ನಂದಿನಿ ಹಾಲಿನ ದರ ಹೆಚ್ಚಳದಿಂದ ದೂದ್ ಪೇಡ, ಧಾರವಾಡ ಪೇಡ ದರ ಏರಿಕೆ; ಜೇಬು ಸುಡಲಿದೆ ಐಸ್ ಕ್ರೀಂ, ಮಿಲ್ಕ್ ಶೇಕ್

ಹಾಲಿನ ಬೆಲೆ ಹೆಚ್ಚಳವಾದ ಕಾರಣ ಕಾಫಿ ಮತ್ತು ಚಹಾದ ದರ ಹೆಚ್ಚಳ ಮಾಡುವುದಿಲ್ಲ ಎಂದು ಹೋಟೆಲ್ ಸಂಘ ತಿಳಿಸಿತ್ತು. ಆದರೆ ಇದೀಗ, ನಂದಿನಿ ಹಾಲಿನ ದರ ಹೆಚ್ಚಳವು ಸಿಹಿ ತಿಂಡಿ, ಐಸ್​​ ಕ್ರೀಮ್​, ಮಿಲ್ಕ್​ ಶೇಕ್​​ಗಳ ದರದ ಮೇಲೂ ಪರಿಣಾಮ ಬೀರಲಿದೆ. ಯಾವುದರ ದರ ಎಷ್ಟು ಹೆಚ್ಚಾಗಲಿದೆ ಎಂಬ ವಿವರ ಇಲ್ಲಿದೆ.

ನಂದಿನಿ ಹಾಲಿನ ದರ ಹೆಚ್ಚಳದಿಂದ ದೂದ್ ಪೇಡ, ಧಾರವಾಡ ಪೇಡ ದರ ಏರಿಕೆ; ಜೇಬು ಸುಡಲಿದೆ ಐಸ್ ಕ್ರೀಂ, ಮಿಲ್ಕ್ ಶೇಕ್
ದೂದ್ ಪೇಡ
Follow us
Kiran Surya
| Updated By: Ganapathi Sharma

Updated on: Jun 28, 2024 | 7:35 AM

ಬೆಂಗಳೂರು, ಜೂನ್ 28: ರಾಜ್ಯದಲ್ಲಿ ನಂದಿನಿ ಹಾಲಿನ ಅರ್ಧ ಲೀಟರ್ ಮತ್ತು ಒಂದು ಲೀಟರ್ ಪ್ಯಾಕೆಟ್​​ಗಳಲ್ಲಿ 50 ಎಂಎಲ್​​​ ಹೆಚ್ಚುವರಿ ಹಾಲು ಸೇರಿಸಿ ಎರಡು ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದರಿಂದ ಹಾಲಿನಿಂದ ಮಾಡುವ ಉತ್ಪನ್ನಗಳಾದ ಸಿಹಿ ತಿಂಡಿಗಳು, ಐಸ್ ಕ್ರೀಂ ಹಾಗೂ ಮಿಲ್ಕ್ ಶೇಕ್ ದರ ಹೆಚ್ಚಳ‌ ಮಾಡಲು ಮಾಲೀಕರು ‌ಮುಂದಾಗಿದ್ದಾರೆ. ಪ್ರತಿ ಲೀಟರ್ ಐಸ್ ಕ್ರೀಂ ಬಾಕ್ಸ್ ಮೇಲೆ 10 ರಿಂದ 15 ರೂಪಾಯಿ ಹೆಚ್ಚಳವಾದರೆ, ಎಲ್ಲಾ ತರಹದ ಮಿಲ್ಕ್ ಶೇಕ್ ಗಳ ಮೇಲೆ 5 ರಿಂದ 10 ರೂಪಾಯಿ ಹೆಚ್ಚಳವಾಗಲಿದೆ.

ಹೋಟೆಲ್ ಮತ್ತು ಜ್ಯೂಸ್ ಶಾಪ್​​ಗಳಲ್ಲಿ ಮಾರಾಟ ಮಾಡುವ ಮಿಲ್ಕ್ ಶೇಕ್ ಮತ್ತು ಐಸ್ ಕ್ರೀಂಗಳಿಗೆ ಹಾಲು ಇಲ್ಲದೆ ತಯಾರಿಸಲು ಆಗುವುದಿಲ್ಲ. ಇದರಿಂದ ದರ ಏರಿಕೆ ಅನಿವಾರ್ಯ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.

ಪ್ರತಿದಿನ ನಮ್ಮ ಹೋಟೆಲ್​ನಲ್ಲಿ ಮಿಲ್ಕ್ ಶೇಕ್ ಗಾಗಿ 25 ಲೀಟರ್ ಹಾಲನ್ನು ತೆಗೆದುಕೊಳ್ಳುತ್ತೇವೆ. ಕಾಫಿ, ಚಹಾಗೆ 100 ಲೀಟರ್ ಹಾಲನ್ನು ತೆಗೆದುಕೊಳ್ಳುತ್ತೇವೆ. ಹಾಲಿನ ದರ ಹೆಚ್ಚಳ ಮಾಡಿರುವುದರಿಂದ ಆ ಹೊರೆಯನ್ನು ನಾವು ಹೊತ್ತುಕೊಳ್ಳುವುದಕ್ಕೆ ಆಗುವುದಿಲ್ಲ. ಅದರಿಂದ ನಾವು ಅದನ್ನು ಗ್ರಾಹಕರ ಮೇಲೆ ಹಾಕಲೇಬೇಕಾಗುತ್ತದೆ. 65 ರೂಪಾಯಿ ಇರುವ ಮಿಲ್ಕ್ ಶೇಕ್ ಅನ್ನು 70 ರೂಪಾಯಿ ಮಾಡುವ ಪರಿಸ್ಥಿತಿ ಬಂದಿದೆ. ಐಸ್ ಕ್ರೀಮ್ ಸದ್ಯ ನಾಲ್ಕು ಲೀಟರ್ ಗೆ 470 – 480 ರುಪಾಯಿ ಇತ್ತು. ಈಗ ಒಂದು ಲೀಟರ್ ಐಸ್ ಕ್ರೀಮ್ ಬಾಕ್ಸ್ ನ ಮೇಲೆ 10 ರಿಂದ 12 ರುಪಾಯಿ ಹೆಚ್ಚಳ ಮಾಡಲು ಮುಂದಾಗಿದೆ ಎಂದು ಹೋಟೆಲ್ ಮಾಲೀಕ ಸಂಘದ ಚಂದ್ರಶೇಖರ್ ಶೆಟ್ಟಿ ಹೇಳಿದ್ದಾರೆ.

ಬೇಕರಿ ಸಿಹಿತಿಂಡಿಗಳೂ ದುಬಾರಿ

ಬೇಕರಿಗಳಲ್ಲಿ ತಯಾರಿಸುವ ಸಿಹಿತಿಂಡಿಗಳಿಗಂತೂ ಹಾಲು ಬೇಕೆ ಬೇಕು. ಹಾಲು ಇಲ್ಲದೆ ಸ್ವೀಟ್ ತಯಾರು ಮಾಡುವುದು ಕಷ್ಟ. ಒಂದು ಕೆಜಿ ದೂದ್ ಪೇಡ, ಧಾರವಾಡ ಪೇಡ ಹಾಗೂ ಯಾವ ಸಿಹಿತಿಂಡಿ ‌ಮಾಡಬೇಕಂದರೂ ಕನಿಷ್ಠ 5 ಕೆಜಿ ಹಾಲು ಬೇಕಾಗುತ್ತದೆ ಎನ್ನುತ್ತಾರೆ ಬೇಕರಿ ಮಾಲೀಕರು.

ಪೀಸ್ತಾ ರೋಲ್, ಮಿಲ್ಕ್ ಕೇಕ್, ಮಿಲ್ಕ್ ಬರ್ಫಿ, ದೂದ್ ಪೇಡ ಹಾಗೂ ಧಾರವಾಡ ಪೇಡ ಸದ್ಯ ಕೆಜಿ ಗೆ 400 ರೂಪಾಯಿ ಇದ್ದು ಹಾಲಿನ ಬೆಲೆ ಹೆಚ್ಚಳದಿಂದ 20 ರಿಂದ 25 ರಿಂದ ರೂಪಾಯಿ ಹೆಚ್ಚಳವಾಗಲಿದೆ. ಪ್ರತಿದಿನ ನಮ್ಮ ಬೇಕರಿಗೆ 50 ಲೀಟರ್ ಹಾಲು ತೆಗೆದುಕೊಂಡು ಬರ್ತಿವಿ. ಒಂದು ಕೆಜಿ ಸ್ವೀಟ್ ಮೇಲೆ 20 ರಿಂದ 25 ರುಪಾಯಿ ಆದರೂ ದರ ಹೆಚ್ಚಳ ಮಾಡಲೇಬೇಕು. ಇದರಿಂದ ಗ್ರಾಹಕನ ಮೇಲೆ ಒತ್ತಡ ಬೀಳುತ್ತದೆ. ಅರ್ಧ ಕೆಜಿ ತೆಗೆದುಕೊಳ್ಳುವವರು ಕಾಲು ಕೆಜಿ ತೆಗೆದುಕೊಳ್ಳಬಹುದು ಎಂದಿದ್ದಾರೆ ಬೇಕರಿ ಮಾಲೀಕ ಲಕ್ಷ್ಮೀ ನಾರಾಯಣ.

ಇದನ್ನೂ ಓದಿ: ಹಾಲಿನ ದರ ಹೆಚ್ಚಳ ಪರಿಣಾಮ: ಕರ್ನಾಟಕದ ಹೋಟೆಲ್​​ಗಳಲ್ಲಿ ಏರಿಕೆಯಾಗುತ್ತಾ ಚಹಾ, ಕಾಫಿ ದರ?

ಒಟ್ಟಿನಲ್ಲಿ ಹಾಲಿನ ದರ ಹೆಚ್ಚಳದಿಂದ ಹಾಲಿನಿಂದ ಮಾಡುವ ತಿಂಡಿ ತಿನಿಸುಗಳ ದರ ಏರಿಕೆ ಆಗುವುದು ಖಚಿತವಾಗಿದೆ. ಬೇರೆ ಬ್ರಾಂಡ್​ಗಳ ಹಾಲಿನಲ್ಲಿ ಐಸ್ ಕ್ರೀಂ, ಮಿಲ್ಕ್ ಹಾಗೂ ಸ್ವೀಟ್ ಗಳು ರುಚಿ ಬರೋದಿಲ್ಲ. ಹಾಗಾಗಿ ನಂದಿನಿ ಹಾಲೇ ಬೆಸ್ಟ್ ಎನ್ನುತ್ತಾರೆ ವ್ಯಾಪಾರಿಗಳು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ