Karnataka Dam Water Level: ಆಲಮಟ್ಟಿ ಜಲಾಶಯ ಭರ್ತಿ, ಇಂದು ಸಿಎಂ ಸಿದ್ದರಾಮಯ್ಯ ಬಾಗಿನ

|

Updated on: Aug 21, 2024 | 7:16 AM

ಕೃಷ್ಣಾ ನದಿ ಉತ್ತರ ಕರ್ನಾಟಕದ ಜೀವನದಿಯಾಗಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾನದಿಗೆ ಅಡ್ಡಲಾಗಿ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ ನಿರ್ಮಾಣ ಮಾಡಲಾಗಿದೆ. ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ಡ್ಯಾಂ ಭರ್ತಿಯಾಗಿದೆ.

Karnataka Dam Water Level: ಆಲಮಟ್ಟಿ ಜಲಾಶಯ ಭರ್ತಿ, ಇಂದು ಸಿಎಂ ಸಿದ್ದರಾಮಯ್ಯ ಬಾಗಿನ
ಆಲಮಟ್ಟಿ ಜಲಾಶಯ
Follow us on

ಆಲಮಟ್ಟಿ ಜಲಾಶಯ 9 ಜಿಲ್ಲೆಗಳಿಗೆ ನೀರು ಒದಗಿಸುತ್ತದೆ. ಅಲ್ಲದೆ ಈ ಜಲಾಶಯದಲ್ಲಿ ವಿದ್ಯುತ್​ ಉತ್ಪಾದನೆ ಮಾಡಲಾಗುತ್ತದೆ. ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಆ.21) ಬಾಗಿನ ಅರ್ಪಿಸಲಿದ್ದಾರೆ. ಹಾಗಾದರೆ ಜಲಾಶಯದಲ್ಲಿ ನೀರಿನ ಮಟ್ಟ ಎಷ್ಟಿದೆ ಎಂಬುವುದನ್ನು ತಿಳಿಯಿರಿ. ಆಲಮಟ್ಟಿ ಸೇರಿದಂತೆ ಕರ್ನಾಟಕದ 14 ಜಲಾಶಯಗಳ (Karnataka Dam Water Level) ಇಂದಿನ ನೀರಿನ ಮಟ್ಟ ತಿಳಿಯಿರಿ.

ಜಲಾಶಯಗಳ ನೀರಿನ ಮಟ್ಟ
ಕರ್ನಾಟಕದ ಪ್ರಮುಖ ಜಲಾಶಯಗಳು (Dam) ಗರಿಷ್ಠ ನೀರಿನ ಮಟ್ಟ (ಮೀ) ಒಟ್ಟು ಸಾಮರ್ಥ್ಯ (ಟಿಎಂಸಿ) ಇಂದಿನ ನೀರಿನ ಮಟ್ಟ (ಟಿಎಂಸಿ) ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್) ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ (Almatti Dam) 519.60 123.08 123.08 123.08 31968 31968
ತುಂಗಭದ್ರಾ ಜಲಾಶಯ (Tungabhadra Dam) 497.71 105.79 76.91 85.11 31033 10399
ಮಲಪ್ರಭಾ ಜಲಾಶಯ (Malaprabha Dam) 633.80 37.73 34.45 23.01 1644 1644
ಕೆ.ಆರ್.ಎಸ್ (KRS Dam) 38.04 49.45 47.73 28.52 10393 8622
ಲಿಂಗನಮಕ್ಕಿ ಜಲಾಶಯ (Linganamakki Dam) 554.44 151.75 144.42 74.06 8811 7653
ಕಬಿನಿ ಜಲಾಶಯ (Kabini Dam) 696.13 19.52 18.44 15.45 3474 2850
ಭದ್ರಾ ಜಲಾಶಯ (Bhadra Dam) 657.73 71.54 64.30 48.74 6855 6855
ಘಟಪ್ರಭಾ ಜಲಾಶಯ (Ghataprabha Dam) 662.91 51.00 51.00 43.35 3909 3969
ಹೇಮಾವತಿ ಜಲಾಶಯ (Hemavathi Dam) 890.58 37.10 35.97 29.01 4896 5610
ವರಾಹಿ ಜಲಾಶಯ (Varahi Dam) 594.36 31.10 21.77 10.74 751 0
ಹಾರಂಗಿ ಜಲಾಶಯ (Harangi Dam)​​ 871.38 8.50 8.03 8.38 1507 1200
ಸೂಫಾ (Supa Dam) 564.00 145.33 122.64 80.00 3404 3858
ನಾರಾಯಣಪುರ ಜಲಾಶಯ (Narayanpura Dam) 492.25 33.31 33.31 26.85 27631 27631
ವಾಣಿವಿಲಾಸ ಸಾಗರ (VaniVilas Sagar Dam) 652.24 30.42 20.21 24.51 1456 135

519.60 ಮೀಟರ್‌ ಎತ್ತರದಲ್ಲಿ 123.08 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಜಲಾಶಯದಲ್ಲಿ ಸೋಮವಾರ ಬೆಳಗ್ಗೆ 123.08 ಟಿಎಂಸಿ ನೀರು ಸಂಗ್ರಹವಾಗಿದೆ. ಒಳ ಹರಿವು: 31968 ಕ್ಯೂಸೆಕ್, ಹೊರ ಹರಿವು: 31968 ಕ್ಯೂಸೆಕ್ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ