ಬೆಂಗಳೂರು: ಕರ್ನಾಟಕದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಿಟ್ಟೂ ಬಿಡದೆ 32 ಗಂಟೆಗಳಿಂದ ನಿರಂತರವಾಗಿ ರೇಡ್ ನಡೆಸ್ತಿದ್ದಾರೆ. ಮತ್ತೊಬ್ಬ ಕ್ಲಾಸ್ 1 ಕಾಂಟ್ರ್ಯಾಕ್ಟರ್ ಮನೆ ಮೇಲೆ ದಾಳಿ ಮುಂದುವರೆದಿದೆ. ಬಸವೇಶ್ವರ ನಗರದಲ್ಲಿರುವ ಕ್ಲಾಸ್ 1 ಕಂಟ್ರ್ಯಾಕ್ಟರ್ ಸೋಮಶೇಖರ್ ಮನೆ ಮೇಲೆ ಐಟಿ ದಾಳಿ ನಡೆದಿದೆ.
ಎಚ್.ಡಿ. ಕುಮಾರಸ್ವಾಮಿಗೂ ಆಪ್ತನಾದ ಸೋಮಶೇಖರ್ ಮನೆ ಮೇಲೆ ದಾಳಿ:
ಸೋಮಶೇಖರ್ ಮನೆಯ ಮೇಲೆ ನಿನ್ನೆಯೇ ದಾಳಿ ನಡೆಸಿದ್ದ ಐಟಿ ತಂಡದಿಂದ ಇಂದೂ ಶೋಧ ಕಾರ್ಯ ಮುಂದುವರಿದಿದೆ. ದಾಖಲಾತಿಗಳು, ಕಡತಗಳಿಗಾಗಿ ಹುಡುಕಾಟ ನಡೆಸ್ತಿದಾರೆ ಐಟಿ ಅಧಿಕಾರಿಗಳು. ಕುತೂಹಲಕಾರಿ ಸಂಗತಿಯೆಂದರೆ ಬಿಎಸ್ ಯಡಿಯೂರಪ್ಪಅವರ ಆಪ್ತ, ಬಿಎಂಟಿಸಿ ಕಂಡಕ್ಟರ್ ಎಂಆರ್ ಉಮೇಶ್ ಗೆ ಆಪ್ತರಾಗಿರುವ ಸೋಮಶೇಖರ್ ಎಂಬುವವರ ಮನೆ ಇದಾಗಿದೆ. ಸೋಮಶೇಖರ್ ಅರಕಲಗೂಡು ಮೂಲದವರು. ಬಿಎಸ್ ಯಡಿಯೂರಪ್ಪ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರಿಗೂ ಸೋಮಶೇಖರ್ ಆಪ್ತನಾಗಿದ್ದ ಎಂಬುದು ಗಮನಾರ್ಹ.
ಬೆಳಗಾವಿ ಜಿಲ್ಲೆಯಲ್ಲೂ ಐಟಿ ಇಲಾಖೆ ಅಧಿಕಾರಿಗಳ ರೇಡ್
ಬೆಳಗಾವಿ ಜಿಲ್ಲೆಯಲ್ಲೂ ಐಟಿ ಇಲಾಖೆ ಅಧಿಕಾರಿಗಳ ರೇಡ್ ನಡೆದಿದೆ. ಉದ್ಯಮಿ, ಗುತ್ತಿಗೆದಾರ ಜಯಶೀಲ ಶೆಟ್ಟಿ ಮನೆ ಮೇಲೆ ರೇಡ್ ಆಗಿದೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಘಟಪ್ರಭಾ ಗ್ರಾಮದ ಜಯಶೀಲ ಶೆಟ್ಟಿ ಮನೆಯಲ್ಲಿ ಶೋಧ ಆರಂಭವಾಗಿದೆ. ಗೋವಾ, ಬೆಳಗಾವಿಯ 16 ಅಧಿಕಾರಿಗಳ ತಂಡ ಬೆಳಗ್ಗೆಯಿಂದ ದಾಖಲಾತಿ ಪರಿಶೀಲನೆ ನಡೆಸುತ್ತಿದೆ.
ಕೇಂದ್ರದ ಮಿನಿಸ್ಟಿರಿ ಆಫ್ ಫಿನಾನ್ಸ್ ದಾಳಿಯನ್ನು ನೇರವಾಗಿ ಮಾನಿಟರ್ ಮಾಡ್ತಿದೆ:
ಇನ್ನು, ರಾಜ್ಯದಲ್ಲಿ ನಡೆಯುತ್ತಿರೊ ಐಟಿ ದಾಳಿ ಈ ಹಿಂದೆ ನಡೆದಿರೊ ದಾಳಿಗಳಿಗಿಂತ ಭಿನ್ನವಾಗಿದೆ ಎನ್ನಲಾಗಿದೆ. ಇದು ಸಂಪೂರ್ಣವಾಗಿ ಸೆಂಟ್ರಲೈಜಡ್ ( centralised) ದಾಳಿಯಾಗಿ ನಡೆಯುತ್ತಿದೆ. ಹೆಸರಿಗೆ ಬೆಂಗಳೂರು ಗೋವಾ ವಲಯದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ದಾಳಿ ನಡೆಯುತ್ತಿರೊ ಪ್ರತಿಯೊಂದು ತಂಡವನ್ನೂ ಲೀಡ್ ಮಾಡ್ತಿರೋದು ದೆಹಲಿ ಅಫೀಸರ್ಸ್.
ಇಲ್ಲಿಂದ ದಾಳಿ ವಿವರಗಳು ಸಂಪೂರ್ಣ ನೇರವಾಗಿ ದೆಹಲಿಗೆ ರವಾನೆಯಾಗುತ್ತಿದೆ. ಮಿನಿಸ್ಟರಿ ಆಫ್ ಫಿನಾನ್ಸ್ ಗೆ ಐಟಿ ಅಧಿಕಾರಿಗಳು ವರದಿ ನೀಡ್ತಿದಾರೆ. ಅಂದರೆ ಮಿನಿಸ್ಟಿರಿ ಆಫ್ ಫಿನಾನ್ಸ್ ಈ ದಾಳಿಯನ್ನು ನೇರವಾಗಿ ಮಾನಿಟರ್ ಮಾಡ್ತಿದೆ. ದಾಳಿ ಅಂತ್ಯದ ಬಳಿಕ ಮಿನಿಸ್ಟರಿ ಆಫ್ ಫಿನಾನ್ಸ್ ದೆಹಲಿ ಕೇಂದ್ರ ಕಚೇರಿಯಿಂದಲೇ ಪತ್ರಿಕ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ:
ಯಡಿಯೂರಪ್ಪ ಆಪ್ತನ ಮೇಲೆ ಐಟಿ ದಾಳಿ ಬೆನ್ನಲ್ಲೇ ಮುಖ್ಯಮಂತ್ರಿ ಬೊಮ್ಮಾಯಿ ಇಂದು ದೆಹಲಿ ಪ್ರಯಾಣ
ಇದನ್ನೂ ಓದಿ:
ಐಟಿ ದಾಳಿ ಹಿನ್ನೆಲೆ ಸಿಎಂ ಕಚೇರಿ ಡ್ಯೂಟಿಯಿಂದ ಬಿಎಸ್‌ವೈ ಆಪ್ತ ಉಮೇಶ್ಗೆ ಗೇಟ್ ಪಾಸ್ ನೀಡಿದ ಸಿಎಂ ಬೊಮ್ಮಾಯಿ
Vijayendra ಆಪ್ತ, ಗೆಳೆಯ Aravind ಮನೆ ಮೇಲೆ IT ದಾಳಿ! Bengaluruನ Vasanthanagarದಲ್ಲಿ ವಾಸವಿರುವ Aravind
Published On - 1:25 pm, Fri, 8 October 21