Bikes Under 1 Lakh: ಬೈಕ್ ಕೊಳ್ಳಬೇಕೆ? ಇಲ್ಲಿವೆ 1 ಲಕ್ಷ ರೂಪಾಯಿ ಒಳಗಿನ ಅತ್ಯುತ್ತಮ ಬೈಕ್ಗಳು
Budget Bikes: 1 ಲಕ್ಷ ರೂ. ಮಾತ್ರ ಬಜೆಟ್ ಇದೆ, ಯಾವ ಬೈಕ್ ತೆಗೆದುಕೊಳ್ಳಲಿ ಎಂದು ಯೋಚಿಸುವ ಮುನ್ನ ಇಲ್ಲೊಂದಿಷ್ಟು ಬೈಕ್ಗಳ ಪಟ್ಟಿ ನೀಡುತ್ತಿದ್ದೇವೆ. ಈ ಎಲ್ಲಾ ಬೈಕ್ಗಳೂ ₹1 ಲಕ್ಷದೊಳಗೆ ಲಭ್ಯವಿವೆ. ಮತ್ತು ಮಾರ್ಕೆಟ್ನಲ್ಲಿಯ ಅತ್ಯುತ್ತಮ ಬೈಕ್ಗಳೇ ಆಗಿವೆ ಎಂಬುದು ವಿಶೇಷ.
ನೀವು ಬೈಕ್ ತೆಗೆದುಕೊಳ್ಳಬೇಕೆಂದು ಯೋಚಿಸುತ್ತಿದ್ದೀರಾ? ಆದರೆ ಯಾವ ಬೈಕ್ ಖರೀದಿ ಮಾಡ್ಬೇಕು ಎಂದು ತಿಳಿಯದೇ ಹುಡುಕಾಟ ಮುಂದುವರೆಸುತ್ತಿದ್ದೀರಾ? ಹಾಗಾದರೆ ಈ ಬರಹವನ್ನು ನಿಮಗಾಗಿಯೇ ಬರೆಯಲಾಗಿದೆ. ₹1 ಲಕ್ಷದ ಒಳಗೆ ನೀವು ಖರೀದಿ ಮಾಡಬಹುದಾದ ಅತ್ಯುತ್ತಮ ಬೈಕ್ಗಳನ್ನು ಇಲ್ಲಿ ಪರಿಚಯಿಸಿದ್ದೇವೆ. 2020 ಮುಗಿಯುವ ಮುನ್ನವೇ ₹1 ಲಕ್ಷದೊಳಗೆ ಅತ್ಯುತ್ತಮ ಸ್ಪೋರ್ಟ್ಸ್ ಬೈಕ್ಗಳೇ ಲಭ್ಯವಿದ್ದವು. ಉದಾ: Yamaha FZS, TVS Apache RTR 160, Hero Xtreme 160R, Xtreme 200R. ಆದರೆ ಈಗ ₹1 ಲಕ್ಷದೊಳಗೆ ಈ ಬೈಕ್ಗಳು ಸಿಗೋದಿಲ್ಲ. ಕೊರೊನಾ ನಂತರ ಈ ಬೈಕ್ಗಳ ದರದಲ್ಲಿ ಕೊಂಚ ಏರಿಕೆಯಾಗಿದೆ. ಈಗ ಏನ್ಮಾಡೋದು ಎಂದು ಗಾಬರಿಯಾಗಬೇಡಿ, ₹1 ಲಕ್ಷ ಮಾತ್ರ ಬಜೆಟ್ ಇದೆ, ಯಾವ ಬೈಕ್ ತೆಗೆದುಕೊಳ್ಳಲಿ ಎಂದು ಯೋಚಿಸುವ ಮುನ್ನ ಇಲ್ಲೊಂದಿಷ್ಟು ಬೈಕ್ಗಳ ಪಟ್ಟಿ ನೀಡುತ್ತಿದ್ದೇವೆ. ಈ ಎಲ್ಲಾ ಬೈಕ್ಗಳೂ ಮಾರ್ಕೆಟ್ನಲ್ಲಿರುವ ಅತ್ಯುತ್ತಮ ಬೈಕ್ಗಳೇ ಆಗಿವೆ ಎಂಬುದು ವಿಶೇಷ.
ಬಜಾಜ್ ಪಲ್ಸರ್ 150 ಬಜಾಜ್ ಕಂಪೆನಿಯ ಪಲ್ಸರ್ ದೇಶದಲ್ಲಿ ಅತಿ ಪ್ರಸಿದ್ಧವಾದ ಬೈಕ್ಗಳಲ್ಲೊಂದು. ಈ ಬೈಕ್ನ ಎಕ್ಸ್ ಶೋ ರೂಮ್ ದರ ₹94,125ರಿಂದ ₹1 ಲಕ್ಷ. ಟ್ವಿನ್ ಡಿಸ್ಕ್ ಸೌಲಭ್ಯ ಸಹ ಲಭ್ಯವಿದ್ದು ಟ್ವಿನ್ ಡಿಸ್ಕ್ ಮಾಡೆಲ್ಗೆ ₹1.03 ಲಕ್ಷ ದರವಿದೆ.
ಹೋಂಡಾ ಯುನಿಕಾರ್ನ್ BS6 ಹೋಂಡಾ ಯೂನಿಕಾರ್ನ್ ಬಹು ಖ್ಯಾತಿ ಗಳಿಸಿದ ಬೈಕ್ಗಳಲ್ಲೊಂದು. ಭಾರತದ ಗ್ರಾಮೀಣ ರಸ್ತೆಗಳಲ್ಲಿ ಓಡಲು ಗೆ ಹೆಚ್ಚಿಸಿದೆ ಕಂಪೆನಿ. ಈ ಬೈಕ್ನಲ್ಲಿ 5 ಸ್ಪೀಡ್ ಗೇರ್ಬಾಕ್ಸ್ ಸಹ ಲಭ್ಯವಿದ್ದು, ಟ್ಯೂಬ್ಲೆಸ್ ಟೈರ್ ಮಾದರಿಯೂ ಲಭ್ಯವಿದೆ. ಹೋಂಡಾ ಯುನಿಕಾರ್ನ್ನ ಎಕ್ಸ್ ಶೋ ರೂಮ್ ಬೆಲೆ ₹95,738.
ಬಜಾಜ್ ಪಲ್ಸರ್ 125 ಡಿಸ್ಕ್ ಬ್ರೇಕ್ ಬಜಾಜ್ ಪಲ್ಸರ್ನ ಇನ್ನೊಂದು ಮಾದರಿ ಬೈಕ್ ಇದು. ಜನಸಾಮಾನ್ಯ ವರ್ಗದಲ್ಲಿ ಬಹು ಖ್ಯಾತಿ ಗಳಿಸಿದ ಹೆಗ್ಗಳಿಕೆ ಇದರದ್ದು. ಬಜಾಜ್ ಪಲ್ಸರ್ 125 ಡಿಸ್ಕ್ ಬ್ರೇಕ್ ಮಾಡೆಲ್ನ ಎಕ್ಸ್ ಶೋ ರೂಮ್ ಬೆಲೆ ₹80,890 ರಿಂದ ₹84,186.
ಹೋಂಡಾ SP 125 ಈ ಮಾದರಿ ಬೈಕ್ಗೆ ಒಂದು ಹೆಗ್ಗಳಿಕೆ ಇದೆ. BS6 ಮಾದರಿಯ ಮೊದಲ ಬೈಕ್ಗಳಲ್ಲಿ ಇದೂ ಒಂದು ಎಂಬುದು ಈ ಬೈಕ್ಗಿರುವ ಹೆಗ್ಗಳಿಕೆ. 124 ಸಿಸಿ ಎಂಜಿನ್ ಹೊಂದಿರುವ ಹೋಂಡಾ SP 125ನ ಎಕ್ಸ್ ಶೋ ರೂಂ ಬೆಲೆ ಇತರ ಬೈಕ್ಗಳಿಗಿಂತ ಕಡಿಮೆ. ₹76.074ರಿಂದ ₹80,369.
ಹೀರೋ ಗ್ಲಾಮರ್ ಹೀರೋ ಕಂಪನಿಯ ಬೈಕ್ಗಳನ್ನು ಭಾರತೀಯರು ಮರೆಯಲು ಸಾಧ್ಯವೇ? ಹೀರೋ ಕಂಪೆನಿಯ ಹೀರೋ ಗ್ಲಾಮರ್ ಭಾರತೀಯರಿಗೆ ಅನುಕೂಲಕರವಾದ ಒಂದು ಒಳ್ಳೆಯ ವಾಹನ. BS6 ಎಂಜಿನ್ ಅನ್ನೇ ಹೊಂದಿರುವ ಈ ಬೈಕ್ನ ಎಕ್ಸ್ ಶೋ ರೂಂನ ಬೆಲೆ ₹71,000ರಿಂದ ₹75,600
ಈಗಲೂ ಕಾಲ ಮಿಂಚಿಲ್ಲ. 2020ಕ್ಕಿಂತ ಮುನ್ನ ಸ್ಪೋರ್ಟ್ ಬೈಕ್ಗಳೇ ₹1 ಲಕ್ಷದ ಒಳಗೆ ದೊರೆಯುತ್ತಿದ್ದವು. ಆದರೆ ಈಗಲೂ ಆ ಬೆಲೆಯಲ್ಲೇ ಉತ್ತಮ ಬೈಕ್ಗಳು ದೊರೆಯುತ್ತಿವೆ. ಶಕ್ತಿಶಾಲಿ ಎಂಜಿನ್, ನಮ್ಮ ರಸ್ತೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನೂ ಹೊಂದಿವೆ. ಖರೀದಿಸಿ, ಜಾಗರೂಕತೆಯಿಂದ ಚಲಾಯಿಸಿ. ಆಲ್ ದಿ ಬೆಸ್ಟ್ ಫಾರ್ ಸೇಫ್ ರೈಡ್
(ಈ ಎಲ್ಲಾ ಬೈಕ್ಗಳ ಮೊತ್ತಗಳು ಆಯಾ ನಗರಗಳಿಗೆ ಅನುಗುಣವಾಗಿ ಬದಲಾಗುತ್ತವೆ)
ಇದನ್ನೂ ಓದಿ: ಶಿವರಾತ್ರಿಯಂದು ರಾಬರ್ಟ್ ದರ್ಶನ! ಅಭಿಮಾನಿಗಳಿಗಾಗಿ ಶಿವ ‘ರಾತ್ರಿ’ ವೇಳೆ ಹೆಚ್ಚುವರಿ ಶೋಗಳು..
Maha Shivaratri 2021: ಶಿವರಾತ್ರಿ ಹಬ್ಬ ಹುಟ್ಟಿದ್ದೇಗೆ? ಏನನ್ನು ಅರ್ಪಿಸಿದರೆ ಪರಶಿವ ಒಲಿಯುತ್ತಾನೆ?
Published On - 12:20 pm, Tue, 9 March 21