ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ನಿಷೇಧದ ಆದೇಶವನ್ನು ವಾಪಾಸ್ ಪಡೆ ಪೊಲೀಸ್ ಇಲಾಖೆ

ಬೈಕ್ ಹಿಂಬದಿ ಸವಾರರಿಗೆ ಪ್ರಯಾಣ ನಿರ್ಬಂಧ ವಿಚಾರ. ಪೊಲೀಸ್ ಇಲಾಖೆ‌ ಇದೀಗ ನಿಷೇಧದ ಆದೇಶವನ್ನು ವಾಪಾಸ್ ಪಡೆದಿದೆ.  ಸಾರ್ವಜನಿಕರ ವಿರೋಧದ ನಂತರ ಆದೇಶ ವಾಪಾಸ್ ಪಡೆದಿದೆ. 

ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ನಿಷೇಧದ ಆದೇಶವನ್ನು ವಾಪಾಸ್ ಪಡೆ ಪೊಲೀಸ್ ಇಲಾಖೆ
ಸಾಂದರ್ಭಿಕ ಚಿತ್ರ
TV9kannada Web Team

| Edited By: ಅಕ್ಷಯ್​ ಕುಮಾರ್​​

Aug 04, 2022 | 6:12 PM


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಪುರುಷ ಹಿಂಬದಿ ಸವಾರರಿಗೆ ಅವಕಾಶ ಇರುವುದಿಲ್ಲ. ಹಿರಿಯ ನಾಗರಿಕರು, ಮಕ್ಕಳಿಗೆ ಅವಕಾಶ ಇರುತ್ತದೆ. ಹಿಂಬದಿ ಸವಾರರಿಂದ ಅಪರಾಧ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಈ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಇತರ ರಾಜ್ಯಗಳಲ್ಲಿ ಇಂಥ ಆದೇಶ ಈಗಾಗಲೇ ಜಾರಿಯಾಗಿತ್ತು. ಅದನ್ನು ನೋಡಿದ್ದೇನೆ. ಅದೇ ರೀತಿ ಇಲ್ಲಿಯೂ ಜಾರಿಗೊಳಿಸುತ್ತಿದ್ದೇವೆ. ಇತರ ರಾಜ್ಯಗಳಲ್ಲಿ ಯಾವುದೇ ಪುರುಷರಿಗೆ ಹಿಂಬದಿ ಸವಾರಿಗೆ ಅವಕಾಶವಿಲ್ಲ ಎಂದು ಆದೇಶ ಹೊರಡಿಸಲಾಗಿತ್ತು. ಇಲ್ಲಿ ವಯಸ್ಕ ಪುರುಷರಿಗೆ ಮಾತ್ರ ನಿರ್ಬಂಧ ವಿಧಿಸಲಾಗುತ್ತದೆ ಎಂದು ಎಡಿಜಿಪಿ ಅಲೋಕ್ ಕುಮಾರ್  ಹೇಳಿದ್ದಾರೆ.

ದಕ್ಷಿಣ ಕನ್ನಡದಲ್ಲಿ  ಕಳೆದ ವಾರದಿಂದ ಕೋಮು ವಿಚಾರವಾಗಿ ಕೊಲೆಗಳು ನಡೆದಿತ್ತು. ಈ ಬಗ್ಗೆ ತನಿಖೆ ನಡೆಯುತ್ತಿದೆ. ಕೆಲವೊಂದು ಆರೋಪಿಗಳನ್ನು ಪತ್ತೆ ಮಾಡಿ, ವಿಚಾರಣೆ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆ ಅನೇಕ ಮುಜಾಗೃತ ಕ್ರಮಗಳನ್ನು ಈಗಾಗಲೇ ತೆಗೆದುಕೊಂಡಿದೆ.  ಇದೀಗ ಇಂತಹ ಘಟನೆಗಳು ಮತ್ತೆ  ನಡೆಯಬಾರದು ಎಂದು ಪೊಲೀಸ್ ಇಲಾಖೆ  ಹೊಸ ನಿಯಮವನ್ನು ತಂದಿದೆ. ಪುರುಷ ಹಿಂಬದಿ ಸವಾರರಿಗೆ ಅವಕಾಶ ಇರುವುದಿಲ್ಲ. ಹಿರಿಯ ನಾಗರಿಕರು, ಮಕ್ಕಳಿಗೆ ಅವಕಾಶ ಇರುತ್ತದೆ. ಹಿಂಬದಿ ಸವಾರರಿಂದ ಅಪರಾಧ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಈ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಇತರ ರಾಜ್ಯಗಳಲ್ಲಿ ಇಂಥ ಆದೇಶ ಈಗಾಗಲೇ ಜಾರಿಯಾಗಿತ್ತು. ಅದನ್ನು ನೋಡಿದ್ದೇನೆ. ಅದೇ ರೀತಿ ಇಲ್ಲಿಯೂ ಜಾರಿಗೊಳಿಸುತ್ತಿದ್ದೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂಬದಿ ಬೈಕ್ ಸವಾರರಿಗೆ ನಿರ್ಬಂಧ ವಿಚಾರವಾಗಿ  ಸ್ಪಷ್ಟನೆ ನೀಡಿದ ಎಡಿಜಿಪಿ ಅಲೋಕ್ ಕುಮಾರ್.  ಈ ನಿಯಮ ರಾತ್ರಿ 6 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಮಾತ್ರ ಇರುತ್ತದೆ.
ಹಗಲು ವೇಳೆ ಈ ನಿಯಮ ಅನ್ವಯವಾಗಲ್ಲ.

ಈ ಆದೇಶ ದಿನ ಪೂರ್ತಿ ಇರಲ್ಲ, ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುವುದಿಲ್ಲ. ಪ್ರಕರಣಗಳು ಸಂಜೆ ವೇಳೆ ನಡೆಯುವ ಕಾರಣ ಈ ಆದೇಶ ನೀಡಲಾಗಿದೆ. ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರಬಾರದು. ಅದರ ಜೊತೆ ನೈಟ್ ಕರ್ಪ್ಯೂ ಸಡಿಲ ಮಾಡುವ ಕಾರಣಕ್ಕೆ ಈ ಆದೇಶ. ಸದ್ಯ ಒಂದು ವಾರದ ಮಟ್ಟಿಗೆ ಈ ಆದೇಶ ಜಾರಿಯಲ್ಲಿ ಇರಲಿದೆ. ರಾತ್ರಿ ವೇಳೆ ದಾಳಿ ಮಾಡುವುದನ್ನು ನಿಯಂತ್ರಿಸಲು ಇದನ್ನ ಜಾರಿ ಮಾಡಿದ್ದೇವೆ. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರಿಗೆ ಇದರಿಂದ ಸಮಸ್ಯೆ ಇಲ್ಲ ಎಂದಿದ್ದರು.

ಆದರೆ ಇದೀಗ ಸಾರ್ವಜನಿಕರ ಒತ್ತಡಕ್ಕೆ ಮನಿದು, ಈಗ ಆದೇಶವನ್ನು ವಾಪಸು ಪಡೆದುಕೊಂಡಿದ್ದಾರೆ. ಬೈಕ್ ಹಿಂಬದಿ ಸವಾರರಿಗೆ ಪ್ರಯಾಣ ನಿರ್ಬಂಧ ವಿಚಾರ. ಪೊಲೀಸ್ ಇಲಾಖೆ‌ ಇದೀಗ ನಿಷೇಧದ ಆದೇಶವನ್ನು ವಾಪಾಸ್ ಪಡೆದಿದೆ.  ಸಾರ್ವಜನಿಕರ ವಿರೋಧದ ನಂತರ ಆದೇಶ ವಾಪಾಸ್ ಪಡೆದಿದೆ.

ಇದನ್ನೂ ಓದಿ

 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada