ಗುತ್ತಿಗೆದಾರರಿಗೆ ಹಣ ನೀಡಲು ನಿವೇಶನ ಒತ್ತೆ ಆರೋಪ: ಬಿಡಿಎ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ರಾಜಾಜಿನಗರ ಬಿಜೆಪಿ ಶಾಸಕ ಸುರೇಶ್ ಕುಮಾರ್ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಶಿವರಾಮ ಕಾರಂತ ಬಡಾವಣೆಯ ಗುತ್ತಿಗೆದಾರರಿಗೆ ಹಣ ನೀಡಲು ನಾಡಪ್ರಭು ಕೆಂಪೇಗೌಡ ಬಡಾವಣೆಯ 2,500 ಮೂಲೆ ನಿವೇಶನ ಒತ್ತೆ ಇಡಲಾಗಿದೆ. ಆ ಮೂಲಕ ಗುತ್ತಿಗೆದಾರರಿಗೆ ಹಣ ನೀಡಲು ಮೂಲೆ ನಿವೇಶನ ಮಾರಲು ಮುಂದಾಗಿದೆ. ಬಿಡಿಎ ಈ ನಡೆ ಅನುಮಾನಕ್ಕೆ ಕಾರಣವಾಗಿದೆ. ಈ ಪ್ರಕ್ರಿಯೆಗೆ ತಡೆ ನೀಡುವಂತೆ ಕೋರಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು, ಏಪ್ರಿಲ್ 07: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಖಾಲಿ ಇರುವ 2,500 ಮೂಲೆ ನಿವೇಶನಗಳನ್ನು ಅಡಮಾನವಿಟ್ಟು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ 1,000 ಕೋಟಿ ರೂ. ಸಾಲ ಪಡೆಯಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಮುಂದಾಗಿದೆ. ಹೀಗಾಗಿ ಚುನಾವಣೆಯ ಮಾದರಿ ನೀತಿ ಸಂಹಿತೆ ಸಮಯದಲ್ಲಿ ಶಿವರಾಮ ಕಾರಂತ ಬಡಾವಣೆಯ ಗುತ್ತಿಗೆದಾರರ ಪಾವತಿಗಾಗಿ 1000 ರಿಂದ 2000 ಕೋಟಿ ರೂ. ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲೆ ನಿವೇಶಗಳನ್ನು ಒತ್ತೆ ಇಟ್ಟು ಪಡೆಯುತ್ತಿದ್ದು ಚುನಾವಣೆ ಮುಗಿಯುವವರೆಗೆ ಯಾವುದೇ ರೀತಿಯ ಪಾವತಿಗಳು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.
ಬಿಡಿಎ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಸುರೇಶ್ ಕುಮಾರ್
ನಗರದ ಜಿ.ಎಂ. ರಿಜಾಯ್ಸ್ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ರಾಜಾಜಿನಗರ ಬಿಜೆಪಿ ಶಾಸಕ ಸುರೇಶ್ ಕುಮಾರ್, ಗುತ್ತಿಗೆದಾರರಿಗೆ ಹಣ ನೀಡಲು ಬಿಡಿಎ ಮೂಲೆ ನಿವೇಶನ ಒತ್ತೆ ಆರೋಪ ಹಿನ್ನಲೆ ಬಿಡಿಎ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಬಿಡಿಎ ಮೂಲೆ ನಿವೇಶನಗಳನ್ನು ಬ್ಯಾಂಕ್ನಲ್ಲಿ ಅಡಮಾನ ಇಟ್ಟಿದೆ. ನೀತಿ ಸಂಹಿತೆ ಜಾರಿಯಲ್ಲಿರುವಾಗ ಮೂಲೆ ನಿವೇಶನ ಒತ್ತೆ ಇಟ್ಟಿದೆ.
ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಚುನಾವಣಾಧಿಕಾರಿಗೆ ಬಿಜೆಪಿ ದೂರು
ಶಿವರಾಮ ಕಾರಂತ ಬಡಾವಣೆಯ ಗುತ್ತಿಗೆದಾರರಿಗೆ ಹಣ ನೀಡಲು ನಾಡಪ್ರಭು ಕೆಂಪೇಗೌಡ ಬಡಾವಣೆಯ 2,500 ಮೂಲೆ ನಿವೇಶನ ಒತ್ತೆ ಇಡಲಾಗಿದೆ. ಆ ಮೂಲಕ ಗುತ್ತಿಗೆದಾರರಿಗೆ ಹಣ ನೀಡಲು ಮೂಲೆ ನಿವೇಶನ ಮಾರಲು ಮುಂದಾಗಿದೆ. ಬಿಡಿಎ ಈ ನಡೆ ಅನುಮಾನಕ್ಕೆ ಕಾರಣವಾಗಿದೆ. ಈ ಪ್ರಕ್ರಿಯೆಗೆ ತಡೆ ನೀಡುವಂತೆ ಕೋರಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಹೇಳಿದ್ದಾರೆ.
ವೈಯಕ್ತಿಕ ಅಜೆಂಡಾ ಇಟ್ಕೊಂಡು ಬೇರೆ ಆಗಿದ್ದಾರೆ
ಎಸ್ಟಿ ಸೋಮಶೇಖರ್ ವಿಚಾರವಾಗಿ ಮಾತನಾಡಿದ ಅವರು, ಪಕ್ಷದ ಶಾಸಕರು. ಆದರೆ ಈಗ ದೂರವಾಗಿದ್ದಾರೆ. ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ. ವೈಯಕ್ತಿಕ ಅಜೆಂಡಾ ಇಟ್ಕೊಂಡು ಬೇರೆ ಆಗಿದ್ದಾರೆ. ಅವರಿಗೆ ಪಕ್ಷದ ಕಾರ್ಯಕರ್ತರು ಎಲ್ಲ ರೀತಿ ಸಹಾಯ ಮಾಡಿದ್ದರು. ಆದರೆ ನನಗೆ ವಿಷ ಕೊಟ್ಟಿದ್ದಾರೆ ಎನ್ನುತ್ತಿದ್ದಾರೆ ಎಂದರು.
ಕೆಎಸ್ ಈಶ್ವರಪ್ಪರಿಂದ ಮೋದಿ ಫೋಟೋ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಮೋದಿ ಅವರು ನಮ್ಮ ನಾಯಕ ಅಂತ ಹೇಳುತ್ತಿದ್ದಾರೆ. ನಮ್ಮ ಪಕ್ಷದ ನಾಯಕರು ಎಲ್ಲವನ್ನ ತೀರ್ಮಾನ ಮಾಡುತ್ತಾರೆ. ದೊಡ್ಡವರು ಅವತ ಜೊತೆ ಮಾತಾಡುತ್ತಾರೆ ಎಂದು ಹೇಳಿದ್ದಾರೆ.
ವರದಿ: ಈರಣ್ಣ ಬಸವ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.