Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜೂನ್ 18ರಿಂದ 24ರ ತನಕ ವಾರಭವಿಷ್ಯ
ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿಯೇ ಮಾಹಿತಿಯೂ ಇದೆ. ಜೂನ್ 18ರಿಂದ 24ರ ತನಕ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿಯೇ ಮಾಹಿತಿಯೂ ಇದೆ. ಜೂನ್ 18ರಿಂದ 24ರ ತನಕ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಈ ವಾರ ಭಾವನಾತ್ಮಕವಾಗಿ ಬಹಳ ಸವಾಲಿನಿಂದ ಕೂಡಿರುತ್ತದೆ. ಯಾರ ಬಳಿಯಾದರೂ ವ್ಯವಹಾರ- ಒಪ್ಪಂದದ ವಿಚಾರಗಳನ್ನು ಮಾತನಾಡುವ ಮುನ್ನ ಈ ಸಂಗತಿಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ. ನೀವು ಬಹಳ ಇಷ್ಟ ಪಡುವಂಥವರು, ನಂಬುವಂಥವರೇ ನಿಮಗೆ ಹೆಚ್ಚು ನೋವನ್ನು ನೀಡುತ್ತಾರೆ. ದಿಢೀರನೆ ಯಾರ ಸಹವಾಸವೂ ಬೇಡ ಎನಿಸುವುದಕ್ಕೆ ಶುರು ಆಗುತ್ತದೆ. ಸಂಗೀತ, ಯೋಗ, ಧ್ಯಾನ, ಟೈಲರಿಂಗ್, ಫ್ಯಾಷನ್ ಡಿಸೈನಿಂಗ್, ಅಡುಗೆ, ಜಿಮ್ ಏನಾದರೂ ಹೊಸದನ್ನು ಮಾಡುವುದಕ್ಕೆ ತೊಡಗಿಕೊಳ್ಳಲಿದ್ದೀರಿ. ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿಸುವ ಯೋಗ ಇದೆ. ಒಂದು ವೇಳೆ ಅದಕ್ಕೆ ಅಗತ್ಯ ಇರುವಷ್ಟು ಹಣ ಇಲ್ಲದಿದ್ದಲ್ಲಿ ಕನಿಷ್ಠ ಪಕ್ಷ ಷೋ ರೂಮ್‌ಗೆ ತೆರಳಿ, ನೋಡಿಕೊಂಡಾದರೂ ಬರುತ್ತೀರಿ. ಕೃಷಿ ವಲಯದಲ್ಲಿ ಇರುವವರು ಭೂಮಿ ಮಾರಾಟ ಮಾಡುವುದಕ್ಕೋ ಅಥವಾ ಇರುವ ಜಮೀನನ್ನು ಸೈಟುಗಳಾಗಿ ಪರಿವರ್ತಿಸಿ, ಮಾರಾಟ ಮಾಡುವುದಕ್ಕೋ ಆಲೋಚನೆ ಮಾಡುತ್ತೀರಿ. ಕೋರ್ಟ್- ಕಚೇರಿ ವ್ಯಾಜ್ಯಗಳನ್ನು ರಾಜೀ- ಸಂಧಾನದ ಮೂಲಕ ಸರಿ ಮಾಡಿಕೊಳ್ಳುವ ಅವಕಾಶಗಳಿವೆ. ವೃತ್ತಿನಿರತರು ಅದೇ ವೃತ್ತಿಯಲ್ಲಿ ಇರುವವರ ಜತೆಗೆ ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇದ್ದು, ಅದು ಮದುವೆ ಹಂತದ ತನಕ ಹೋಗುತ್ತದೆ. ಈ ವಾರ ಇದೇ ವಿಷಯ ನಿಮ್ಮಲ್ಲಿ ಉಲ್ಲಾಸ ತುಂಬುತ್ತದೆ. ವಿದ್ಯಾರ್ಥಿಗಳಿಗೆ ಸ್ನೇಹಿತರ ಮಧ್ಯೆ ಬಹಳ ಒಳ್ಳೆ ಹೆಸರು ಬರಲಿದೆ. ಇತರರಿಗೆ ಸಹಾಯಹಸ್ತ ನೀಡಲಿದ್ದೀರಿ. ಸ್ಟೈಪೆಂಡ್ ಬರುವಂಥ ಕೆಲಸ ಹುಡುಕಿಕೊಂಡು ಬರಲಿದೆ. ಮಹಿಳೆಯರು ರಾಜಕಾರಣದಲ್ಲಿ ಇದ್ದಲ್ಲಿ ಹೊಸ ಜವಾಬ್ದಾರಿಗಳು ಬರಲಿವೆ. ಖ್ಯಾತಿ ಜಾಸ್ತಿ ಆಗುತ್ತದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ವಿವಾಹ ವಯಸ್ಕರು ಮನಸ್ಸಿನಲ್ಲಿ ಇರುವ ಪ್ರೇಮ ವಿಚಾರವನ್ನು ನಿವೇದನೆ ಮಾಡಬೇಕು ಅಂದುಕೊಳ್ಳುತ್ತಿರುವವರು ಕೊನೆ ಕ್ಷಣದಲ್ಲಿ ಗೊಂದಲಕ್ಕೆ ಬೀಳುತ್ತೀರಿ. ಇನ್ನು ಈಗ ಇರುವ ಕೆಲಸದಲ್ಲೇ ಮುಂದುವರಿಯಬೇಕಾ ಅಥವಾ ಹೊಸ ವ್ಯಾಪಾರ ಶುರು ಮಾಡಬೇಕಾ ಎಂಬ ಸಂಗತಿ ಬಹಳವಾಗಿ ಕಾಡುತ್ತದೆ. ಸುಖಾಸುಮ್ಮನೆ ಮೇಲಧಿಕಾರಿಗಳನ್ನು ಬೇರೆ ಯಾರದೋ ಕಾರಣಕ್ಕೆ ಎದುರುಹಾಕಿಕೊಳ್ಳುತ್ತೀರಿ. ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದವರಿಗೆ ಖರೀದಿಗಾಗಿ ಹೊಸ ಹೊಸ ಜನರು ವಿಚಾರಣೆಗೆ ಬರುತ್ತಾರೆ. ಚರ್ಮದ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿ. ಸೌಂದರ್ಯವರ್ಧಕಗಳನ್ನು ಬಳಸುವವರಿಗೆ ಈ ಎಚ್ಚರಿಕೆ ಮಾತು ಹೆಚ್ಚು ಅನ್ವಯಿಸುತ್ತದೆ. ಕೃಷಿಕರಿಗೆ ಕುಟುಂಬದ ಭವಿಷ್ಯ, ಆರೋಗ್ಯ, ಹೂಡಿಕೆ, ವಿಮೆ ವಿಚಾರಗಳು ಹೆಚ್ಚಿನ ಪ್ರಾಶಸ್ತ್ಯ ಪಡೆದುಕೊಳ್ಳುತ್ತವೆ. ನಿಮಗಿಂತ ಚಿಕ್ಕ ವಯಸ್ಸಿನವರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ. ಕಡಿಮೆ ಬೆಲೆಗೆ ಏನಾದರೂ ಸಿಗುತ್ತದೆ ಎಂಬ ಆಸೆಗೆ ಬೀಳದಿರಿ. ಇದರಿಂದ ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ವೃತ್ತಿ ನಿರತರು ನಿಮ್ಮ ವೃತ್ತಿಗೆ ಅಥವಾ ಸಮುದಾಯಕ್ಕೆ ಸಂಬಂಧಿಸಿದ ಸಂಘ- ಸಂಸ್ಥೆಗಳಲ್ಲಿ ಮುಖ್ಯ ಹುದ್ದೆಗಳಿಗೆ ಆಯ್ಕೆ ಆಗುವಂಥ ಸಾಧ್ಯತೆ ಇದೆ. ಸಂಬಂಧಿಗಳು ನಿಮ್ಮಿಂದ ಹಣಕಾಸು ನೆರವನ್ನು ಕೇಳಿಕೊಂಡು ಬರಲಿದ್ದಾರೆ. ವಿದ್ಯಾರ್ಥಿಗಳು ಯಾವ ವಿಷಯವನ್ನು ಕಷ್ಟ ಎಂದುಕೊಂಡಿರುತ್ತೀರೋ ಅದನ್ನು ಬೋಧಿಸುವುದಕ್ಕೆ ಸೂಕ್ತ ಶಿಕ್ಷಕರು ಅಥವಾ ಉಪನ್ಯಾಸಕರು ದೊರೆಯಲಿದ್ದಾರೆ. ಇನ್ನು ಮಹಿಳೆಯರು ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಸೂಕ್ತ ಉದ್ಯೋಗಾವಕಾಶ ದೊರೆಯಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಮದುವೆಗಾಗಿ ಪ್ರಯತ್ನಿಸುತ್ತಿರುವವರಿಗೆ ಒಂದಿಷ್ಟು ಶುಭ ಬೆಳವಣಿಗೆಗಳು ಇವೆ, ಹೊಸ ಬಟ್ಟೆ, ಸ್ಮಾರ್ಟ್ ವಾಚ್, ಬ್ರ್ಯಾಂಡೆಡ್ ಶೂಗಳಿಗೆ ಹಣ ಖರ್ಚಾಗಲಿವೆ. ಇನ್ನು ಮದುವೆ ಆದವರು ಒಂದೆರಡು ದಿನದ ಮಟ್ಟಿಗೆ ನೀವಿರುವ ಸ್ಥಳದಿಂದ ಹೊರಗೆ, ಕನಿಷ್ಠ ಪಕ್ಷ ಸಿನಿಮಾ, ಮಾಲ್‌ಗಾದರೂ ಹೋಗಿಬರುವ ಯೋಗ ಇದೆ. ಹೊಸದಾಗಿ ಕೆರಿಯರ್ ಡೆವಲಪ್‌ಮೆಂಟ್ ಕ್ಲಾಸ್‌ಗಳಿಗೆ ಜಾಯಿನ್ ಆಗುವುದಕ್ಕೆ ಮನಸ್ಸು ಮಾಡಲಿದ್ದೀರಿ. ಸೈಟು- ಮನೆ ಖರೀದಿ ಮಾಡಬೇಕೆಂದು ಇರುವವರು ಅದನ್ನು ಮುಂದಕ್ಕೆ ಹಾಕುವುದು ಉತ್ತಮ. ಷೇರು, ಮ್ಯೂಚುವಲ್ ಫಂಡ್ ಇಂಥವುಗಳಲ್ಲಿ ಹಣ ಹೂಡಿರುವವರಿಗೆ ಇದು ಸವಾಲಿನ ವಾರ ಆಗಿರುತ್ತದೆ. ಯಾವುದೇ ಕಾರಣಕ್ಕೂ ಬೇರೆಯವರ ಹಣವನ್ನು ಪಡೆದು, ಹೊಸದಾಗಿ ಹೂಡಿಕೆ ಮಾಡಬೇಡಿ. ಸಾಲವಂತೂ ಬೇಡವೇ ಬೇಡ. ಕೃಷಿ ವಲಯದಲ್ಲಿ ಇರುವವರಿಗೆ ನಿಮ್ಮದೇ ಅತಿಯಾದ ಆತ್ಮವಿಶ್ವಾಸ ಮುಳುವಾಗಿ ಕಾಡುತ್ತದೆ. ನಿಮಗೆ ಗೊತ್ತಿರುವಂಥ ಮಾಹಿತಿಯೇ ಆದರೂ ಮತ್ತೊಮ್ಮೆ ಪರಿಶೀಲಿಸಿ, ಇನ್ನೊಮ್ಮೆ ವಿಚಾರಿಸಿದ ನಂತರವೇ ಹೇಳಿ. ಯಾವುದಾದರೂ ಒಂದು ವಿಚಾರಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಬೇಕಾಗುತ್ತದೆ. ವೃತ್ತಿನಿರತರಿಗೆ ವಿದೇಶದಲ್ಲಿ ವ್ಯವಹಾರಕ್ಕೆ ಅಥವಾ ಯಾವುದಾದರೂ ಸೆಮಿನಾರ್, ಟ್ರೇನಿಂಗ್ ಇಂಥದ್ದಕ್ಕಾದರೂ ಹೋಗಬೇಕಾಗಬಹುದು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಇರುವ ಅಡೆತಡೆಗಳು ನಿವಾರಣೆ ಆಗಲಿದೆ. ಮಹಿಳೆಯರು ಉದ್ಯೋಗಸ್ಥರಾಗಿದ್ದಲ್ಲಿ ಬಡ್ತಿ ಅಥವಾ ವೇತನ ಹೆಚ್ಚಳದ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಮನೆಯಲ್ಲಿ ಪ್ರೀತಿಯಿಂದ ಸಾಕಿರುವ ಪ್ರಾಣಿಗಳಿಗೆ ಅನಾರೋಗ್ಯದ ಸಾಧ್ಯತೆ ಇದೆ. ಇನ್ನು ಊಟ- ತಿಂಡಿ, ಪಾನೀಯಗಳಲ್ಲಿ ಕಡ್ಡಾಯವಾಗಿ ಸ್ವಚ್ಛತೆ, ಜತೆಗೆ ಅದು ನಿಮ್ಮ ದೇಹಕ್ಕೆ ಒಗ್ಗುತ್ತಿದೆಯಾ ಎಂಬ ಕಡೆ ಲಕ್ಷ್ಯ ಕೊಡಿ. ಶುಕ್ರವಾರ ಅಥವಾ ಶನಿವಾರದಂದು ರಾಮಕೃಷ್ಣಾಶ್ರಮ, ಅಥವಾ ಚರ್ಚ್‌ಗೆ ಹೋಗುವಂಥವರು ಚರ್ಚ್‌ಗೆ ಅಥವಾ ಆಯಾ ಧಾರ್ಮಿಕ ಕೇಂದ್ರಕ್ಕೆ ಹೋಗುವಂಥವರು ಅಂಥಲ್ಲಿಗೆ ಹೋಗಿಬನ್ನಿ. ಕೃಷಿ ವಲಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ನಿಮ್ಮದಲ್ಲದ ತಪ್ಪಿಗೆ ಅಪವಾದ, ನಿಂದನೆಗಳನ್ನು ಎದುರಿಸಬೇಕಾಗುತ್ತದೆ. ಕಣ್ಣು ಮಂಜು ಬರುವುದು, ತಲೆ ಸುತ್ತುವುದು ಇತ್ಯಾದಿ ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಹೊಸದಾಗಿ ಬೇರೆ ವೈದ್ಯರ ಬಳಿ ಚಿಕಿತ್ಸೆ ಪಡೆಯುವಂತಿದ್ದಲ್ಲಿ ಅಥವಾ ಮಾತ್ರೆ, ಔಷಧಿಗಳನ್ನು ಬದಲಿಸಬೇಕು ಎಂದಿದ್ದಲ್ಲಿ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ, ಮುಂದಕ್ಕೆ ಹೆಜ್ಜೆ ಇಡುವುದು ಒಳ್ಳೆಯದು. ವೃತ್ತಿನಿರತರಿಗೆ ಸರ್ಕಾರದ ಕೆಲಸಗಳಲ್ಲಿ ಇತರರ ನೆರವು, ಮಾರ್ಗದರ್ಶನ ಪಡೆಯುವುದು ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣ ಆಗಲಿದೆ. ನಿಮ್ಮ ಆತ್ಮಗೌರವಕ್ಕೆ ಪೆಟ್ಟು ನೀಡುವಂಥ ಮಾತನಾಡಿದರು ಎಂಬ ಕಾರಣಕ್ಕೆ ವಿಪರೀತದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ತಾಳ್ಮೆ, ಸಂಯಮ ಬಹಳ ಮುಖ್ಯ. ಇಲ್ಲದಿದ್ದಲ್ಲಿ ಭಾರೀ ಹಿನ್ನಡೆ ಅನುಭವಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಒಂದು ವೇಳೆ ನಿಮ್ಮದೇ ವೈಫಲ್ಯವಿದ್ದಲ್ಲಿ ಅದಕ್ಕಾಗಿ ಬೇರೆಯವರನ್ನು ದೂರಬೇಡಿ. ಮಹಿಳೆಯರಿಗೆ ಹಳೇ ಸ್ನೇಹಿತ- ಸ್ನೇಹಿತೆಯರನ್ನು ಭೇಟಿ ಆಗುವ ಹಾಗೂ ಅವರ ಜತೆಗೆ ಉತ್ತಮ ಸಮಯವನ್ನು ಕಳೆಯುವ ಯೋಗ ಇದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಸೋಷಿಯಲ್ ಮೀಡಿಯಾದಲ್ಲಿ ಏನು ಪೋಸ್ಟ್ ಮಾಡುತ್ತಿದ್ದೀರಿ ಎಂಬ ಬಗ್ಗೆ ಗಮನ ಕೊಡಿ. ಯಾರ ಬಗ್ಗೆಯಾದರೂ ಮಾತನಾಡುವಾಗ, ಅಭಿಪ್ರಾಯ ಹೇಳುವಾಗ ಸ್ವಲ್ಪ ಎಚ್ಚರ ವಹಿಸಿ. ಈ ವಾರದಲ್ಲಿ ಒಂದು ದಿನ ಕನಿಷ್ಠ ನಾಲ್ಕು ಗಂಟೆ ಕಾಲ ಮೌನವಾಗಿರುವುದಕ್ಕೆ ಪ್ರಯತ್ನಿಸಿ, ಇದರಿಂದ ನಿಮಗೆ ಅನುಕೂಲ ಇದೆ. ಗಾರ್ಡನಿಂಗ್ ಮಾಡುವಂಥ ಅಭ್ಯಾಸ ಇದ್ದರೆ ಒಳ್ಳೆಯದು, ಇಲ್ಲದಿದ್ದರೆ ರೂಢಿಸಿಕೊಳ್ಳಿ. ಏಕಾಗ್ರತೆ ಜಾಸ್ತಿ ಮಾಡಿಕೊಳ್ಳುವುದಕ್ಕೆ ಸೂಕ್ತ ಸಮಯ ಇದು. ಬೇರೆಯವರ ಟೀಕೆಯನ್ನು ಪಾಸಿಟಿವ್ ಆಗಿ ಸ್ವೀಕರಿಸಿ. ಕೃಷಿಕರಿಗೆ ಹೊಸ ಹೊಸ ತಂತ್ರಜ್ಞಾನ, ವಿಧಾನವನ್ನು ಅಳವಡಿಸಿಕೊಳ್ಳುವುದಕ್ಕೆ ಸೂಕ್ತ ಮಾರ್ಗದರ್ಶನ ದೊರೆಯಲಿದೆ. ಮಾಮೂಲಿಗಿಂತ ಹೆಚ್ಚಿನ ಕೆಲಸದ ಒತ್ತಡವನ್ನು ಎದುರಿಸಲಿದ್ದೀರಿ. ಮನೆಗೆ ಬರುವಂಥ ಹೊಸ ವಸ್ತುಗಳ ಗುಣಮಟ್ಟ ಹಾಗೂ ಸ್ಥಿತಿಯನ್ನು ಒಂದಕ್ಕೆ ಎರಡು ಬಾರಿ ಪರೀಕ್ಷಿಸಿಕೊಳ್ಳಿ. ವೃತ್ತಿನಿರತರಿಗೆ ಮಿತ್ರರು, ಸಂಬಂಧಿಕರಿಂದ ಶಿಫಾರಸುಗಳು ಬರಬಹುದು. ಅಂದರೆ ಯಾರಿಗಾದರೂ ಕೆಲಸ ನೀಡುವಂತೆ ಅಥವಾ ಯಾವುದಾದರೂ ವಸ್ತುಗಳನ್ನು ಇಂಥವರಿಂದಲೇ ಖರೀದಿಸುವಂತೆ ಕೇಳಬಹುದು. ಇನ್ನು ವಿದ್ಯಾರ್ಥಿಗಳಿಗೆ ಕೀರ್ತಿ ಹೆಚ್ಚಾಗಲಿದೆ. ಕ್ರೀಡಾಕ್ಷೇತ್ರದಲ್ಲಿ ಇರುವವರಿಗೆ ಪ್ರಾಯೋಜಕರು ದೊರೆಯುವಂಥ ಅವಕಾಶಗಳಿವೆ. ಮಹಿಳೆಯರಿಗೆ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ವಿದೇಶಗಳಿಂದ ಶುಭ ಸುದ್ದಿ ಕೇಳುವ ಯೋಗ ಇದೆ. ಫ್ಯಾಷನ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಅವಕಾಶ, ಕೆಲಸಗಳು ದೊರೆಯಲಿವೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನಿಮ್ಮ ಪ್ರಭಾವಲಯದ ವಿಸ್ತರಣೆ ಆಗಲಿದೆ. ಯಾರಿಗಾದರೂ ನೀವು ಮಾಡಿದ ಶಿಫಾರಸಿನಿಂದಾಗಿ ಕೆಲಸ ಆಗಲಿದೆ. ಏಕಾಏಕಿ ಹಲವರಿಗೆ ನಿಮ್ಮ ನೆರವಿನ ಅಗತ್ಯ ಕಂಡುಬರುತ್ತದೆ. ನಿಮಗೇ ಅಚ್ಚರಿ ಆಗುವ ರೀತಿಯಲ್ಲಿ ಯಾರ್ಯಾರೋ ನಿಮ್ಮನ್ನು ಭೇಟಿ ಮಾಡುವುದಕ್ಕೆ, ಕರೆ ಮಾಡುವುದಕ್ಕೆ ಆರಂಭಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ನೆಲದ ಮೇಲೆಯೇ ನಿಂತ ಕಾಲು ಹಾಗೇ ನೆಟ್ಟಿರಲಿ. ಅಹಂಕಾರ ಪಡದಿರಿ. ಕೃಷಿಕರಿಗೆ ಅಧ್ಯಯನಕ್ಕಾಗಿ ಹೊಸ ಪ್ರದೇಶಗಳಿಗೆ ಪ್ರಯಾಣಕ್ಕೆ ತೆರಳುವಂಥ ಯೋಗ ಇದೆ. ಇದರ ಜತೆಗೆ ಮನೆಗೆ ಹೊಸ ಹೊಸ ವಸ್ತುಗಳನ್ನು ಖರೀದಿಸಿ ತರಲಿದ್ದೀರಿ. ಇತರರ ಕ್ರೆಡಿಟ್ ಕಾರ್ಡ್ ಬಳಸುವಂತಿದ್ದರೆ ಖರ್ಚಿನ ಮೇಲೆ ನಿಗಾ ಇರಲಿ. ಯಾವುದೇ ಖರ್ಚನ್ನು ಪ್ರತಿಷ್ಠೆಗೋಸ್ಕರ ಮಾಡುವುದು ಬೇಡ. ವೃತ್ತಿ ನಿರತರಿಗೆ ಬಹಳ ಸಮಯದಿಂದ ಎದುರು ನೋಡುತ್ತಿದ್ದ ಹುದ್ದೆ ಅಥವಾ ಜವಾಬ್ದಾರಿ ದೊರೆಯಲಿದೆ. ಇಷ್ಟು ಕಾಲ ಯಾರು ನಿಮ್ಮನ್ನು ತಿರಸ್ಕಾರದಿಂದ ನೋಡುತ್ತಿದ್ದರೋ ಅವರೇ ತಮ್ಮದೊಂದು ಕೆಲಸ ಆಗಬೇಕು ಎಂದು ಹುಡುಕಿಕೊಂಡು ಬರಲಿದ್ದಾರೆ. ನಿಮ್ಮಿಂದ ಅವರಿಗೆ ಸಹಾಯವನ್ನು ಮಾಡುವುದಕ್ಕೆ ಸಾಧ್ಯವಾದರೆ ಮಾಡಿ, ಆದರೆ ಅವಮಾನ ಮಾಡದಿರಿ. ಇನ್ನು ವಿದ್ಯಾರ್ಥಿಗಳಿಗೆ ಆಹಾರ- ನೀರಿನಲ್ಲಿ ಏರುಪೇರಾಗಿ, ಆರೋಗ್ಯದಲ್ಲಿ ವ್ಯತ್ಯಯ ಆಗಬಹುದು. ಆದ್ದರಿಂದ ಶುಚಿಯಾದ ಆಹಾರ- ಶುದ್ಧವಾದ ನೀರಿನ ಸೇವನೆ ಕಡೆಗೆ ಗಮನವನ್ನು ನೀಡಿ. ಸಂಬಂಧಿಕರ ಒತ್ತಡದ ಮೇಲೆ ಮಹಿಳೆಯರು ಇತರರ ಮದುವೆ ವಿಚಾರಕ್ಕೆ ಮಾತುಕತೆ ಆಡುವುದಕ್ಕೆ ತೆರಳುವಂಥ ಯೋಗ ಇದೆ. ನೀವು ಮುಂದಾಳತ್ವ ವಹಿಸಿದರೆ ತೊಂದರೆ ಇಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಮಾತು ನೀಡಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಅತಿ ಮುಖ್ಯವಾದ ಕೆಲಸದಲ್ಲಿ ನೀವು ಅಂದುಕೊಂಡಿದ್ದು ಆಗದೇ ಹೋಗಬಹುದು. ಇನ್ನೇನು ಆಗಿಯೇ ಹೋಯಿತು ಅಂದುಕೊಂಡಿದ್ದು ಪೂರ್ತಿ ಮುಗಿಯದೇ ಹೋಗಬಹುದು. ಇದರೊಂದಿಗೆ ಕೈಗೆ ಬಂದಿದ್ದು ಹಾಗೇ ಜಾರಿ ಹೋಯಿತು ಎಂಬ ಅನುಭವ ನಿಮಗಾಗಲಿದೆ. ಇನ್ನೇನು ಎಲ್ಲ ಮಾತುಕತೆ ಆಗಿಹೋಗಿದೆ, ಒಪ್ಪಂದ ಆಗಬೇಕಷ್ಟೇ ಅಂದುಕೊಂಡಿದ್ದ ವ್ಯವಹಾರ ಕೊನೆ ಕ್ಷಣದಲ್ಲಿ ಕೈ ತಪ್ಪಿ ಹೋಗಲಿದೆ. ಆದ್ದರಿಂದ ನಿಮ್ಮ ಕೈಗೆ ಬಾರದ ಹಣಕ್ಕೆ ಮುಂಚಿತವಾಗಿ ಏನಾದರೂ ಖರ್ಚನ್ನು ಲೆಕ್ಕ ಹಾಕಿಟ್ಟುಕೊಳ್ಳಬೇಡಿ. ಕೃಷಿಕ ವರ್ಗದವರು ಉಳಿತಾಯಕ್ಕೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಹತ್ವವಾದ ನಿರ್ಧಾರವೊಂದನ್ನು ಕೈಗೊಳ್ಳಬೇಕಾಗುತ್ತದೆ. ಇನ್ನು ಇನ್ಷೂರೆನ್ಸ್ ಬಗ್ಗೆ ಕೂಡ ಕುಟುಂಬ ಸದಸ್ಯರ ಜತೆಗೆ ಮಾತುಕತೆ ನಡೆಸಲಿದ್ದೀರಿ. ಹೊಸಬರೊಂದಿಗೆ ವ್ಯವಹಾರ ಮಾಡುವಾಗ ಜಾಗ್ರತೆಯಿಂದ ಇರಿ. ವೃತ್ತಿ ನಿರತರಿಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದ ಸ್ನೇಹಿತರು- ಹಿತೈಶಿಗಳು ಈಗ ತಮಗೆ ನೆರವು ನೀಡುವಂತೆ ಹುಡುಕಿಕೊಂಡು ಬರಬಹುದು. ನಿಮ್ಮಿಂದ ಅವರಿಗೆ ಸಹಾಯ ಮಾಡುವುದಕ್ಕೆ ಸಾಧ್ಯವಾದಲ್ಲಿ ಖಂಡಿತವಾಗಿ ನೆರವಾಗಿ. ಇನ್ನು ವಿದ್ಯಾರ್ಥಿಗಳು ಸೈಕಲ್, ಮೊಪೆಡ್ ಇತ್ಯಾದಿ ವಾಹನಗಳನ್ನು ಖರೀದಿ ಮಾಡುವುದಕ್ಕೆ ಮನೆಯಲ್ಲಿ ಪೋಷಕರ ಬಳಿ ದುಂಬಾಲು ಬೀಳಲಿದ್ದಾರೆ. ಒಂದು ವೇಳೆ ಮನೆಯಲ್ಲಿ ಸದ್ಯಕ್ಕೆ ಸಾಧ್ಯವಿಲ್ಲ ಎಂದು ಹೇಳಿದಲ್ಲಿ ಮತ್ತೆ ಮತ್ತೆ ಒತ್ತಾಯಿಸಬೇಡಿ. ಮಹಿಳೆಯರು ಸಂಸಾರದ ವಿಷಯಗಳನ್ನು, ಅಂತರಂಗದ ವಿಚಾರವನ್ನು ಮೂರನೇ ವ್ಯಕ್ತಿಯ ಜತೆಗೆ ಚರ್ಚಿಸಬೇಡಿ, ಇದರಿಂದ ಅವಮಾನದ ಪಾಲಾಗುತ್ತೀರಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ವಯಸ್ಸು ನಲವತ್ತು ದಾಟಿದವರಿಗೆ ಕೆಲವು ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇನ್ನು ಬೈಕ್, ಕಾರು, ಗ್ಯಾಜೆಟ್, ಲ್ಯಾಪ್ ಟಾಪ್ ಇಂಥದ್ದಕ್ಕೆ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ಇತರರು ನಿಮ್ಮ ಮೇಲೆ ನಿರೀಕ್ಷೆ ಜಾಸ್ತಿ ಇಟ್ಟುಕೊಳ್ಳುವುದರಿಂದ ಅದನ್ನು ಪೂರೈಸುವುದು ಬಹಳ ಕಷ್ಟ ಆಗಲಿದೆ. ಪ್ರಾಣಿ ದಯಾ ಸಂಘದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಹಳ ಒತ್ತಡದ ಸನ್ನಿವೇಶ ಸೃಷ್ಟಿ ಆಗುತ್ತದೆ.ನಾನು ಬೇರೆಯವರ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತೇನೆಯೇ ವಿನಾ ನನ್ನ ಕಷ್ಟ- ಸುಖಗಳಿಗೆ ಯಾರೂ ಆಗುವುದಿಲ್ಲ ಎಂದು ಬಲವಾಗಿ ಅನಿಸುವುದಕ್ಕೆ ಶುರು ಆಗುತ್ತದೆ. ಹೂಡಿಕೆಗಾಗಿ ನಿಮ್ಮಲ್ಲಿ ಕೆಲವರು ಭೂಮಿ, ಸೈಟಿಗಾಗಿ ಹುಡುಕಾಟವನ್ನು ಶುರು ಮಾಡಲಿದ್ದೀರಿ. ಕೃಷಿ ಹಾಗೂ ಕೃಷಿಗೆ ಸಂಬಂಧಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಸರ್ಕಾರಿ ಕೆಲಸದಲ್ಲಿ ಭಾರೀ ನಿಧಾನ ಆಗಲಿದೆ. ಅಥವಾ ಈಗಾಗಲೇ ನೀವು ಸಲ್ಲಿಸಿದ ದಾಖಲಾತಿಗಳು ಕಳೆದುಹೋಗುವಂಥ ಸಾಧ್ಯತೆಗಳು ಹೆಚ್ಚಿಗೆ ಇವೆ. ವೃತ್ತಿನಿರತರು ಯಾವುದೋ ಕೆಲಸದ ನಿಮಿತ್ತವಾಗಿ ದೂರ ಪ್ರಯಾಣ ಮಾಡಬೇಕಾಗಬಹುದು. ಆದರೆ ಇದರಿಂದ ಆಗಬೇಕಾದ ಕೆಲಸವು ಪೂರ್ಣ ಪ್ರಮಾಣದಲ್ಲಿ ಆಗದೆ ಮತ್ತೊಮ್ಮೆ ಹೋಗಲೇಬೇಕಾದ ಸನ್ನಿವೇಶವು ಉದ್ಭವಿಸುತ್ತದೆ. ಆದ್ದರಿಂದ ಸರಿಯಾಗಿ ಲೆಕ್ಕಾಚಾರ ಹಾಕಿಕೊಂಡು, ಸೂಕ್ತ ಸಿದ್ಧತೆ ಮಾಡಿಕೊಂಡು ಹೋಗಿ. ವಿದ್ಯಾರ್ಥಿಗಳಿಗೆ ಈ ವಾರ ಮಿಶ್ರ ಫಲಿತಾಂಶ ಕಾಣುವ ಯೋಗ ಇದೆ. ನಿಮ್ಮ ಜೀವನದ ಗುರಿಯನ್ನೇ ಬದಲಾಯಿಸುವಂಥ ವ್ಯಕ್ತಿಯೊಬ್ಬರನ್ನು ಭೇಟಿ ಆಗಲಿದ್ದೀರಿ. ಮಹಿಳೆಯರಿಗೆ ರಕ್ತಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡಲಿವೆ. ಹೊಟ್ಟೆನೋವು, ಬೆನ್ನು ಹುರಿ ಸಮಸ್ಯೆ ಕಾಡಬಹುದು.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಎಷ್ಟೇ ಸಣ್ಣ ಕೆಲಸವಾದರೂ ಅದನ್ನು ಆಸಕ್ತಿಯಿಂದ ಮಾಡುವುದು ಮುಖ್ಯ. ಪ್ರೀತಿ- ಪ್ರೇಮ ವಿಚಾರಗಳು ನಿಮಗೆ ಆದ್ಯತೆಯಾಗಿ ಮಾರ್ಪಾಟಾಗುತ್ತದೆ. ಸಣ್ಣ- ಪುಟ್ಟ ಸಂಗತಿಗಳಿಗೆ ವಿಪರೀತವಾದ ಪ್ರಾಮುಖ್ಯ ಪಡೆದುಕೊಳ್ಳುತ್ತೇವೆ. ಯಾವುದನ್ನು ನೀವು ಸದ್ಯಕ್ಕೆ ಕೈಗೆತ್ತಿಕೊಳ್ಳುವುದು ಬೇಡ ಅಂದುಕೊಂಡಿರುತ್ತೀರೋ ಅದನ್ನೇ ಈಗ ಮಾಡಬೇಕಾಗುತ್ತದೆ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳ ಜತೆಗೆ ಸಣ್ಣ- ಪುಟ್ಟ ವಿಚಾರವು ವ್ಯಾಜ್ಯ ರೂಪ ಪಡೆದುಕೊಳ್ಳುತ್ತದೆ. ನೀವು ಆಡದ ಮಾತುಗಳನ್ನು ನೀವೇ ಆಡಿದ್ದೀರಿ, ಇದು ನಾನೇ ಕೇಳಿಸಿಕೊಂಡಿದ್ದೀನೆಂದು ಕೆಲವರು ನಿಮ್ಮೊಂದಿಗೆ ವಾದಕ್ಕೆ ಇಳಿಯಬಹುದು. ನಂಬಲೇಬಾರದು ಎಂದು ನಿಶ್ಚಯಿಸಿದವರನ್ನು ಏನೂ ಮಾಡುವುದಕ್ಕೆ ಸಾಧ್ಯವಿಲ್ಲ. ಕೃಷಿಕರಿಗೆ ಭವಿಷ್ಯದ ಚಿಂತೆ ಬಹಳವಾಗಿ ಕಾಡಲಿದೆ. ಅದರಲ್ಲೂ ಹೆಣ್ಣುಮಕ್ಕಳು ಇರುವಂಥವರು ಮದುವೆಗೆ ಹಣ ಹೊಂದಿಸುವ ಬಗ್ಗೆ ತೀರಾ ಗಂಭೀರವಾದ ಆಲೋಚನೆಯನ್ನು ಮಾಡಲಿದ್ದೀರಿ. ಹೊಸದಾಗಿ ಯಂತ್ರೋಪಕರಣಗಳ ಖರೀದಿಗಾಗಿ ವಿಚಾರಣೆಯನ್ನು ಮಾಡಲಿದ್ದೀರಿ. ಬಂಧುಗಳಿಗೆ ನಿಮ್ಮ ನೆರವಿನ ಅಗತ್ಯ ಕಂಡುಬರುತ್ತದೆ. ಇನ್ನು ವೃತ್ತಿನಿರತರಿಗೆ ಪ್ರತಿಸ್ಪರ್ಧಿಗಳು ಹೆಚ್ಚಾಗುತ್ತಿದ್ದಾರೆ ಎಂಬ ಭಾವವು ಮನಸ್ಸಿನಲ್ಲಿ ಮೂಡುತ್ತದೆ. ನೀವು ವಿಧಿಸುವ ಶುಲ್ಕಕ್ಕಿಂತ ಬಹಳ ಕಡಿಮೆ ಮೊತ್ತಕ್ಕೆ ಕೆಲಸ ಮಾಡಿಕೊಡುತ್ತಾ ಜನರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ. ವಿದ್ಯಾರ್ಥಿಗಳಿಗೆ ಕೆಲವು ಮುಖ್ಯ ವಿಚಾರಗಳು ಮರೆತು ಹೋಗಿ, ಸ್ನೇಹಿತರ ಮಧ್ಯೆ ನಗೆಪಾಟಲಿಗೆ ಗುರಿ ಆಗಬೇಕಾಗುತ್ತದೆ. ಆದ್ದರಿಂದ ಯಾವುದೇ ಕೆಲಸವನ್ನು ಲಕ್ಷ್ಯ ಇಟ್ಟು ಮಾಡಬೇಕು ಎಂಬುದನ್ನು ನೆನಪಿಟ್ಟುಕೊಳ್ಳಿ ಮಹಿಳೆಯರಿಗೆ ಸಾಮಾಜಿಕವಾಗಿ ಮನ್ನಣೆ ದೊರೆಯಲಿದೆ, ಪ್ರಭಾ ವಲಯ ವಿಸ್ತರಿಸಲಿದೆ.