ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಪಂಕ್ಚರ್ ಪ್ರೂಫ್ ಟಯರ್..!

ಪ್ರಪಂಚದಾದ್ಯಂತ, ಪ್ರತಿ ವರ್ಷ ಸುಮಾರು 200 ಮಿಲಿಯನ್ ಟಯರ್ ಗಳು ಅಕಾಲಿಕ ಪಂಕ್ಚರ್‌ನಿಂದಾಗಿ ನಿರುಪಯುಕ್ತವಾಗುತ್ತವೆ. ರಸ್ತೆಯ ಮೇಲೆ ಬಿದ್ದಿರುವ ವಸ್ತುಗಳಿಂದ ಅಥವಾ ಅಸಮರ್ಪಕ ಗಾಳಿಯ ಒತ್ತಡದಿಂದ ಟೈರ್​ಗಳ ಹಾನಿಗೀಡಾಗುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಪಂಕ್ಚರ್ ಪ್ರೂಫ್ ಟಯರ್..!
Michelin
Follow us
TV9 Web
| Updated By: ಝಾಹಿರ್ ಯೂಸುಫ್

Updated on:Feb 22, 2022 | 9:50 PM

ವಾಹನ ಚಾಲಕರ ಮತ್ತು ಮಾಲೀಕರ ಸಮಸ್ಯೆಗಳಲ್ಲಿ ಟಯರ್ ಪಂಕ್ಚರ್ ಕೂಡ ಒಂದು. ಯಾವಾಗ ಎಲ್ಲಿ ಕೈ ಕೊಡುತ್ತೊ ಎಂಬ ಚಿಂತೆಯೊಂದು ಕೆಲವೊಮ್ಮೆ ಕಾಡುತ್ತಿರುತ್ತವೆ. ಆದರೆ ಇನ್ನು ಕೆಲವೇ ವರ್ಷಗಳಲ್ಲಿ ನಿಮ್ಮ ವಾಹನದ ಟೈರ್ ಪಂಕ್ಚರ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಏಕೆಂದರೆ ಟಯರ್ ತಯಾರಕ ಕಂಪೆನಿ ಮಿಶೆಲೈನ್ ಪಂಕ್ಚರ್ ಪ್ರೂಫ್ ಟಯರ್‌ಗಳನ್ನು ಬಿಡುಗಡೆ ಮಾಡಲಿದೆ. ಶೆವರ್ಲೆಟ್​ ಬೋಲ್ಟ್ ಎಲೆಕ್ಟ್ರಿಕ್ ಕಾರಿಗೆ ಪಂಕ್ಚರ್ ಪ್ರೂಫ್ ಅಥವಾ ಗಾಳಿಯಿಲ್ಲದ ಟೈರ್‌ಗಳನ್ನು ಮಿಶೆಲೈನ್ ತಯಾರಿಸುತ್ತಿದೆ. ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ಕಂಪನಿಯು ಹೊಸ ಟಯರ್ ಅನ್ನು ಇಡೀ ವಿಶ್ವದಾದ್ಯಂತ ಪರಿಚಯಿಸುವ ನಿರೀಕ್ಷೆಯಿದೆ.

ಮಿಶೆಲೈನ್ ಕಂಪೆನಿಯು ತನ್ನ ಗಾಳಿಯಿಲ್ಲದ ಟಯರ್ ಗಳನ್ನು ಪರೀಕ್ಷಿಸಲು ಈಗಾಗಲೇ 2019 ರಲ್ಲಿ ಬೋಲ್ಟ್ ಕಾರಿನಲ್ಲಿ ಬಳಸಿದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. Michelin 2019 ರಲ್ಲಿ ತನ್ನ ಗಾಳಿಯಿಲ್ಲದ ಟಯರ್ ಅಪ್ಟಿಸ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿರಬಹುದು, ಆದರೆ ಅದರ ಉತ್ಪಾದನಾ ಪ್ರಕ್ರಿಯೆಯು ಒಂದು ದಶಕದಿಂದ ನಡೆಯುತ್ತಿದೆ. ಮಿಶೆಲೈನ್ ಅಪ್ಟಿಸ್ ಬೆಲ್ಟ್ ಮತ್ತು ಸ್ಪೋಕ್‌ನಿಂದ ಮಾಡಲ್ಪಟ್ಟಿದೆ. ವಾಹನದ ಭಾರವನ್ನು ಸಾಗಿಸಲು ಹಲವಾರು ತೆಳುವಾದ ಮತ್ತು ಬಲವಾದ ಫೈಬರ್​ ಗ್ಲಾಸ್​ ಬಳಸಿ ಇದನ್ನು ತಯಾರಿಸಲಾಗುತ್ತದೆ.

ಮಿಶೆಲೈನ್ ತನ್ನ ಪಂಕ್ಚರ್-ಪ್ರೂಫ್ ಟಯರ್ ತಂತ್ರಜ್ಞಾನಕ್ಕಾಗಿ 50 ಪೇಟೆಂಟ್‌ಗಳನ್ನು ಸಹ ಸಲ್ಲಿಸಿದೆ. ಹೀಗಾಗಿ ಇದೇ ಮಾದರಿಯನ್ನು ಬೇರೆ ಯಾರೂ ಬಳಸಲಾಗುವುದಿಲ್ಲ. ಅಪ್ಟಿಸ್ ಟಯರ್ ಗಳ ಪ್ರಯೋಜನವೆಂದರೆ ಯಾವುದೇ ರೀತಿಯಲ್ಲೂ ಪಂಕ್ಚರ್‌ ಆಗುವುದಿಲ್ಲ. ಇದರಿಂದಾಗಿ ವಾಹನ ಚಲಾಯಿಸುವಾಗ ಟಯರ್ ಹಠಾತ್ ಪಂಕ್ಚರ್ ಆಗುವುದು ಅಥವಾ ಗಾಳಿ ಕಡಿಮೆಯಾಗುವ ಅಪಾಯ ಇರುವುದಿಲ್ಲ ಎಂದು ಕಂಪೆನಿ ಹೇಳಿಕೊಂಡಿದೆ.

ಪ್ರಪಂಚದಾದ್ಯಂತ, ಪ್ರತಿ ವರ್ಷ ಸುಮಾರು 200 ಮಿಲಿಯನ್ ಟಯರ್ ಗಳು ಅಕಾಲಿಕ ಪಂಕ್ಚರ್‌ನಿಂದಾಗಿ ನಿರುಪಯುಕ್ತವಾಗುತ್ತವೆ. ರಸ್ತೆಯ ಮೇಲೆ ಬಿದ್ದಿರುವ ವಸ್ತುಗಳಿಂದ ಅಥವಾ ಅಸಮರ್ಪಕ ಗಾಳಿಯ ಒತ್ತಡದಿಂದ ಟೈರ್​ಗಳ ಹಾನಿಗೀಡಾಗುತ್ತದೆ. ಪಂಕ್ಚರ್ ಪ್ರೂಫ್ ಟಯರ್​ ಪ್ರತಿ ವರ್ಷ ಟಯರ್ ಸವೆತ ಮತ್ತು ಪಂಕ್ಚರ್ ಸಮಸ್ಯೆಗೆ ಇತಿಶ್ರೀ ಹಾಡಲಿದೆ. ಅಲ್ಲದೆ ನಿರಂತರ ಟಯರ್ ಬದಲಾವಣೆ ಸಮಸ್ಯೆಯನ್ನು ಕೂಡ ದೂರ ಮಾಡಲಿದೆ ಎಂದು ಮಿಶೆಲೈನ್ ಕಂಪೆನಿ ಹೇಳಿಕೊಂಡಿದೆ.

ಇದನ್ನೂ ಓದಿ: World Record: ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಯುವ ಬ್ಯಾಟ್ಸ್​ಮನ್

(Michelin, GM Work on AIRLESS Tires for the Upcoming Chevrolet Bolt EV)

Published On - 9:48 pm, Tue, 22 February 22