
ನವೆಂಬರ್ ನ ಈ ವಾರ ಪ್ರೀತಿಯ ವಿಷಯದಲ್ಲಿ ಹಲವು ನಿರೀಕ್ಷಿತ ಬದಲಾವಣೆ ಕಾಣಿಸುವುದು. ಶುಕ್ರ ಮತ್ತು ಗುರುವಿನಿಂದ ಶುಭ ಸಂಬಂಧ ರೂಪುಗೊಳ್ಳುತ್ತದೆ. ಶುಕ್ರನ ವಕ್ರಗತಿ ಮುಗಿದಿರುವುದರಿಂದ ಹಳೆಯ ಗೊಂದಲ ತಿಳಿಯಾಗುತ್ತದೆ. ಆತ್ಮಸ್ಥೈರ್ಯ ಎದ್ದು ತೋರುತ್ತದೆ.
ಮೇಷ ರಾಶಿ : ನಿಮ್ಮ ಸಂವಹನ ಸ್ಥಾನದಲ್ಲಿ ಬರುವುದರಿಂದ ಮನಸ್ಸಿನಲ್ಲೇ ಅಭ್ಯಾಸ ಮಾಡುತ್ತಿದ್ದ ಮಾತನ್ನು ಹೇಳುವ ವಾರ ಇದು. ಪ್ರೀತಿ ಇದ್ದರೆ ತಿಳಿಸಿ, ಮನಸ್ತಾಪ ಇದ್ದರೆ ಶಾಂತವಾಗಿ ಹೇಳಿ. ಸಂದೇಶದ ಮೂಲಕ ಅಲ್ಲ, ಮುಖಾಮುಖಿ ಮಾತನಾಡಿದರೆ ಹೆಚ್ಚು ಪರಿಣಾಮ. ಒಂಟಿಯಾಗಿದ್ದರೆ ಸಹೋದರ, ಸಹೋದರಿಯರ ಮೂಲಕ ಹೊಸ ಪರಿಚಯವಾಗಬಹುದು.
ವೃಷಭ ರಾಶಿ : ಈ ವಾರ ನಿಮಗೆ ನಿಮ್ಮ ಸ್ವಂತ ಮೌಲ್ಯದ ಅರಿವಾಗುತ್ತದೆ. ಸಂಬಂಧದಲ್ಲಿ ನೀವು ಕೊಡುವಷ್ಟು ಗೌರವ ಮತ್ತು ಪ್ರೀತಿ ಪಡೆಯುತ್ತಿದ್ದೀರಾ ಎಂದು ಯೋಚಿಸಿ. ಹಣಕಾಸಿನ ವಿಷಯಗಳು ಸಂಬಂಧದ ಮೇಲೆ ಪರಿಣಾಮ ಬೀರಬಹುದು, ಆದ್ದರಿಂದ ಖರ್ಚು ಹಂಚಿಕೆಯ ಬಗ್ಗೆ ಮುಕ್ತವಾಗಿ ಮಾತನಾಡಿ. ಸಣ್ಣ ಉಡುಗೊರೆ ಅಥವಾ ಇಷ್ಟದ ಊಟ ಬಾಂಧವ್ಯ ಗಟ್ಟಿಗೊಳಿಸುತ್ತದೆ.
ಮಿಥುನ ರಾಶಿ : ನಿಮ್ಮದೇ ರಾಶಿಯಲ್ಲಿ ಇರುವುದರಿಂದ ಇದು ನಿಮ್ಮ ವಾರ. ನಿಮ್ಮ ಆಕರ್ಷಣೆ ಅತ್ಯಂತ ಬಲವಾಗಿರುತ್ತದೆ ಎಂದು ಹೇಳಲಾಗಿದೆ. ಆದರೆ ಕೆಲವರಿಗೆ ಸಂಬಂಧದಲ್ಲಿ ಅನಿರೀಕ್ಷಿತ ಬೆಳವಣಿಗೆ ಆಗಿ, ಸಂಗಾತಿಯೊಂದಿಗೆ ಮುಂದುವರಿಯುವ ಬಗ್ಗೆ ನಿರ್ಧರಿಸಬೇಕಾಗಬಹುದು. ಮಂಗಳ ಮನೆಯ ಸ್ಥಾನ ಪ್ರವೇಶಿಸುವುದರಿಂದ ಮನೆಯ ವಿಷಯಗಳಲ್ಲಿ ತಾಳ್ಮೆ ಇರಲಿ.
ಕರ್ಕಾಟಕ ರಾಶಿ : ನಿಮ್ಮ ವಿಶ್ರಾಂತಿ ಮತ್ತು ಅಂತರಂಗದ ಸ್ಥಾನದಲ್ಲಿದೆ. ಮನಸ್ಸಿನಲ್ಲಿ ಹೂತಿಟ್ಟ ಭಾವನೆಗಳು ಮೇಲೆದ್ದು ಬರಬಹುದು ಅಥವಾ ಆಯಾಸವಾಗಬಹುದು. ಬಲವಂತವಾಗಿ ಎಲ್ಲವನ್ನೂ ನಿಭಾಯಿಸುವ ಬದಲು ಸ್ವಲ್ಪ ಏಕಾಂತ ಪಡೆಯಿರಿ. ಸಂಗಾತಿ ಅರ್ಥಮಾಡಿಕೊಳ್ಳುವಂತೆ ನಿಮ್ಮ ಅಗತ್ಯವನ್ನು ಮೃದುವಾಗಿ ತಿಳಿಸಿ.
ಸಿಂಹ ರಾಶಿ: ನಿಮ್ಮ ಸ್ನೇಹ ಮತ್ತು ಸಮುದಾಯ ಸ್ಥಾನದಲ್ಲಿದೆ. ಸ್ನೇಹಿತರ ಕೂಟ, ಹಬ್ಬ, ಸಮಾರಂಭಗಳಲ್ಲಿ ಪ್ರೀತಿ ಚಿಗುರುವ ಸಾಧ್ಯತೆ ಇದೆ. ಶುಕ್ರ ನಿಮ್ಮ ರಾಶಿಯ ಗುರುವಿಗೆ ಶುಭ ದೃಷ್ಟಿ ನೀಡುವುದರಿಂದ ಪ್ರಣಯದಲ್ಲಿ ಉತ್ಸಾಹ ಹೆಚ್ಚುತ್ತದೆ. ಸಂಗಾತಿಯೊಂದಿಗೆ ವಿಶೇಷ ಪ್ರವಾಸ.
ಕನ್ಯಾ ರಾಶಿ: ಮಂಗಳ ನಿಮ್ಮ ರಾಶಿ ಪ್ರವೇಶಿಸುವುದರಿಂದ ಮಾತಿಗಿಂತ ಕೃತಿಗೆ ಬೆಲೆ. ಜೊತೆಗೆ ವಾಸಿಸುವುದು ಅಥವಾ ಭವಿಷ್ಯದ ಯೋಜನೆ ರೂಪಿಸುವಂತಹ ಖಚಿತ ಹೆಜ್ಜೆಗಳಿಗೆ ಇದು ಸೂಕ್ತ ಸಮಯ. ಆದರೆ ಸಂಗಾತಿಯ ಸಣ್ಣ ತಪ್ಪುಗಳನ್ನು ಎತ್ತಿ ತೋರಿಸುವ ಅಭ್ಯಾಸ ಕಡಿಮೆ ಮಾಡಿ. ಪ್ರಾಮಾಣಿಕತೆ ಇರಲಿ, ಕಟುತೆ ಬೇಡ.
ತುಲಾ ರಾಶಿ: ನಿಮ್ಮ ರಾಶ್ಯಾಧಿಪತಿ ಶುಕ್ರ ನಿಮ್ಮದೇ ರಾಶಿಯಲ್ಲಿ ಬಲವಾಗಿದ್ದಾನೆ. ಪೂರ್ಣಚಂದ್ರ ನಿಮ್ಮ ಪ್ರಯಾಣ ಮತ್ತು ನಂಬಿಕೆಯ ಸ್ಥಾನದಲ್ಲಿದೆ, ಹೀಗಾಗಿ ಸಂಗಾತಿಯೊಂದಿಗೆ ಸಣ್ಣ ವಿಹಾರ ಅಥವಾ ದೇವಸ್ಥಾನ ದರ್ಶನ ಸುಂದರ ಅನುಭವ ನೀಡುತ್ತದೆ. ಒಂಟಿಯಾಗಿದ್ದರೆ ಭಾವನಾತ್ಮಕವಾಗಿ ಪ್ರಬುದ್ಧ ವ್ಯಕ್ತಿಯತ್ತ ಆಕರ್ಷಣೆ ಉಂಟಾಗಬಹುದು.
ವೃಶ್ಚಿಕ ರಾಶಿ: ಇದು ಆಳವಾದ, ಭಾವನಾತ್ಮಕ ಮಾತುಕತೆಯ ವಾರ. ಹಣಕಾಸು ಅಥವಾ ಭಾವನೆಯ ವಿಷಯದಲ್ಲಿ ಗೋಜಲು ಇದ್ದರೆ ಅದನ್ನು ಪರಿಹರಿಸಿಕೊಳ್ಳಲು ಒಳ್ಳೆಯ ಸಮಯ. ಸ್ವಲ್ಪ ಅಸಹಜ ಎನಿಸಿದರೂ ಸ್ಪಷ್ಟವಾಗಿ ಮಾತನಾಡುವುದು ಮನಸ್ಸನ್ನು ಹಗುರಗೊಳಿಸುತ್ತದೆ. ಹಳೆಯ ಅಸೂಯೆ ಅಥವಾ ಸಂಶಯಗಳನ್ನು ಬಿಟ್ಟುಬಿಡಿ.
ಧನು ರಾಶಿ: ನಿಮ್ಮ ಋತು ಆರಂಭವಾಗಿದೆ, ಜೊತೆಗೆ ಪೂರ್ಣಚಂದ್ರ ನಿಮ್ಮ ಪಾಲುದಾರಿಕೆ ಸ್ಥಾನದಲ್ಲಿದೆ. ಸಂಬಂಧದಲ್ಲಿ ಒಂದು ನಿರ್ಧಾರ ಅಥವಾ ಮೈಲಿಗಲ್ಲು ಸ್ಪಷ್ಟವಾಗುತ್ತದೆ. ಸಂಗಾತಿಗೆ ಅವರದೇ ಜಾಗ ನೀಡಿ, ಜೊತೆಗೆ ನಿಮ್ಮ ಭಾವನೆಗಳನ್ನೂ ಹಂಚಿಕೊಳ್ಳಿ. ಒಂಟಿಯಾಗಿದ್ದರೆ ಯಾರಾದರೂ ನಿಮ್ಮ ಆಲೋಚನೆಗಳ ಬಗ್ಗೆ ಉತ್ಸಾಹ ತೋರಿಸಿದರೆ ಅದು ಹೊಸ ಆರಂಭವಾಗಬಹುದು.
ಮಕರ ರಾಶಿ: ದೈನಂದಿನ ಸಣ್ಣ ಕಾಳಜಿಗಳೇ ನಿಮ್ಮ ಪ್ರೇಮ ಭಾಷೆ. ಮಂಗಳನ ಪ್ರಭಾವದಿಂದ ಪ್ರಾಯೋಗಿಕ ಸಹಾಯ, ಉದಾಹರಣೆಗೆ ಮನೆಕೆಲಸದಲ್ಲಿ ಕೈ ಜೋಡಿಸುವುದು ಅಥವಾ ಸಂಗಾತಿಯ ಆರೋಗ್ಯದ ಬಗ್ಗೆ ಗಮನ ಹರಿಸುವುದು, ಹೃದಯ ಗೆಲ್ಲುತ್ತದೆ. ಭಾವನೆಯನ್ನು ಮಾತಿನಲ್ಲಿ ವ್ಯಕ್ತಪಡಿಸಲು ಹಿಂಜರಿಯಬೇಡಿ.
ಕುಂಭ ರಾಶಿ : ಪ್ರಣಯ ಮತ್ತು ಆನಂದದ ಭಾವ ಈ ವಾರ ಹೆಚ್ಚು. ಹೊಸ ಸ್ಥಳ, ವಿಭಿನ್ನ ಅನುಭವ ಅಥವಾ ಅನಿರೀಕ್ಷಿತ ಭೇಟಿ ಸಂತೋಷ ತರಬಹುದು. ನಿಮ್ಮ ವಿಭಿನ್ನ ಸ್ವಭಾವವನ್ನು ಮೆಚ್ಚುವ ವ್ಯಕ್ತಿ ಹತ್ತಿರವಾಗುವ ಸಾಧ್ಯತೆ ಇದೆ. ಆದರೆ ಆತುರದ ವಾಗ್ದಾನ ಬೇಡ.
ಮೀನ ರಾಶಿ : ಮನೆ ಮತ್ತು ಕುಟುಂಬದ ಬಗ್ಗೆ ಮನಸ್ಸು ಹೆಚ್ಚು ಹರಿಯುತ್ತದೆ. ಮಂಗಳ ನಿಮ್ಮ ಸಂಗಾತಿ ಸ್ಥಾನ ಪ್ರವೇಶಿಸುವುದರಿಂದ ಮುಖಾಮುಖಿ ಮಾತುಕತೆ ಮುಖ್ಯ; ಅನಿಸಿದ್ದನ್ನು ಮನದಲ್ಲೇ ಇಡಬೇಡಿ. ಕುಟುಂಬದ ಹಿರಿಯರ ಸಲಹೆ ಸಂಬಂಧಕ್ಕೆ ಬಲ ನೀಡುತ್ತದೆ.
ಇನ್ನಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ