AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Automobile: ಜುಲೈ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಕಾರುಗಳ ಪಟ್ಟಿ ಇಲ್ಲಿದೆ ನೋಡಿ

ಜುಲೈ 2022 ರಲ್ಲಿ ಬಿಡುಗಡೆಯಾಗುವ ಹೆಚ್ಚಿನ ಕಾರುಗಳು ಭಾರತೀಯರಲ್ಲದ ಕಾರು ತಯಾರಕರದ್ದು. ಈ ತಿಂಗಳು ಬಿಡುಗಡೆಯಾಗುವ ಮತ್ತು ಅನಾವರಣಗೊಳ್ಳುವ ನಿರೀಕ್ಷೆಯಿರುವ ಕಾರುಗಳ ಪಟ್ಟಿ ಹೀಗಿದೆ.

TV9 Web
| Updated By: Rakesh Nayak Manchi

Updated on: Jul 03, 2022 | 5:47 PM

ಜುಲೈ 2022ರಲ್ಲಿ ಬಿಡುಗಡೆಯಾಗಲಿರುವ ಕಾರುಗಳು ಎಕಾನಮಿ ಕ್ಲಾಸ್‌ನಿಂದ ಐಷಾರಾಮಿ ವರ್ಗದವರೆಗೆ ಇರುತ್ತವೆ. ಈ ತಿಂಗಳು ಬಿಡುಗಡೆಯಾಗುವ ಹೆಚ್ಚಿನ ಕಾರುಗಳು ಭಾರತೀಯರಲ್ಲದ ಕಾರು ತಯಾರಕರದ್ದು. ಈ ತಿಂಗಳು ಬಿಡುಗಡೆಯಾಗುವ ಮತ್ತು ಅನಾವರಣಗೊಳ್ಳುವ ನಿರೀಕ್ಷೆಯಿರುವ ಕಾರುಗಳ ಪಟ್ಟಿ ಹೀಗಿದೆ.

Here is the list of cars to be launched in India in the month of July

1 / 5
Audi A8L: ಜರ್ಮನ್ ಕಾರು ತಯಾರಕ ಕಂಪನಿಯು ಭಾರತದಲ್ಲಿ ತನ್ನ ಪ್ರೀಮಿಯಂ ಸೆಡಾನ್ A8L ನ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಪರಿಚಯಿಸಲು ಸಿದ್ಧವಾಗಿದೆ. ಈ ಕಾರು ಜುಲೈ 12ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. A8Lನ ಬುಕಿಂಗ್ ಮೇ ತಿಂಗಳಿನಿಂದ ದೇಶದಲ್ಲಿ ಪ್ರಾರಂಭವಾಗಿದೆ. ಖರೀದಿದಾರರು 10 ಲಕ್ಷ ರೂಪಾಯಿ ಟೋಕನ್ ಮೊತ್ತವನ್ನು ಪಾವತಿಸಿ ಕಾರನ್ನು ಬುಕ್ ಮಾಡಬಹುದು.

Here is the list of cars to be launched in India in the month of July

2 / 5
Here is the list of cars to be launched in India in the month of July

Hyundai Tucson: 2022 ಹ್ಯುಂಡೈ ಟಕ್ಸನ್ ಈ ವರ್ಷ ಭಾರತದಲ್ಲಿ ಈ ವರ್ಷ ಬಿಡುಗಡೆಯಾಗಲಿರುವ ಮುಂಬರುವ SUV ಗಳಲ್ಲಿ ಒಂದಾಗಿದೆ. ಇದರ ಬಿಡುಗಡೆಯನ್ನು ಜು.13ರಂದು ನಿರೀಕ್ಷಿಸಲಾಗಿದೆ. 2.0-ಲೀಟರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಈ ಕಾರು ಹೊಸ ನೋಟವನ್ನು ಒಳಗೊಂಡಿದೆ.

3 / 5
Here is the list of cars to be launched in India in the month of July

Citroen C3: ಫ್ರೆಂಚ್ ಕಾರು ತಯಾರಕ ಸಿಟ್ರೊಯೆನ್ ತನ್ನ ಮುಂಬರುವ ಕಾರು-C3 ಅನ್ನು ಜುಲೈ 20 ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಸಿಟ್ರೊಯೆನ್ C3 sub- 4m ವರ್ಗಕ್ಕೆ ಹೊಂದಿಕೊಳ್ಳುತ್ತದೆ ಮತ್ತು ಟಾಟಾ ಪಂಚ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್ ಇತ್ಯಾದಿಗಳೊಂದಿಗೆ ಸ್ಪರ್ಧಿಸುತ್ತದೆ.

4 / 5
Here is the list of cars to be launched in India in the month of July

Volvo XC40 Recharge: ಸ್ವೀಡಿಷ್ ಐಷಾರಾಮಿ ವಾಹನ ತಯಾರಕ ವೋಲ್ವೋ ತನ್ನ ಮೊದಲ ಎಲೆಕ್ಟ್ರಿಕ್ ವಾಹನ-ವೋಲ್ವೋ XC40 ರೀಚಾರ್ಜ್ ಅನ್ನು ಜುಲೈನಲ್ಲಿ ಭಾರತದಲ್ಲಿ ಪರಿಚಯಿಸಲು ಸಿದ್ಧವಾಗಿದೆ. Volvo XC40 ರೀಚಾರ್ಜ್ ಪೂರ್ಣ ಚಾರ್ಜ್‌ನೊಂದಿಗೆ 418km/ 208miles ವರೆಗೆ ಅಂದಾಜು ವ್ಯಾಪ್ತಿಯನ್ನು ನೀಡುತ್ತದೆ.

5 / 5
Follow us