AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Toyota Kirloskar Motor: ಟಿಕೆಎಂ​ನಿಂದ ವಾಹನದ ಬಿಡಿ ಭಾಗಗಳು ಮನೆ ಬಾಗಿಲಿಗೇ ಡೆಲಿವರಿ ಆರಂಭ

ಟೊಯೋಟಾ ಕಿರ್ಲೋಸ್ಕರ್​ ಮೋಟಾರ್​ನಿಂದ ಮನೆ ಬಾಗಿಲಿಗೇ ವಾಹನದ ಬಿಡಿ ಭಾಗಗಳನ್ನು ತಲುಪಿಸುವ ಸೇವೆಯನ್ನು ಆರಂಭಿಸಲಾಗಿದೆ. ಇದರ ಅನುಕೂಲ ಪಡೆಯುವುದು ಹೇಗೆ ಎಂಬ ವಿವರಗಳು ಇಲ್ಲಿವೆ.

Toyota Kirloskar Motor: ಟಿಕೆಎಂ​ನಿಂದ ವಾಹನದ ಬಿಡಿ ಭಾಗಗಳು ಮನೆ ಬಾಗಿಲಿಗೇ ಡೆಲಿವರಿ ಆರಂಭ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 17, 2021 | 11:01 PM

ಗ್ರಾಹಕರ ಅನುಕೂಲದ ದೃಷ್ಟಿಯಿಂದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ)ನಿಂದ ವಾಹನದ ಬಿಡಿ ಭಾಗಗಳನ್ನು ಮನೆ ಬಾಗಿಲಿಗೇ ತಲುಪಿಸುವಂಥ “ಡೋರ್ ಡೆಲಿವರಿ”ಯನ್ನು ಪರಿಚಯಿಸಿದೆ. 2015ರಲ್ಲಿ ಪ್ರಾರಂಭಿಸಲಾದ “ಟೊಯೋಟಾ ಪಾರ್ಟ್ಸ್ ಕನೆಕ್ಟ್”ನ ವಿಸ್ತರಣೆ ಆಗಿರುವ ಈ ಕ್ರಮವು, ಕಂಪೆನಿಯ ವಿಶ್ವಾಸಾರ್ಹ ಬಿಡಿ ಭಾಗಗಳ ಲಭ್ಯತೆ ಮತ್ತು ಪ್ರವೇಶದೊಂದಿಗೆ ಗ್ರಾಹಕರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಪ್ರಮುಖ ಔಟ್ ರೀಚ್ ಪ್ರೋಗ್ರಾಂ ಆಗಿದೆ. ಇತ್ತೀಚೆಗೆ ಬಿಡುಗಡೆಯಾದ “ಡೋರ್ ಡೆಲಿವರಿ” ಆಯ್ಕೆಯು ಗ್ರಾಹಕರಿಗೆ ಮತ್ತಷ್ಟು ಅನುಕೂಲ ಒದಗಿಸುತ್ತದೆ. ಟೊಯೋಟಾ ಗ್ರಾಹಕರಿಗೆ ತಡೆರಹಿತವಾದ ಖರೀದಿ ಅನುಭವವನ್ನು ಒದಗಿಸುತ್ತದೆ. “ಡೋರ್ ಡೆಲಿವರಿ” ಆಯ್ಕೆಯ ಪರಿಚಯದೊಂದಿಗೆ, ಗ್ರಾಹಕರು ಡೀಲರ್​ಶಿಪ್​ಗಳಿಂದ ಬಿಡಿ ಭಾಗಗಳನ್ನು ತೆಗೆದುಕೊಂಡು ಹೋಗುವ ಆಯ್ಕೆ ಮಾಡಬಹುದು ಅಥವಾ ಅದನ್ನು ಮನೆಗೆ ತಲುಪಿಸುವ ಆಯ್ಕೆಯನ್ನು ಹೊಂದಿರುತ್ತಾರೆ.

ಈ ಕಾರ್ಯಕ್ರಮದ ಅಡಿಯಲ್ಲಿ ಕಾರ್ ಕೇರ್ ಅಗತ್ಯಗಳು, ಎಂಜಿನ್ ಆಯಿಲ್ ಮತ್ತು ಟೈರ್, ಬ್ಯಾಟರಿ ಮುಂತಾದ ವಿಭಾಗಗಳನ್ನು ಒಳಗೊಂಡಂತೆ ಉತ್ಪನ್ನಗಳ ವ್ಯಾಪ್ತಿಯನ್ನು ಟೊಯೋಟಾ ಮತ್ತಷ್ಟು ಹೆಚ್ಚಿಸಿದೆ. ಈ ಸೇವೆಯು ಪ್ರಸ್ತುತ 12 ನಗರಗಳಲ್ಲಿ ಲಭ್ಯವಿದೆ ಮತ್ತು 2021ರ ಅಂತ್ಯದ ವೇಳೆಗೆ ದೇಶದ ಎಲ್ಲಾ ನಗರಗಳಿಗೆ ವಿಸ್ತರಿಸಲಾಗುವುದು.

ಟೊಯೋಟಾ ಹಿರಿಯ ಉಪಾಧ್ಯಕ್ಷ ನವೀನ್ ಸೋನಿ ಈ ಬಗ್ಗೆ ಮಾತನಾಡಿ, ಈ ಕಾರ್ಯಕ್ರಮದ ಆರಂಭದೊಂದಿಗೆ ಅತ್ಯುತ್ತಮ ಗ್ರಾಹಕ ಅನುಭವವನ್ನು ಒದಗಿಸುವಲ್ಲಿ ನಮ್ಮ ಬದ್ಧತೆಯ ಕಡೆಗೆ ಮತ್ತೊಂದು ಮೈಲುಗಲ್ಲನ್ನು ಸಾಧಿಸಿದ್ದೇವೆ. ಗ್ರಾಹಕರು ಮತ್ತು ವಾಹನಗಳ ಸುರಕ್ಷತೆಯ ಕಡೆಗೆ ಕಂಪೆನಿಯ ನಂಬಿಕಾರ್ಹ ಬಿಡಿ ಭಾಗಗಳು ಪ್ರಮುಖ ಪಾತ್ರ ವಹಿಸುತ್ತವೆ. ಬಳಕೆದಾರ ಸ್ನೇಹಿ ಅನುಭವಕ್ಕಾಗಿ ನಿಜವಾದ ಬಿಡಿ ಭಾಗಗಳ ಪ್ರವೇಶ ಮತ್ತು ಲಭ್ಯತೆಯನ್ನು ಸುಧಾರಿಸಲು ಇದು ನಮ್ಮ ನಿರಂತರ ಪ್ರಯತ್ನವಾಗಿದೆ. ಈ ಕಾರ್ಯಕ್ರಮದಿಂದಾಗಿ ಒಂದು ಹೆಜ್ಜೆ ಮುಂದೆ ಸಾಗಲು ನಮಗೆ ಸಹಾಯ ಮಾಡುತ್ತದೆ. ಇದು ನಮ್ಮ ಗ್ರಾಹಕರಿಗೆ ಸುಲಭ ಮತ್ತು ಒತ್ತಡ ರಹಿತವಾದ ಪ್ರಕ್ರಿಯೆಯಾಗಿದೆ ಎಂದಿದ್ದಾರೆ.

ಗ್ರಾಹಕರು ಮೊದಲು ಎಂಬ ಸಿದ್ಧಾಂತದ ಭಾಗವಾಗಿ, ಗ್ರಾಹಕರಿಗೆ ಹೊಸ ಪರಿಹಾರಗಳನ್ನು ಒದಗಿಸುತ್ತೇವೆ. ಗ್ರಾಹಕರ ಅನುಭವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಕೊವಿಡ್ ತಡೆಗಳನ್ನು ಪರಿಗಣಿಸಿ ಟಿಕೆಎಂನಲ್ಲಿ ನಾವು ಮಾರುಕಟ್ಟೆಯ ಅಗತ್ಯಗಳಿಗೆ ಚುರುಕಾಗಿ ಸ್ಪಂದಿಸಲು ಪ್ರಯತ್ನಿಸುತ್ತಿದ್ದೇವೆ. ಟಿಕೆಎಂ ಉತ್ಪನ್ನಗಳು ಮತ್ತು ಸೇವೆಗಳು ಸರಿಯಾಗಿ ತಲುಪುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಇವೆಲ್ಲ ನಮ್ಮ ಪ್ರಯತ್ನಗಳಾಗಿವೆ ಎಂದು ಹೇಳಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ ಗ್ರಾಹಕರು ಟೊಯೋಟಾ ಪಾರ್ಟ್ಸ್ ಕನೆಕ್ಟ್ www.toyotapartsconnect.in ಭೇಟಿ ನೀಡಬಹುದು ಅಥವಾ ಹತ್ತಿರದ ಟೊಯೋಟಾ ಡೀಲರ್​ಶಿಪ್ ಅನ್ನು ಸಂಪರ್ಕಿಸಬಹುದು.

ಇದನ್ನೂ ಓದಿ: ಟೊಯೋಟಾ ಮೋಟಾರ್​ನಿಂದ ಮತ್ತೆ ಉತ್ಪಾದನೆ ಆರಂಭ; ಕರ್ನಾಟಕದ ಎರಡು ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಣೆ ಶುರು

(Toyota Kirloskar Motor started genuine spare parts door delivery service during covid-19)

Published On - 11:00 pm, Thu, 17 June 21

ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್