ಮೈಸೂರು ಕೆಆರ್ ಆಸ್ಪತ್ರೆಯಲ್ಲಿ ಪೈಶಾಚಿಕ ಕೃತ್ಯ, ಮಹಿಳೆ ಮೇಲೆ ಅತ್ಯಾಚಾರ; ಆಸ್ಪತ್ರೆಯ ವೈದ್ಯಾಧಿಕಾರಿ ಹೇಳಿದ್ದೇನು?
ವಾರ್ಡ್ ನಲ್ಲಿದ್ದ ವೃದ್ದೆ ಅತ್ಯಾಚಾರದ ಬಗ್ಗೆ ವಾರದ ಹಿಂದೆಯೇ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಆದರೆ ಮಾಹಿತಿ ನೀಡಿದ ವೃದ್ಧೆಯ ಮೇಲೆಯೇ ಹಲ್ಲೆ ಮಾಡಿ, ಬಾಯಿ ಬಿಡದಂತೆ ಆಸ್ಪತ್ರೆಯ ಸಿಬ್ಬಂದಿ ಬೆದರಿಕೆಯೊಡ್ಡಿದ್ದಾರೆ ಎಂದು ತಿಳಿದುಬಂದಿದೆ. ಕೂಗಳತೆಯ ದೂರದಲ್ಲಿ ದೇವರಾಜ ಪೊಲೀಸ್ ಠಾಣೆಯಿದೆ.
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಪೈಶಾಚಿಕ ಕೃತ್ಯ ನಡೆದಿದ್ದು, ಮಹಿಳೆಯ ಮೇಲೆ ರಾತ್ರಿಯ ವೇಳೆ ಅತ್ಯಾಚಾರ ಎಸಗಲಾಗಿದೆ. ಇನ್ನೂ ದಾರುಣ ಅಂದರೆ ಅತ್ಯಾಚಾರದ ಬಗ್ಗೆ ವೃದ್ಧೆಯೊಬ್ಬರು ಮಾಹಿತಿ ನೀಡಿದರೂ ಆಸ್ಪತ್ರೆಯ ವೈದ್ಯರು ಕ್ರಮ ಕೈಗೊಂಡಿಲ್ಲ; ಇದರಿಂದ ಕೆ.ಆರ್.ಆಸ್ಪತ್ರೆ ವೈದ್ಯರು ಅತ್ಯಾಚಾರ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದರಾ? ಎಂಬ ಆತಂಕ ಎದುರಾಗಿದೆ.
ಕೆ.ಆರ್.ಆಸ್ಪತ್ರೆಯಲ್ಲಿ ಆಸ್ಪತ್ರೆಯ ವಾರ್ಡ್ ನಲ್ಲೇ ಬುದ್ಧಿಮಾಂದ್ಯ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ವಾರ್ಡ್ ಕಿಟಕಿ ಗ್ರಿಲ್ ಕಿತ್ತು ಒಳ ನುಗ್ಗಿದ ಪಾತಕಿ, 30 ವರ್ಷದ ಮಹಿಳೆಯ ಮೇಲೆ ಅಮಾನುಷ ಕೃತ್ಯ ಎಸಗಿದ್ದಾನೆ.
ಆರೋಪಿ ಕಾಮುಕ ರಾತ್ರಿಯ ವೇಳೆ ಕಿಟಕಿ ಮೂಲಕ ನುಗ್ಗಿ ಅತ್ಯಾಚಾರ ಎಸಗುತ್ತಿದ್ದ ಎಂದು ಅತ್ಯಾಚಾರದ ಬಗ್ಗೆ ವೃದ್ಧೆಯೊಬ್ಬರು ಮಾಹಿತಿ ನೀಡಿದರೂ ಆಸ್ಪತ್ರೆಯವರು ಕ್ರಮ ಕೈಗೊಂಡಿಲ್ಲ. ಅತ್ಯಾಚಾರ ಪ್ರಕರಣ ಮುಚ್ಚಿ ಹಾಕಲು ಕೆ.ಆರ್. ಆಸ್ಪತ್ರೆಯ ವೈದ್ಯರು ಯತ್ನಿಸುತ್ತಿದ್ದಾರೆ ಎಂಬ ವಿಚಾರ ಬಹಿರಂಗವಾಗುತ್ತಿದ್ದಂತೆ ಮಾನವ ಹಕ್ಕುಗಳ ಸೇವಾ ಸಮಿತಿಯಿಂದ ಪ್ರಕರಣ ಬೆಳಕಿಗೆ ಬಂದಿದೆ.
ಅದೇ ವಾರ್ಡ್ ನ ವೃದ್ದೆಯಿಂದ ಈ ಕುಕೃತ್ಯ ಬಯಲಾಗಿದೆ. ವಾರ್ಡ್ ನಲ್ಲಿದ್ದ ವೃದ್ದೆ ಅತ್ಯಾಚಾರದ ಬಗ್ಗೆ ವಾರದ ಹಿಂದೆಯೇ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಆದರೆ ಮಾಹಿತಿ ನೀಡಿದ ವೃದ್ಧೆಯ ಮೇಲೆಯೇ ಹಲ್ಲೆ ಮಾಡಿ, ಬಾಯಿ ಬಿಡದಂತೆ ಆಸ್ಪತ್ರೆಯ ಸಿಬ್ಬಂದಿ ಬೆದರಿಕೆಯೊಡ್ಡಿದ್ದಾರೆ ಎಂದು ತಿಳಿದುಬಂದಿದೆ. ಕೂಗಳತೆಯ ದೂರದಲ್ಲಿ ದೇವರಾಜ ಪೊಲೀಸ್ ಠಾಣೆಯಿದೆ. ಮಾನವ ಹಕ್ಕುಗಳ ಸೇವಾ ಸಮಿತಿಯು ಮಾಹಿತಿ ನೀಡಿದ ನಂತರ ಪೊಲೀಸರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಕೆ.ಆರ್.ಆಸ್ಪತ್ರೆ ಸೂಪರಿಂಟೆಂಡೆಂಟ್ ನಂಜುಂಡಸ್ವಾಮಿ ಹೇಳಿಕೆ ಏನು?:
ಕೆ.ಆರ್. ಆಸ್ಪತ್ರೆಯಲ್ಲಿ ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಆರೋಪ ಪ್ರಕರಣದ ವಿಚಾರವಾಗಿ ಕೆ.ಆರ್.ಆಸ್ಪತ್ರೆ ಸೂಪರಿಂಟೆಂಡೆಂಟ್ ನಂಜುಂಡಸ್ವಾಮಿ ಮಾತನಾಡಿದ್ದಾರೆ. ಮೊದಲು ಕಳ್ಳತನಕ್ಕೆ ಯತ್ನ ನಡೆದಿದೆ ಎಂದು ಹೇಳಲಾಗಿತ್ತು. ಅದಕ್ಕೆ ಸುಮ್ಮನಿದ್ದೆವು. ಆದರೆ ನಂತರ ಅತ್ಯಾಚಾರ ನಡೆದಿದೆ ಅನ್ನೋ ಆರೋಪ ಬಂದಿದೆ. ಈ ಕಾರಣದಿಂದ ಪೊಲೀಸರಿಗೆ ದೂರು ನೀಡಿದ್ದೇವೆ ಎಂದಿದ್ದಾರೆ.
ಆಕೆ ಬುದ್ದಿಮಾಂದ್ಯೆ ಮಹಿಳೆಯಾಗಿದ್ದಾಳೆ. ಸದ್ಯ ಪ್ರಾಥಮಿಕ ಪರೀಕ್ಷೆ ಮಾಡಲಾಗಿದೆ. ಪ್ರಾಥಮಿಕ ಪರೀಕ್ಷೆಯಲ್ಲಿ ಅತ್ಯಾಚಾರದ ಬಗ್ಗೆ ಕಂಡುಬಂದಿಲ್ಲ. ಎಫ್.ಎಸ್.ಎಲ್ ವರದಿಗೆ ಕಳುಹಿಸಲಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ. ಸಿಸಿಟಿವಿ ಪೋಟೆಜ್ ಅನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ನಂಜುಂಡಸ್ವಾಮಿ ತಿಳಸಿದ್ದಾರೆ.
Karnataka Dams: ಮುಂಗಾರು ಮಳೆ ಮತ್ತೆ ಅಬ್ಬರಿಸತೊಡಗಿದೆ; ರಾಜ್ಯದ 12 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ
(allegedly woman raped in kr hospital mysuru)
Published On - 9:38 am, Sat, 10 July 21