Azim Premji | ಅಜೀಂ ಪ್ರೇಮ್ ಜಿ ವಿರುದ್ಧ ತನಿಖೆ ಕೋರಿದ್ದ ರಿಟ್ ಅರ್ಜಿ ವಜಾ; ಅರ್ಜಿದಾರರಿಗೆ ಭಾರಿ ದಂಡ ವಿಧಿಸಿದ ಹೈಕೋರ್ಟ್

Azim Premji | ರಿಟ್ ಅರ್ಜಿ ಸಲ್ಲಿಸಿದ್ದ ಇಂಡಿಯಾ ಅವೇಕ್ ಫಾರ್ ಟ್ರಾನ್ಸಪರೆನ್ಸಿ ಸಂಸ್ಥೆಯು ಅಜೀಂ ಪ್ರೇಮ್ ಜಿ ಕಂಪನಿಗಳ ವಿರುದ್ಧ ಕಾರ್ಪೊರೇಟ್ ವ್ಯವಹಾರಗಳ ಇಲಾಖೆ ಮೂಲಕ ತನಿಖೆಗೆ ಕೋರಿದ್ದರು. ಇದೇ ಅರ್ಜಿದಾರರ ಮೂರು ರಿಟ್ ಅರ್ಜಿಗಳು ಈ ಹಿಂದೆಯೂ ವಜಾಗೊಂಡಿದ್ದವು.

  • TV9 Web Team
  • Published On - 13:33 PM, 20 Feb 2021
Azim Premji | ಅಜೀಂ ಪ್ರೇಮ್ ಜಿ ವಿರುದ್ಧ ತನಿಖೆ ಕೋರಿದ್ದ ರಿಟ್ ಅರ್ಜಿ ವಜಾ; ಅರ್ಜಿದಾರರಿಗೆ ಭಾರಿ ದಂಡ ವಿಧಿಸಿದ ಹೈಕೋರ್ಟ್
ಅಜೀಂ ಪ್ರೇಮ್ ಜಿ

ಬೆಂಗಳೂರು: ಅಜೀಂ ಪ್ರೇಮ್ ಜಿ ಕಂಪೆನಿಗಳ ವಿರುದ್ಧ ತನಿಖೆ ಕೋರಿದ್ದ ರಿಟ್ ಅರ್ಜಿಯನ್ನು ವಜಾ ಕರ್ನಾಟಕ ಹೈಕೋರ್ಟ್ ಇಂದು ವಜಾಗೊಳಿಸಿದೆ. ಇದೇ ವೇಳೆ ಅರ್ಜಿದಾರರಿಗೆ 10 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.

ರಿಟ್ ಅರ್ಜಿ ಸಲ್ಲಿಸಿದ್ದ ಇಂಡಿಯಾ ಅವೇಕ್ ಫಾರ್ ಟ್ರಾನ್ಸಪರೆನ್ಸಿ ಸಂಸ್ಥೆಯು ಅಜೀಂ ಪ್ರೇಮ್ ಜಿ (Azim Premji) ಕಂಪನಿಗಳ ವಿರುದ್ಧ ಕಾರ್ಪೊರೇಟ್ ವ್ಯವಹಾರಗಳ ಇಲಾಖೆ ಮೂಲಕ ತನಿಖೆಗೆ ಕೋರಿದ್ದರು. ಇದೇ ಅರ್ಜಿದಾರರ ಮೂರು ರಿಟ್ ಅರ್ಜಿಗಳು ಈ ಹಿಂದೆಯೂ ವಜಾಗೊಂಡಿದ್ದವು. ಒಂದೇ ವಿಚಾರಕ್ಕೆ ಪದೇಪದೆ ರಿಟ್ ಅರ್ಜಿ ಸಲ್ಲಿಸುತ್ತಿದ್ದ ಹಿನ್ನೆಲೆಯಲ್ಲಿ ರೂ. 10 ಲಕ್ಷ ದಂಡ ವಿಧಿಸಿ ನ್ಯಾಯಮೂರ್ತಿ ಪಿ ಎಸ್​ ದಿನೇಶ್ ಕುಮಾರ್ ಆದೇಶ ನೀಡಿದ್ದಾರೆ.