ಕಾಯ್ದಿರಿಸಿದ್ದ ಜಾಗದ ಮೇಲೆ BWSSB ಕಣ್ಣು: ಸಾಮೂಹಿಕ ಆತ್ಮಹತ್ಯೆ ಎಚ್ಚರಿಕೆ ನೀಡಿದ ವಿಶೇಷ ಚೇತನರು

ಕರ್ನಾಟಕ ಹೆಲನ್ ಕೆಲರ್ ಅಂಗವಿಕಲರ ಸಂಘ ಸದಸ್ಯರಿಗೆ ಸೈಟ್​ಗಳು ಮಂಜೂರಾಗಿದ್ದವು. ಗೊಟ್ಟಿಗೆರೆಯ ಸರ್ವೇ ನಂ-131 ರಲ್ಲಿ ನಿವೇಶನಗಳು ಮಂಜೂರಾಗಿದ್ದವು. ಸೈಟ್​​ಗಳು ವಿಶೇಷ ಚೇತನರ ಹೆಸರಿಗೆ ಗೊಟ್ಟಿಗೆರೆ ಗ್ರಾಮ ಪಂಚಾಯತಿಯಲ್ಲಿ ಖಾತಾ ಆಗಿ ಕಂದಾಯ ಕೂಡ ಪಾವತಿ ಮಾಡಲಾಗಿದೆ. ಆದರೆ ಗ್ರಾಮ ಪಂಚಾಯತಿ ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಬಳಿಕ ಕಿರಿಕಿರಿ ಶುರು ಮಾಡಲಾಗಿದೆ.

Follow us
ರಾಮು, ಆನೇಕಲ್​
| Updated By: ಗಂಗಾಧರ​ ಬ. ಸಾಬೋಜಿ

Updated on: May 27, 2024 | 4:43 PM

ಆನೇಕಲ್​, ಮೇ 27: ಬೆಂಗಳೂರು ದಕ್ಷಿಣ ತಾಲ್ಲೂಕಿನ ಗೊಟ್ಟಿಗೆರೆಯಲ್ಲಿ 2003 ರಲ್ಲಿ 31 ಮಂದಿ ವಿಶೇಷ ಚೇತನರಿಗೆ 20-40 ವಿಸ್ತೀರ್ಣದ ಸೈಟ್​ಗಳು ಮಂಜೂರು ಮಾಡಲಾಗಿದೆ. ಆದರೆ ವಿಶೇಷ ಚೇತನರಿಗೆ (special handicap) ಕಾಯ್ದಿರಿಸಿದ್ದ ಜಾಗದ ಮೇಲೆ ಇದೀಗ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕಣ್ಣು ಬಿದ್ದಿದೆ. ಡ್ರೈನೇಜ್ ಪೈಪ್ ಲೈನ್ ಮಾಡಲು ಮುಂದಾದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿರುದ್ಧ ಆಕ್ರೋಶಗೊಂಡಿದ್ದು, ಕಾಮಗಾರಿ ನಿಲ್ಲಿಸದಿದ್ದರೆ ಸರ್ಕಾರಕ್ಕೆ ಸಾಮೂಹಿಕ ಆತ್ಮಹತ್ಯೆ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಹೆಲನ್ ಕೆಲರ್ ಅಂಗವಿಕಲರ ಸಂಘ ಸದಸ್ಯರಿಗೆ ಸೈಟ್​ಗಳು ಮಂಜೂರಾಗಿದ್ದವು. ಗೊಟ್ಟಿಗೆರೆಯ ಸರ್ವೇ ನಂ-131 ರಲ್ಲಿ ನಿವೇಶನಗಳು ಮಂಜೂರಾಗಿದ್ದವು. ಸೈಟ್​​ಗಳು ವಿಶೇಷ ಚೇತನರ ಹೆಸರಿಗೆ ಗೊಟ್ಟಿಗೆರೆ ಗ್ರಾಮ ಪಂಚಾಯತಿಯಲ್ಲಿ ಖಾತಾ ಆಗಿ ಕಂದಾಯ ಕೂಡ ಪಾವತಿ ಮಾಡಲಾಗಿದೆ. ಆದರೆ ಗ್ರಾಮ ಪಂಚಾಯತಿ ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಬಳಿಕ ಕಿರಿಕಿರಿ ಶುರು ಮಾಡಲಾಗಿದೆ.

ಇದನ್ನೂ ಓದಿ: ಟಿವಿ9 ವರದಿ ಬಳಿಕ ಎಚ್ಚೆತ್ತ ಬಿಬಿಎಂಪಿ: ರಸ್ತೆಗುಂಡಿ ಮುಚ್ಚಲು ಡೆಡ್‌ಲೈನ್‌, ಟಾಸ್ಕ್​ ಪೋರ್ಸ್ ರಚನೆ

ವಿಶೇಷ ಚೇತನರಿಗೆ ಖಾತಾ ಮಾಡದೇ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಕಳ್ಳಾಟ ನಡೆಸಿದ್ದಾರೆ. ಕಳೆದ 21 ವರ್ಷದ ಹಿಂದೆ ಮಂಜೂರಾದ ಜಾಗವನ್ನ ಹದ್ದುಬಸ್ತು ಕೂಡ ಮಾಡಿಕೊಟ್ಟಿಲ್ಲ. ರಸ್ತೆ, ನೀರು, ಚರಂಡಿ, ಮೂಲಭೂತ ಸೌಕರ್ಯಗಳನ್ನು ಬಿಬಿಎಂಪಿ ನೀಡಿಲ್ಲ.

ಇದನ್ನೂ ಓದಿ: ಸೆಕ್ಯೂರಿಟಿ ಕಂಪನಿಗೆ ಶಿಕ್ಷಕರ ನೇಮಕಾತಿ ಟೆಂಡರ್! ಸುರೇಶ್​ ಕುಮಾರ್​ ಆಕ್ರೋಶ

ಇದೀಗ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಖ್ಯಾತೆ ತೆಗೆದಿದ್ದು, ಈ ಜಾಗ ಸರ್ಕಾರಿ ಗೋಮಾಳ ಎಂದು ಡ್ರೈನೇಜ್ ಪೈಪ್ ಲೈನ್ ಮಾಡಲು ಮುಂದಾಗಿದೆ. ಖಾಸಗಿ ಅಪಾರ್ಟ್ಮೆಂಟ್, ಲೇಔಟ್​ಗಳ ಡ್ರೈನೇಜ್ ಪೈಪ್ ಲೈನ್ ಮಾಡಲು ಹಿಟಾಚಿ ಮೂಲಕ ಕಾಮಗಾರಿ ಮಾಡಲು ನಡೆಸಿದ್ದಾರೆ. ಹೀಗಾಗಿ ವಿಶೇಷ ಚೇತನರಿಂದ ಆಹೋ ರಾತ್ರಿ ಧರಣಿ ಮಾಡಿದ್ದು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಮಗಾರಿ ಕೈಬಿಡಬೇಕೆಂದು ವಿಶೇಷ ಚೇತನರು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ

ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!

ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!

ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್

ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ

Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?