AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1970 ರಲ್ಲೂ ನಡೆದಿತ್ತು ಬಾಂಗ್ಲಾ ಗಲಭೆ; ಬದುಕುಳಿದವರ ಕಥೆ ರೋಚಕ!

ಬಾಂಗ್ಲಾದೇಶದಲ್ಲಿ ಆಗುತ್ತಿರುವ ಗಲಭೆಯನ್ನ ನೋಡಿಯೇ ಇರ್ತಿರಿ. ಆದ್ರೆ, ಅದೇ ರೀತಿಯ ದೊಡ್ಡ ಗಲಭೆ ದಶಕಗಳ ಹಿಂದೆಯೂ ನಡೆದಿತ್ತಂತೆ. ಅಂದಿನ ಗಲಾಟೆಯಲ್ಲಿ ಬದುಕುಳಿದು ರಕ್ಷಿಸಲ್ಪಟ್ಟೋರು ಈಗ ರಾಜ್ಯದ ಗಡಿ ಜಿಲ್ಲೆ ರಾಯಚೂರಿನಲ್ಲಿ ಆಶ್ರಯ ಪಡೆದಿದ್ದಾರೆ. ಬಾಂಗ್ಲಾದಲ್ಲಿರುವ ಈಗಿನ ಹಿಂದುಗಳನ್ನ ಕಾಪಾಡಿ ಎಂದು ಕಣ್ಣೀರಿಡ್ತಿದ್ದಾರೆ.

1970 ರಲ್ಲೂ ನಡೆದಿತ್ತು ಬಾಂಗ್ಲಾ ಗಲಭೆ; ಬದುಕುಳಿದವರ ಕಥೆ ರೋಚಕ!
1970 ರ ಬಾಂಗ್ಲಾ ಗಲಭೆಯಲ್ಲಿ ಬದುಕುಳಿದವರ ಕಥೆ ರೋಚಕ
ಭೀಮೇಶ್​​ ಪೂಜಾರ್
| Updated By: ಕಿರಣ್ ಹನುಮಂತ್​ ಮಾದಾರ್|

Updated on:Aug 11, 2024 | 6:13 PM

Share

ರಾಯಚೂರು, ಆ.11: ಸದ್ಯ ಬಾಂಗ್ಲಾದಲ್ಲಿ ಹೊತ್ತಿ ಉರಿದ ಗಲಭೆ ಪ್ರಕರಣ ಇದೇ ಮೊದಲಲ್ಲ. ಈ ಹಿಂದೆಯೂ ಇದೇ ರೀತಿ ಅತೀ ದೊಡ್ಡ ಗಲಭೆಗಳು ನಡೆದಿವೆ. ಅದರಲ್ಲಿ ಅಳಿದು ಉಳಿದವರೇ ಈಗ ರಾಯಚೂರು(Raichur) ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಆರ್​ಎಚ್​ ಕ್ಯಾಂಪ್​​ಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ಬಾಂಗ್ಲಾ ನಿರಾಶ್ರಿತರೆಲ್ಲಾ ಭಾರತಕ್ಕೆ ಬಂದಿದ್ದು 1970ರಲ್ಲಿ. ಅಂದು ಕೂಡ ಇದೇ ರೀತಿ ಗಲಾಟೆಗಳು ನಡೆದಿದ್ದು, ಆಗ ಹಿಂದೂಗಳನ್ನ ಟಾರ್ಗೆಟ್ ಮಾಡಿ ಟಾರ್ಚರ್ ನೀಡಲಾಗ್ತಿತ್ತಂತೆ. ಹೀಗಾಗಿ 1970ರಲ್ಲಿ ಬಾಂಗ್ಲಾ ಹಾಗೂ ಬರ್ಮಾ ವಿಭಜನೆ ಸಮಯದಲ್ಲಿ ಅನ್ಯಾಯಕ್ಕೊಳಗಾದವರು ಭಾರತದಲ್ಲಿ ನೆಲೆಸಲಿಚ್ಛಿಸಿದ್ದರಿಂದ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಪುನರ್ವಸತಿಗೆ ಸಮ್ಮತಿಸಲಾಗಿತ್ತು.

ಸದ್ಯ ಒಟ್ಟು 5 ಆರ್​ಎಚ್​ ಕ್ಯಾಂಪ್​ಗಳ ಪುನರ್ವಸತಿ ಕೇಂದ್ರಗಳಲ್ಲಿ ಸುಮಾರು 20,000 ಕ್ಕೂ ಹೆಚ್ಚು ಬಾಂಗ್ಲಾ ನಿರಾಶ್ರಿತರು ವಾಸವಿದ್ದಾರೆ. ಅಂದು ಕೂಡ ಹಿಂದುಗಳ ಮೇಲೆ ದೌರ್ಜನ್ಯ ನಡೆದಿತ್ತು,ಈಗಲೂ ಅದೇ ಆಗ್ತಿದೆ ಎಂದು ಇಲ್ಲಿನ ಜನ ಅಲ್ಲಿನ ಸ್ಥಿತಿ ಗತಿಗಳ ಬಗ್ಗೆ ಹೇಳುತ್ತಿದ್ದಾರೆ. ಹೌದು, 1947 ಯಿಂದ ಈವರೆಗೂ ಬಾಂಗ್ಲಾದಲ್ಲಿ ಗಲಾಟೆಗಳು ನಡೆಯುತ್ತಲೇ ಇವೆಯಂತೆ. ಏನೇ ಆದರೂ ಹಿಂದೂಗಳ ಮೇಲೆಯೇ ದಬ್ಬಾಳಿಕೆ, ಟಾರ್ಚರ್ ಮಾಡುತ್ತಾರೆ ಎಂದು ರಾಯಚೂರಿನಲ್ಲಿರುವ ಬಾಂಗ್ಲಾ ನಿರಾಶ್ರಿತರು ಅಳಲನ್ನ ತೋಡಿಕೊಳ್ತಿದ್ದಾರೆ.

ಇದನ್ನೂ ಓದಿ:ರಾಯಚೂರು: ಸಿಂಧನೂರಿನ ಐವರಿಗೆ ಸಿಎಎ ಕಾಯ್ದೆಯಡಿ ಪೌರತ್ವ

ಬಾಂಗ್ಲಾದಲ್ಲಿ ನಡೆಯುತ್ತಿರುವ ಗಲಭೆಯಲ್ಲೂ ಹಿಂದೂಗಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ನಮ್ಮ ಕುಟುಂಬಸ್ಥರು ಅಲ್ಲೇ ಇದ್ದು ಅವರು ಕೂಡ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಇಲ್ಲಿನ ನಿರಾಶ್ರಿತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಬಾಂಗ್ಲಾ ನಿರಾಶ್ರಿತ ಪ್ರಣಬ್ ಬಾಲಾ ಎಂಬಾತ ಮಾತನಾಡಿ, ‘ 1962, 1964 ,1971 ಆಯ್ತು, ಬಾಬ್ರಿ ಮಸೀದಿ ಗಲಾಟೆ ಸಮಯದಲ್ಲೂ ಹಿಂದುಗಳ ಮೇಲೆಯೇ ಟಾರ್ಚರ್ ಮಾಡಲಾಗಿದೆ. ದೇವಸ್ಥಾನಗಳನ್ನ ಸುಟ್ಟು ಹಾಕ್ತಾರೆ, ಮನೆಗಳಿಗೆ ಲೂಟಿ ಮಾಡುತ್ತಾರೆ. ನಮ್ಮ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗುತ್ತಾರೆ. 1970ರಲ್ಲಿ ಈಗ ನಡೆಯುತ್ತಿರೊ ಗಲಭೆಗಿಂತ ಹೆಚ್ಚಾಗಿ ಗಲಾಟೆಗಳು ನಡೆದಿದ್ದವು. ಹೀಗಾಗಿಯೇ ನಾವು ಇಲ್ಲಿ ಬಂದು ನೆಲೆಸಿದ್ದೇವೆ. ಈಗ ನಡೆಯುತ್ತಿರೊ ಗಲಭೆಯಲ್ಲೂ ಹಿಂದುಗಳ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ ಎಂದರು.

ಅವರಿಗೆ ಪ್ರಧಾನಿ ಮೋದಿ ಅವ್ರು ರಕ್ಷಣೆ ನೀಡಬೇಕು ಎಂದು ಮನವಿ

ಸದ್ಯ ಬಾಂಗ್ಲಾದಲ್ಲಿರುವ ಹಿಂದುಗಳಿಗೆ ಪ್ರಧಾನಿ ಮೋದಿ ಅವರು ರಕ್ಷಣೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಇಲ್ಲಿನ ಜನ ಮನವಿ ಮಾಡ್ತಿದ್ದಾರೆ. ಅದೆನೆ ಇರಲಿ ನಾಲ್ಕು ದಶಕಗಳಿಂದ ಇಲ್ಲೆ ಜೀವನ ಕಂಡುಕೊಂಡಿರುವ ಈ ನಿರಾಶ್ರಿತರ ಪೈಕಿ, ಸದ್ಯ ಐದು ಜನಕ್ಕೆ ಸಿಎಎ ಅಡಿಯಲ್ಲಿ ಪೌರತ್ವ ಸಿಕ್ಕಿದೆ. ಇಲ್ಲಿನ ಉಳಿದವರು ಕೂಡ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದು, ಆ ದಾಖಲೆ ಪಡೆಯೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಆದ್ರೆ, ಇವ್ರಿಗೆ ಪೌರತ್ವ ಪಡೆದ ಖುಷಿಯ ಮಧ್ಯೆ ಬಾಂಗ್ಲಾ ಗಲಭೆಯಲ್ಲಿ ತಮ್ಮ ಸಂಬಂಧಿಕರುಗಳು ದೌರ್ಜನ್ಯ ಎದುರಿಸುತ್ತಿರೋದ್ರಿಂದ ಇವರೆಲ್ಲ ಮಂಕಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:09 pm, Sun, 11 August 24

ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?