ಚಾಮರಾಜಗರ: ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಸುಮಾರು 36 ಜನ ಸಾವನ್ನಪ್ಪಿದ್ದರು. ಈ ದುರಂತ ಇಡೀ ಕರ್ನಾಟಕ ಜನರ ಮೈ ನಡುಕ ಹೆಚ್ಚಿಸಿತ್ತು. ಮೃತರನ್ನು ಕಳೆದುಕೊಂಡ ಕುಟುಂಬಸ್ಥರು ಮುಂದಿನ ಜೀವನದ ಬಗ್ಗೆ ಚಿಂತೆ ಮಾಡುತ್ತ ಕಾಲ ಕಳೆಯುತ್ತಿದ್ದಾರೆ. ಆದರೆ ಸಾಲು ಸಾಲು ಹೆಣ ಬಿದ್ದರೂ ಚಾಮರಾಜನಗರ ಜಿಲ್ಲಾಡಳಿತ ಇನ್ನೂ ಬುದ್ಧಿ ಕಲಿತಿಲ್ಲ. ಕೊರೊನಾ ವಿಚಾರದಲ್ಲಿ ಬೇಜವಾಬ್ದಾರಿಯಾಗಿ ವರ್ತಿಸುತ್ತಿದೆ. ಜಿಲ್ಲೆಯ ಹನೂರು ಬಳಿ ಇರುವ ಕೊವಿಡ್ ಕೇರ್ ಸೆಂಟರ್ ಅವ್ಯವಸ್ಥೆಯ ಆಗರವಾಗಿದೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ಕೊವಿಡ್ ಕೇರ್ ಸೆಂಟರ್ನಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 40 ಕ್ಕೂ ಹೆಚ್ಚು ಸೋಂಕಿತರಿದ್ದಾರೆ. ಆದರೆ ಸ್ನಾನ ಮಾಡಲು, ಶೌಚಾಲಯಕ್ಕೆ ಹೋಗಲು ನೀರಿಲ್ಲದೆ ಸೋಂಕಿತರು ಪರದಾಡುತ್ತಿದ್ದಾರೆ. ಈ ಸಂದಿಗ್ಧ ಕಾಲದಲ್ಲಿ ಎಷ್ಟು ಶುಚಿಯಾಗಿದ್ದರು ಸಾಲದು. ಆದರೆ ಕೊವಿಡ್ ಕೇರ್ ಸೆಂಟರ್ ಸ್ವಚ್ಛತೆ ಇಲ್ಲದೆ ಕಸದ ರಾಶಿಯಿಂದ ಕೂಡಿದೆ. ಈ ಬಗ್ಗೆ ಜಿಲ್ಲಾಡಳಿತ ಯಾವುದೇ ರೀತಿ ಗಮನಹರಿಸಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.
ಯಾರೂ ಸಹ ಆರೋಗ್ಯ ವಿಚಾರಿಸಲ್ಲ. ಬಾಯಿ, ಮೂಗಿನಲ್ಲಿ ಗಾಯವಾದರೂ ಔಷಧಿ ನೀಡಲ್ಲ. ಮಾತ್ರೆ ಕೇಳಿದರೂ ಸಿಬ್ಬಂದಿ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಸೋಂಕಿತರು ಆರೋಪಿಸುತ್ತಿದ್ದಾರೆ.
ಕೊವಿಡ್ ನಿಯಮ ಉಲ್ಲಂಘನೆ
ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುವ ಖಾಸಗಿ ಬಸ್ಗಳಲ್ಲಿ ಕೊವಿಡ್ ನಿಯಮ ಉಲ್ಲಂಘನೆಯಾಗಿದೆ. ಬಸ್ನಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಜನ ಪ್ರಯಾಣಿಸುತ್ತಿದ್ದಾರೆ. ಶೇಕಡಾ 50ಕ್ಕಿಂತ ಹೆಚ್ಚು ಜನರು ಬಸ್ಗಳಲ್ಲಿ ಪ್ರಯಾಣಿಸಿ ಕೊರೊನಾ ನಿಯಮವನ್ನು ಗಾಳಿಗೆ ತೂರಿದ್ದಾರೆ.
ಇದನ್ನೂ ಓದಿ
Coronavirus cases in India: ದೇಶದಲ್ಲಿ 46,148 ಹೊಸ ಕೊವಿಡ್ ಪ್ರಕರಣ ಪತ್ತೆ, 979 ಮಂದಿ ಸಾವು
(Chamarajanagar Covid Care Centre is mess and district administration is not concerned about mess)