ಸಿರಿಗೆರೆ ಶ್ರೀ ವಿರುದ್ಧ ಆಸ್ತಿ ಕಬಳಿಕೆ ಆರೋಪ: ಭಕ್ತರ ಕರಪತ್ರಕ್ಕೆ ಶಿವಮೂರ್ತಿ ಶಿವಾಚಾರ್ಯಶ್ರೀ ಹೇಳಿದ್ದಿಷ್ಟು

ಚಿತ್ರದುರ್ಗದ ಸಿರಿಗೆರೆ ತರಳುಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮತ್ತು ಭಕ್ತರು ನಡುವೆ ಸಂಘರ್ಷ ಮುಂದುವರೆದಿದೆ. ಶ್ರೀಗಳ ವಿರುದ್ಧ ಕೋಟ್ಯಂತರ ಆಸ್ತಿ ಕಬಳಿಕೆ ಆರೋಪ ಕೂಡ ಕೇಳಿಬಂದಿದೆ. ಇದೀಗ ಕೆಲ ಭಕ್ತರು ಶ್ರೀಗಳ ವಿರುದ್ಧ ಕರ‌ಪತ್ರಗಳನ್ನು ಹಂಚಿದ್ದಾರೆ. ಈ ಬಗ್ಗೆ ಸ್ವತಃ ಶ್ರೀಗಳು ಪ್ರತಿಕ್ರಿಯಿಸುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಸಿರಿಗೆರೆ ಶ್ರೀ ವಿರುದ್ಧ ಆಸ್ತಿ ಕಬಳಿಕೆ ಆರೋಪ: ಭಕ್ತರ ಕರಪತ್ರಕ್ಕೆ ಶಿವಮೂರ್ತಿ ಶಿವಾಚಾರ್ಯಶ್ರೀ ಹೇಳಿದ್ದಿಷ್ಟು
ಸಿರಿಗೆರೆ ಶ್ರೀ ವಿರುದ್ಧ ಆಸ್ತಿ ಕಬಳಿಕೆ ಆರೋಪ: ಭಕ್ತರ ಕರಪತ್ರಕ್ಕೆ ಶಿವಮೂರ್ತಿ ಶಿವಾಚಾರ್ಯಶ್ರೀ ಹೇಳಿದ್ದಿಷ್ಟು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Sep 02, 2024 | 8:24 PM

ದಾವಣಗೆರೆ, ಸೆಪ್ಟೆಂಬರ್​​ 02: ಚಿತ್ರದುರ್ಗದ ಸಿರಿಗೆರೆ ಮಠದ ಶ್ರೀಗಳ (Sirigere Sri) ವಿರುದ್ಧ ಕೋಟ್ಯಂತರ ಆಸ್ತಿ ಕಬಳಿಕೆ ಆರೋಪ ಕೇಳಿಬಂದಿದೆ. ಸ್ವಾಮೀಜಿ ವಿರುದ್ಧ ಈಗಾಗಲೇ ಹೋರಾಟ ತೀವ್ರಗೊಂಡಿದ್ದು, ಸಮಾಜದ ಮತ್ತು ರಾಜಕೀಯ ನಾಯಕರು ಸಭೆ ಮೇಲೆ ಸಭೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿರುದ್ಧದ ಭಕ್ತರಿಂದ ಕರಪತ್ರ ಬಿಡುಗಡೆ‌ ಮಾಡಲಾಗಿದೆ.

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಸಾಧು ವೀರಶೈವ ಸಮಾಜದ ಜಾಗೃತಿಗಾಗಿ ಒಂದುಗೂಡೋಣ ಎಂಬ ಹೆಸರಿನಲ್ಲಿ ಕರಪತ್ರಗಳನ್ನು ಬಿಡುಗಡೆ‌ ಮಾಡಲಾಗಿದೆ. ಆರು‌‌ ಪುಟಗಳ ಕರಪತ್ರದಲ್ಲಿ ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸರ್ವಾಧಿಕಾರಿ ಧೋರಣೆಯ ನಿದರ್ಶನಗಳನ್ನು ಒಳಗೊಂಡಿದೆ.

ಇದನ್ನೂ ಓದಿ: ಸಿರಿಗೆರೆ ಮಠದ ಶ್ರೀಗಳ ವಿರುದ್ಧ ಕೋಟ್ಯಂತರ ಆಸ್ತಿ ಕಬಳಿಕೆ ಆರೋಪ: ಸ್ವಾಮೀಜಿ ವಿರುದ್ಧ ತೀವ್ರಗೊಂಡ ಹೋರಾಟ

ಮಠದ ಟ್ರಸ್ಟ್ ಡೀಡ್ ಪ್ರಕರಣದ ವಿಚಾರ ಕರಪತ್ರದಲ್ಲಿ ಮುದ್ರಿಸಲಾಗಿದೆ. ಬೆಂಗಳೂರು ತರಳುಬಾಳು ಧಾರ್ಮಿಕ ಕೇಂದ್ರದ ಕಾರ್ಯದರ್ಶಿ ಡಾ. ಸಿದ್ದಯ್ಯ ಅವರನ್ನ ಅಮಾನವೀಯವಾಗಿ ಸ್ವಾಮೀಜಿ ಕಿತ್ತಾಕ್ಕಿದ್ದು, ಇದೇ ವಿಚಾರ ಸ್ವಾಮೀಜಿ ಮಠದ ಟ್ರಸ್ಟ ತಮ್ಮ ಹೆಸರಿನಲ್ಲಿ ಮಾಡಿಕೊಂಡ ವಿಚಾರ ಬಯಲಾಗಿದೆ. ಸ್ವಾಮೀಜಿ ಪೀಠ ತ್ಯಾಗ ಮಾಡುವಂತೆ ಕರಪತ್ರ ಸಂಪೂರ್ಣ ಮಾಹಿತಿ ನೀಡಿ ಹಳ್ಳಿ ಹಳ್ಳಿಗಳಿಗೆ ಭಕ್ತರು ಹಂಚುತ್ತಿದ್ದಾರೆ.

ಡಾ.ಶಿವಮೂರ್ತಿ ಶಿವಾಚಾರ್ಯಶ್ರೀ ಹೇಳಿದ್ದಿಷ್ಟು 

ಚಿತ್ರದುರ್ಗ ತಾಲೂಕಿನ ಸಿರಿಗೆರೆ ಗ್ರಾಮದ ತರಳಬಾಳು ಮಠದಲ್ಲಿ 2 ಸಾವಿರ ಕೋಟಿ ರೂ. ಆಸ್ತಿ ಕಬಳಿಕೆ ಆರೋಪ ವಿಚಾರವಾಗಿ ಸ್ಪಷ್ಟನೆ ನೀಡಿದ ಡಾ.ಶಿವಮೂರ್ತಿ ಶಿವಾಚಾರ್ಯಶ್ರೀ, ನಾವು ಕೆಲ ಆಸ್ತಿಗಳನ್ನು ಖರೀದಿಸಿದ್ದೇವೆ. ನಮ್ಮ ಹೆಸರಿಗೆ, ಮಠದ ಹೆಸರಿಗೆ, ಶಿಷ್ಯರ ಹೆಸರಿಗೆ ಮಾಡಿಸಿದ್ದೇವೆ. ಮಠಕ್ಕೆ ಸಂಬಂಧಿಸಿದ ಎಲ್ಲಾ ಆಸ್ತಿ ಮಠಕ್ಕೆ ಸೇರಿದ್ದು. ಮಠದ ಕಾರ್ಯದರ್ಶಿ ಆಗಿದ್ದ ಸಿದ್ದಯ್ಯ ಹೆಸರಿಗೂ ಆಸ್ತಿ ಮಾಡಿಸಿದ್ದೆವು. ಆಸ್ತಿ ತನಗೆ ಸೇರಿದ್ದು ಎಂದು ಮಾಜಿ ಕಾರ್ಯದರ್ಶಿ ಸಿದ್ದಯ್ಯ ಕೊರ್ಟ್​ಗೆ ಹೋಗಿದ್ದರು. ಕೋರ್ಟ್​ನಲ್ಲಿ ಸಿದ್ದಯ್ಯನ ಅರ್ಜಿ ವಜಾ ಆಯಿತು. ಮಠದ ಆಸ್ತಿ ಕಬಳಿಸಲು ಯತ್ನಿಸಿದ್ದ ಸಿದ್ದಯ್ಯ ವಿರುದ್ಧ ಹೋರಾಡಿ, ನಮ್ಮ ವಿರುದ್ಧ ಅಲ್ಲ ಎಂದಿದ್ದಾರೆ.

ದಾವಣಗೆರೆ ರೆಸಾರ್ಟ್​ನಲ್ಲಿ ಸಭೆ ಮಾಡಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಬಾಯಿ ಮುಚ್ಚಿಕೊಂಡು ತೆಪ್ಪಗಿದ್ದಾಗಲೇ ಈ ವಿಚಾರಕ್ಕೆ ಕೊನೆ. ಸಭೆ ಮಾಡಿದವರು ಗ್ರಾಮಗಳಿಗೆ ಹೋಗುತ್ತೇವೆಂದು ಹೇಳಿದ್ದರು. ಗ್ರಾಮಗಳಿಗೆ ಹೋದರೆ ಚಕ್ರವ್ಯೂಹದಲ್ಲಿ ಸಿಲುಕುತ್ತಾರೆ. ವಿವಿಧ ಗ್ರಾಮಗಳ ಜನರು ಇಂದು ನಮ್ಮನ್ನು ಬೆಂಬಲಿಸಿ ಪತ್ರ ನೀಡಿದ್ದೀರಿ. ಎಲ್ಲಾ ಪತ್ರಗಳು ಬಹುತೇಕ ಒಂದೇ ಮಾದರಿಯಲ್ಲಿವೆ. ನಾವೇ ಡ್ರಾಫ್ಟ್ ಮಾಡಿಸಿ ಪತ್ರ ಸ್ವೀಕರಿಸಿದ್ದೇವೆಂಬ ಆರೋಪ ಬರಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ಸಿರಿಗೆರೆ ಶ್ರೀಗಳ ಪೀಠ ತ್ಯಾಗಕ್ಕೆ ಭಕ್ತರ ಒತ್ತಾಯ, ಏನಿದು ವಿವಾದ? ಇಲ್ಲಿದೆ ಸಂಪೂರ್ಣ ಮಾಹಿತಿ

ನಮ್ಮ ಜನಕ್ಕೆ ಲೇಖನಿಗಿಂತ ಕಣಿಗೆ, ಕುಡುಗೋಲು ಗೊತ್ತು. ನಮ್ಮ ಗುರುಗಳು ಅರವತ್ತು ವರ್ಷಕ್ಕೆ ನಿವೃತ್ತಿ ಘೋಷಿಸಿ ತ್ಯಾಗ ಪತ್ರ ನೀಡಿದ್ದರು. ಮಠದ ಬೈಲಾದಲ್ಲಿ ನಿವೃತ್ತಿ ಬಗ್ಗೆ ನಿಯಮ ಇಲ್ಲ. 2012ರಲ್ಲಿ ನಾವು ಸಹ ನಿವೃತ್ತಿ ಬಯಸಿದ್ದೆವು, ತ್ಯಾಗಪತ್ರ ನೀಡಿಲ್ಲ. ಈ ಹಿಂದೆ ಗುರುಶಾಂತಶ್ರೀ 48 ವರ್ಷದವರಿದ್ದಾಗ. ಕೊಲೆಗೀಡಾಗಿದ್ದರು. ನಮಗೂ ಅಂಥದ್ದೇ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ನಮ್ಮ ಗುರುಗಳು ಮಠದ ವಿರುದ್ಧವಿದ್ದವರ ಕೈಕಾಲು ಮುರಿಸುತ್ತಿದ್ದರು. ಈಗ ಅಂಥ ಪರಿಸ್ಥಿತಿ ಇಲ್ಲ, ಕಾನೂನಾತ್ಮಕವಾಗಿ ಹೋಗಬೇಕು ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:21 pm, Mon, 2 September 24

ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು
ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು
ಬಿವಿವಿ ಸಂಘದ ಮೆಡಿಕಲ್ ಕಾಲೇಜ್ ಆವರಣದಲ್ಲಿ ಓಣಂ ಸಂಭ್ರಮ, ವಿಡಿಯೋ ನೋಡಿ
ಬಿವಿವಿ ಸಂಘದ ಮೆಡಿಕಲ್ ಕಾಲೇಜ್ ಆವರಣದಲ್ಲಿ ಓಣಂ ಸಂಭ್ರಮ, ವಿಡಿಯೋ ನೋಡಿ
ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ
ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ