AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nithya Bhavishya: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ಭವಿಷ್ಯ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 18) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ಭವಿಷ್ಯ
ಪ್ರಾತಿನಿಧಿಕ ಚಿತ್ರ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Jun 18, 2023 | 12:20 AM

Share

ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ಹಾಗಾದರೆ 2023 ಜೂನ್ 18 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಅಶುಭ ಇದೆಯಾ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಶೂಲ, ಕರಣ: ನಾಗವಾನ್, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಸಂಜೆ 05:25 ರಿಂದ 07:02ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:33 ರಿಂದ 02: 10ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:48 ರಿಂದ 05:25ರ ವರೆಗೆ.

ಸಿಂಹ: ನಿಮ್ಮ ಉದ್ಯೋದಲ್ಲಿ ಉಂಟಾದ ರಾಜಕೀಯ ಉನ್ನತಿಗೆ ಆಪ್ತರಿಂದ ಪ್ರಶಂಸೆ ಸಿಗಬಹುದು. ಸ್ತ್ರೀಯರು ನಿಮ್ಮನ್ನು ಮುಚ್ಚಿಕೊಳ್ಳಬಹುದು. ಅತಿಯಾದ ಆಲಸ್ಯದ ಕಾರಣ ನೀವು ಎಲ್ಲಿಗೂ ಹೋಗಲು ಇಷ್ಟಪಡುವುದಿಲ್ಲ. ಮನೆಯಲ್ಲಿಯೇ ವಿಶ್ರಾಂತಿ ಪಡೆಯುವಿರಿ. ಹೊರಗಡೆ ಆಹಾರವನ್ನು ತಿನ್ನಲು ಬಯಸುವಿರಿ. ನಿಮ್ಮ ಗುರಿಯು ಅಸ್ಪಷ್ಟವಾಗಿ ತೋರಬಹುದು. ಹಳೆಯ ನೋವು ಪುನಃ ಬರಬಹುದು. ಕೈ ಗಾಯನವನ್ನು ಮಾಡಿಕೊಳ್ಳುವಿರಿ. ಉದ್ಯೋಗಕ್ಕಾಗಿ ಅಪರಿಚಿತ ಕರೆಯೊಂದು ಬರಬಹುದು. ಸಿಕ್ಕ‌ ಕೆಲಸವನ್ನು ನೀವು ಬಿಡುವಿರಿ.

ಕನ್ಯಾ: ಮನಸ್ಸನ್ನು ಶಮನಗೊಳಿಸಲು ವಿವಿಧ ಕಸರತ್ತು ಮಾಡುವಿರಿ. ಸಹೋದ್ಯೋಗಿಗಳ ಸಹವಾಸದಿಂದ ದುಶ್ಚಟಕ್ಕೆ ಬೀಳುವವರಿದ್ದೀರಿ. ನಿಮ್ಮವರಿಗೆ ಆದ ಅಪಮಾನವನ್ನು ಸಹಿಸಿಕೊಳ್ಳಲಾರಿರಿ. ಏಕಾಗ್ರತೆಯ ಕೊರತೆ ಕಾಣಬಹುದು. ಮನೆಯರ ಜೊತೆ ಜಗಳವಾಡಿ ದೂರ ಹೋಗುವಿರಿ. ಆರ್ಥಿಕ ಹಿನ್ನಡೆಯು ನಿಮ್ಮನ್ನು ಕುಗ್ಗಿಸುವುದು. ಎಲ್ಲ ಆಟವನ್ನು ಗೆಲ್ಲಬೇಕು ಎನ್ನುವುದು ಸರಿಯಾದರೂ, ಗೆಲ್ಲಲಾಗದೂ ಎಂಬುದೂ ವಾಸ್ತವ. ಹಾಗಾಗಿ ನಿಮ್ಮ ವರ್ತನೆಯು ಭಾಗವಹಿಸುವುದಕ್ಕೆ ಇರಲಿ. ಇದು ನಿಮ್ಮ‌ ಅನುಭವವೂ ಆಗಬಹುದು. ಮಕ್ಕಳ ವಿಚಾರವನ್ನು ಬಹಳ ಜೋಪಾನವಾಗಿ ನಿರ್ವಹಿಸಿ.

ತುಲಾ: ನಿಮ್ಮನ್ನು ಹುಡುಕಿಕೊಂಡು ಬರುವ ಖರ್ಚುಗಳು ಭಯಭೀತರನ್ನಾಗಿ‌ ಮಾಡೀತು. ಬೇರೆಯವರ ಮೇಲೆ ಬೀರುವ ನಿಮ್ಮ ಪ್ರಭಾವವು ಎಷ್ಟು ಬಳಸಿದರೂ ನಿಷ್ಪ್ರಯೋಜಕ. ರಾಜಕಾರಣಿಗಳು ತಾಳ್ಮೆಯಿಂದ‌ ವ್ಯವಹಿರಿಸುವುದು ಉಚಿತ. ಚರಾಸ್ತಿಗಳ ಬಗ್ಗೆ ಗೊಂದಲವಿರಬಹುದು. ಹೊಸ ವಾಹನವನ್ನು ಖರೀದಿಸುವಿರಿ. ಸಂಗಾತಿಯು ನಿಮ್ಮ ಉದ್ಯೋಗಕ್ಕೆ ಸಹಕರಿಸಬಹುದು. ಆಲಂಕಾರಿಕ ವಸ್ತುವಿನ‌ಮೇಲೆ ಹೆಚ್ಚು ಆಸಕ್ತಿ ಇರುವುದು. ಬೆಂಕಿಯಿಂದ ಸ್ವಲ್ಪ ದೂರವಿರಿ ಅಥವಾ ಜಾಗರೂಕರಾಗಿರಿ. ನಿಮ್ಮವರ ಬಗ್ಗೆ ನಿಮಗೆ ತಿಳಿವಳಿಕೆ ಬಹಳ ಕಡಿಮೆ ಇರಲಿದೆ. ದುಃಸ್ವಪ್ನವು ನಿಮಗೆ ಚಿಂತನೆಯನ್ನು ಕೊಡುವುದು‌. ಇಂದು ನೀವು ಸಂಬಂಧಗಳ ಬೆಲೆಯನ್ನು ಅರಿಯಲಿದ್ದೀರಿ.

ವೃಶ್ಚಿಕ: ದುಡುಕಿ ಕೆಲಸವನ್ನು ಮಾಡಿಕೊಳ್ಳುವುದು ಬೇಡ. ನಿಮ್ಮ ಕೆಲಸವನ್ನು ಬೇರೆಯವರ ಮುಇಲಕ ಮಾಡಿಸಿಕೊಳ್ಳುವಿರಿ. ಇಂದಿನ ದಿನವು ಸುತ್ತಾಟದಲ್ಲಿ ಕಳೆಯಬಹುದು. ವಿವಾಹಕ್ಕೆ ಕಾದು ಕುಳಿತ ವ್ಯಕ್ತಿಗಳು ಇನ್ನೂ ಸ್ವಲ್ಪ ದಿನ ಕಾಯಬೇಕಾಗುವುದು. ಹಿರಿಯರ ಸಹಕಾರದಿಂದ ದೈಹಿಕಬಲ, ಮನೋಬಲವು ಆರ್ಥಿಕಬಲ ಹೆಚ್ಚಾಗಬಹುದು. ದೇಹದ ಮೇಲೆ ಏನಾದರೂ ಕಾಣಿಸಿಕೊಂಡೀತು. ಹಿತಶತ್ರುಗಳು ಅರಿತುಕೊಳ್ಳಿ‌ ನಿಮಗೆ ಹೆಚ್ಚು ಸಮಯಬೇಕಾಗುದು. ಇಂದಿನ‌ ಪ್ರಯಾಣವು ನಿಮಗೆ ಆಯಾಸವನ್ನೂ ಹಣದ ಕೊಡುತ್ತದೆ. ನಿಮಗೆ ಕೆಲವರು ಆಮಿಷವನ್ನು ತೋರಿಸುವರು. ಅದಕ್ಕೆ ಬಲಿಯಾಗಿ ಸಂಪತ್ತನ್ನು ಕಳೆದುಕೊಳ್ಳಬೇಕಾಗಬಹುದು. ಧಾರ್ಮಿಕ ಉತ್ಸವಗಳಲ್ಲಿ ಭಾಗಿಯಾಗುವಿರಿ.