ಕೆಂಪೇಗೌಡ ಏರ್ಪೋರ್ಟ್ನೊಳಗೆ ನುಗ್ಗಲು ಯತ್ನಿಸಿದ ವ್ಯಕ್ತಿ: ಪೊಲೀಸರಿಂದ ತೀವ್ರ ವಿಚಾರಣೆ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿನ್ನೆ (ಜೂನ್ 19) ಬಾಂಬ್ ಬೆದರಿಕೆ ಬಂದಿತ್ತು. ಶೌಚಾಲಯದ ಪೈಪ್‌ಲೈನ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಲಾಗಿತ್ತು. ಆದ್ರೆ, ಪರಿಶೀಲನೆ ಬಳಿಕ ಅದು ಹುಸಿಬಾಂಬ್ ಎಂದು ಗೊತ್ತಾಯ್ತು. ಇದರೊಂದಿಗೆ ಒಂದೇ ವಾರದಲ್ಲಿ ಎರಡನೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬಂದಂತಾಗಿದೆ. ಇದರ ನಡುವೆ ಇಂದು ವ್ಯಕ್ತಿಯೋರ್ವ ಭದ್ರತಾ ಸಿಬ್ಬಂದಿಗೆ ದಾಖಲೆಗಳನ್ನ ತೋರಿಸದೇ ವಿಮಾನ ನಿಲ್ದಾಣಕ್ಕೆ ನುಗ್ಗುವ ಯತ್ನ ನಡೆಸಿರುವ ಘಟನೆ ನಡೆದಿದೆ.

ಬೆಂಗಳೂರು, (ಜೂನ್ 20): ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ (Kempegowda International Airport) ಮೇಲಿಂದ ಮೇಲೆ ಹುಸಿ ಬಾಂಬ್ ಬೆದರಿಕೆ ಇಮೇಲ್ ಗಳು ಬರುತ್ತಲೇ ಇವೆ. ಈ ವಾರದಲ್ಲೇ ಎರಡು ಬಾರಿ ಬಾಂಬ್ ಬೆದರಿಕೆ ಬಂದಿದೆ. ಇದರ ನಡುವೆ ಇಂದು (ಜೂನ್ 20) ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೋರ್ವ ಯಾವುದೇ ದಾಖಲೆಗಳನ್ನ ತೋರಿಸದೇ ಏಕಾಏಕಿ ಟರ್ಮಿನಲ್ ಒಳಗೆ ನುಗ್ಗಲು ಯತ್ನಿಸಿರುವ ಘಟನೆ ನಡೆದಿದೆ. ಅನುಮಾನಾಸ್ಪದವಾಗಿ ಟರ್ಮಿನಲ್ ನುಗ್ಗಲು ಯತ್ನಿಸಿದವನ್ನು ಶ್ರೀನಗರದ ಮೂಲದ ಸದದ್ ಮೊಹಮದ್ ಬಾಬಾ ಎಂದು ತಿಳಿದುಬಂದಿದೆ. ಈತ ಅಲ್ಲಿನ ಸಿಬ್ಬಂದಿಗೆ ದಾಖಲೆ ತೋರಿಸದೇ ಟರ್ಮಿನಲ್ ಗೆ ನುಗ್ಗಲು ಯತ್ನಿಸಿದ್ದಾನೆ. ಕೂಡಲೇ ಮೊಹಮ್ಮದ್ ನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೊಹಮ್ಮದ್ 17ರಂದು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನದ ಮೂಲಕ ಶ್ರೀನಗರಕ್ಕೆ ಪ್ರಯಾಣ ಬೆಳೆಸಲು ಹೊರಟಿದ್ದ. ಆದ್ರೆ, ಟರ್ಮಿನಲ್ ನಲ್ಲಿ ಭದ್ರತಾ ಸಿಬ್ಬಂದಿಗೆ ದಾಖಲೆಗಳನ್ನ ತೋರಿಸದೇ ಏಕಾಏಕಿ ಅನುಮಾಸ್ಪದವಾಗಿ ನುಗ್ಗಲು ಯತ್ನ ಮಾಡಿದ್ದಾನೆ. ತಕ್ಷಣ ಅಲರ್ಟ್ ಆದ ಭದ್ರತಾ ಸಿಬ್ಬಂದಿ ಮೊಹಮ್ಮದ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್ಗೆ ಒಂದೇ ವಾರದಲ್ಲಿ 2ನೇ ಬಾರಿಗೆ ಹುಸಿ ಬಾಂಬ್ ಮೇಲ್ ಬೆದರಿಕೆ
ಸಿಐಎಸ್ಎಪ್ ಕರ್ತವ್ಯ ಅಡ್ಡಿಪಡಿಸಿದ ಆರೋಪದಡಿ ಶ್ರೀನಗರ ಮೂಲದ ಮೊಹಮದ್ ಬಾಬಾನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ದೂರು ದಾಖಲಿಸಿಕೊಂಡು ವಶಕ್ಕೆ ಪಡೆದುಕೊಂಡಿದ್ದು, ಈತ ಬೆಂಗಳೂರಿಗೆ ಏಕೆ ಬಂದಿದ್ದ? ಯಾವಾಗ ಬಂದಿದ್ದ? ಎನ್ನುವ ಬಗ್ಗೆ ತೀವ್ರ ವಿಚಾರಣೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



