ಕರ್ನಾಟಕದಲ್ಲಿ ವೈರಸ್ ರಹಸ್ಯ ಸಂಶೋಧನೆಗೆ ಹಣ ನೀಡಿದ ವಿಶ್ವದ ದೊಡ್ಡಣ್ಣ!
ಬೆಂಗಳೂರು: ಅಮೆರಿಕ ದೇಶ ವೈರಸ್ ಬಗ್ಗೆ ಸಂಶೋಧನೆಗೆ ಚೀನಾ ದೇಶಕ್ಕೆ ಹಣಕಾಸಿನ ನೆರವು ನೀಡಿತ್ತು. ವುಹಾನ್ ಕುಖ್ಯಾತ ಲ್ಯಾಬ್‌ಗೂ ಅಮೆರಿಕವೇ ಹಣದ ನೆರವು ನೀಡಿದ ಆರೋಪವೂ ಇದೆ. ಆ ತಪ್ಪು ಈಗ ಇಡೀ ಅಮೆರಿಕ ಸೇರಿದಂತೆ ವಿಶ್ವವೇ ನಲುಗಿ ಹೋಗುವಂತೆ ಮಾಡಿದೆ. ಈ ಅಮೆರಿಕ ಚೀನಾಕ್ಕೆ ಮಾತ್ರವಲ್ಲ ವೈರಸ್ ಸಂಶೋಧನೆಗೆ ಭಾರತಕ್ಕೂ ಹಣಕಾಸಿನ ನೆರವು ನೀಡಿದೆ ಅನ್ನೋ ಮಾಹಿತಿ ಈಗ ಹೊರ ಬಿದ್ದಿದೆ. ವೈರಸ್.. ಕೊರೊನಾ ವೈರಸ್.. ಈ ಒಂದೇ ಒಂದು ವೈರಸ್ ವಿಶ್ವವನ್ನೇ ವಿಲವಿಲ ಒದ್ದಾಡಿಸುತ್ತಿದೆ. […]
ಬೆಂಗಳೂರು: ಅಮೆರಿಕ ದೇಶ ವೈರಸ್ ಬಗ್ಗೆ ಸಂಶೋಧನೆಗೆ ಚೀನಾ ದೇಶಕ್ಕೆ ಹಣಕಾಸಿನ ನೆರವು ನೀಡಿತ್ತು. ವುಹಾನ್ ಕುಖ್ಯಾತ ಲ್ಯಾಬ್‌ಗೂ ಅಮೆರಿಕವೇ ಹಣದ ನೆರವು ನೀಡಿದ ಆರೋಪವೂ ಇದೆ. ಆ ತಪ್ಪು ಈಗ ಇಡೀ ಅಮೆರಿಕ ಸೇರಿದಂತೆ ವಿಶ್ವವೇ ನಲುಗಿ ಹೋಗುವಂತೆ ಮಾಡಿದೆ. ಈ ಅಮೆರಿಕ ಚೀನಾಕ್ಕೆ ಮಾತ್ರವಲ್ಲ ವೈರಸ್ ಸಂಶೋಧನೆಗೆ ಭಾರತಕ್ಕೂ ಹಣಕಾಸಿನ ನೆರವು ನೀಡಿದೆ ಅನ್ನೋ ಮಾಹಿತಿ ಈಗ ಹೊರ ಬಿದ್ದಿದೆ.
ವೈರಸ್.. ಕೊರೊನಾ ವೈರಸ್.. ಈ ಒಂದೇ ಒಂದು ವೈರಸ್ ವಿಶ್ವವನ್ನೇ ವಿಲವಿಲ ಒದ್ದಾಡಿಸುತ್ತಿದೆ. ಪ್ರಪಂಚದ ಪ್ರತಿಯೊಬ್ಬರು ಈ ವೈರಸ್‌ಗೆ ಗಢಗಢ ನಡುಗುತ್ತಿದ್ದಾರೆ. ಚೀನಾದ ವುಹಾನ್‌ನಲ್ಲಿ ಹುಟ್ಟಿದ ಡೆಡ್ಲಿ ವೈರಸ್ ಮಾನವ ಕುಲಕ್ಕೆ ಕಂಟಕವಾಗಿದೆ. ಈ ವೈರಸ್ ಬರುವ ಮುಂಚೆ ಕೂಡ ನಾನಾ ವೈರಸ್‌ಗಳು ಮನುಷ್ಯನನ್ನ ಹಿಂಡಿ ಹಿಪ್ಪೆ ಮಾಡಿವೆ. ಇಂತಹ ವೈರಸ್‌ಗಳ ರಹಸ್ಯ ಸಂಶೋಧನೆಗೆ ವಿಶ್ವದ ದೊಡ್ಡಣ್ಣ ಎಂದು ಗುರುತಿಸಿಕೊಂಡಿರುವ ಅಮೆರಿಕ ಹಣದ ಹೊಳೆಯನ್ನೇ ಹರಿಸಿದೆ. ಸೀಕ್ರೆಟ್ ಸಂಶೋಧನೆಗೆ ಭಾರತಕ್ಕೂ ಅದರಲ್ಲೂ ಕರುನಾಡಿಗೂ ಹಣ ಕೊಟ್ಟಿದೆ ಅಂದ್ರೆ ನೀವು ನಂಬಲೇ ಬೇಕು.
ಮಣಿಪಾಲ್ ಸೆಂಟರ್ ಫಾರ್ ವೈರಸ್ ರಿಸರ್ಚ್ ಸಂಸ್ಥೆಗೆ ನೆರವು..! ವೈರಸ್ ಬಗ್ಗೆ ತಲೆ ಕೆಡಸಿಕೊಳ್ಳದ ಜನ ಈಗ ವೈರಸ್ ಅಂದ್ರೆ ಬೆಚ್ಚಿ ಬೀಳುತ್ತಿದ್ದಾರೆ. ಚೀನಾದಲ್ಲಿ ಹುಟ್ಟಿದ ಕೊರೊನಾ ವೈರಸ್‌ಗೆ ಅಮೆರಿಕ ಸೇರಿದಂತೆ ವಿಶ್ವದ ಪ್ರತಿಯೊಂದು ದೇಶವು ಭಯ ಬಿದ್ದಿವೆ. ಆದ್ರೆ ವಿಶ್ವದ ದೊಡ್ಡಣ ಅಮೆರಿಕ ಮತ್ತು ಚೀನಾ ವೈರಸ್ ವಿಚಾರದಲ್ಲಿ ಮಹಾ ಎಡವಟ್ಟು ಮಾಡಿರೋದು ಗೊತ್ತಿರೋ ವಿಚಾರ. ಬರಾಕ್ ಒಬಾಮ ಆಳ್ವಿಕೆಯ ಕಾಲದಲ್ಲಿ ವೈರಸ್ ಬಗ್ಗೆ ಸಂಶೋಧನೆಗೆ ಚೀನಾಕ್ಕೆ ಅಮೆರಿಕವೇ ಫಂಡಿಂಗ್ ಮಾಡಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದರು. ಈಗ ಇಂಥದ್ದೇ ತಪ್ಪುನ್ನು ಭಾರತದಲ್ಲಿ ಅಮೆರಿಕ ಮಾಡಿದೆ.
ಅಮೆರಿಕದಿಂದ ಸೀಕ್ರೆಟ್ ಫಂಡಿಂಗ್..! ಅಮೆರಿಕದಿಂದ ಭಾರತದಲ್ಲಿ ವೈರಸ್ ಬಗ್ಗೆ ಸೀಕ್ರೆಟ್ ಸಂಶೋಧನೆಗೆ ಫಂಡಿಂಗ್ ಮಾಡಲಾಗಿದೆ. ಅಮೆರಿಕದಿಂದ ಸೀಕ್ರೆಟ್ ಫಂಡಿಂಗ್ ಅನ್ನು ಕೇಂದ್ರ ಗೃಹ ಇಲಾಖೆ ಪತ್ತೆ ಹಚ್ಚಿದೆ. ಕರ್ನಾಟಕದ ಮಣಿಪಾಲ್ ಸೆಂಟರ್ ಫಾರ್ ವೈರಸ್ ರಿಸರ್ಚ್ ಸಂಸ್ಥೆಗೆ ಅಮೆರಿಕದಿಂದ ಹಣಕಾಸಿನ ನೆರವು ನೀಡಲಾಗಿದೆ. ಕರ್ನಾಟಕದ ಮಣಿಪಾಲ್ ಸೆಂಟರ್ ಫಾರ್ ವೈರಸ್ ರಿಸರ್ಚ್ ಸಂಸ್ಥೆಯಲ್ಲಿ ಸೀಕ್ರೆಟ್ ಆಗಿ ನಿಫಾ ವೈರಸ್ ಬಗ್ಗೆ ಸಂಶೋಧನೆ ನಡೆದಿದೆ. ಈ ನಿಫಾ ವೈರಸ್ ಸಂಶೋಧನೆಯು ಜೈವಿಕ ಅಸ್ತ್ರವಾಗಬಲ್ಲದು.
ಹೀಗಾಗಿ ಅಮೆರಿಕದ ಆರೋಗ್ಯ ಇಲಾಖೆಯ ಸಂಸ್ಥೆಯಾದ ಸಿಡಿಸಿಯನ್ನ ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಭಾರತ ಸರ್ಕಾರದ ಅನುಮತಿ ಇಲ್ಲದೇ ಭಾರತದಲ್ಲಿ ಸೀಕ್ರೆಟ್ ಆಗಿ ವೈರಸ್ ಸಂಶೋಧನೆಗೆ ಹಣ ನೀಡಿಕೆಯೂ ಬೆಳಕಿಗೆ ಬಂದಿದೆ. ಸಿಡಿಸಿ ಸಂಸ್ಥೆಯು ಭಾರತದಲ್ಲಿ ವೈರಸ್ ಸಂಶೋಧನೆಗೆ ಎಂಸಿವಿಆರ್‌ಗೆ 3.6 ಮಿಲಿಯನ್ ಡಾಲರ್ ಹಣ ನೀಡಿದೆ. ಆದರೆ ಇದಕ್ಕೆ ಈಗ ಕೇಂದ್ರ ಗೃಹ ಇಲಾಖೆ ಬ್ರೇಕ್ ಹಾಕಿದೆ ಅಮೆರಿಕದ ಸಿಡಿಸಿ ಮೇಲೂ ಕೇಂದ್ರ ಗೃಹ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಅಲ್ಲದೇ ತಕ್ಷಣವೇ ವೈರಸ್ ಸಂಶೋಧನೆ ನಿಲ್ಲಿಸಲು ಸಿಡಿಸಿ ಹಾಗೂ ಮಣಿಪಾಲ್ ಸೆಂಟರ್ ಫಾರ್ ವೈರಸ್ ರಿಸರ್ಚ್ ಗೆ ಗೃಹ ಇಲಾಖೆ ಸೂಚನೆ ನೀಡಿದೆ.
ಚೀನಾದ ವುಹಾನ್ ಲ್ಯಾಬ್‌ನಂತೆ ಮಣಿಪಾಲ್ ಸೆಂಟರ್ ಫಾರ್ ವೈರಸ್ ರಿಸರ್ಚ್ ಲ್ಯಾಬ್ ನಿಂದ ವೈರಸ್ ಏನಾದರೂ ಲೀಕ್ ಆದ್ರೆ, ಮತ್ತೊಂದು ಮಹಾದುರಂತಕ್ಕೆ ನಾಂದಿ ಹಾಡುತ್ತೆ. ಹೀಗಾಗಿ ಕೇಂದ್ರ ಗೃಹ ಇಲಾಖೆ ವೈರಸ್ ಬಗೆಗಿನ ಸಂಶೋಧನೆಯನ್ನು ನಿಲ್ಲಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕೇಂದ್ರ ಸರ್ಕಾರದ ಒಪ್ಪಿಗೆ ಇಲ್ಲದೇ ಅಮೆರಿಕದಿಂದ ಹಣ ಪಡೆದು ಸಂಶೋಧನೆ ನಡೆಸುತ್ತಿದ್ದ ಎಂಸಿವಿಆರ್ ವಿರುದ್ಧ ಕೇಂದ್ರ ಗೃಹ ಇಲಾಖೆ ಏನ್ ಕ್ರಮ ತೆಗೆದುಕೊಳ್ಳುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ.