Milk ATM: ಕಾಶ್ಮೀರದ ಪುಲ್ವಾಮದಲ್ಲಿ ಮಿಲ್ಕ್ ಎಟಿಎಂ ಅಳವಡಿಕೆ; ಏನಿದರ ವಿಶೇಷತೆ?
ನಗರದಲ್ಲಿ ಹಾಲು ಕೊಳ್ಳಲು ಯಾವುದೇ ತತ್ವಾರ ಉಂಟಾಗುವುದಿಲ್ಲ. ಜನರು ಯಾವಾಗ ಬೇಕಾದರೂ ಶುದ್ಧ ಹಾಲನ್ನು ಪಡೆದುಕೊಳ್ಳಬಹುದು. ಎಟಿಎಂ ಸ್ವರೂಪದಲ್ಲಿ ಬೇಕಾದಾಗ ಹಾಲು ಕೊಳ್ಳಬಹುದು ಎಂದು ಶಬೀರ್ ಹೇಳಿದ್ದಾರೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅತಿ ಹೆಚ್ಚು ಹಾಲು ಉತ್ಪಾದಿಸುವ ಜಿಲ್ಲೆ ಎಂದು ಗುರುತಿಸಿಕೊಂಡಿರುವ ಪುಲ್ವಾಮದಲ್ಲಿ ಹಾಲು ಪೂರೈಕೆಯ ಯಂತ್ರವೊಂದನ್ನು ಅಳವಡಿಸಲಾಗಿದೆ. ಈ ಯಂತ್ರವನ್ನು ಜನಪ್ರಿಯ ಭಾಷೆಯಲ್ಲಿ ಮಿಲ್ಕ್ ಎಟಿಎಂ (Milk ATM) ಎಂದೂ ಕರೆಯಲಾಗುತ್ತದೆ. ಪುಲ್ವಾಮ ನಗರ ಚಾಟ್ಪೊರಾದ ಶಹೀದ್ ಪಾರ್ಕ್ ಬಳಿ ಹೊಸ ಮಿಲ್ಕ್ ಎಟಿಎಂ ಯಂತ್ರ ಅಳವಡಿಸಲಾಗಿದೆ.
ಹಾಲು ಮಾರಾಟಗಾರ ಶಬೀರ್ ಅಹ್ಮದ್ ವಾಗೇ ಎಂಬವರು ಯಂತ್ರ ಹಾಕಿದ್ದು, ಅವರಿಗೆ ಪಶು ಸಂಗೋಪನಾ ಇಲಾಖೆ ಸಹಕಾರ ಒದಗಿಸಿದೆ. ಶಬೀರ್ ಅವರು ನಮ್ಮ ಬಳಿ ಸಹಾಯ ಕೇಳಿ ಬಂದಿದ್ದರು. ಉದ್ಯಮವನ್ನು ಹೊಸ ರೂಪದಲ್ಲಿ ನಡೆಸಲು ಸಹಕಾರ ಅಪೇಕ್ಷಿಸಿದ್ದರು. ಹಾಗಾಗಿ, ಯಂತ್ರ ಅಳವಡಿಸಲು ಡೈರಿ ಡೆವಲಪ್ಮೆಂಟ್ ಯೋಜನೆಯ ಅಡಿಯಲ್ಲಿ ಸಹಕಾರ ನೀಡಲಾಗಿದೆ ಎಂದು ಪುಲ್ವಾಮದ ಪಶು ಸಂಗೋಪನಾ ಇಲಾಖೆ ಮುಖ್ಯ ಅಧಿಕಾರಿ ಡಾ. ಮೊಹಮ್ಮದ್ ಹುಸೈನ್ ವಾನಿ ಹೇಳಿದ್ದಾರೆ.
ಸೂಚಿಸಿದ ಯೋಜನೆಯ ಅನುಸಾರ, ಎಲ್ಲಾ ಡೈರಿ ಪ್ರೊಸೆಸಿಂಗ್ ಸಾಧನಗಳಿಗೆ ಪಶು ಸಂಗೋಪನಾ ಇಲಾಖೆಯಿಂದ ಶೇ. 50ರಷ್ಟು ಸಬ್ಸಿಡಿ ಲಭಿಸಿದೆ. ಇದರಿಂದ ಮಿಲ್ಕ್ ಎಟಿಎಂ ಅಳವಡಿಸಲು ಸಹಾಯವಾಗಿದೆ. ಪುಲ್ವಾಮ ಜಿಲ್ಲೆಯು ಹಾಲು ಉತ್ಪಾದನೆಯಲ್ಲಿ ಮುಂಚೂಣಿಯ ಸ್ಥಾನದಲ್ಲಿದೆ. ನಗರದಲ್ಲಿ ಇನ್ನಷ್ಟು ಉತ್ತಮ ಸೌಕರ್ಯವನ್ನು ಹೊಂದುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಮಿಲ್ಕ್ ಎಟಿಎಂ ಅಳವಡಿಸಲೂ ಆಸಕ್ತಿ ಇದೆ ಎಂದು ಪಶುಸಂಗೋಪನಾ ಇಲಾಖೆಯ ಸದಸ್ಯರು ತಿಳಿಸಿದ್ದಾರೆ.
ನಗರದಲ್ಲಿ ಹಾಲುಕೊಳ್ಳಲು ಯಾವುದೇ ತತ್ವಾರ ಉಂಟಾಗುವುದಿಲ್ಲ. ಜನರು ಯಾವಾಗ ಬೇಕಾದರೂ ಶುದ್ಧ ಹಾಲನ್ನು ಪಡೆದುಕೊಳ್ಳಬಹುದು. ಎಟಿಎಂ ಸ್ವರೂಪದಲ್ಲಿ ಬೇಕಾದಾಗ ಹಾಲು ಕೊಳ್ಳಬಹುದು ಎಂದು ಶಬೀರ್ ಹೇಳಿದ್ದಾರೆ. ಯಂತ್ರವು 500 ಲೀಟರ್ ಹಾಲು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಯಂತ್ರದ ಜತೆಗಿರುವ ಕೂಲರ್, ಹಾಲನ್ನು 4 ಡಿಗ್ರಿ ಸೆಲ್ಸಿಯಸ್ನಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಮಿಲ್ಕ್ ಎಟಿಎಂನಲ್ಲಿ ಮೂರು ದಿನಗಳವರೆಗೆ ಹಾಲು ಉಳಿಯುತ್ತದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಪಶುಸಂಗೋಪನಾ ಇಲಾಖೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಿಲ್ಕ್ ಎಟಿಎಂ ಅಳವಡಿಸಲು ಆಸಕ್ತಿ ತೋರಿದೆ. ನವೋದ್ಯಮಿ ಶಬೀರ್ ಅಹಮದ್ ವಾಗೇ ಇಲಾಖೆಗೆ ಕೃತಜ್ಞತೆ ತಿಳಿಸಿದ್ದಾರೆ. ಶುದ್ಧ ಹಾಲು ಪೂರೈಕೆ ಮಾಡುವ ಈ ಯೋಜನೆ ಬಗ್ಗೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹಸುಗಳ ಹಾಲು ಕರೆಯುವ ಸ್ಪರ್ಧೆ: ನಾ ಮುಂದು ತಾ ಮುಂದು ಎಂದು ಬಂದ ಪಶುಪಾಲಕರು
Karnataka Budget 2021 Highlights: ಜಿಲ್ಲೆಗೊಂದು ಗೋಶಾಲೆ, ಮೇಕೆ-ಕುರಿ-ಕೋಳಿ ತಳಿ ಸಂವರ್ಧನೆಗೆ ಹೊಸ ಯೋಜನೆ
Published On - 11:24 am, Wed, 10 March 21