AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲವರ್ ಜತೆ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಹೆಂಡ್ತಿ: ಪ್ರಿಯಕರನ ಜೊತೆ‌ ಸೇರಿ ಗಂಡನ ಕೊಲೆ

ಅವರಿಬ್ಬರು ಪ್ರೀತಿಸಿ ಮದುವೆಯಾಗಿದ್ದ ಜೋಡಿ. ಮದುವೆಯಾಗಿ ಊರು ಬಿಟ್ಟು ಸಿಲಿಕಾನ್ ಸಿಟಿಗೆ ಬಂದಿದ್ದ ಆ ಜೋಡಿ, ಒಂದಷ್ಟು ದಿನ ಅನ್ಯೋನ್ಯವಾಗಿ ಜೀವನ ನಡೆಸಿದ್ರು. ಅದ್ರೆ ಆ ದಂಪತಿ ನಡುವೆ ಬಂದ ಮೂರನೇ ವ್ಯಕ್ತಿ ಇಬ್ಬರ ನಡುವೆ ಗಲಾಟೆಗೆ ಕಾರಣವಾಗಿದ್ದ. ಹೆಂಡತಿ ಹಾಗೂ ಪ್ರಿಯಕರ ಏಕಾಂತದಲ್ಲಿದ್ದ ದೃಶ್ಯವನ್ನ ಕಣ್ಣಾರೆ ಕಂಡ ಗಂಡ ರೊಚ್ಚಿಗೆದ್ದಿದ್ದಾನೆ. ಬಳಿಕ ನಡೆದಿದ್ದು ಘನ ಘೋರ...

ಲವರ್ ಜತೆ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಹೆಂಡ್ತಿ: ಪ್ರಿಯಕರನ ಜೊತೆ‌ ಸೇರಿ ಗಂಡನ ಕೊಲೆ
ಮಹೇಶ್, ತೇಜಸ್ವಿನಿ, ಗಜೇಂದ್ರ
ರಾಚಪ್ಪಾಜಿ ನಾಯ್ಕ್
| Updated By: ರಮೇಶ್ ಬಿ. ಜವಳಗೇರಾ|

Updated on: Aug 11, 2024 | 5:28 PM

Share

ಬೆಂಗಳೂರು, (ಆಗಸ್ಟ್ 11): ಮಹೇಶ್ ಹಾಗೂ ತೇಜಸ್ವಿನಿ ಹಾಸನ ಜಿಲ್ಲೆ ಹೊಳೇನರಸೀಪುರ ಮೂಲದವರು. ಈ ಜೋಡಿ ಪ್ರೀತಿಸಿ ಮದುವೆಯಾಗಿತ್ತು. ಬಳಿಕ ಈ ಜೋಡಿ ಬೆಂಗಳೂರಿನ ವೈಟ್ ಫೀಲ್ಡ್ ಸಮೀಪದ ಹಗದೂರಿನಲ್ಲಿ ನೆಲೆಸಿದ್ದರು .ಕಾಲೇಜು ದಿನಗಳಿಂದಲೇ ಪರಸ್ಪರ ಪ್ರೀತಿ ಮಾಡುತ್ತಿದ್ದ ಈ ಜೋಡಿ, ನಂತರ ಮದುವೆ ಆಗಿ ಜೀವನ ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿದ್ದರು.12 ವರ್ಷ ದಾಂಪತ್ಯ ಜೀವನ ನಡೆಸಿದ್ದ ಈ ಜೋಡಿ ನಡುವೆ ಇತ್ತೀಚಿಗೆ ಮೂರನೇ ವ್ಯಕ್ತಿಯೊಬ್ಬ ಎಂಟ್ರಿಯಾಗಿದ್ದ, ಇದೇ ವಿಚಾರಕ್ಕೆ ಗಲಾಟೆಯಾಗಿ ಗಂಡ ಮಹೇಶನ ಕೊಲೆಯಲ್ಲಿ ಅಂತ್ಯವಾಗಿದೆ. ತೇಜಸ್ವಿನಿ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಪ್ರೀತಿ ಮದ್ವೆಯಾಗಿದ್ದ ಗಂಡನನ್ನೇ ಕೊಂದಿದ್ದಾಳೆ.  ಇದರೊಂದಿಗೆ ಪ್ರೀತಿಸಿದವಳಿಗಾಗಿ ಊರು ಬಿಟ್ಟು ಬಂದಿದ್ದ ನತದೃಷ್ಟ ಮಹೇಶ್ ಇಂದು ಅವಳಿಂದಲೇ ಜೀವವನ್ನು ಬಿಟ್ಟಿದ್ದಾನೆ.

ಹೌದು ಕೊಲೆಯಾದ ಅಮಾಯಕ ಗಂಡ ಮಹೇಶ್ ಆಟೋ ಓಡಿಸುತ್ತಿದ್ರೆ, ಆತನ ಪತ್ನಿ ತೇಜಸ್ವಿನಿ ಫೈನಾನ್ಸ್ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ತೇಜಸ್ವಿನಿಗೆ ತಾನು ಕೆಲಸ ಮಾಡುವ ಸ್ಥಳದಲ್ಲಿ ಈ ಗಜೇಂದ್ರ ಎಂಬಾತನ ಪರಿಚಯವಾಗಿದೆ. ನಂತರ ಇಬ್ಬರು ಕೂಡ ಸಲುಗೆಯಿಂದ ಇದ್ದು, ಈ ವಿಚಾರ ಮಹೇಶನಿಗೆ ಗೊತ್ತಾಗಿ ಹೆಂಡತಿಗೆ ಬುದ್ಧಿವಾದ ಹೇಳಿದ್ದ. ಹೀಗೆ ಒಮ್ಮೆ ಮಹೇಶನ ಪತ್ನಿ ಮನೆ ಬಿಟ್ಟು ಹೋಗಿದ್ದು, ಮಹೇಶನಿಗೆ ಪತ್ನಿ ಮೇಲೆ ಅನುಮಾನ ಮೂಡವಂತೆ ಮಾಡಿತ್ತು. ಹೀಗೆ ಕಳೆದ ಶುಕ್ರವಾರ ನಾಗರಪಂಚಮಿಯಂದು ಮಹೇಶ ಬೆಳಗ್ಗೆ ಐದು ಗಂಟೆ ಸುಮಾರಿಗೆ ಎದ್ದು, ಆಟೋ ಚಲಾಯಿಸಿಕೊಂಡು ಹೋಗಿದ್ದಾನೆ. ಗಂಡ ಹೊರಗೆ ಹೋಗುತ್ತಿದ್ದಂತೆ ಕೆಲ ಹೊತ್ತಿನ ಬಳಿಕ ಗಜೇಂದ್ರ ಮನೆಗೆ ಬಂದಿದ್ದಾನೆ.

ಇದನ್ನೂ ಓದಿ: ಹೊರಗೆ ಕಾರು ಅಲುಗಾಟ, ಒಳಗೆ ಜೋಡಿ ಕುಲುಕಾಟ: ಕಾರಿನಲ್ಲಿ ರಾಸಲೀಲೆ

ಬಳಿಕ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮಹೇಶ ಮನೆಗೆ ವಾಪಸ್ ಬಂದಾಗ, ಗಜೇಂದ್ರ ಹಾಗೂ ಪತ್ನಿ ತೇಜಸ್ವಿನಿ ಇಬ್ಬರು ಮನೆಯಲ್ಲಿ ಇರೋದನ್ನ ಕಂಡಿದ್ದಾನೆ. ಇದೇ ವಿಚಾರಕ್ಕೆ ಪತ್ನಿ ಮೇಲೆ ಗಲಾಟೆ ಮಾಡಿ ಹಲ್ಲೆ ಕೂಡ ಮಾಡಿದ್ದಾನೆ. ಗಲಾಟೆ ಬಿಡಿಸಲು ಹೋದ ಗಜೇಂದ್ರನಿಗು ಥಳಿಸಿದ್ದಾನೆ. ಈ ವೇಳೆ ತೇಜಸ್ವಿನಿ ಹಾಗೂ ಗಜೇಂದ್ರ ಸೇರಿ ಚಾರ್ಜಿಂಗ್ ವೈಯರ್ ನಿಂದ ಮಹೇಶನ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ..

ಮಹೇಶನಿಗೆ ಉಸಿರುಗಟ್ಟುತ್ತಿದ್ದಂತೆ ಮನೆಯಲ್ಲೆ ಕುಸಿದು ಬಿದ್ದಿದ್ದಾನೆ. ಬಳಿಕ ಅಕ್ಕಪಕ್ಕದ ನಿವಾಸಿಗಳು ಮನೆಗೆ ಹೋಗ್ತಿದ್ದಂತೆ, ಮಹೇಶನ ಪತ್ನಿ ವರಸೆ ಬದಲಿಸಿದ್ದಾಳೆ ಗಂಡ 3 ಸಾವಿರ ಹಣ ಕೇಳಿದ ಗಲಾಟೆ ಆಗಿ ತಳ್ಳಿದಕ್ಕೆ ಮೂರ್ಛೆ ಹೋಗಿದ್ದಾನೆ ಎಂದಿದ್ದಾಳೆ. ಪಕ್ಕದಲ್ಲಿರೋನು ಯಾರು ಅಂದಾಗ ಮಾವ ಎಂದಿದ್ದಾಳೆ. ಪೊಲೀಸರ ಮುಂದೆ ಕೂಡ ಇದನ್ನೇ ಹೇಳಿದ್ದಾಳೆ. ಆದ್ರೆ ಕತ್ತಲ್ಲಿದ್ದ ಗಾಯದ ಗುರುತು ಇಡೀ ಕಥೆಯನ್ನೇ ಹೇಳುತ್ತಿತ್ತು. ಪೊಲೀಸರು ಕರೆತಂದು ವಿಚಾರಣೆಗೊಳಪಡಿಸಿದಾಗ ಸತ್ಯ ಬಹಿರಂಗ ಗೊಂಡಿದೆ. ಘಟನೆ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು..ಈ ತೇಜಸ್ವಿನಿ ಹಾಗೂ ಗಜೇಂದ್ರನನ್ನ ಬಂಧಿಸಿದ್ದಾರೆ

ಅದೇನೇ ಇರಲಿ ಪ್ರೀತಿಸಿದವಳಿಗಾಗಿ ಊರು ಬಿಟ್ಟು ಬಂದಿದ್ದ ಆ ನತದೃಷ್ಟ ಇಂದು ಅವಳಿಂದಲೇ ಜೀವವನ್ನು ಬಿಟ್ಟಿದ್ದಾನೆ. ಇನ್ನೂ ಮಹೇಶ್ ಹಾಗೂ ತೇಜಸ್ವಿನಿಗೆ ಇಬ್ಬರು ಮಕ್ಕಳಿದ್ದು, ಈಗ ತಾಯಿ ಜೈಲು ಪಾಲಾಗಿದ್ದರೆ, ತಂದೆ ಕೊಲೆಯಾಗಿದ್ದರಿಂದ  ಅನಾಥವಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ