AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಎಸ್​ಎಸ್ ನಿಷೇಧ ಆಗುತ್ತಾ? ಜ್ಯೋತಿಷ್ಯ ಪ್ರಕಾರ ಸಂಘಕ್ಕಿದೆಯಂತೆ ಮಹಾಗಜಕೇಸರಿ ಯೋಗ!

ಆರ್​ಎಸ್​ಎಸ್ ಚಟುವಟಿಕೆ ನಿಷೇಧ ಚರ್ಚೆ ಜೋರಾಗಿದ್ದು ಇದೀಗ ಆ ಬಗ್ಗೆ ಪರಿಶೀಲನೆ ಮಾಡಲು ಕರ್ನಾಟಕ ಸರ್ಕಾರ ಮುಂದಾಗಿದೆ. ಆದರೆ, ಆರ್​​ಎಸ್​​ಎಸ್ ಜನ್ಮತಾಳಿದ ದಿನಾಂಕ, ಸಮಯಗಳನ್ನು ನೋಡಿದಾಗ ಆ ಸಂಘದ ಭವಿಷ್ಯ ಹೇಗಿದೆ? ಜ್ಯೋತಿಷ್ಯ ಪ್ರಕಾರ ಸಂಘದ ಭವಿಷ್ಯ ಏನು ಎಂಬುದು ಖ್ಯಾತ ವಾಸ್ತು ತಜ್ಞ, ಜ್ಯೋತಿಷಿ ಡಾ. ಬಸವರಾಜ ಗುರೂಜಿ ವಿಶ್ಲೇಷಿಸಿದ್ದಾರೆ.

ಆರ್​ಎಸ್​ಎಸ್ ನಿಷೇಧ ಆಗುತ್ತಾ? ಜ್ಯೋತಿಷ್ಯ ಪ್ರಕಾರ ಸಂಘಕ್ಕಿದೆಯಂತೆ ಮಹಾಗಜಕೇಸರಿ ಯೋಗ!
ಜ್ಯೋತಿಷ್ಯ ಪ್ರಕಾರ ಸಂಘಕ್ಕಿದೆಯಂತೆ ಮಹಾಗಜಕೇಸರಿ ಯೋಗ!
Ganapathi Sharma
|

Updated on:Oct 17, 2025 | 10:48 AM

Share

ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂಬ ಕೂಗು ಈಗ ಕರ್ನಾಟಕದಲ್ಲಿ ಜೋರಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಪತ್ರದ ಬೆನ್ನಲ್ಲೇ ಅತ್ತ ಸಿಎಂ ಸಿದ್ದರಾಮಯ್ಯ, ಆ ಬಗ್ಗೆ ಪರಿಶೀಲನೆ ನಡೆಸುವುದಾಗಿಯೂ ತಿಳಿಸಿದ್ದಾರೆ. ಇದೀಗ ಆರ್​ಎಸ್​​ಎಸ್ ಜನ್ಮ ತಾಳಿದ ದಿನಾಂಕ, ಸಮಯದ ಆಧಾರದಲ್ಲಿ ಖ್ಯಾತ ವಾಸ್ತು ತಜ್ಞ, ಜ್ಯೋತಿಷಿ ಡಾ. ಬಸವರಾಜ ಗುರೂಜಿ ಆ ಬಗ್ಗೆ ವಿಶ್ಲೇಷಿಸಿದ್ದಾರೆ.

ಆರ್​​ಎಸ್​ಎಸ್ ಜನ್ಮ ಜಾತಕ ಪರಿಶೀಲಿಸಿದಾಗ, ಜಾತಕದಲ್ಲಿ ಮಹಾಗಜಕೇಸರಿ ಯೋಗವಿದೆ. ದಿನಾಂಕ 27-09-1925 ರ ಭಾನುವಾರ ಸ್ಥಾಪನೆಯಾಗಿರುವ ಮಾಹಿತಿ ಇದೆ. ಅದು ಶುಕ್ಲದಶಮಿ, ಧನಿಷ್ಟ ನಕ್ಷತ್ರ ಧನುರ್ ಲಗ್ನ, ಮಕರ ರಾಶಿ. ಶುಕ್ರ ಮಹಾದೆಶೆ ಇದ್ದು, 2042 ರ ತನಕದ ಪೂರ್ಣಾಯುಷ್ಯ ಜಾತಕ ಆರ್​​ಎಸ್​ಎಸ್​​ನದ್ದಾಗಿದೆ. ಹೀಗಾಗಿ ಇದು ಗೋಚಾರದಲ್ಲಿ ಬರುತ್ತಿರುವ ವದಂತಿಗಳಿಗೆ ಪೂರಕವಾಗಿಲ್ಲ. ಶುಭ ದಿನ ಶುಭ ಲಗ್ನ ಶುಭ ಮಹೂರ್ತದಲ್ಲಿ ಸ್ಥಾಪನೆಯಾಗಿರುವ ಸಂಸ್ಥೆ ಗೆ ಯಾವುದೇ ಹಾನಿ ಇಲ್ಲ.

ಇದನ್ನೂ ಓದಿ: ಆರ್​ಎಸ್​ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗುವ ನೌಕರರಿಗೆ ಕಡಿವಾಣ ಹಾಕಿ: ಸಿಎಂಗೆ ಮತ್ತೊಂದು ಪತ್ರ ಬರೆದ ಪ್ರಿಯಾಂಕ್ ಖರ್ಗೆ

ಆರ್​​ಎಸ್​ಎಸ್ ಸಂಬಂಧಿಸಿ ಈಗಿರುವ ಗ್ರಹ ಗೋಚಾರ ಇನ್ನೂ ಬಲಿಷ್ಟ ಮಟ್ಟದಲ್ಲಿ ವೃದ್ಧಿಯಾಗಲಿದ್ದು, ಇನ್ನೂ ವಿಸ್ತರಣೆಯಾಗುವ ಸಾಧ್ಯತೆ. ನಿಷೇಧ ಎನ್ನುವ ಪದ ಇದಕ್ಕೆ ವರ್ತಿಸುವುದಿಲ್ಲ. ಕಲಿಯುಗ ಪರ್ಯಂತ ಆರ್​​ಎಸ್​​ಎಸ್ ಜೀವಂತವಾಗಿರಲಿದೆ ಎಂದೇ ಹೇಳಬಹುದು. ಇದರಿಂದ ಮಹಾ ದೇಶ ರಕ್ಷಣೆಯ ಕಾರ್ಯವಾಗಲಿದೆ. ಜಾತಕ ರೀತ್ಯಾ ಮಹಾ ನಾಯಕರ ಉದ್ಭವ ಸಾಧ್ಯತೆ ಇದೆ. ಹಾಗೆಂದು 10 ರ ಮನೆ ಬಲಿಷ್ಠವಾಗಿದೆ. ಬುಧ ಉಚ್ಚನಾಗಿದ್ದು, ಕುಜನ ಜೊತೆ ಬದ್ಧ ಶತ್ರುಗಳ ಸಮಾಗಮವನ್ನೂ ಕಾಣಬಹುದು.

ಜ್ಯೋತಿಷ್ಯ ವಿಶ್ಲೇಷಣೆ: ಡಾ. ಬಸವರಾಜ ಗುರೂಜಿ

ಜ್ಯೋತಿಷ್ಯ ಸಂಬಂಧಿತ ಇನ್ನಷ್ಟು ಲೇಖನಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Published On - 10:03 am, Fri, 17 October 25

ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ