AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಮತ್ತೊಂದು ಅದ್ವಾನ ಬಯಲಿಗೆ: ಮೂರು ತಿಂಗಳಲ್ಲಿ ಬರೋಬ್ಬರಿ 41 ಶಿಶುಗಳ ಸಾವು

ಎರಡು ರಾಜ್ಯಗಳ ಗಡಿ ಹಂಚಿಕೊಂಡಿರುವ ಬೆಳಗಾವಿ ಜಿಲ್ಲಾಸ್ಪತ್ರೆ ಬಿಮ್ಸ್ ಎಂದೇ ಕರೆಯಲ್ಪಡುವ ಈ ಆಸ್ಪತ್ರೆಯಲ್ಲಿ ಇದೀಗ ಮತ್ತೊಂದು ಅದ್ವಾನ ನಡೆದು ಹೋಗಿದೆ. ನಿತ್ಯ ಸಾವಿರಾರು ರೋಗಿಗಳು ಬಂದು ಹೋಗುವ ಈ ಆಸ್ಪತ್ರೆಯಲ್ಲಿ ಕಂದಮ್ಮಗಳು ಸಾವನ್ನಪ್ಪುತ್ತಿರುವ ವಿಷಯ ದೊಡ್ಡ ಮಟ್ಟದ ಚರ್ಚೆ ಹುಟ್ಟು ಹಾಕಿದೆ. 3 ತಿಂಗಳಲ್ಲಿ 41 ಶಿಶುಗಳು ಮೃತಪಟ್ಟಿದ್ದು ಸದ್ಯ ಜನರಲ್ಲಿ ಆತಂಕ ಮೂಡಿಸಿದೆ.

ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಮತ್ತೊಂದು ಅದ್ವಾನ ಬಯಲಿಗೆ: ಮೂರು ತಿಂಗಳಲ್ಲಿ ಬರೋಬ್ಬರಿ 41 ಶಿಶುಗಳ ಸಾವು
ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಮತ್ತೊಂದು ಅದ್ವಾನ ಬಯಲಿಗೆ: ಮೂರು ತಿಂಗಳಲ್ಲಿ ಬರೋಬ್ಬರಿ 41 ಶಿಶುಗಳ ಸಾವು
Sahadev Mane
| Edited By: |

Updated on: Oct 26, 2024 | 4:16 PM

Share

ಬೆಳಗಾವಿ, ಅಕ್ಟೋಬರ್​ 26: ಕಳೆದ 3 ತಿಂಗಳಲ್ಲಿ ನಗರದ ಬಿಮ್ಸ್​ ಆಸ್ಪತ್ರೆಯಲ್ಲಿ (BIMS Hospital) 41 ಶಿಶುಗಳು ಸಾವನ್ನಪ್ಪಿರುವಂತಹ ಆತಂಕಕಾರಿ ವಿಚಾರ ಬಯಲಾಗಿದೆ. ಆದರೆ ಶಿಶುಗಳ ಸಾವನ್ನಪ್ಪುತ್ತಿದ್ದರೂ ಬಿಮ್ಸ್ ಆಡಳಿತ ಮಂಡಳಿ ತಲೆಕೆಡಿಸಿಕೊಂಡಿಲ್ಲ. ಮಕ್ಕಳ ಸಾವಿನ ಬಗ್ಗೆ ಕಾರಣ ಹೇಳಿ ವೈದ್ಯರು ನುಣುಚಿಕೊಳ್ಳುತ್ತಿದ್ದಾರೆ.

ಹೌದು.. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ನಿತ್ಯ ಸುಮಾರು ಇಪ್ಪತ್ತರಿಂದ ಮೂವತ್ತು ಹೆರಿಗೆ ಆಗುತ್ತವೆ. ತಿಂಗಳಿಗೆ 800 ವರೆಗೂ ಇಲ್ಲಿ ಹೆರಿಗೆ ಆಗುತ್ತಿದ್ದು, ಆದರೆ ಮೂರು ತಿಂಗಳಲ್ಲಿ ಬರೋಬ್ಬರಿ 41 ಶಿಶುಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಖುದ್ದು ಸಾವಿನ ಕುರಿತು ಆಸ್ಪತ್ರೆಯ ಆಡಳಿತ ಮಂಡಿಳಿಯವರೇ ಒಪ್ಪಿಕೊಂಡಿದ್ದು ಹೀಗಾಗಿ ಜನರಿಗೆ ಸಾಕಷ್ಟು ಆತಂಕ ಹುಟ್ಟುವಂತೆ ಮಾಡಿದೆ.

3 ತಿಂಗಳಲ್ಲಿ 41 ಶಿಶುಗಳ ಸಾವು

ಬಿಮ್ಸ್ ಆಸ್ಪತ್ರೆಯಲ್ಲಿ ತಿಂಗಳುವಾರು ಎಷ್ಟು ಶಿಶುಗಳು ಸಾವನ್ನಪ್ಪಿ ಎಂದು ನೋಡುವುದಾದರೆ ಆಗಷ್ಟ್ ತಿಂಗಳಲ್ಲಿ 12, ಸೆಪ್ಟಂಬರ್​ನಲ್ಲಿ 18 ಮತ್ತು ಅಕ್ಟೋಬರ್​ನಲ್ಲಿ 11 ಶಿಶುಗಳು ಮೃತಪಟ್ಟಿವೆ. ಹಾಗಾದರೆ ಮೂರು ತಿಂಗಳಲ್ಲಿ ಹೆಚ್ಚು ಶಿಶುಗಳ ಮರಣಕ್ಕೆ ಕಾರಣವೇನು ಅಂತ ನೋಡಿದಾಗ ಆಸ್ಪತ್ರೆಯಲ್ಲಿರುವ ಏರ್ ಕಂಪ್ರೆಸರ್ ಕೆಟ್ಟು ಹೋಗಿದ್ದು ಅನ್ನೋ ವಿಚಾರ.

ಮಕ್ಕಳು ಮೃತಪಟ್ಟಿರುವುದು ನಿಜವೆಂದ ನಿರ್ದೇಶಕ ಡಾ. ಅಶೋಕ ಶೆಟ್ಟಿ

ಆಸ್ಪತ್ರೆಯಲ್ಲಿ ಎರಡು ಏರ್ ಕಂಪ್ರೆಸರ್ ಇದ್ದು ಎರಡರ ಪೈಕಿ ಒಂದು ಮೂರು ತಿಂಗಳ ಹಿಂದೆ ಕೆಟ್ಟು ಹೋಗಿದ್ದು ಅದನ್ನ ಸರಿ ಕೂಡ ಮಾಡಿಲ್ಲ. ಇದರಿಂದ ಆಕ್ಸಿಜನ್ ಸರಿಯಾಗಿ ಸಿಗದೇ ಹೆಚ್ಚು ಕಂದಮ್ಮಗಳು ಸಾವಾಗಿರುವ ಶಂಕೆ ಕೂಡ ವ್ಯಕ್ತವಾಗುತ್ತಿದೆ. ಈ ವಿಚಾರವನ್ನ ಬಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ಅಶೋಕ ಶೆಟ್ಟಿ ಅವರನ್ನ ಕೇಳಿದರೆ ಮಕ್ಕಳು ಮೃತಪಟ್ಟಿರುವುದು ನಿಜ. ಅದರ ಬಗ್ಗೆ ತನಿಖೆ ಮಾಡುತ್ತೇವೆ. ಒಂದು ಏರ್ ಕಂಪ್ರೆಸರ್ ಕೆಟ್ಟಿದ್ದು ಅದು ಪದೇ ಪದೇ ಹಾಳಾಗ್ತಿದ್ದು ಹೀಗಾಗಿ ಹೊಸದೊಂದು ಮಷಿನ್ ತೆಗೆದುಕೊಳ್ಳಲು ಹೊಸದೊಂದು ಟೆಂಡರ್ ಕರೆದಿದ್ದಾಗಿ ಹೇಳಿದ್ದಾರೆ. ಅವಧಿಪೂರ್ವ ಪ್ರಸವ, ಶಿಶುಗಳ ತೂಕ ಕಡಿಮೆ ಸೇರಿ ಹಲವು ಕಾರಣಗಳಿಂದ ಮಕ್ಕಳು ಮೃತಪಟ್ಟಿದ್ದು ಅಂತಾ ವೈದ್ಯರು ಸಬೂಬು ಕೂಡ ಹೇಳಿದ್ದಾರೆ.

ಇದನ್ನೂ ಓದಿ: ಹುಟ್ಟಿದ ಒಂದೇ ದಿನಕ್ಕೆ ನವಜಾತ ಶಿಶು ಮಾರಾಟ; ತಾಯಿ ಸೇರಿ ಐವರ ಬಂಧನ

ಬಿಮ್ಸ್ ಆಸ್ಪತ್ರೆಯಲ್ಲಿ ಶಿಶುಗಳು ಏರ್ ಕಂಪ್ರೆಸರ್ ಇಲ್ಲದೇ ಮೃತಪಟ್ಟಿದ್ದಾವಾ ಅನ್ನೋ ಸಂಶಯ ನಡುವೆ ಬೇರೆ ಬೇರೆ ಕಾರಣಗಳಿಂದ ಸಾವನ್ನಪ್ಪಿವೆ ಅನ್ನೋದನ್ನ ವೈದ್ಯರು ಹೇಳ್ತಿದ್ದಾರೆ. ಸದ್ಯ ಯಾವ ಕಾರಣಕ್ಕೆ ಇಷ್ಟೊಂದು ಹೆಚ್ಚಿನ ಪ್ರಮಾಣದಲ್ಲಿ ಶಿಶುಗಳು ಸಾವನ್ನಪ್ಪಿವೆ ಅನ್ನೋದು ತನಿಖೆ ಆಗಬೇಕಿದೆ. ವೈದ್ಯರನ್ನ ನಂಬಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ದೇವರಾಗಬೇಕಿದ್ದ ಕೆಲವರ ನಿರ್ಲಕ್ಷ್ಯ ಹಲವು ಸಾವುಗಳಿಗೆ ಕಾರಣವಾಯ್ತಾ ಅನ್ನೋ ಅನುಮಾನ ಇದ್ದು, ಈ ಬಗ್ಗೆ ತನಿಖೆಯಿಂದಲೇ ಉತ್ತರ ಸಿಗಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.