Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುರಿಗಳ ರಕ್ಷಣೆಗೆ ಹೋಗಿ ಪ್ರಾಣಕ್ಕೆ ಕುತ್ತುತಂದುಕೊಂಡ ಕುರಿಗಾಯಿ: ಎನ್​ಸಿಸಿ ಬೆಟಾಲಿಯನ್ ಸಮಯಪ್ರಜ್ಞೆಯಿಂದ ಬದುಕುಳಿದ

ತುಮಕೂರು ತಾಲ್ಲೂಕಿನ ಹಿರೇಹಳ್ಳಿ ಬಳಿಯ ಮಂದಾರಗಿರಿ ಬೆಟ್ಟದ ಬಳಿ ಕುರಿ ಮೇಯಿಸಲು ತೆರಳಿದ್ದ ಕುರಿಗಾಯಿ ತಮ್ಮ ಪ್ರಾಣಕ್ಕೆ ಕುತ್ತುತಂದುಕೊಂಡಿರುವಂತಹ ಘಟನೆ ನಡೆದಿದೆ. ಡಾಂಬರ್ ಸುರಿದಿದ್ದ ಗುಂಡಿಗೆ ಬಿದಿದ್ದ ಕುರಿಗಳನ್ನು ರಕ್ಷಿಸುವ ಭರದಲ್ಲಿ ಆಯತಪ್ಪಿ ಕುರಿಗಾಯಿ ಕೂಡ ಗುಂಡಿಗೆ ಬಿದಿದ್ದಾರೆ. ಸದ್ಯ ಎನ್​ಸಿಸಿ ಬೆಟಾಲಿಯನ್ ಕ್ಯಾಂಪ್ ತಂಡದಿಂದ ರಕ್ಷಣೆ ಮಾಡಲಾಗಿದೆ.

ಕುರಿಗಳ ರಕ್ಷಣೆಗೆ ಹೋಗಿ ಪ್ರಾಣಕ್ಕೆ ಕುತ್ತುತಂದುಕೊಂಡ ಕುರಿಗಾಯಿ: ಎನ್​ಸಿಸಿ ಬೆಟಾಲಿಯನ್ ಸಮಯಪ್ರಜ್ಞೆಯಿಂದ ಬದುಕುಳಿದ
ಕುರಿಗಳ ರಕ್ಷಣೆಗೆ ಹೋಗಿ ಪ್ರಾಣಕ್ಕೆ ಕುತ್ತುತಂದುಕೊಂಡ ಕುರಿಗಾಯಿ, ಎನ್​ಸಿಸಿ ಬೆಟಾಲಿಯನ್ ಸಮಯಪ್ರಜ್ಞೆಯಿಂದ ಬದುಕುಳಿದ
Follow us
ಮಹೇಶ್ ಇ, ಭೂಮನಹಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jul 25, 2024 | 3:29 PM

ತುಮಕೂರು, ಜುಲೈ 25: ಕುರಿಗಳ ರಕ್ಷಣೆ ಮಾಡಲು ಹೋದ ಕುರಿಗಾಯಿ ಆಯ ತಪ್ಪಿ ರಸ್ತೆಗೆ ಹಾಕುವ ಡಾಂಬರ್ (Dambar) ಸುರಿದಿದ್ದ ಗುಂಡಿಗೆ ಬಿದಿದ್ದು, ಪ್ರಾಣಾಪಾಯದಿಂದ ಪರಾದ ಘಟನೆ ತುಮಕೂರು (Tumakuru) ತಾಲ್ಲೂಕಿನ ಹಿರೇಹಳ್ಳಿ ಬಳಿಯ ಮಂದಾರಗಿರಿ ಬೆಟ್ಟದ ಪಕ್ಕದಲ್ಲಿ ನಡೆದಿದೆ. ಮೈತುಂಬ ಡಾಂಬರ್ ಮೆತ್ತಿಕೊಂಡಿದ್ದ ಕುರಿಗಾಯಿಯನ್ನು ಎಸ್​ಸಿಸಿ ಬೆಟಾಲಿಯನ್ ಕ್ಯಾಂಪ್​ ತಂಡದ ಸದಸ್ಯರ ಸಮಯ ಪ್ರಜ್ಞೆಯಿಂದ ಬದುಕುಳಿದಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಾಣಕ್ಕೆ ಕುತ್ತುತಂದುಕೊಂಡ ಕುರಿಗಾಯಿ 

ಮಂದರಗಿರಿ ಬೆಟ್ಟದ ಬಳಿ ಕುರಿ ಮೇಯಿಸಲು ಕುರಿಗಾಯಿ ತೆರಳಿದ್ದರು. ಈ ವೇಳೆ ರಸ್ತೆಗೆ ಹಾಕುವ ಡಾಂಬರ್ ಸುರಿದಿದ್ದ ಗುಂಡಿಗೆ ಸುಮಾರು ಏಳೆಂಟು ಕುರಿಗಳು ಬಿದಿದ್ದವು. ಅವುಗಳನ್ನು ರಕ್ಷಿಸುವ ಭರದಲ್ಲಿ ಆಯತಪ್ಪಿ ಡಾಂಬರ್ ಗುಂಡಿಗೆ ತಾವೇ ಬಿದ್ದು ಪ್ರಾಣಕ್ಕೆ ಕುತ್ತುತಂದುಕೊಂಡಿದ್ದಾರೆ.

ಇದನ್ನೂ ಓದಿ: ತುಮಕೂರಿನಲ್ಲಿ ಹೆಚ್ಚಿದ ಬೀದಿ ನಾಯಿಗಳ ನಿಯಂತ್ರಣಕ್ಕೆ ಪಾಲಿಕೆ ಹೊಸ ಪ್ಲಾನ್​

ಸುಮಾರು ಎರಡು ಗಂಟೆಗಳ ಕಾಲ ಡಾಂಬರ್ ಗುಂಡಿಯಲ್ಲೇ ಕುರಿಗಾಯಿ ಬಿದಿದ್ದು, ಅದೇ ಸಮಯಕ್ಕೆ ಎನ್​ ಸಿಸಿ ಕ್ಯಾಂಪ್​​ಗೆ ತೆರಳಿದ್ದ ತಂಡ ಫೈರಿಂಗ್ ತರಬೇತಿ ಪಡೆಯುವ ವೇಳೆ ಕುರಿಗಾಯಿಯನ್ನು ಗಮನಿಸಿದ್ದಾರೆ. ಕೂಡಲೇ ಅವರನ್ನು ಗುಂಡಿಯಿಂದ ಮೇಲಕ್ಕೆ ಎತ್ತಿ ರಕ್ಷಣೆ ಮಾಡಲಾಗಿದೆ.

ಇದನ್ನೂ ಓದಿ: ತುಮಕೂರಿನ ಅಂಗನವಾಡಿಯಲ್ಲಿ ಕುಕ್ಕರ್ ಸಿಡಿತ: ತಪ್ಪಿದ ಭಾರೀ ಅನಾಹುತ

ತುಮಕೂರಿನ ನಾಲ್ಕನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಕ್ಯಾಂಪ್ ತರಬೇತಿಯಲ್ಲಿದ್ದ ಬಿಹೆಚ್​.ಎಂ ತಿಲಕ್ ರಾಜ್, ಕೆಡೆಟ್ ಮಹೇಶ್, ಜುಬೇದ್, ಮನೋಜ್, ದರ್ಶನ್​ರಿಂದ ಕುರಿಗಾಯಿ ಸೇರಿದಂತೆ ಐದು ಕುರಿಗಳ ರಕ್ಷಣೆ ಮಾಡಲಾಗಿದೆ.

ಭಾರಿ ಮಳೆಗೆ ಮರ ಬಿದ್ದು 2 ಬೈಕ್​ಗಳು ಜಖಂ

ಹುಬ್ಬಳ್ಳಿ: ನಿರಂತರ ಭಾರಿ ಮಳೆಗೆ ಮರ ಬಿದ್ದು 2 ಬೈಕ್​ಗಳು ಜಖಂ ಆಗಿರುವಂತಹ ಘಟನೆ ನಗರದ ವೆಂಕಟೇಶ ಕಾಲೋನಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೃಹತ್ ಮರ ಬಿದ್ದು ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.

ಜರ್ಕಿನ್ ಹಾಕಿಕೊಂಡು ಮನೆಗೆ ಎಂಟ್ರಿ ಕೊಟ್ಟ ಕಳ್ಳ: ಕಳ್ಳತನಕ್ಕೆ ವಿಪಲ ಯತ್ನ

ಕಲಬುರಗಿ: ತಡರಾತ್ರಿ ಕಳ್ಳತನಕ್ಕೆ ಯತ್ನಿಸಿದ್ದು, ಬಂದ ಕಾರ್ಯ ಯಶಸ್ವಿಯಾಗದೆ ಕಳ್ಳನಿಂದ ವಿಫಲ ಯತ್ನ ನಡೆದಿರುವಂತಹ ಘಟನೆ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಂದಾಪುರದ ಹುನಮಾನ್ ನಗರದಲ್ಲಿ ನಡೆದಿದೆ. ಜಿಟಿ ಜಿಟಿ ಮಳೆಯಲ್ಲಿ ಖತರ್ನಾಕ್ ಕಳ್ಳ ಜರ್ಕಿನ್ ಹಾಕಿಕೊಂಡು ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಕಳ್ಳತನಕ್ಕೆ ಮುಂದಾಗಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.