ಹಪ್ಪಳ ಮತ್ತು ಸರಕು ಸೇವಾ ಸುಂಕದ (ಜಿಎಸ್ಟಿ) ಬಗ್ಗೆ ಉದ್ಯಮಿ ಹರ್ಷ್ ಗೋಯೆಂಕ ಮಾಡಿದ ಟ್ವೀಟ್ ಬುಧವಾರ ವೈರಲ್ ಆಗಿತ್ತು. ಈ ಟ್ವೀಟ್ನಲ್ಲಿ ವ್ಯಕ್ತವಾದ ಮಾಹಿತಿಯ ಸತ್ಯಪರಿಶೀಲನೆ ಮಾಡಿದ ಕೇಂದ್ರ ಪರೋಕ್ಷ ತೆರಿಗೆ ಮತ್ತು ಸೀಮಾ ಸುಂಕ ಇಲಾಖೆಯು (Central Board of Indirect Taxes Customs – CBIC) ಗೋಯೆಂಕ ಟ್ವೀಟ್ನಲ್ಲಿ ಪ್ರಸ್ತಾಪಿಸಿದ್ದ ಮಾಹಿತಿ ತಪ್ಪು ಎಂದು ಹೇಳಿತು.
ಅಕ್ಕಿ ಸೇರಿದಂತೆ ವಿವಿಧ ಧಾನ್ಯಗಳ ಬೆಂದ ಹಿಟ್ಟನ್ನು ಹದವಾಗಿ ಬಿಸಿಲಿನಲ್ಲಿ ಒಣಗಿಸಿ ಹಪ್ಪಳ ತಯಾರಿಸಲಾಗುತ್ತದೆ. ಇದನ್ನು ಬಿಸಿ ಎಣ್ಣೆಯಲ್ಲಿ ಕರಿದು ಅಥವಾ ಸುಟ್ಟು ಗರಿಗರಿ ಇರುವಾಗಲೇ ತಿನ್ನುವುದು ರೂಢಿ.
ದೇಶದ ಮುಂಚೂಣಿ ಉದ್ಯಮ ಸಮೂಹ ಆರ್ಪಿಜಿ ಎಂಟರ್ಪ್ರೈಸಸ್ನ ಅಧ್ಯಕ್ಷ ಹರ್ಷ್ ಗೋಯೆಂಂಕ ತಮ್ಮ ಟ್ವೀಟ್ನಲ್ಲಿ ಎರಡು ಹಪ್ಪಳಗಳ ಚಿತ್ರವನ್ನು ಟ್ವೀಟ್ ಮಾಡಿದ್ದರು. ಒಂದು ವೃತ್ತಾಕಾರದಲ್ಲಿದ್ದರೆ ಮತ್ತೊಂದು ಚಚೌಕವಾಗಿತ್ತು. ವೃತ್ತಾಕಾರದ ಹಪ್ಪಳಕ್ಕೆ ಜಿಎಸ್ಟಿಯಿಂದ ವಿನಾಯ್ತಿಯಿದೆ. ಚಚೌಕದ ಹಪ್ಪಳಕ್ಕೆ ಜಿಎಸ್ಟಿ ಅನ್ವಯವಾಗುತ್ತದೆ ಎಂದು ಹರ್ಷ್ ಗೊಯೆಂಕ ಹೇಳಿದ್ದರು. ‘ಈ ತೆರಿಗೆ ವಿಧಿಸುವ ತರ್ಕದ ಬಗ್ಗೆ ಯಾರಾದರೂ ಲೆಕ್ಕ ಪರಿಶೋಧಕರು ನನಗೆ ಅರ್ಥ ಮಾಡಿಸಬಲ್ಲಿರಾ’ ಎಂದು ಹರ್ಷ್ ಗೋಯೆಂಕಾ ವ್ಯಂಗ್ಯವಾಡಿದ್ದರು.
ಹರ್ಷ್ ಗೊಯೆಂಕಾ ಅವರ ಪೋಸ್ಟ್ ಇಲ್ಲಿದೆ
Did you know that a round papad is exempt from GST and a square papad attracts GST ? Can anyone suggest a good chartered accountant who can make me understand the logic? pic.twitter.com/tlu159AdIJ
— Harsh Goenka (@hvgoenka) August 31, 2021
ಹರ್ಷ್ ಗೊಯೆಂಕಾ ಅವರ ಟ್ವೀಟ್ನಲ್ಲಿದ್ದ ಮಾಹಿತಿ ತಪ್ಪು ಎಂದು ಹೇಳಿದ ಸಿಬಿಐಸಿ, ಹಪ್ಪಳವು ಯಾವುದೇ ಹೆಸರಿನಲ್ಲಿದ್ದರೂ ಅದಕ್ಕೆ ಜಿಎಸ್ಟಿ ವಿಧಿಸುವುದಿಲ್ಲ. ಈ ವಿಷಯವನ್ನು ಜಿಎಸ್ಟಿ ಅಧಿಸೂಚನೆಯ 96ನೇ ಎಂಟ್ರಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಯಾವುದೇ ಹಪ್ಪಳವನ್ನು ಅದರ ಆಕಾರದ ಮೇಲೆ ಪ್ರತ್ಯೇಕಿಸುವುದಿಲ್ಲ ಎಂದು ಸಿಬಿಐಸಿ ಹೇಳಿದೆ. ಈ ವಿಷಯವು ಸಿಬಿಐಸಿ ವೆಬ್ಸೈಟ್ನಲ್ಲಿ ಲಭ್ಯವಿದೆ ಎಂದು ಹೇಳಿದೆ.
ಸಿಬಿಐಸಿ ಮಾಡಿರುವ ಫ್ಯಾಕ್ಟ್ಚೆಕ್ ಇಲ್ಲಿದೆ
Papad, by whatever name known, is exempt from GST vide Entry No. 96 of GST notification No.2/2017-CT(R). This entry does not distinguish based on the shape of papad. This notification is available at https://t.co/ckIfjzg8hw https://t.co/19GbQJvYZe
— CBIC (@cbic_india) August 31, 2021
(Viral Tweet Harsh Goenka posts about papad and GST in viral tweet CBIC dept fact checks updates the truth)
ಇದನ್ನೂ ಓದಿ: Afghanistan Update: ತಾಲಿಬಾನ್ ಹಿಡಿತದಲ್ಲಿ 2ನೇ ದಿನ; ಪಂಜಶಿರ್ ಸಂಘರ್ಷ, ಅಲ್ಖೈದಾ ಅಭಿನಂದನೆ, ಬೈಡೆನ್ ಸಮರ್ಥನೆ
ಇದನ್ನೂ ಓದಿ: 30 ತಾಸು ಕೊರೆಯುವ ಚಳಿಯಲ್ಲಿ ನಿಂತು ಅಫ್ಘಾನಿಸ್ತಾನದಲ್ಲಿ ಬೈಡೆನ್ ಜೀವ ಕಾಪಾಡಿದ್ದವಗೆ ವಿಸಾ ಕೊಡಲು ಅಮೆರಿಕ ಮೀನಮೇಷ