AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Twitter: ಟ್ವಿಟ್ಟರ್ ಇನ್ಕ್​ ತೊರೆದ ಈ 3 ಟಾಪ್ ಉದ್ಯೋಗಿಗಳಿಗೆ ಸಿಗಲಿದೆ 800 ಕೋಟಿ ರೂ ನಿರ್ಗಮನ ಮೊತ್ತ -ಯಾರವರು, ಏನಿದರ ಲೆಕ್ಕಾಚಾರ?

ಈ ಮಧ್ಯೆ, ಟ್ವಿಟ್ಟರ್ ಇನ್ಕ್​ ಅನ್ನು ಎಲಾನ್ ಮಸ್ಕ್ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದಂತೆ ಅಲ್ಲಿದ್ದ ಅಗ್ರ ಮೂವರು ಸಹಜವಾಗಿ ಕಂಪನಿಯ ಸೇವೆಯಿಂದ ನಿರ್ಗಮಿಸಿದ್ದಾರೆ. ಒಂದಿಬ್ಬರನ್ನು ಅನಿವಾರ್ಯವಾಗಿ, ಎಲಾನ್ ಮಸ್ಕೇ ಹೊರಗಟ್ಟಿರುವುದಾಗಿ ಉದ್ಯಮದ ಮೂಲಗಳು ಹೇಳುತ್ತಿವೆ.

Twitter: ಟ್ವಿಟ್ಟರ್ ಇನ್ಕ್​ ತೊರೆದ ಈ 3 ಟಾಪ್ ಉದ್ಯೋಗಿಗಳಿಗೆ ಸಿಗಲಿದೆ 800 ಕೋಟಿ ರೂ ನಿರ್ಗಮನ ಮೊತ್ತ -ಯಾರವರು, ಏನಿದರ ಲೆಕ್ಕಾಚಾರ?
ಟ್ವಿಟ್ಟರ್ ಇನ್ಕ್​ ತೊರೆದ ಈ 3 ಟಾಪ್ ಉದ್ಯೋಗಿಗಳಿಗೆ ಸಿಗಲಿದೆ 800 ಕೋಟಿ ರೂ ನಿರ್ಗಮನ ಮೊತ್ತ
TV9 Web
| Updated By: ಸಾಧು ಶ್ರೀನಾಥ್​|

Updated on:Oct 29, 2022 | 12:35 PM

Share

ಫೇಸ್​ಬುಕ್​​ನಷ್ಟು ಯೂಸರ್​ ಫ್ರೆಂಡ್ಲೀ ಅಲ್ಲದ ಮತ್ತು ಜನಪ್ರಿಯತೆಯಲ್ಲಿ ಹಿಂದೆ ಬಿದ್ದಿರುವ ಟ್ವಿಟ್ಟರ್​​ ಅನ್ನು ಒಂದೇ ಏಟಿಗೆ 44 ಶತಕೋಟಿ ಡಾಲರ್​ ದುಡ್ಡು ತೆತ್ತು ಖರೀದಿಸಿರುವ ಎಲಾನ್ ಮಸ್ಕ್​, ತಾನು ಏನಾದರೂ ಮಾಡಿ​ Twitter ಅನ್ನು ಸರಿದಾರಿಗೆ ತರುವುದಾಗಿ ಕಂಕಣತೊಟ್ಟು ನಿಂತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಟ್ವಿಟರ್ ಕಂಟೆಂಟ್ ಮಾಡರೇಶನ್ ಕೌನ್ಸಿಲ್ ಅನ್ನು ರಚಿಸುವುದಾಗಿ ಎಲಾನ್ ಮಸ್ಕ್ ಘೋಷಿಸಿಯಾಗಿದೆ. ದಿಕ್ಕುತಪ್ಪಿದಂತಿರುವ ಇಂದಿನ ಸಾಮಾಜಿಕ ಜಾಲತಾಣ ಯುಗದಲ್ಲಿ ಅದರ ಅಗತ್ಯವೂ ಬಹಳಷ್ಟಿದೆ.

ಸುದೀರ್ಘ ಕಾನೂನು ಹೋರಾಟ ಮತ್ತು ಕೆಲ ತಿಂಗಳುಗಳ ಅನಿಶ್ಚಿತತೆಯ ನಂತರ $ 44 ಶತಕೋಟಿ ವ್ಯವಹಾರದೊಂದಿಗೆ ಜಾಗತಿಕ ಧನಿಕ ಎಲೋನ್ ಮಸ್ಕ್ ಔಪಚಾರಿಕವಾಗಿ ಸಾಮಾಜಿಕ ಮಾಧ್ಯಮ ವ್ಯವಹಾರವನ್ನು ವಹಿಸಿಕೊಂಡ ನಂತರ Twitter Inc ನ ಉನ್ನತ ಕಾರ್ಯನಿರ್ವಾಹಕರು, ಪರಾಗ್ ಅಗರವಾಲ್, ನೆಡ್ ಸೆಗಲ್ ಮತ್ತು ವಿಜಯ ಗಡ್ಡೆ ಅವರನ್ನು ವಜಾಗೊಳಿಸಿದೆ.

ಈ ಮಧ್ಯೆ, ಟ್ವಿಟ್ಟರ್ ಇನ್ಕ್​ ಅನ್ನು ಎಲಾನ್ ಮಸ್ಕ್ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದಂತೆ ಅಲ್ಲಿದ್ದ ಅಗ್ರ ಮೂವರು ಸಹಜವಾಗಿ ಕಂಪನಿಯ ಸೇವೆಯಿಂದ ನಿರ್ಗಮಿಸಿದ್ದಾರೆ. ಒಂದಿಬ್ಬರನ್ನು ಅನಿವಾರ್ಯವಾಗಿ, ಎಲಾನ್ ಮಸ್ಕೇ ಹೊರಗಟ್ಟಿರುವುದಾಗಿ ಉದ್ಯಮದ ಮೂಲಗಳು ಹೇಳುತ್ತಿವೆ. ಸದ್ಯಕ್ಕೆ ಟ್ವಿಟರ್ ಸಂಸ್ಥೆಯನ್ನು ತೊರೆದಿರುವ ಟಾಪ್ 3 ಕಾರ್ಯನಿರ್ವಾಹಕರೆಂದರೆ ಪರಾಗ್ ಅಗರವಾಲ್, ನೆಡ್ ಸೆಗಲ್ ಮತ್ತು ವಿಜಯಾ ಗಡ್ಡೆ.

ಅಮೆರಿಕದ ಸ್ಯಾನ್​​ಫ್ರಾನ್ಸಿಸ್ಕೋದಲ್ಲಿ ಪ್ರಧಾನ ಕಚೇರಿ ಹೊಂದಿರುವ (San Francisco headquarters) ಟ್ವಿಟರ್ ಸಂಸ್ಥೆಯನ್ನು ಎಲಾನ್ ಮಸ್ಕ್ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿದ್ದಂತೆ ಈ ಮೂವರನ್ನೂ ವಜಾಗೊಳಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಈ ಮೂವರು ಹಿರಿಯ ಕಾರ್ಯನಿರ್ವಾಹಕರು 100 ಮಿಲಿಯನ್‌ ಡಾಲರ್​ ಗಿಂತಲೂ (ಇಂದಿನ ಡಾಲರ್ ಬೆಲೆಯಲ್ಲಿ 823 ಕೋಟಿ ರೂಪಾಯಿ) ಹೆಚ್ಚು ನಿರ್ಗಮನ ಈಕ್ವಿಟಿ ಪಾವತಿಗಳೊಂದಿಗೆ ಕಂಪನಿಯನ್ನು ತೊರೆಯಲಿದ್ದಾರೆ ಎಂದು ಮೂಲಗಳು ಹೇಳಿವೆ.

ಎಲೋನ್ ಮಸ್ಕ್ ತನ್ನ ಸ್ವಾಧೀನವನ್ನು ಮುಕ್ತಾಯಗೊಳಿಸಿದ ನಂತರ ವಜಾಗೊಳಿಸಲಾಗಿದೆ ಎಂದು ಹೇಳಲಾದ Twitter Inc ನ ಮೂವರು ಹಿರಿಯ ಕಾರ್ಯನಿರ್ವಾಹಕರು $ 100 ಮಿಲಿಯನ್‌ಗಿಂತಲೂ ಹೆಚ್ಚು ಬೇರ್ಪಡಿಕೆ ಮತ್ತು ಹಿಂದೆ ನೀಡಿದ ಇಕ್ವಿಟಿ ಬಹುಮಾನಗಳ ಪಾವತಿಗಳನ್ನು ಪಡೆಯಲು ಸಿದ್ಧರಾಗಿದ್ದಾರೆ.

ಬ್ಲೂಮ್‌ಬರ್ಗ್ ನ್ಯೂಸ್ ಲೆಕ್ಕಾಚಾರದ ಪ್ರಕಾರ ಟ್ವಿಟರ್ ಸಿಇಒ ಆಗಿದ್ದ ಪರಾಗ್ ಅಗರವಾಲ್ (CEO Parag Agrawal) ಸುಮಾರು $ 50 ಮಿಲಿಯನ್ ಅಥವಾ 412 ಕೋಟಿ ರೂಪಾಯಿಗಳನ್ನು ಪಡೆಯಲು ಅರ್ಹರಾಗಿದ್ದಾರೆ. ನೆಡ್ ಸೆಗಲ್ (CFO Ned Segal) ಮತ್ತು ವಿಜಯ ಗಡ್ಡೆ (Vijaya Gadde) ತಲಾ 305 ಕೋಟಿ ಮತ್ತು 140 ಕೋಟಿ ಪಡೆಯಬಹುದು.

ಕಂಪನಿಯಿಂದ ಬೇರ್ಪಡುವ ಅಥವಾ ನಿರ್ಗಮಿಸುವ ನೀತಿನಿಯಮಗಳ ಪ್ರಕಾರ ದೊಡ್ಡ ಸಾರ್ವಜನಿಕ ಕಂಪನಿಗಳಲ್ಲಿನ ಅನೇಕ ಉನ್ನತ ನಾಯಕರಂತೆ, ಪರಾಗ್ ಅಗರವಾಲ್ ಮತ್ತು ಅವರ ಸಹಾಯಕರು ಟ್ವಿಟರ್ ಮಾರಾಟಗೊಂಡರೆ ಮತ್ತು ಅಥವಾ ತಮ್ಮ ಉದ್ಯೋಗವನ್ನು ಕಳೆದುಕೊಂಡರೆ… ಆ ಪ್ರಕ್ರಿಯೆಯಲ್ಲಿ ಒಂದು ವರ್ಷದ ಸಂಬಳ ಮತ್ತು ಅನ್‌ವೆಸ್ಟೆಡ್ ಇಕ್ವಿಟಿ (unvested equity) ನಗದು ಹಂಚಿಕೆಗಳನ್ನು ಪಡೆಯಲು ಅರ್ಹರಾಗುತ್ತಾರೆ. ಜೊತೆಗೆ ಭಾರೀ ಮೊತ್ತದ ವಿಮಾ ಮೊತ್ತವನ್ನು ಒಳಗೊಂಡಿರುತ್ತದೆ ಎಂದು ನ್ಯೂಯಾರ್ಕ್​ ಟೈಮ್ಸ್​ ವರದಿ ಹೇಳಿದೆ.

Published On - 9:04 am, Sat, 29 October 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!