ಮೈಸೂರು, ಜೂನ್ 29: ವಾಲ್ಮೀಕಿ ಅಭಿವೃದ್ಧಿ ನಿಗಮದಂತೆಯೇ ಬಿಬಿಎಂಪಿಯಲ್ಲೂ ಬಹುಕೋಟಿ ಹಗರಣ ಪತ್ತೆ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸದ್ಯ ಸಿಎಂ ಸಿದ್ದರಾಮಯ್ಯ (Siddaramaiah) ತವರು ಜಿಲ್ಲೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವೊಂದು (Corruption) ಪತ್ತೆ ಆಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಹಳೇ ಫಲಾನುಭವಿಗಳಿಗೂ ಹೊಸ ನಿಯಮದಡಿ ಸೈಟ್ ನೀಡಿರುವ ಮೂಡಾ, ಮೂಲ ಫಲಾನುಭವಿಗಳ ಹೆಸರಿನಲ್ಲಿ ಪ್ರಭಾವಿಗಳಿಗೆ ಸೈಟ್ ಕೊಟ್ಟು ವಂಚನೆ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಕುರಿತಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಘು ಕೌಟಿಲ್ಯ, ಅವ್ಯವಹಾರದ ತನಿಖೆ ನ್ಯಾಯಯುತವಾಗಿ ನಡೆಯಲು ಪ್ರಭಾವಿಗಳು ಬಿಡುತ್ತಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ರೀತಿಯೇ ಬಿಬಿಎಂಪಿಯಲ್ಲೂ ಬಹುಕೋಟಿ ಹಗರಣ; 9 ಅಧಿಕಾರಿಗಳ ವಿರುದ್ಧ ದೂರು ದಾಖಲು
ಸಿಎಂ ಸಿದ್ದರಾಮಯ್ಯ ಅವರು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ರಾಜೀನಾಮೆ ಪಡೆಯಲಿ. ಮೂಡಾದಲ್ಲಿ ಆಗಿರುವ ಅವ್ಯವಹಾರ ಬಯಲಿಗೆಳೆಯಲು ಎಸ್ಐಟಿಗೆ ನೀಡಬೇಕು. ಮೂಡಾ ಆಸ್ತಿ, ನಿವೇಶನ ಉಳಿಯಬೇಕಾದರೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಜಮೀನು ಕಬಳಿಸಲು ನಕಲಿ ದಾಖಲೆ ಸೃಷ್ಟಿ: ಮರಣ ಪತ್ರ ನೀಡಿದ್ದ ಶಿರಸ್ತೇದಾರ್ ಅಮಾನತು
ಹಲವು ವರ್ಷಗಳಿಂದ ಮೈಸೂರಿನ ಜನತೆಗೆ ನಿವೇಶನ ಹಂಚಿಕೆ ಮಾಡಿಲ್ಲ. ಒಂದೇ ಒಂದು ನಿವೇಶನ ಹಂಚಿಕೆ ಮಾಡಲಾಗದ ಮೂಡಾ ಯಾಕೆ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ: ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ಸ್ವಜಿಲ್ಲೆಯ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಅಧಿಕಾರಿಗಳ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ಜಿಲ್ಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಕನಕಗಿರಿ ಮತ್ತು ಆನೆಗೊಂದಿಯಲ್ಲಿ, ಎರಡು ಕಡೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಿಂದ ಉತ್ಸವ ಮಾಡಲಾಗಿತ್ತು. ಆದ್ರೆ ಉತ್ಸವದ ಕಾರ್ಯಕ್ರಮಕ್ಕೆ ಕಲಾವಿದರ ಆಯ್ಕೆಯಲ್ಲಿ ಅಧಿಕಾರಿಗಳು ಕಮಿಷನ್ ವ್ಯವಹಾರ ಮಾಡಿದ್ದಾರೆ ಅಂತ ಕೆಲ ಕಲಾವಿದರು ಆರೋಪಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:50 pm, Sat, 29 June 24