Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ: ಪೊಲೀಸರ ಮೇಲೆ ಅಟ್ಯಾಕ್ ಮಾಡಿ ಆರೋಪಿ ಜೊತೆ ದುಷ್ಕರ್ಮಿಗಳು ಎಸ್ಕೇಪ್, ಖದೀಮರಿಗಾಗಿ ಹುಡುಕಾಟ

ಆರೋಪಿಯನ್ನು ಕರೆದೊಯ್ಯುವ ವೇಳೆ ಕೊಪ್ಪಳ ಜಿಲ್ಲೆಯ ಗಂಗಾವತಿ ಪೊಲೀಸರ ಮೇಲೆ ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಅಟ್ಯಾಕ್ ಮಾಡಿದ್ದು ಆರೋಪಿಯ ಜೊತೆ ಎಸ್ಕೇಪ್ ಆಗಿದ್ದಾರೆ. ಘಟನೆಯಲ್ಲಿ ನಾಲ್ವರು ಪೊಲೀಸರಿಗೆ ಗಾಯಗಳಾಗಿವೆ.

ಗದಗ: ಪೊಲೀಸರ ಮೇಲೆ ಅಟ್ಯಾಕ್ ಮಾಡಿ ಆರೋಪಿ ಜೊತೆ ದುಷ್ಕರ್ಮಿಗಳು ಎಸ್ಕೇಪ್, ಖದೀಮರಿಗಾಗಿ ಹುಡುಕಾಟ
ಗದಗ: ಪೊಲೀಸರ ಮೇಲೆ ಅಟ್ಯಾಕ್ ಮಾಡಿ ಆರೋಪಿ ಜೊತೆ ದುಷ್ಕರ್ಮಿಗಳು ಎಸ್ಕೇಪ್
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಆಯೇಷಾ ಬಾನು

Updated on:Jun 29, 2024 | 11:05 AM

ಗದಗ, ಜೂನ್.29: ಕಳ್ಳತನ, ದರೋಡೆ ಆರೋಪಿಯನ್ನು ಕರೆದೊಯ್ಯುವ ವೇಳೆ ಕೊಪ್ಪಳ ಜಿಲ್ಲೆಯ ಗಂಗಾವತಿ ಪೊಲೀಸರ ಮೇಲೆ ಸಿನಿಮೀಯ ರೀತಿಯಲ್ಲಿ ಅಟ್ಯಾಕ್ ನಡೆದಿದೆ (Miscreants Attack On Police). ಗದಗ ನಗರದ ಬೆಟಗೇರಿ ರೈಲ್ವೆ ಅಂಡರ್ ಬ್ರಿಜ್ಜ್ ಬಳಿ ದುಷ್ಕರ್ಮಿಗಳು ಪೊಲೀಸರ ವಾಹನ ಅಡ್ಡಗಟ್ಟಿ ಹಲ್ಲೆ ನಡೆಸಿ ಆರೋಪಿಯ ಜೊತೆ ಎಸ್ಕೇಪ್ ಆಗಿದ್ದಾರೆ. ಘಟನೆಯಲ್ಲಿ ನಾಲ್ವರು ಪೊಲೀಸರಿಗೆ ಗಾಯಗಳಾಗಿವೆ. ಗಾಯಾಳು ಪೊಲೀಸರನ್ನು ಬೆಟಗೇರಿ ಖಾಸಗಿ ಆಸ್ಪತ್ರೆಗೆ (Betageri Hospital) ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ರಾಬರಿ ಆರೋಪಿಯನ್ನು ಕರೆದೊಯ್ಯಲು ಗಂಗಾವತಿ ಪೊಲೀಸರು ಖಾಸಗಿ ವಾಹನದಲ್ಲಿ ಬಂದಿದ್ದರು. ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಇನೋವಾ ಕಾರ್ ನಂಬರ್ KA 22 Z 1636ನಲ್ಲಿ ಗಂಗಾವತಿ ಪೊಲೀಸರು ಬಂದಿದ್ದರು. ಗದಗ ಎಸ್.ಎಂ. ಕೃಷ್ಣ ನಗರದಿಂದ ಆರೋಪಿ ಮೊಹಮ್ಮದ್ ಅಲಿ ಎಂಬುವವನನ್ನು ವಶಕ್ಕೆ ಪಡೆದು ತೆರಳುತ್ತಿದ್ದಾಗ ಹಲ್ಲೆ ನಡೆದಿದೆ. ಕಾರ್ ಅಡ್ಡಗಟ್ಟಿ ನಾಲ್ವರು ಅನಾಮಿಕರು ಗಂಗಾವತಿ ಟೌನ್ ಪೊಲೀಸ್ ಸ್ಟೇಷನ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಹೆಡ್ ಕಾನ್ಸ್ಟೇಬಲ್ ಮರಿಶಾಂತ ಗೌಡ ಎಂಬುವವರ ಮುಖ, ಕಿವಿಗೆ ಗಾಯಗಳಾಗಿವೆ. ಪಿಸಿ ಚಿರಂಜೀವಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಎಎಸ್​ಐ ಶಿವಶರಣ, ಪಿಸಿ ವಿಶ್ವನಾಥ್, ಪಿಸಿ ಮೈಲಾರಪ್ಪ ಸೇರಿದಂತೆ ಐವರ ಪೊಲೀಸ್ ಸಿಬ್ಬಂದಿ ಟೀಂ ಮೇಲೆ ಹಲ್ಲೆ ನಡೆದಿದೆ. ಗಂಗಾವತಿಯ ಜಯನಗರ ಮನೆಯೊಂದರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಶಕ್ಕೆ ಪಡೆಯಲಾಗಿತ್ತು.

ಇದನ್ನೂ ಓದಿ: ಕರ್ನಾಟಕದ 5 ನಗರಗಳಲ್ಲಿ ಸೇಫ್‌ ಸಿಟಿ ಯೋಜನೆ ಜಾರಿಗೆ ಗೃಹ ಸಚಿವ ಅಮಿತ್‌ ಶಾಗೆ ಸಿಎಂ ಸಿದ್ದರಾಮಯ್ಯ ಆಗ್ರಹ

ಗಾಯಾಳು ಪೊಲೀಸರ ಆರೋಗ್ಯ ವಿಚಾರಿಸಿದ ಗದಗ SP

ಇನ್ನು ಗದಗ-ಬೆಟಗೇರಿಯ ಸಿಎಸ್​ಐ ಆಸ್ಪತ್ರೆಯಲ್ಲಿ ಗಾಯಾಳು ಪೊಲೀಸರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಗದಗ ಎಸ್​ಪಿ ನೇಮಗೌಡ ಆರೋಗ್ಯ ವಿಚಾರಿಸಿದರು. ಸಿಬ್ಬಂದಿ ಭೇಟಿ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಸ್​ಪಿ, ಆರೋಪಿಯನ್ನ ವಶಕ್ಕೆ ಪಡೆಯಲು ಬಂದಾಗ ಹಲ್ಲೆ ನಡೆದಿದೆ. ಕಾರಿನ ಗ್ಲಾಸ್ ಒಡೆದು ಆರೋಪಿ ಎಸ್ಕೇಪ್ ಆಗಲು ಸಹಾಯ ಮಾಡಿದ್ದಾರೆ. ಪೊಲೀಸರಿಗೆ ಸಣ್ಣಪುಟ್ಟ ಗಾಯವಾಗಿದೆ. ದೂರಿನನ್ವಯ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.

ಆರೋಪಿಗಳಿಗಾಗಿ ಶೋಧ

ಮತ್ತೊಂದೆಡೆ ಗದಗ ಬೆಟಗೇರಿ ಬಡಾವಣೆ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಬೆಟಗೇರಿ ಬಡಾವಣೆ ಪೊಲೀಸರು ಗಂಗಾವತಿ ಪೊಲೀಸರ ಇನ್ನೋವಾ ವಾಹನ ವಶಕ್ಕೆ ಪಡೆದಿದ್ದು ವಾಹನ ಠಾಣೆ ಮುಂದೆ ನಿಂತಿದೆ. ಸದ್ಯ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಿಗಾಗಿ ಹುಡುಕಾಟ ಶುರುವಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:04 am, Sat, 29 June 24

ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಸಿದ್ದರಾಮಯ್ಯ ಸರ್ಕಾರ ಭ್ರಷ್ಟವೆಂದು ನಾನು ಹೇಳಿಲ್ಲ: ಬಸವರಾಜ ರಾಯರೆಡ್ಡಿ
ಸಿದ್ದರಾಮಯ್ಯ ಸರ್ಕಾರ ಭ್ರಷ್ಟವೆಂದು ನಾನು ಹೇಳಿಲ್ಲ: ಬಸವರಾಜ ರಾಯರೆಡ್ಡಿ
ತಮಿಳುನಾಡುನಲ್ಲಿ ಮುಂದೊಂದು ದಿನ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಅಣ್ಣಾಮಲೈ
ತಮಿಳುನಾಡುನಲ್ಲಿ ಮುಂದೊಂದು ದಿನ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಅಣ್ಣಾಮಲೈ
ಕುಟುಂಬ, ಮಕ್ಕಳು, ಸಿನಿಮಾ ಇತ್ಯಾದಿ.. ಮಗಳೊಟ್ಟಿಗೆ ಮಾತಿಗೆ ಕೂತ ಶಿವಣ್ಣ
ಕುಟುಂಬ, ಮಕ್ಕಳು, ಸಿನಿಮಾ ಇತ್ಯಾದಿ.. ಮಗಳೊಟ್ಟಿಗೆ ಮಾತಿಗೆ ಕೂತ ಶಿವಣ್ಣ
ಜೆಡಿಎಸ್ ಈಗಲೂ ಕರ್ನಾಟಕದಲ್ಲಿ ಸಾಕಷ್ಟು ಬಲಾಢ್ಯ: ನಿಖಿಲ್ ಕುಮಾರಸ್ವಾಮಿ
ಜೆಡಿಎಸ್ ಈಗಲೂ ಕರ್ನಾಟಕದಲ್ಲಿ ಸಾಕಷ್ಟು ಬಲಾಢ್ಯ: ನಿಖಿಲ್ ಕುಮಾರಸ್ವಾಮಿ
ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ಗಲಾಟೆ
ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ಗಲಾಟೆ
Video: ಕಚ್ಚಿದ್ದಕ್ಕೆ ಬೀದಿ ನಾಯಿಯನ್ನು ಗುಂಡಿಕ್ಕಿ ಕೊಂದ ವ್ಯಕ್ತಿ
Video: ಕಚ್ಚಿದ್ದಕ್ಕೆ ಬೀದಿ ನಾಯಿಯನ್ನು ಗುಂಡಿಕ್ಕಿ ಕೊಂದ ವ್ಯಕ್ತಿ
ಬೀದರ್ ಮತ್ತು ಕಲಬುರಗಿ ದರೋಡೆ ಪ್ರಕರಣಗಳ ನಡುವೆ ಲಿಂಕ್ ಇರೋ ಸಾಧ್ಯತೆ
ಬೀದರ್ ಮತ್ತು ಕಲಬುರಗಿ ದರೋಡೆ ಪ್ರಕರಣಗಳ ನಡುವೆ ಲಿಂಕ್ ಇರೋ ಸಾಧ್ಯತೆ
ಸಮಾಜ ಸ್ವಾಮೀಜಿಯನ್ನು ಕಡೆಗಣಿಸಿಲಾರಂಭಿಸಿದರೆ ಅಚ್ಚರಿಯಿಲ್ಲ: ವಿಜುಗೌಡ
ಸಮಾಜ ಸ್ವಾಮೀಜಿಯನ್ನು ಕಡೆಗಣಿಸಿಲಾರಂಭಿಸಿದರೆ ಅಚ್ಚರಿಯಿಲ್ಲ: ವಿಜುಗೌಡ