ಶಿವಮೊಗ್ಗ: ಟೋಕನ್ ಕೊಟ್ಟು ಲಸಿಕೆ ನೀಡದ ಹಿನ್ನೆಲೆ ನೂಕುನುಗ್ಗಲು ಗಲಾಟೆ, ಇಂದಿನಿಂದ ಜೋಗ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ

Jog Fallas: ಇಂದಿನಿಂದ ಜೋಗ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ. ಪೂರ್ವನಿಗದಿಯಂತೆ ಟೋಕನ್ ಕೊಟ್ಟು ಲಸಿಕೆ ನೀಡದ ಹಿನ್ನೆಲೆ ಲಸಿಕಾ ಕೇಂದ್ರದ ಬಳಿ ಜನರ ನೂಕುನುಗ್ಗಲು, ಗಲಾಟೆಯಾಗಿದೆ. ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ಲಸಿಕಾ ಕೇಂದ್ರದ ಬಳಿ ಈ ಪ್ರಸಂಗ ನಡೆದಿದ್ದು, ಕೊವಿಡ್ ಲಸಿಕೆ ಇಲ್ಲ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ.

ಶಿವಮೊಗ್ಗ: ಟೋಕನ್ ಕೊಟ್ಟು ಲಸಿಕೆ ನೀಡದ ಹಿನ್ನೆಲೆ ನೂಕುನುಗ್ಗಲು ಗಲಾಟೆ, ಇಂದಿನಿಂದ ಜೋಗ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ
ಇಂದಿನಿಂದ ಜೋಗ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ
Follow us
| Updated By: ಸಾಧು ಶ್ರೀನಾಥ್​

Updated on: Jun 28, 2021 | 12:24 PM

ಶಿವಮೊಗ್ಗ: ಪೂರ್ವನಿಗದಿಯಂತೆ ಟೋಕನ್ ಕೊಟ್ಟು ಲಸಿಕೆ ನೀಡದ ಹಿನ್ನೆಲೆ ಲಸಿಕಾ ಕೇಂದ್ರದ ಬಳಿ ಜನರ ನೂಕುನುಗ್ಗಲು, ಗಲಾಟೆಯಾಗಿದೆ. ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ಲಸಿಕಾ ಕೇಂದ್ರದ ಬಳಿ ಈ ಪ್ರಸಂಗ ನಡೆದಿದ್ದು, ಕೊವಿಡ್ ಲಸಿಕೆ ಇಲ್ಲ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಇದರಿಂದ ಬೆಳಿಗ್ಗೆಯಿಂದ ಸರದಿಯಲ್ಲಿ ನಿಂತರು ಲಸಿಕೆ ಸಿಗದ ಕಾರಣ ಜನ ಕೆರಳಿದ್ದಾರೆ.

ನಗರದಲ್ಲಿ ಲಸಿಕೆಗಾಗಿ ಜನರ ನೂಕುನುಗ್ಗಲು, ಗಲಾಟೆಯುಂಟಾಗಿದೆ. ಲಸಿಕೆ ಕೇಂದ್ರದಲ್ಲಿ ಲಸಿಕೆ ಸ್ಟಾಕ್ ಇಲ್ಲ ಎನ್ನುವ ಅಧಿಕಾರಿಗಳ ಉತ್ತರ ಕೇಳಿದ ಜನ, ಜನಸಾಮಾನ್ಯರಿಗೆ ಸುಸೂತ್ರವಾಗಿ ಲಸಿಕೆ ವಿತರಿಸಲು ಆರೋಗ್ಯ ಇಲಾಖೆ ವಿಫಲಗೊಂಡಿದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಲಸಿಕೆ ವಿತರಣೆ ಬಗ್ಗೆ ಶಿವಮೊಗ್ಗದಲ್ಲಿ ಸಂಸದ ಬಿ ವೈ ರಾಘವೇಂದ್ರ ಮಾತನಾಡಿದ್ದು, 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಈಗಾಗಲೇ ವಿತರಣೆಯಾಗಿದೆ. ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಆರಂಭಗೊಂಡಿದೆ. ಸರಕಾರದ ಮೇಲೆ ಹೆಚ್ಚು ಒತ್ತಡ ಆಗುತ್ತದೆ ಎಂದು ಖಾಸಗಿ ಸಂಸ್ಥೆಗಳು ಸಹ ಲಸಿಕೆ ವಿತರಣೆಗೆ ಸಹಕಾರ ನೀಡುತ್ತಿವೆ ಎಂದಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜನಸಂಖ್ಯೆ 18 ಲಕ್ಷ ಇದೆ. ಕೊವಿಡ್ ವ್ಯಾಕ್ಸಿನ್ ನೀಡಿಕೆಗೆ 13 ಲಕ್ಷ ಗುರಿಯಿದೆ. 18 ರಿಂದ 44 ವಯೋಮಿತಿಯ 8.42 ಲಕ್ಷ ಜನಸಂಖ್ಯೆಯಿದ್ದರೆ 49-55 ವಯೋಮಿತಿ 2.83 ಲಲಕ್ಷ ಜನಸಂಖ್ಯೆ ಇದೆ. 60 ಮೇಲ್ಪಟ್ಟ 1.58 ಲಕ್ಷ ಜನರಿದ್ದಾರೆ. ಮೊದಲ ಡೋಸ್ 4.48 ಲಕ್ಷ್ಮ ಜನರು ಲಸಿಕೆ ಪಡೆದಿದ್ದಾರೆ. 88,146 ಸಾವಿರ ಜನರು ಎರಡನೇ ಡೋಸ್ ಪಡೆದಿದ್ದಾರೆ.

ಎಂಪಿಎಲ್, ಪಿಇಎಸ್, ಸೇವಾ ಭಾರತಿ ಸಂಸ್ಥೆಯೊಂದಿಗೆ ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ಮಾಡುತ್ತಾರೆ. ಜಿಲ್ಲೆಯಲ್ಲಿ ಸರಕಾರಿ ಅನುದಾನಿತ ಕಾಲೇಜ್, ಬಿಎಡ್ ಕಾಲೇಜ್, ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಲಸಿಕೆ ನೀಡಲಾಗುವುದು. ಜಿಲ್ಲೆಯಲ್ಲಿ 26,160 ವಿದ್ಯಾರ್ಥಿಗಳಿದ್ದಾರೆ. 16 ಸಾವಿರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿದ್ದಾರೆ. ಗ್ರಾಮೀಣ ಪ್ರದೇಶದ ಕಾಲೇಜ್ ಗಳಲ್ಲಿ ಲಸಿಕೆ ವಿತರಣೆಯಾಗುತ್ತಿದೆ. 16 ರಿಂದ 17 ಸಾವಿರದಷ್ಟು ಲಸಿಕೆ ಉಚಿತವಾಗಿ ಗ್ರಾಮೀಣ ಪ್ರದೇಶದಲ್ಲಿ ವಿತರಣೆಯಾಗಿದೆ. ಪಿಇಎಸ್ ಮತ್ತು ಸೇವಾ ಭಾರತಿ ಸಂಸ್ಥೆಯಿಂದ 45 ಸಾವಿರ ಆಹಾರದ ಕಿಟ್ ವಿತರಣೆಯಾಗಿದೆ.

ಇಂದಿನಿಂದ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ:

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತ ಸಾರ್ವಜನಿಕರಿಗೆ ತೆರೆಯಲಾಗಿದೆ. ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಪ್ರವಾಸಿಗರ ಭೇಟಿಗೆ ಅವಕಾಶ ನೀಡಲಾಗಿದೆ. ಕೊವಿಡ್ ಹಿನ್ನೆಲೆಯಲ್ಲಿ 2 ತಿಂಗಳ ಕಾಲ ಭೇಟಿಯನ್ನ ನಿಷೇಧಿಸಲಾಗಿತ್ತು. ಜೋಗ ಜಲಪಾತ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಕೋವಿಡ್ ನಿಯಮ ಪಾಲನೆಗೆ ಸೂಚನೆ ನೀಡಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

(World famous Shivamogga Jog Fallas reopened from june 28 after covid lockdown for 2 months)