Tata Punch: ಇತರೆ ಕಾರುಗಳಿಗೆ ಪಂಚ್ ನೀಡಿ ದಾಖಲೆ ಬರೆದ ಟಾಟಾ ಪಂಚ್

Tata Punch SUV: ಟಾಟಾ ಮೋಟಾರ್ಸ್ ಇತ್ತೀಚೆಗೆ ಭಾರತದಲ್ಲಿ ತನ್ನ ಜನಪ್ರಿಯ ಕಾರ್ ಪಂಚ್ ಸೇರಿದಂತೆ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿಯ ವಿಶೇಷ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ.

Tata Punch: ಇತರೆ ಕಾರುಗಳಿಗೆ ಪಂಚ್ ನೀಡಿ ದಾಖಲೆ ಬರೆದ ಟಾಟಾ ಪಂಚ್
Tata Punch
Edited By:

Updated on: Feb 26, 2022 | 9:06 PM

Tata Punch SUV: ಟಾಟಾ ಮೋಟಾರ್ಸ್‌ನ ಜನಪ್ರಿಯ ಮತ್ತು ಕೈಗೆಟುಕುವ ಸಬ್-ಕಾಂಪ್ಯಾಕ್ಟ್ SUV ಟಾಟಾ ಪಂಚ್ (Tata Punch) ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಟಾಟಾ ಪಂಚ್‌ ಬಿಡುಗಡೆಯಾದ ಬಳಿಕ ಕೇವಲ 4 ತಿಂಗಳೊಳಗೆ 32,000 ಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿದೆ. ಈ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಮಾರಾಟವಾದ ಟಾಟಾ ಕಂಪೆನಿಯ ಸಬ್-ಕಾಂಪ್ಯಾಕ್ಟ್ SUV ಎನಿಸಿಕೊಂಡಿದೆ.

ನೆಕ್ಸಾನ್ ನಂತರ, ಟಾಟಾ ಪಂಚ್ ಕಂಪನಿಯ ಹೆಚ್ಚು ಮಾರಾಟವಾದ ಕಾರು. ಅಲ್ಲದೆ, ಇದು ಟಾಟಾದ ಅತ್ಯಂತ ಚಿಕ್ಕ ಸ್ಪೋರ್ಟ್ಸ್ ಯುಟಿಲಿಟಿ ವಾಹನವಾಗಿದೆ. ಇದು ಕಂಪನಿಯ ALFA-ARC ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ (ಆಲ್ಟ್ರೋಜ್‌ನಂತೆಯೇ). ಹಾಗೆಯೇ ಇದು ಟಾಟಾ ಹ್ಯಾರಿಯರ್‌ಗೆ ಸ್ವಲ್ಪಮಟ್ಟಿಗೆ ಹೋಲುವ ವಿನ್ಯಾಸವನ್ನು ಹೊಂದಿದೆ. ಕಂಪನಿಯು ಟಾಟಾ ಪಂಚ್ ಅನ್ನು 7 ಬಣ್ಣ ಆಯ್ಕೆಗಳಲ್ಲಿ ಪರಿಚಯಿಸಿದೆ. ಅಟಾಮಿಕ್ ಆರೆಂಜ್, ಕ್ಯಾಲಿಪ್ಸೊ ರೆಡ್, ಡೇಟೋನಾ ಗ್ರೇ, ಮೆಟಿಯರ್ ಬ್ರಾಂಜ್, ಆರ್ಕಸ್ ವೈಟ್, ಟೊರ್ನಾಡೊ ಬ್ಲೂ ಮತ್ತು ಟ್ರಾಪಿಕಲ್ ಮಿಸ್ಟ್ ಕಲರ್​ಗಳಲ್ಲಿ ಈ ಕಾರು ಖರೀದಿಗೆ ಲಭ್ಯವಿದೆ.

ಟಾಟಾ ಮೋಟಾರ್ಸ್ ಇತ್ತೀಚೆಗೆ ಭಾರತದಲ್ಲಿ ತನ್ನ ಜನಪ್ರಿಯ ಕಾರ್ ಪಂಚ್ ಸೇರಿದಂತೆ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿಯ ವಿಶೇಷ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಟಾಟಾ ಪಂಚ್ ಸಬ್-ಕಾಂಪ್ಯಾಕ್ಟ್ SUV ಯ ಬೆಲೆ ರೂ. 5.64 ಲಕ್ಷದಿಂದ ಪ್ರಾರಂಭವಾಗುತ್ತವೆ. ವಿಶೇಷ ಎಂದರೆ ಟಾಟಾ ಪಂಚ್ ಭಾರತದಲ್ಲಿ ನೇರ ಪ್ರತಿಸ್ಪರ್ಧಿಯನ್ನು ಹೊಂದಿಲ್ಲ ಎಂಬುದು. ಆದಾಗ್ಯೂ, ಮಾರುತಿ ಸುಜುಕಿ ಇಗ್ನಿಸ್, ಮಹೀಂದ್ರಾ KUV100 NXT, ರೆನಾಲ್ಟ್ ಕಿಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್‌ನಂತಹ ಕಾರುಗಳು ಇದರೊಂದಿಗೆ ಸ್ಪರ್ಧಿಸುತ್ತವೆ. ಇದಾಗ್ಯೂ ಬಿಡುಗಡೆಯಾದ ನಾಲ್ಕು ತಿಂಗಳಲ್ಲೇ 32 ಸಾವಿರಕ್ಕೂ ಅಧಿಕ ಕಾರುಗಳು ಮಾರಾಟವಾಗಿರುವುದು ಟಾಟಾ ಪಂಚ್​ನ ಜನಪ್ರಿಯತೆಯನ್ನು ತೋರಿಸುತ್ತದೆ.

ಇದನ್ನೂ ಓದಿ: IPL 2022 format explained: 2 ಗುಂಪು, 70 ಪಂದ್ಯಗಳು: ಹೇಗಿರಲಿದೆ IPL 2022 ಟೂರ್ನಿ

ಇದನ್ನೂ ಓದಿ: ಐಪಿಎಲ್ ಆರಂಭಿಕ ಪಂದ್ಯಗಳಿಗೆ ಈ ಆಟಗಾರರು ಅಲಭ್ಯ

ಇದನ್ನೂ ಓದಿ: IPL 2022: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶೇನ್ ವಾಟ್ಸನ್ ಎಂಟ್ರಿ..!

(Tata Punch SUV sales cross 32,000 mark within four months)