗವಿದೆ. ವಿಚ್ಛೇದನದ ನಂತರ ಏಕಾಂಗಿಯಾಗಿದ್ದವರಿಗೆ ಹೊಸ ಸಂಬಂಧಗಳು ಹತ್ತಿರವಾಗಲಿವೆ. ಸಂಗಾತಿಯ ಬೆಂಬಲದಿಂದ ದೊಡ್ಡ ಸಮಸ್ಯೆಗಳು ಪರಿಹಾರವಾಗಲಿವೆ. ಕೌಟುಂಬಿಕ ಜೀವನ ಸುಖಮಯವಾಗಿರಲಿದೆ.
ಮಕರ: ಸಂಬಂಧಗಳಲ್ಲಿ ಅನಿಶ್ಚಿತತೆ ಕಂಡುಬರಬಹುದು. ಹಳೆ ಪ್ರೇಮಿಯ ಭೇಟಿಯಿಂದ ಗೊಂದಲ ಉಂಟಾಗಬಹುದು. ವಿವಾಹ ಸಂಬಂಧಗಳಲ್ಲಿ ಧನಸಹಾಯದ ನಿರೀಕ್ಷೆಯಿದೆ. ವಿಚ್ಛೇದನ ಪ್ರಕ್ರಿಯೆಗಳಲ್ಲಿ ಆಸ್ತಿ ಹಂಚಿಕೆಯ ವಿಷಯ ಚರ್ಚೆಗೆ ಬರಬಹುದು. ಸಂಗಾತಿಯ ಮಾತುಗಳಿಗೆ ಗೌರವ ನೀಡಿ.
ಕುಂಭ: ಶುಕ್ರನ ಬಲವು ನಿಮ್ಮ ಪ್ರೇಮ ಜೀವನಕ್ಕೆ ಬಲ ನೀಡಲಿದೆ. ಬಹುಕಾಲದ ಪ್ರೀತಿಗೆ ಮದುವೆಯ ಮುದ್ರೆ ಬೀಳಲಿದೆ. ವೈವಾಹಿಕ ಜೀವನದಲ್ಲಿನ ಭಿನ್ನಾಭಿಪ್ರಾಯಗಳು ದೂರವಾಗಿ ಹೊಂದಾಣಿಕೆ ಮೂಡಲಿದೆ. ವಿಚ್ಛೇದನ ಬಯಸುವವರಿಗೆ ಕಾನೂನು ಹೋರಾಟದಲ್ಲಿ ಮುನ್ನಡೆ ಸಿಗಲಿದೆ.
ಮೀನ: ನಿಮ್ಮ ರಾಶಿಯಲ್ಲಿ ಶುಕ್ರನ ಸಂಚಾರವು ಪ್ರೀತಿಯಲ್ಲಿ ಯಶಸ್ಸನ್ನು ನೀಡಲಿದೆ. ಪ್ರೇಮಿಗಳ ನಡುವೆ ನಂಬಿಕೆ ಹೆಚ್ಚಾಗಲಿದೆ. ಹೊಸದಾಗಿ ವಿವಾಹವಾದವರಿಗೆ ಸಂತಸದ ವಾರ್ತೆ ಸಿಗುವ ಸಾಧ್ಯತೆಯಿದೆ. ವಿಚ್ಛೇದನದ ಆಲೋಚನೆ ಬಿಟ್ಟು ಒಂದಾಗಲು ಇದು ಉತ್ತಮ ಸಮಯ. ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚಲಿದೆ.
ಲೋಹಿತ ಹೆಬ್ಬಾರ್