ಬೆಂಗಳೂರು, ಜುಲೈ 21: ಬಸ್ಗಾಗಿ ಕಾಯುತ್ತ ನಿಂತಿದ್ದ 17 ವರ್ಷದ ದ್ವಿತೀಯ ಪಿಯುಸಿ ಓದುತ್ತಿರುವ ಯುವತಿಯನ್ನು (girl) ನಾಲ್ವರು ಯುವಕರು ಕಿಡ್ನ್ಯಾಪ್ (Kidnap) ಮಾಡಿರುವಂತಹ ಘಟನೆ ಜೂನ್ 6ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುವತಿ ಬಚಾವ್ ಆಗಿದ್ದಾಳೆ. ಸದ್ಯ ಪೀಣ್ಯ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ್ದರಿಂದ ಕೇಸ್ ವರ್ಗಾವಣೆ ಮಾಡಲಾಗಿದೆ.
ಜೂನ್ 6ರಂದು ಜಾಲಹಳ್ಳಿ ಕ್ರಾಸ್ನಲ್ಲಿ ತುಮಕೂರಿಗೆ ಹೋಗಲು ಬಸ್ಗಾಗಿ ಯುವತಿ ಕಾಯುತ್ತ ನಿಂತಿದ್ದಳು. ಈ ವೇಳೆ ವಿದ್ಯಾರ್ಥಿನಿ ಬಳಿಗೆ ಬಂದಿದ್ದ ಯುವತಿಯರಿಂದ ರಾಸಾಯನಿಕ ಸಿಂಪಡಿಸಿ, ಮಾಸ್ಕ್ ಹಾಕಿ ಪ್ರಜ್ಞೆ ತಪ್ಪಿಸಿ ಎಳೆದೊಯ್ದಿದ್ದಾರೆ.
ಅಪಹೃತ ವಿದ್ಯಾರ್ಥಿನಿಗೆ ಪ್ರಜ್ಞೆ ಬಂದಾಗ ಕಾರಿನಲ್ಲಿದ್ದ ಬಗ್ಗೆ ಮನವರಿಕೆ ಆಗಿದೆ. ಯುವತಿ ಪ್ರಜ್ಞೆ ತಪ್ಪಿದಂತೆಯೇ ಇದ್ದಾಗ ಮೈಸೂರು ಬಳಿ ಕಿಡ್ನ್ಯಾಪರ್ಸ್ ಕಾರು ನಿಲ್ಲಿಸಿ ಟೀ ಕುಡಿಯುಲು ಹೋಗಿದ್ದಾರೆ. ಈ ವೇಳೆ ಕಾರಿನಿಂದ ಇಳಿದು ವಿದ್ಯಾರ್ಥಿನಿ ತಪ್ಪಿಸಿಕೊಂಡಿದ್ದಾಳೆ.
ಇದನ್ನೂ ಓದಿ: ಗುಂಡು ಹಾರಿಸಿದರೂ ಪೊಲೀಸ್ ಜೀಪ್ ಮೇಲೆ ಕಲ್ಲು ಎಸೆದು ಪರಾರಿಯಾದ ಕಳ್ಳರು
ಬಳಿಕ ವಿದ್ಯಾರ್ಥಿನಿ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಯುವತಿ ದೂರು ಆಧರಿಸಿ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಮೊ.ಸಂ 56/2024 ಕಲಂ 143, 328, 363, ಸಹಿತ 34 ಐಪಿಸಿ ರೀತ್ಯ ಪ್ರಕರಣ ದಾಖಲಾಗಿದೆ. ಕಾರಿನಲ್ಲಿ ಇಬ್ಬರು ಯುವತಿಯರ ಜೊತೆ ನಾಲ್ವರು ಯುವಕರಿದ್ದರು ಎಂದು ಆರೋಪ ಮಾಡಲಾಗಿದೆ. ಸ್ಥಳ ಪಂಚನಾಮೆ ಕ್ರಮ ಜರುಗಿಸುವ ಸಮಯದಲ್ಲಿ ಕೃತ್ಯ ನಡೆದ ಸ್ಥಳವು ಪೀಣ್ಯ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ್ದರಿಂದ ಕೇಸ್ ವರ್ಗಾವಣೆ ಮಾಡಲಾಗಿದೆ.
ಇಬ್ಬರು ಡ್ರಗ್ಸ್ ಪೆಡ್ಲರ್ಗಳಿಗೆ ಗಾಣಿಗರಹಳ್ಳಿ ಗ್ರಾಮಸ್ಥರು ತರಾಟೆ ತೆಗೆದುಕೊಂಡಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗಾಣಿಗರಹಳ್ಳಿಯಲ್ಲಿ ನಡೆದಿದೆ. ಡ್ರಗ್ಸ್ ಇಟ್ಟಿದ್ದ ಜಾಗವನ್ನು ಯುವಕರು ಹುಡುಕಿಕೊಂಡು ಬಂದಿದ್ದಾರೆ. ಗ್ರಾಮದ ರಸ್ತೆಯ ಬಳಿ ಡ್ರಗ್ಸ್ ಲೋಕೇಷನ್ಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: ಬಾಳು ನೀಡುವುದಾಗಿ ವಿಚ್ಛೇದಿತ ಮಹಿಳೆಯಿಂದ ಲಕ್ಷ ಲಕ್ಷ ಹಣ ದೋಚಿದ ನಕಲಿ ಪೊಲೀಸಪ್ಪ
ಈ ವೇಳೆ ಡ್ರಗ್ಸ್ ಪೆಡ್ಲರ್ಗಳಿಗೆ ಗ್ರಾಮಸ್ಥರಿಂದ ಫುಲ್ ಕ್ಲಾಸ್ ತೆಗೆದುಕೊಳ್ಳಲಾಗಿದೆ. ಮುಖಮುಚ್ಚಿಕೊಂಡು ಟಾರ್ಚ್ ಬೆಳಕಲ್ಲೇ ಯುವಕರು ಪರಾರಿ ಆಗಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:58 pm, Sun, 21 July 24