ಹುಟ್ಟಿದ ಒಂದೇ ದಿನಕ್ಕೆ ನವಜಾತ ಶಿಶು ಮಾರಾಟ; ತಾಯಿ ಸೇರಿ ಐವರ ಬಂಧನ
ಸಕಲೇಶಪುರದ ಬ್ಯಾಕರಹಳ್ಳಿಯಲ್ಲಿ ಒಂದು ದಿನದ ಗುಂಡು ಮಗುವನ್ನ ಮಾರಾಟ ಮಾಡಿದ ಆರೋಪದಡಿ ಐವರನ್ನ ಬಂಧಿಸಲಾಗಿದೆ. ತಮಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ ಅಂತಾ ಮಗುವನ್ನು ಮಾರಾಟ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಬಳಿಕ ದೂರು ದಾಖಲಾಗಿದ್ದು ಈಗ ಐವರನ್ನು ಬಂಧಿಸಲಾಗಿದೆ.
ಹಾಸನ, ಜ.04: ರಾಜ್ಯದಲ್ಲಿ ಶಿಶು ಮಾರಾಟದ ಜಾಲ ಎಗ್ಗಿಲ್ಲದೆ ನಡೀತಿದೆ ಅನ್ನೋದಕ್ಕೆ ಹಾಸನದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಹುಟ್ಟಿದ ಒಂದೇ ದಿನಕ್ಕೆ ನವಜಾತ ಶಿಶು (New Born Baby) ಮಾರಾಟ ಮಾಡಲಾಗಿರುವ ಘಟನೆ ಹಾಸನದಲ್ಲಿ (Hassan) ನಡೆದಿದೆ. ಈ ಪ್ರಕರಣ ಸಂಬಂಧ ಐವರನ್ನ ಬಂಧಿಸಲಾಗಿದೆ. ಸಕಲೇಶಪುರದ ಬ್ಯಾಕರಹಳ್ಳಿಯಲ್ಲಿ ಒಂದು ದಿನದ ಗುಂಡು ಮಗುವನ್ನ ಮಾರಾಟ ಮಾಡಿದ ಆರೋಪದಡಿ ಐವರನ್ನ ಬಂಧಿಸಲಾಗಿದೆ. ತಾಯಿ ಗಿರಿಜಾ, ಆಶಾ ಕಾರ್ಯಕರ್ತೆ ಸುಮಿತ್ರಾ, ಮಗು ಖರೀದಿಸಿದ ಮಹಿಳೆ ಉಷಾ, ಶ್ರೀಕಾಂತ್, ಸುಬ್ರಮಣ್ಯ ಅನ್ನೋರನ್ನ ಬಂಧಿಸಲಾಗಿದೆ.
2023ರ ನವೆಂಬರ್ 15ರಂದು ಗಂಡು ಮಗುವಿಗೆ ಗಿರಿಜಾ ಜನ್ಮ ನೀಡಿದ್ರು. ತಮಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ ಅಂತಾ ನವೆಂಬರ್ 16ರಂದು ಚಿಕ್ಕಮಗಳೂರು ಮೂಲದ ಉಷಾಗೆ ಮಾರಾಟ ಮಾಡಿದ್ರು. ಮಗು ಮಾರಾಟದ ಬಗ್ಗೆ ಮಕ್ಕಳ ರಕ್ಷಣ ಘಟಕದ ಅಧಿಕಾರಿ ಪ್ರಕರಣವನ್ನ ಬಯಲಿಗೆಳಿದಿದ್ದಾರೆ. ಕಾನೂನು ಉಲ್ಲಂಘನೆಗೆ ಆಶಾ ಕಾರ್ಯಕರ್ತೆ ಬೆಂಬಲ ನೀಡಿರೋದು ಗೊತ್ತಾಗಿದೆ. ಮಾಹಿತಿ ಸಂಗ್ರಹಿಸಿ ಮಕ್ಕಳ ಅಧಿಕಾರಿ ಕಾಂತರಾಜ್ರಿಂದ ದೂರು ದಾಖಲಾಗಿದೆ. ಜನವರಿ 2ರಂದು ಅಧಿಕೃತ ಮಾಹಿತಿ ಅಧರಿಸಿ ಎಲ್ಲರ ಮೇಲೆ ಕೇಸ್ ಹಾಕಲಾಗಿದೆ. ಸದ್ಯ ಮಗುವಿಗೆ ಹಾಸನದ ಮಕ್ಕಳ ರಕ್ಷಣಾ ಘಟಕದಲ್ಲಿ ಆಶ್ರಯ ನೀಡಲಾಗಿದೆ.
ಇದನ್ನೂ ಓದಿ: Covid 19 Cases In India: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 760 ಕೊರೊನಾ ಸೋಂಕಿತರು ಪತ್ತೆ
ಕಾರ್ಮಿಕರು ಮಲಗಿದ್ದ ಶೆಡ್‌ಗೆ ನುಗ್ಗಿದ ಲಾರಿ
ಹಾಸನದ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯಲ್ಲಿ ಅಪಘಾತ ಸಂಭವಿಸಿದೆ. ಕಾರ್ಮಿಕರು ಮಲಗಿದ್ದ ಶೆಡ್‌ಗೆ ಲಾರಿ ನುಗ್ಗಿದೆ. ಶೆಡ್‌ನಲ್ಲಿದ್ದ ಐವರು ಕಾರ್ಮಿಕರು ಮತ್ತು ಲಾರಿ ಚಾಲಕ ಮತ್ತು ಮತ್ತೊಬ್ಬನೂ ಸೇರಿ ಏಳು ಜನರಿಗೆ ಗಾಯವಾಗಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಸಿಮೆಂಟ್ ಲಾರಿ ನಿಯಂತ್ರಣ ತಪ್ಪಿ ಶೆಡ್‌ಗೆ ನುಗ್ಗಿದೆ. ಶೆಡ್‌ನಲ್ಲಿ ಊಟ ಮುಗಿಸಿ ಮಲಗಿದ್ದ ಕಾರ್ಮಿಕರು ಲಾರಿ ನೋಡಿ ಬೆಚ್ಚಿ ಬಿದ್ದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಗಾಯಾಳುಗಳನ್ನ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ