ಬೆಂಗಳೂರು, ಡಿಸೆಂಬರ್ 14: ಅಪಾರ್ಟ್ಮೆಂಟ್ನ 16ನೇ ಫ್ಲೋರ್ನಿಂದ ಹಾರಿ ಓರ್ವ ವ್ಯಕ್ತಿ ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಘಟನೆ ನಗರದ ಯಲಹಂಕದ ಆರ್ಎಂಝಡ್ ಗ್ಯಾಲರಿಯಾ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ರವಿಕುಮಾರ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಆದರೆ ರವಿಕುಮಾರ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಸ್ಥಳಕ್ಕೆ ಯಲಹಂಕ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಮಿತಿಮೀರಿದೆ. ಬಡವರನ್ನ ಟಾರ್ಗೆಟ್ ಮಾಡಿ ಸಾಲ ಕೊಡುವುದು ಬಳಿಕ ಬಡ್ಡಿ ಚಕ್ರ ಬಡ್ಡಿ ಮೀಟರ್ ಬಡ್ಡಿ ಅಂತ ಅಮಾಯಕರು, ಬಡವರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಅದರಂತೆ ಸಾಲಗಾರರ ಕಾಟ ತಾಳಲಾರದೆ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ಜಸ್ಟ್ ವಾಟ್ಸ್ ಆ್ಯಪ್ ಕಾಲ್ ಮಾಡಿ ಕೋಟ್ಯಂತರ ರೂ ವಂಚನೆ: ಯಾರಿಗೂ ಹೇಳದಂತೆ ವೃದ್ಧನಿಗೆ ಬೆದರಿಕೆ
ರಾಯಲ್ಪಾಡು ಗ್ರಾಮದ ಕೋಮಲದೇವಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಮಗಳ ವಿದ್ಯಾಭಾಸ್ಯ ಮತ್ತು ಕುಟುಂಬ ನಿರ್ವಹಣೆಗೆ ಸಾಲ ಮಾಡಿದ್ದ ಕೋಮಲದೇವಿಗೆ ಇತ್ತೀಚೆಗೆ ಬಡ್ಡಿಕೋರರ ಕಾಟ ಹೆಚ್ಚಾಗಿತ್ತು. ಹಾಗಾಗಿ ಸಾಲ ಕೊಟ್ಟಿರುವವರು ಮನೆಯ ಬಳಿ ಬಂದು ಗಲಾಟೆ ಮಾಡುತ್ತಿರುವುದರಿಂದ ಮನನೊಂದು ಡೆತ್ ನೋಟ್ ಬರೆದಿಟ್ಟು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಡೆತ್ ನೋಟ್ನಲ್ಲಿ ಕೋಮಲದೇವಿ ಯಾರಿಗೆಲ್ಲಾ ಎಷ್ಟೆಷ್ಟು ಹಣ ಕೊಡಬೇಕು ಎಂದು ಬರೆದಿದ್ದಾರೆ. ಲಕ್ಷಾಂತರ ರೂ. ಸಾಲ ಮಾಡಿಕೊಂಡಿರುವ ಮಹಿಳೆ ಇವರಿಂದ ಕಿರುಕುಳ ಇದೆ ಎಂದು ಅಳವತ್ತುಕೊಂಡಿದ್ದಾರೆ. ಸದ್ಯ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದು, ಜೀವಕ್ಕೆ ಯಾವುದೆ ತೊಂದರೆ ಇಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಟೆಕ್ಕಿ ಅತುಲ್ ಆಯ್ತು ಈಗ ಪೊಲೀಸ್ ಸರದಿ, ಹೆಂಡತಿ ಕಾಟಕ್ಕೆ ಕಾನ್ಸ್ಟೇಬಲ್ ತಿಪ್ಪಣ್ಣ ಆತ್ಮಹತ್ಯೆ!
ಇನ್ನೂ ರಾಯಲಪಾಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಭಾಗದಲ್ಲಿ ಕೈ ಸಾಲ ಕೊಟ್ಟು ಮೀಟರ್ ಬಡ್ಡಿ ವ್ಯವಹಾರ ಮಾಡುವವರ ಸಂಖ್ಯೆ ಹೆಚ್ಚಾಗಿದೆ, ಅಂತಹವರಿಗೆ ಕಡಿವಾಣ ಹಾಕಬೇಕು ಎಂದು ನೊಂದ ಕುಟುಂಬದವರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.