ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾಗಿ ಅಂಜುಂ ಪರ್ವೇಜ್ ನೇಮಕವಾಗಿದ್ದಾರೆ. ಹಿರಿಯ ಐಎಎಸ್ ಅಧಿಕಾರಿ ಅಂಜುಂ ಪರ್ವೇಜ್ ಅವರನ್ನು ಬೆಂಗಳೂರು ಮೆಟ್ರೋ ಎಂಡಿಯಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿದ್ದ ಪರ್ವೇಜ್, ಕರ್ನಾಟಕ ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಕೇಂದ್ರದಿಂದ ಬಿಎಮ್ಆರ್ಸಿಎಲ್ ಎಂಡಿ ಆಗಿ ನೇಮಕಾತಿ ಹೊಂದಿದ್ದಾರೆ.
ನಾಲ್ವರು ಐಎಫ್ಎಸ್, ಇಬ್ಬರು ಎಸ್ಎಫ್ಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಡಾ. ಮಾಲತಿ ಪ್ರಿಯ ಅವರನ್ನು ಬೆಂಗಳೂರು ಗ್ರಾಮಾಂತರದ ಡಿಸಿಎಫ್, ಡಾ.ಪಿ. ರಮೇಶ್ ಕುಮಾರ್ ಅವರನ್ನು ಡಿಸಿಎಫ್ ಆಗಿ, ರಮೇಶ್ ಕುಮಾರ್ ಅವರನ್ನು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಡಿಸಿಎಫ್ ಆಗಿ, ಡಾ.ವಿ. ಕರಿಕಾಳನ್ ಅವರನ್ನು ಡಿಸಿಎಫ್, ಎಫ್ಟಿಎಟಿಐ, ಕಾಡುಗೋಡಿ ಆಗಿ, ಸೂರ್ಯ ಸೇನ್ ಅವರನ್ನು ಡಿಎಸ್ಎಫ್, ಹೆಡ್ ಕ್ವಾರ್ಟರ್ಸ್, ಬೆಂಗಳೂರು ಆಗಿ, ಎನ್.ಇ. ಕ್ರಾಂತಿ ಅವರನ್ನು ಚಿಕ್ಕಬಳ್ಳಾಪುರ ವಿಭಾಗದ ಡಿಸಿಎಫ್ ಆಗಿ, ಎಸ್. ಬಾಲಕೃಷ್ಣ ಅವರನ್ನು ಹಾವೇರಿ ವಿಭಾಗ ಡಿಸಿಎಫ್ ಆಗಿ ನೇಮಕ ಮಾಡಲಾಗಿದೆ.
ಬಿಡಿಎ ಕಾರ್ಯದರ್ಶಿ ಡಾ.ವಾಸಂತಿ ಅಮರ್ ವರ್ಗಾವಣೆ ಮಾಡಲಾಗಿದೆ. ರಾಜ್ಯ ಮಿನರಲ್ಸ್ ಕಾರ್ಪೊರೇಷನ್ ಇಡಿ ಆಗಿ ವರ್ಗಾವಣೆ ಆಗಿದ್ದಾರೆ. ಜೊತೆಗೆ ಬಿಡಿಎ ಕಾರ್ಯದರ್ಶಿಯಾಗಿ ಸಿ.ಎಲ್.ಆನಂದ್ ಕೂಡ ವರ್ಗಾವಣೆ ಆಗಿದೆ.
ಮೆಟ್ರೋದಲ್ಲಿ ಕೊವಿಡ್ ನಿಯಮ ಉಲ್ಲಂಘಿಸಿದರೆ ದಂಡ
ಕೊರೊನಾ ಅನ್ಲಾಕ್ ಆಗಿದ್ದಿನಿಂದ ಸದ್ಯ ಸಿಲಿಕಾನ್ ಸಿಟಿಯಲ್ಲಿ ಮೆಟ್ರೋ ಸಂಚಾರ ಶುರುವಾಗಿದೆ. ಎಂದಿನಂತೆ ಜನ ಪ್ರಯಾಣ ಶುರು ಮಾಡಿದ್ದಾರೆ. ಆದ್ರೆ ಮೆಟ್ರೋ ರೈಲಿನಲ್ಲಿ ಕೊವಿಡ್ ನಿಯಮ ಉಲ್ಲಂಘನೆಯಾಗುತ್ತಿರುವ ಬಗ್ಗೆ ಅನೇಕ ದೂರುಗಳು ಬಂದಿದ್ದವು. ಹೀಗಾಗಿ ದಂಡ ವಿಧಿಸಲು ಬಿಎಂಆರ್ಸಿಎಲ್ ಮುಂದಾಗಿತ್ತು. ಮೆಟ್ರೋದಲ್ಲಿ ಕೊರೊನಾ ನಿಯಮ ಉಲ್ಲಂಘಿಸಿದ್ರೆ ಭಾರಿ ದಂಡ ವಿಧಿಸಲಾಗುತ್ತಿತ್ತು. ಸದ್ಯ ಕಳೆದ ಒಂದು ವಾರದಿಂದ ಸುಮಾರು ₹1,77,250 ದಂಡ ವಸೂಲಿ ಆಗಿದೆ.
ಮೆಟ್ರೋ ರೈಲಿನಲ್ಲಿ ಫೇಸ್ ಮಾಸ್ಕ್, ದೈಹಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು. ಮೆಟ್ರೋ ನಿಲ್ದಾಣ ಹಾಗೂ ಮೆಟ್ರೋ ರೈಲಿನಲ್ಲಿ ಸರಿಯಾಗಿ ಮಾಸ್ಕ್ ಧರಿಸದಿದ್ದರೆ, ನಿಯಮ ಉಲ್ಲಂಘಿಸುವವರಿಗೆ 250 ರೂಪಾಯಿ ದಂಡ ವಿಧಿಸಲಾಗುತ್ತಿದೆ. ಕಳೆದ 1 ವಾರದಲ್ಲಿ ಪ್ರಯಾಣಿಕರಿಂದ ₹1,77,250 ದಂಡ ವಸೂಲಿ ಮಾಡಲಾಗಿದೆ. ಪ್ರಯಾಣಿಕರ ಮೇಲೆ BMRCL ದಂಡಾಸ್ತ್ರ ಪ್ರಯೋಗ ಮಾಡುತ್ತಿದೆ.
ನಿಯಮ ಉಲ್ಲಂಘಿಸುವರ ಮೇಲೆ ನಿಗಾವಹಿಸಲು ವಿಶೇಷ ತಂಡ ರಚನೆ ಮಾಡಲಾಗಿದೆ. ಕಳೆದ ಒಂದು ವಾರದಿಂದ ಪ್ರಯಾಣಿಕರ ಮೇಲೆ ನಮ್ಮ ಮೆಟ್ರೋ ದಂಡಾಸ್ತ್ರ ಪ್ರಯೋಗ ಮಾಡಿದೆ. ಮೆಟ್ರೋದಲ್ಲಿ ಶೇ 100 ರಷ್ಟು ಪ್ರಯಾಣಿಕರಿಗೆ ಅನುಮತಿ ನೀಡಿದ ಬಳಿಕ ದಂಡಾಸ್ತ್ರ ಪ್ರಯೋಗ ಶುರುವಾಗಿದೆ. ಒಂದು ವಾರದಲ್ಲಿ ಕೊವಿಡ್ ರೂಲ್ಸ್ ಉಲ್ಲಂಘನೆ ಮಾಡಿದ ಪ್ರಯಾಣಿಕರಿಂದ 1 ಲಕ್ಷ 77 ಸಾವಿರದ 250 ರೂ ವಸೂಲಿಯಾಗಿದೆ.
ಇದನ್ನೂ ಓದಿ: Namma Metro: ಬೆಂಗಳೂರು ಮೆಟ್ರೋ 2ನೇ ಹಂತದ ಕಾಮಗಾರಿ ವಿಳಂಬವಾಗುತ್ತಿರುವುದೇಕೆ?; 10 ಕಾರಣಗಳು ಇಲ್ಲಿವೆ
ನಿಮ್ಮ ಸುಖ-ದುಃಖವೇ ನಮ್ಮ ಸುಖ-ದುಃಖ: ಮುಷ್ಕರ ಬಿಟ್ಟು ಸೇವೆಗೆ ಮರಳಿ -ಸಾರಿಗೆ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್
Published On - 9:01 pm, Wed, 14 July 21