AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ಸಾವಿರ ಕಾನ್ಸ್ ಸ್ಟೇಬಲ್ ಹುದ್ದೆಗೆ ಶೀಘ್ರ ನೇಮಕಾತಿ: ಗೃಹ ಸಚಿವ ಆರಗ ಜ್ಞಾನೇಂದ್ರ

ಸರ್ಕಾರದ ಕಾರ್ಯವೈಖರಿಗೆ ಬಗ್ಗೆ ಅಮಿತ್ ಷಾಗೆ ತೃಪ್ತಿ ಇದೆ. ಸಿಎಂ ಬದಲಾವಣೆ ಊಹಾ ಪೋಹ ಅಷ್ಟೇ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಗೃಹ ಸಚಿವರ ಗಮನಕ್ಕೆ ಬಂದಿದೆ.

5 ಸಾವಿರ ಕಾನ್ಸ್ ಸ್ಟೇಬಲ್ ಹುದ್ದೆಗೆ ಶೀಘ್ರ ನೇಮಕಾತಿ: ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ
TV9 Web
| Edited By: |

Updated on: Aug 04, 2022 | 12:56 PM

Share

ಬೆಂಗಳೂರು: ಪಿಎಸ್​ಐ (PSI) ನೇಮಕಾತಿ ಪ್ರಕರಣ ಸಂಬಂಧ ಸಿಐಡಿ (CID) ತನಿಖೆ ಮುಗಿದ ಕೂಡಲೇ ಪರೀಕ್ಷೆ ದಿನಾಂಕ ಪ್ರಕಟ ಮಾಡುತ್ತೇವೆ. ಪ್ರಕರಣದಲ್ಲಿ ಯಾರು ಇದ್ದಾರೋ ಅವರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಕೊಡೋದಿಲ್ಲ. ಇನ್ನು ಕೂಡ ಕೆಲವರು ಅರೆಸ್ಟ್ ಆಗಲಿದ್ದಾರೆ ಎಂದು ನಗರದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದರು. 545 ಪೋಸ್ಟ್ ನೇಮಕಾತಿ ಅಧಿಸೂಚನೆ ರದ್ದು ಆಗೋದಿಲ್ಲ. ಆದರೆ ಹೊಸದಾಗಿ ಪರೀಕ್ಷೆ ಮಾಡುತ್ತೇವೆ. ಅಭ್ಯರ್ಥಿಗಳು ವಯಸ್ಸಿನ ಬಗ್ಗೆ ಭಯ ಬೀಳೋ ಅವಕಾಶ ಇಲ್ಲ. 545 ಪೋಸ್ಟ್ ನೇಮಕಾತಿ ಅಧಿಸೂಚನೆ ಅವರಿಗೆ ವಯಸ್ಸಿನ ಸಡಿಲಿಕೆ ಕೊಡಲಾಗುತ್ತದೆ. ಹೀಗಾಗಿ ಯಾರು ಆತಂಕ ಪಡುವ ಅವಶ್ಯತೆ‌ ಇರೋದಿಲ್ಲ. ಹೊಸದಾಗಿ ಮತ್ತೆ 5 ಸಾವಿರ ಕಾನ್ಸ್ ಸ್ಟೇಬಲ್ ಹುದ್ದೆ ನೇಮಕಾತಿ ಮಾಡಿಕೊಳುತ್ತೇವೆ. 545 ಹುದ್ದೆ ಬಿಟ್ಟು 450 PSI ಗಳ ನೇಮಕಾತಿ ಹೊಸದಾಗಿ ಪ್ರಕ್ರಿಯೆ ಪ್ರಾರಂಭ ಮಾಡುತ್ತೇವೆ. ನಮ್ಮ ಅವಧಿಯಲ್ಲಿ ಹೇಗೆ ಎಕ್ಸಾಂ ಮಾಡೋದು ಅಂತ ತೋರಿಸಿಕೊಡ್ತೀವಿ ಎಂದು ಹೇಳಿದರು.

ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ

ಸಾವಿರಾರು ಜನರ ಬಲಿದಾನದಿಂದ ಇವತ್ತು ಸ್ವತಂತ್ರ ನಮಗೆ ಸಿಕ್ಕಿದೆ. ಈ ದೇಶದಲ್ಲಿ ಹುಟ್ಟಿದ ಪ್ರತಿ ಪ್ರಜೆ ದೇಶಕ್ಕೆ ನಿಷ್ಠನಾಗಿ ಇರಬೇಕು. ಕನಸಿನ ಭಾರತದ ಸಂಕಲ್ಪ ನಾವೆಲ್ಲ ಮಾಡಬೇಕು ಎಂದು ರಾಜ್ಯ ಗೃಹ ಇಲಾಖೆಯಿಂದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಚಾಲನೆ ನೀಡಿದರು. ನಮ್ಮ ಇಲಾಖೆ, ಅಗ್ನಿಶಾಮಕ ಇಲಾಖೆ ಜನರ ಪ್ರಾಣ ಉಳಿಸುವ ಕೆಲಸ ಮಾಡುತ್ತಿದೆ. ಹರ್ ಘರ್ ತಿರಂಗಾ ಅಭಿಯಾನ ಮಾಡಿದ್ದೇವೆ‌. ಪ್ರತಿಯೊಬ್ಬರ ಮನೆ ಮೇಲೂ ತಿರಂಗ ಹಾರಬೇಕು ಎಂದು ಹೇಳಿದರು. ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ರಕ್ಷಕ ದಳ, ಪೌರ ರಕ್ಷಕ, ಅಗ್ನಿಶಾಮಕ, ತುರ್ತು ಸೇವೆಗಳು, ರಾಜ್ಯ ವಿಪತ್ತು ಸ್ಪಂದನ ಪಡೆಗಳು ಭಾಗಿ‌ಯಾಗಿದ್ದರು. ಸಿಎಂ ಬದಲಾವಣೆ ಊಹಾ ಪೋಹ ಅಷ್ಟೇ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಗೃಹ ಸಚಿವರ ಗಮನಕ್ಕೆ ಬಂದಿದೆ. ರಾಹುಲ್ ಗಾಂಧಿಯವರ ಆರೋಪಗಳ ಬಗ್ಗೆಯೂ ಅವರಿಗೆ ಗೊತ್ತಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಪ್ರಮುಖ ಆರೋಪಿಗಳ ಬಗ್ಗೆ ಗೊತ್ತಾಗಿದೆ

ಮೊಹಮ್ಮದ್​ ಫಾಜಿಲ್ ಹತ್ಯೆ ತನಿಖೆ ಮುಗಿಯುವ ಹಂತ ತಲುಪಿದೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಪ್ರಕರಣದ ತನಿಖೆ ನಡೀತಿದೆ. ಪ್ರವೀಣ್​ ಹತ್ಯೆ ಪ್ರಮುಖ ಆರೋಪಿಗಳು ಯಾರೆಂದು ಗೊತ್ತಾಗಿದೆ. 2 ಕೊಲೆ ಪ್ರಕರಣದ ಪ್ರಮುಖ ಆರೋಪಿಗಳ ಬಗ್ಗೆ ಗೊತ್ತಾಗಿದೆ ಎಂದು ನಗರದಲ್ಲಿ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದರು.

ಪರಪ್ಪನ ಅಗ್ರಹಾರದಲ್ಲಿ ಜಾಮರ್ ಅಳವಡಿಕೆ

ಪರಪ್ಪನ ಅಗ್ರಹಾರದಲ್ಲಿ ಜಾಮರ್ ಅಳವಡಿಸುತ್ತೇವೆ. ಜೈಲಿನ ವ್ಯವಸ್ಥೆ ಸಂಪೂರ್ಣವಾಗಿ ಬದಲಾವಣೆ ಮಾಡ್ತಿದ್ದೇವೆ. ಪರಪ್ಪನ ಅಗ್ರಹಾರ ಜೈಲಿಗೆ ಜಾಮರ್ ಅಳವಡಿಕೆ ಮಾಡೇ ಮಾಡ್ತೀವಿ. 2-3 ತಿಂಗಳ ಒಳಗೆ ಜಾಮರ್ ಹಾಕುವ ಪ್ರಕ್ರಿಯೆ ಮುಗಿಯುತ್ತದೆ. ಕಡತಗಳ ವಿಲೇವಾರಿ ಮಾಡ್ತಿದ್ದಾರೆ. ಸಮಯ ನೋಡದೇ ಅವರು ಕೆಲಸ ಮಾಡ್ತಿದ್ದಾರೆ. ಕೆಲವು ಆಯಾ ಹಂತದಲ್ಲಿ ವಿಲೇವಾರಿ ಮಾಡುತ್ತಿದ್ದಾರೆ ಅಂತಾ ಸಿಎಂ ಬೊಮ್ಮಾಯಿ ಅವರನ್ನು ಆರಗ ಜ್ಞಾನೇಂದ್ರ ಸಮರ್ಥಿಸಿಕೊಂಡರು.