ಗ್ರೀನ್ ಜೋನ್ ಹಾವೇರಿಯಲ್ಲಿ ಮೊದಲ ಸೋಂಕು, ರಾಜ್ಯದ ಅಪ್ಡೇಟ್ಸ್​ ಇಲ್ಲಿದೆ

ಬೆಂಗಳೂರು: ಒಂದೂ ಕೊರೊನಾ ಕೇಸ್ ಇಲ್ಲದೆ ಗ್ರೀನ್ ಜೋನ್ ಜಿಲ್ಲೆಯಾಗಿದ್ದ ಹಾವೇರಿಯಲ್ಲಿ ಇಂದು ಮೊದಲ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮಾಹಿತಿ ನೀಡಿದ್ದಾರೆ. ಏಪ್ರಿಲ್ 29ರಂದು ಮೂವರು ಮುಂಬೈನಿಂದ ಹಾವೇರಿ ಜಿಲ್ಲೆ ಸವಣೂರಿಗೆ ಬಂದಿದ್ದಾರೆ. ಮುಂಬೈನಿಂದ ಬಂದು ಮನೆಯಲ್ಲಿಯೇ ಇದ್ದರು. ಈ ಪೈಕಿ 32 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಇನ್ನಿಬ್ಬರ ವೈದ್ಯಕೀಯ ವರದಿ ಬರಬೇಕಿದೆ. ರಾಜ್ಯದಲ್ಲಿ ಇಂದು 28 ಜನರಿಗೆ ಮಹಾಮಾರಿ […]

ಗ್ರೀನ್ ಜೋನ್ ಹಾವೇರಿಯಲ್ಲಿ ಮೊದಲ ಸೋಂಕು,  ರಾಜ್ಯದ ಅಪ್ಡೇಟ್ಸ್​ ಇಲ್ಲಿದೆ
ಸಾಧು ಶ್ರೀನಾಥ್​

Updated on: May 04, 2020 | 12:54 PM

ಬೆಂಗಳೂರು: ಒಂದೂ ಕೊರೊನಾ ಕೇಸ್ ಇಲ್ಲದೆ ಗ್ರೀನ್ ಜೋನ್ ಜಿಲ್ಲೆಯಾಗಿದ್ದ ಹಾವೇರಿಯಲ್ಲಿ ಇಂದು ಮೊದಲ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮಾಹಿತಿ ನೀಡಿದ್ದಾರೆ.

ಏಪ್ರಿಲ್ 29ರಂದು ಮೂವರು ಮುಂಬೈನಿಂದ ಹಾವೇರಿ ಜಿಲ್ಲೆ ಸವಣೂರಿಗೆ ಬಂದಿದ್ದಾರೆ. ಮುಂಬೈನಿಂದ ಬಂದು ಮನೆಯಲ್ಲಿಯೇ ಇದ್ದರು. ಈ ಪೈಕಿ 32 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಇನ್ನಿಬ್ಬರ ವೈದ್ಯಕೀಯ ವರದಿ ಬರಬೇಕಿದೆ.

ರಾಜ್ಯದಲ್ಲಿ ಇಂದು 28 ಜನರಿಗೆ ಮಹಾಮಾರಿ ಕೊರೊನಾ ಸೋಂಕು ತಗುಲಿದ್ದು, ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 642ಕ್ಕೆ ಏರಿಕೆಯಾಗಿದೆ. ಮಂಡ್ಯ 2, ಕಲಬುರಗಿ 2, ಹಾವೇರಿ 1, ವಿಜಯಪುರ 1, ಚಿಕ್ಕಬಳ್ಳಾಪುರ 1, ದಾವಣಗೆರೆಯಲ್ಲಿ 21 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ದಾವಣಗೆರೆಯಲ್ಲಿ 21 ಕೇಸ್​ ಪತ್ತೆಯಾಗಿರುವ ಬಗ್ಗೆ ಭಾನುವಾರವೇ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ದರು.

ಕರ್ನಾಟಕದಲ್ಲಿ 642 ಕೊರೊನಾ ಸೋಂಕಿತರ ಪೈಕಿ 304 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಅಗಿದ್ದಾರೆ. 642 ಸೋಂಕಿತರ ಪೈಕಿ ಈವರೆಗೆ 26 ಮಂದಿ ಮೃತಪಟ್ಟಿದ್ದು, 312 ಜನರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Published On - 12:29 pm, Mon, 4 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us