Electric Scooter: ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ

electric scooter: ಹೊಸ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವುದರೊಂದಿಗೆ ಕಂಪನಿಯು ಹೆಚ್ಚಿನ ವೇಗದ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗಕ್ಕೆ ಪ್ರವೇಶಿಸಿದೆ. ಸ್ಥಳೀಯ ಮತ್ತು 'ಮೇಕ್-ಇನ್-ಇಂಡಿಯಾ' ಉಪಕ್ರಮಗಳನ್ನು ಉತ್ತೇಜಿಸಲು ಹೊಸ ಸ್ಕೂಟರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.

Electric Scooter: ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ
wardwizard
Follow us
| Updated By: ಝಾಹಿರ್ ಯೂಸುಫ್

Updated on: Feb 14, 2022 | 10:31 PM

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪೆನಿ ವಾರ್ಡ್ ವಿಝಾರ್ಡ್ ಇದೀಗ ಎರಡು ಹೊಸ ‘ಮೇಡ್-ಇನ್-ಇಂಡಿಯಾ’ ಹೈಸ್ಪೀಡ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಈ ಸ್ಕೂಟರ್‌ಗಳಿಗೆ ವೋಲ್ಫ್ + (Wolf +) ಮತ್ತು ಜೆನ್ ನೆಕ್ಸ್ಟ್​ ನ್ಯಾನೋ + (Gen Next Nanu +) ಎಂದು ಹೆಸರಿಡಲಾಗಿದೆ. ಇದಲ್ಲದೆ, ಕಂಪನಿಯು ಫ್ಲೀಟ್ ಮ್ಯಾನೇಜ್‌ಮೆಂಟ್ ಎಲೆಕ್ಟ್ರಿಕ್ ಸ್ಕೂಟರ್ ಡೆಲ್ ಗೋ ಲಾಂಚ್ ಅನ್ನು ಕೂಡ ಗ್ರಾಹಕರಿಗೆ ಪರಿಚಯಿಸಿದೆ.

ಹೊಸ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವುದರೊಂದಿಗೆ ಕಂಪನಿಯು ಹೆಚ್ಚಿನ ವೇಗದ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗಕ್ಕೆ ಪ್ರವೇಶಿಸಿದೆ. ಸ್ಥಳೀಯ ಮತ್ತು ‘ಮೇಕ್-ಇನ್-ಇಂಡಿಯಾ’ ಉಪಕ್ರಮಗಳನ್ನು ಉತ್ತೇಜಿಸಲು ಹೊಸ ಸ್ಕೂಟರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಕಂಪನಿಯು ಗುಜರಾತ್‌ನ ವಡೋದರದಲ್ಲಿರುವ ತನ್ನ ಸುಧಾರಿತ ಉತ್ಪಾದನಾ ಘಟಕದಲ್ಲಿ ಈ ಸ್ಕೂಟರ್‌ಗಳನ್ನು ನಿರ್ಮಿಸಿರುವುದಾಗಿ ವಾರ್ಡ್ ವಿಝಾರ್ಡ್ ಕಂಪೆನಿ ತಿಳಿಸಿದೆ.

ಹೊಸ Wolf +, Gen Next Nanu ಎಲೆಕ್ಟ್ರಿಕ್ ಸ್ಕೂಟರ್‌ನ ವೈಶಿಷ್ಟ್ಯಗಳೇನು? ಇದು ಕೀಲೆಸ್ ಸ್ಟಾರ್ಟ್, ಸ್ಮಾರ್ಟ್ ಕನೆಕ್ಟಿವಿಟಿ, ಡ್ರೈವಿಂಗ್ ಮೋಡ್, ರಿಮೋಟ್ ಅಪ್ಲಿಕೇಶನ್, ರಿವರ್ಸ್ ಮೋಡ್, ಆಂಟಿ-ಥೆಫ್ಟ್ ಮತ್ತು GPS ಸಕ್ರಿಯಗೊಳಿಸಿದಂತಹ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಕೂಟರ್. ಈ ಸ್ಕೂಟರ್‌ಗಳಲ್ಲಿ 1500W ಮೋಟಾರ್‌ ಅಳವಡಿಸಲಾಗಿದೆ. ಇದು 20 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಲ್ಲದೆ ಇದು 55 kmph ಗರಿಷ್ಠ ವೇಗ ಹೊಂದಿದೆ. ಈ ಸ್ಕೂಟರ್ ಅನ್ನು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 100 ಕಿಮೀ ವರೆಗೂ ಚಲಿಸಬಹುದು.

ಅಂದಹಾಗೆ ವೋಲ್ಫ್ + ಬೆಲೆ 1.10 ಲಕ್ಷ (ಎಕ್ಸ್ ಶೋ ರೂಂ), ಆದರೆ ಜೆನ್ ನೆಕ್ಸ್ಟ್ ನ್ಯಾನೋ + ಮತ್ತು ಡೆಲ್ ಗೋ ಕ್ರಮವಾಗಿ 1.06 ಲಕ್ಷ ಮತ್ತು ರೂ 1,14,500 (ಎಕ್ಸ್ ಶೋ ರೂಂ) ಬೆಲೆಯಲ್ಲಿ ಖರೀದಿಸಬಹುದು.

ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?

ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..! 

(wardwizard launches high speed electric scooter)

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ