‘ಪೊಲೀಸ್​ ಇಲಾಖೆ ನೇಮಕಾತಿಯಲ್ಲಿ ಇನ್ಮುಂದೆ ಶೇ.2ರಷ್ಟು ಸ್ಪೋರ್ಟ್ಸ್​ ಕೋಟಾದಡಿ ಅವಕಾಶ..‘

ಸ್ಪೋರ್ಟ್ಸ್​ ಕೋಟಾದಲ್ಲಿ ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದಲೂ ಇತ್ತು. ಈಗ ಶೇ.2ರಷ್ಟು ನೇಮಕಾತಿಯನ್ನು ಸ್ಪೋರ್ಟ್ಸ್​ ಕೋಟಾದಡಿ ಮಾಡುವಂತೆ ಕಾನೂನು ತರಲಾಗಿದೆ.

‘ಪೊಲೀಸ್​ ಇಲಾಖೆ ನೇಮಕಾತಿಯಲ್ಲಿ ಇನ್ಮುಂದೆ ಶೇ.2ರಷ್ಟು ಸ್ಪೋರ್ಟ್ಸ್​ ಕೋಟಾದಡಿ ಅವಕಾಶ..‘
ಡಿಜಿ ಐಜಿಪಿ ಪ್ರವೀಣ್ ಸೂದ್
Follow us
TV9 Web
| Updated By: Lakshmi Hegde

Updated on:Aug 14, 2021 | 9:59 AM

ನೂತನ ಗೃಹ ಸಚಿವರ ಕೈಯಲ್ಲಿರುವ ಗೃಹ ಸಚಿವಾಲಯ ಪೊಲೀಸ್ ಇಲಾಖೆಯಲ್ಲೊಂದು ಮಹತ್ವದ ಬದಲಾವಣೆ ಮಾಡಿದೆ. ಹಲವು ವರ್ಷಗಳ ಬೇಡಿಕೆಯೊಂದನ್ನು ಈಡೇರಿಸಿದೆ. ಅದರ ಅನ್ವಯ ಇನ್ನುಮುಂದೆ ಕ್ರೀಡಾ ಕೋಟಾದಲ್ಲೂ ಪೊಲೀಸ್​ ಇಲಾಖೆಯಲ್ಲಿ ನೇಮಕಾತಿ ನಡೆಯಲಿದೆ. ಈ ಬಗ್ಗೆ ಬೆಂಗಳೂರಿನ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಮಾಹಿತಿ ನೀಡಿದ್ದಾರೆ.

ಸ್ಪೋರ್ಟ್ಸ್​ ಕೋಟಾದಲ್ಲಿ ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದಲೂ ಇತ್ತು. ಈಗ ಶೇ.2ರಷ್ಟು ನೇಮಕಾತಿಯನ್ನು ಸ್ಪೋರ್ಟ್ಸ್​ ಕೋಟಾದಡಿ ಮಾಡುವಂತೆ ಕಾನೂನು ತರಲಾಗಿದೆ. ಇದು ಗೃಹ ಸಚಿವಾಲಯದ ಮಹತ್ವದ ನಿರ್ಧಾರವಾಗಿದೆ. ಹೊಸ ಕಾನೂನು ಸಂಬಂಧ ಇದೇ ವಾರದಲ್ಲೇ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇಲಾಖೆಗೆ ಉನ್ನತಮಟ್ಟದ ವಿದ್ಯಾವಂತರು ಆಗಮಿಸುತ್ತಿದ್ದಾರೆ. ಕೆಎಸ್​ಆರ್​ಪಿ, ಸಿಎಆರ್​ ಮತ್ತು ಡಿಎಆರ್​ ಸಿಬ್ಬಂದಿಗೂ ಅನ್ವಯ ಆಗಲಿದ್ದು, ಕನಿಷ್ಠ 5 ವರ್ಷ ಸೇವೆ ಸಲ್ಲಿಸುವವರಿಗೆ ಅವಕಾಶ ಸಿಗಲಿದೆ. ಶೇ.10 ಮೀಸಲಾತಿಯಲ್ಲಿ, ಶೇ 2ರಷ್ಟು ಸ್ಪೋರ್ಟ್ಸ್​ ಕೋಟಾ ಆಗಿರಲಿದೆ.

ಇದನ್ನೂ ಓದಿ: ಪೊಲೀಸರ ಕೈ ಬಲಪಡಿಸುವ ಬದ್ಧತೆ ಸರ್ಕಾರಕ್ಕಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ

Published On - 9:59 am, Sat, 14 August 21