ಐ.ಟಿ. ವಲಯದಲ್ಲಿ ಉದ್ಯೋಗ ಬಿಡುತ್ತಿರುವವರ ಪ್ರಮಾಣ ಹೆಚ್ಚಾಗುತ್ತಿದೆ. ಇಂಥ ಸನ್ನಿವೇಶದಲ್ಲಿ ಐ.ಟಿ. ಸೇವೆ ನೀಡುವ ಎಚ್ಸಿಎಲ್ ಟೆಕ್ನಿಂದ (HCL Technologies) ಈಚೆಗೆ ಘೋಷಣೆಯೊಂದನ್ನು ಮಾಡಿದ್ದು, ಟಾಪ್ ಪರ್ಫಾರ್ಮರ್ಗಳಿಗೆ ಮರ್ಸಿಡೀಸ್- ಬೆಂಜ್ ಕಾರುಗಳನ್ನು ನೀಡಲು ಯೋಜನೆ ಹಾಕಿಕೊಂಡಿದೆ ಎಂದು ವರದಿ ಆಗಿದೆ. ಎಚ್ಸಿಎಲ್ ಟೆಕ್ನಾಲಜೀಸ್ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (CHRO) ವಿ.ವಿ. ಅಪ್ಪಾರಾವ್ ಮಾತನಾಡಿ, ಈ ಪ್ರಸ್ತಾವವು ಅನುಮತಿ ಪಡೆಯುವುದಕ್ಕಾಗಿ ಆಡಳಿತ ಮಂಡಳಿಯ ಮುಂದಿದೆ ಎಂದು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 2013ನೇ ಇಸವಿಯಲ್ಲಿ ಟಾಪ್ ಪರ್ಫಾರ್ಮರ್ಸ್ಗಳಿಗೆ 50 ಮರ್ಸಿಡೀಸ್ ಬೆಂಜ್ ಕಾರುಗಳನ್ನು ನೀಡಲಾಗಿತ್ತು. ಆ ನಂತರ ಅದನ್ನು ನಿಲ್ಲಿಸಲಾಯಿತು.
“ರೀಪ್ಲೇಸ್ಮೆಂಟ್ ನೇಮಕಾತಿ ವೆಚ್ಚ ಶೇ 15ರಿಂದ 20ರಷ್ಟು ಹೆಚ್ಚಾಗಿದೆ. ಆದ್ದರಿಂದ ನಮ್ಮ ಪೂರ್ತಿ ಕಾರ್ಮಿಕ ಶಕ್ತಿಗೆ ಕೌಶಲ ಹೆಚ್ಚಿಸುವತ್ತ ಸಕ್ರಿಯವಾಗಿ ಭಾಗವಹಿಸುತ್ತಾ ಇದ್ದೇವೆ. ನಿಮಗೆ ಜಾವಾ ಡೆವಲಪರ್ ಬೇಕಾಗಿದ್ದಲ್ಲಿ ಅದೇ ದರದ ಪಾಯಿಂಟ್ನಲ್ಲಿ ದೊರೆಯುತ್ತಾರೆ. ಆದರೆ ಕ್ಲೌಡ್ ವೃತ್ತಿಪರರು ಅದೇ ದರದಲ್ಲಿ ದೊರೆಯುವುದಿಲ್ಲ,” ಎಂದು ಹೇಳಿದ್ದಾರೆ ಎಂಬುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
20,000ದಿಂದ 22,000 ಹೊಸಬರ ನೇಮಕ
ಮೊದಲ ತ್ರೈಮಾಸಿಕದ ಫಲಿತಾಂಶ ಘೋಷಣೆ ಮಾಡಿದಾಗ ಎಚ್ಸಿಎಲ್ ಟೆಕ್ನಾಲಜೀಸ್ ಘೋಷಣೆ ಮಾಡಿದಂತೆ, ಈ ವರ್ಷ 20,000ದಿಂದ 22,000 ಹೊಸಬರನ್ನು (ಫ್ರೆಷರ್ಸ್) ನೇಮಕಾತಿ ಮಾಡಿಕೊಳ್ಳುವುದು ಘೋಷಣೆ ಮಾಡಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಕಂಪೆನಿಯು ಶೇ 50ರಷ್ಟು ನೇಮಕಾತಿ ಹೆಚ್ಚಳ ಆಗುತ್ತದೆ. ಅಂದಹಾಗೆ ಎಚ್ಸಿಎಲ್ ಟೆಕ್ನಾಲಜೀಸ್ ಕಂಪೆನಿಯು ಜುಲೈ 1ನೇ ತಾರೀಕಿನಿಂದ ಅನ್ವಯ ಆಗುವಂತೆ ವೇತನ ಹೆಚ್ಚಳ ಮಾಡಿದೆ.
2021ರ ಜೂನ್ ತ್ರೈಮಾಸಿಕದ ಕೊನೆಗೆ ನೋಯ್ಡಾ ಮೂಲದ ಕಂಪೆನಿಯಾದ ಎಚ್ಸಿಎಲ್ನಲ್ಲಿ 7522 ನಿವ್ವಳ ಸೇರ್ಪಡೆಯೊಂದಿಗೆ 1,76,499 ಸಿಬ್ಬಂದಿ ಇದ್ದಾರೆ. ಕಳೆದ 12 ತಿಂಗಳಲ್ಲಿ ಕಂಪೆನಿಯ ಐ.ಟಿ. ಸೇವೆಯಲ್ಲಿ ಕೆಲಸ ಬಿಡುವವರ ಪ್ರಮಾಣ ಶೇ 11.8ರಷ್ಟಿದೆ ಎಂದು ಕಂಪೆನಿ ಹೇಳಿದೆ. ಉದ್ಯೋಗಿಗಳನ್ನು ಉಳಿಸಿಕೊಳ್ಳುವುದಷ್ಟೇ ಅಲ್ಲದೆ, ಕೆಲಸ ಬಿಡದಂತೆ ತಡೆಯಬಹುದು. ಕೆಲವು ಕಂಪೆನಿಗಳು ಹೊಸದಾಗಿ ಕೆಲಸಕ್ಕೆ ಸೇರುತ್ತಿರುವವರಿಗೆ ಪ್ರಮುಖ ಸವಲತ್ತುಗಳು ಮತ್ತು ರೆಫರಲ್ ಬೋನಸ್ ನೀಡುತ್ತಿವೆ. ಉದ್ಯೋಗಿಗಳ ಸಂಖ್ಯೆಗಳನ್ನು ಹೆಚ್ಚಿಸಿಕೊಳ್ಳುತ್ತಿವೆ.
ಬೈಕ್- ಗ್ಯಾಜೆಟ್ ಪ್ಯಾಕೇಜ್
ಭಾರತ್ ಪೇನಿಂದಲೂ ಹಲವು ಪ್ರಾಡಕ್ಟ್ಗಳ ಪ್ಯಾಕೇಜ್ ಅನ್ನು ಘೋಷಣೆ ಮಾಡಲಾಗಿದೆ. ಬೈಕ್ ಪ್ಯಾಕೇಜ್, ಗ್ಯಾಜೆಟ್ ಪ್ಯಾಕೇಜ್ ಸವಲತ್ತುಗಳನ್ನು ನೀಡಲಾಗುತ್ತಿದೆ. ಹೊಸದಾಗಿ ಕೆಲಸಕ್ಕೆ ಸೇರ್ಪಡೆ ಆದವರು ಎರಡರಲ್ಲಿ ಒಂದು ಪ್ಯಾಕೇಜ್ ಆರಿಸಿಕೊಳ್ಳಬಹುದು. ಬೈಕ್ ಪ್ಯಾಕೇಜ್ಗಳಲ್ಲಿ ಐದು ಬೈಕ್ ಆಯ್ಕೆಗಳಲ್ಲಿ- ಬಿಎಂಡಬ್ಲ್ಯು ಜಿ310ಆರ್, ಜಾವಾ ಪೇರಕ್, ಕೆಟಿಎಂ ಡ್ಯೂಕ್ 390, ಕೆಟಿಎಂ ಆರ್ಸಿ 390 ಮತ್ತು ರಾಯಲ್ ಎನ್ಫೀಲ್ಡ್ ಹಿಮಾಲಯನ್ ಪೈಕಿ ಒಂದನ್ನು ಆರಿಸಿಕೊಳ್ಳಬಹುದು. ಗ್ಯಾಜೆಟ್ ಪ್ಯಾಕೇಜ್ನಲ್ಲಿ ಆಪಲ್ ಐಪ್ಯಾಡ್ ಪ್ರೊ (ಪೆನ್ಸಿಲ್ ಜತೆಗೆ), ಬೋಸ್ ಹೆಡ್ಫೋನ್, ಹರ್ಮನ್ ಕಾರ್ಡೋನ್ ಸ್ಪೀಕರ್, ಸ್ಯಾಮ್ಸಂಗ್ ಗ್ಯಾಲಕ್ಸಿ ವಾಚ್, ವರ್ಕ್ ಫ್ರಮ್ ಹೋಮ್ ಡೆಸ್ಕ್, ಚೇರ್, ಫೈರ್ಫಾಕ್ಸ್ ಟೈಫೂನ್ 27.5 ಡಿ ಬೈಸಿಕಲ್ ಆರಿಸಿಕೊಳ್ಳಬಹುದು.
ಇನ್ನೂ ಮುಂದುವರಿದು ಹೇಳುವುದಾದರೆ, ವಾರ್ಷಿಕ ವೇತನ ಹೆಚ್ಚಳವನ್ನು 8 ತಿಂಗಳು ಮುಂಚಿತವಾಗಿ ಮಾಡಲಾಗುತ್ತಿದೆ. ಶೇ 75ರಷ್ಟನ್ನು ಸಿಟಿಸಿ ಮತ್ತು ಎಂಪ್ಲಾಯೀಸ್ ಸ್ಟಾಕ್ ಆಪ್ಷನ್ ಪ್ರೋಗ್ರಾಮ್ ಅನ್ನು ಪರಿಚಯಿಸಿದೆ.
ಇದನ್ನೂ ಓದಿ: HCL Technologies Shiv Nadar: ಎಚ್ಸಿಎಲ್ ಟೆಕ್ನಾಲಜೀಸ್ ಎಂ.ಡಿ. ಹುದ್ದೆಯಿಂದ ಕೆಳಗಿಳಿದ ಶಿವ್ ನಾಡರ್
ಇದನ್ನೂ ಓದಿ: HCL Technologies FY21 Q4 Results; ಎಚ್ಸಿಎಲ್ ವಿಶೇಷ ಮಧ್ಯಂತರ ಡಿವಿಡೆಂಡ್ ತಲಾ 10 ರೂ. ಘೋಷಣೆ