ಅರ್ಕಾವತಿ ನದಿ ನೀರಿನಲ್ಲಿ ಕ್ಯಾನ್ಸರ್ ಕಾರಕ ಮಾರಕ ರಾಸಾಯನಿಕ, ಡಿಡಿಟಿ ಪತ್ತೆ: ಸಂಶೋಧನಾ ವರದಿ

ಅರ್ಕಾವತಿ ನದಿಯ ನೀರಿನ ಮಾದರಿಯಲ್ಲಿ ಪಾದರಸ, ನಿಷೇಧಿತ ಕೀಟನಾಶಕ ಡಿಡಿಟಿ, ಮತ್ತು ಇತರ ಹಾನಿಕಾರಕ ರಾಸಾಯನಿಕಗಳು ಪತ್ತೆಯಾಗಿವೆ. ಸಂಶೋಧನಾ ವರದಿಯೊಂದರ ಪ್ರಕಾರ, ನದಿಯಲ್ಲಿ ಡಿಡಿಟಿ ಮತ್ತು ಇತರ ಲೋಹಗಳ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿದ್ದು, ಚರ್ಮ ರೋಗಗಳಿಂದ ಕ್ಯಾನ್ಸರ್​​ ವರೆಗೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಅರ್ಕಾವತಿ ನದಿ ನೀರಿನಲ್ಲಿ ಕ್ಯಾನ್ಸರ್ ಕಾರಕ ಮಾರಕ ರಾಸಾಯನಿಕ, ಡಿಡಿಟಿ ಪತ್ತೆ: ಸಂಶೋಧನಾ ವರದಿ
ಅರ್ಕಾವತಿ ನದಿ ನೀರಿನಲ್ಲಿ ಕ್ಯಾನ್ಸರ್ ಕಾರಕ ಮಾರಕ ರಾಸಾಯನಿಕ, ಡಿಡಿಟಿ ಪತ್ತೆ
Follow us
Ganapathi Sharma
|

Updated on: Nov 22, 2024 | 7:13 AM

ಬೆಂಗಳೂರು, ನವೆಂಬರ್ 22: ಕೃಷಿ ಮತ್ತು ತೋಟಗಾರಿಕೆಗೆ ಪ್ರಮುಖ ನೀರಿನ ಮೂಲವಾಗಿರುವ ಅರ್ಕಾವತಿ ನದಿಯ ನೀರಿನ ಮಾದರಿಯಲ್ಲಿ ಪಾದರಸ, ನಿಷೇಧಿತ ಕೀಟನಾಶಕ ಡಿಡಿಟಿ, ಕ್ಯಾನ್ಸರ್ ಉಂಟುಮಾಡಬಲ್ಲ ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ (ಪಿಎಎಚ್) ಮತ್ತು ಫ್ಲೋರೈಡ್ ಸೇರಿದಂತೆ ಇತರ ಲೋಹಗಳು ಮತ್ತು ವಿಷಕಾರಿ ಅಂಶಗಳು ಕಂಡುಬಂದಿವೆ ಎಂದು ವರದಿಯಾಗಿದೆ. ನದಿಯಿಂದ ಸಂಗ್ರಹಿಸಿದ ನೀರಿನ ಮತ್ತು ಕೆಸರಿನ ಮಾದರಿಗಳ ಮೇಲೆ ಇತ್ತೀಚೆಗೆ ನಡೆಸಲಾದ ಸಂಶೋಧನೆಗಳಿಂದ ಈ ವಿಚಾರ ತಿಳಿದುಬಂದಿದೆ.

ಅರ್ಕಾವತಿ ನದಿ ಕೈಗಾರಿಕಾ ಮಾಲಿನ್ಯದಿಂದ ತೀವ್ರವಾಗಿ ಬಳಲುತ್ತಿದೆ. ನಂದಿ ಬೆಟ್ಟದ ಬಳಿ ಉಗಮವಾಗುವ ಈ ನದಿ ಬೆಂಗಳೂರಿನ ವೃಷಭಾವತಿಯನ್ನು ಸೇರುತ್ತದೆ. ವೃಷಭಾವತಿ ಕೂಡ ಬೆಂಗಳೂರು ನಗರದ ಕೊಳಚೆ ನೀರು ಮತ್ತು ಕೈಗಾರಿಗೆ ತ್ಯಾಜ್ಯಗಳಿಂದ ಮಲಿನಗೊಳ್ಳುತ್ತಿದೆ. ಅರ್ಕಾವತಿ ನದಿಯ ರಕ್ಷಣೆಗೆ 2 ದಶಕಗಳ ಹಿಂದೆಯೇ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿತ್ತು. ಆದಾಗ್ಯೂ, ಮಾಲಿನ್ಯ ಮುಂದುವರಿದಿದೆ.

ಮೂರು ಕಡೆಗಳಿಂದ ಮಾದರಿ ಸಂಗ್ರಹ

ಬೆಂಗಳೂರು ಮೂಲದ ‘ಪಾನಿ ಅರ್ಥ್‌’ ಸಂಘಟನೆಯ ಸದಸ್ಯರು ಅರ್ಕಾವತಿಯ ನದಿಯ ಮೂರು ಸ್ಥಳಗಳಿಂದ ಮಾದರಿಗಳನ್ನು ಸಂಗ್ರಹಿಸಿದ್ದರು. ತಿಪ್ಪಗೊಂಡನಹಳ್ಳಿ (ಟಿಜಿ ಹಳ್ಳಿ) ಜಲಾಶಯದ ಮೇಲ್ಭಾಗ ಮತ್ತು ಕೆಳಭಾಗ, ದೊಡ್ಡ ಮುದವಾಡಿ ಸೇತುವೆ (ಅರ್ಕಾವತಿ-ವೃಷಭಾವತಿ ಸಂಗಮದಿಂದ 10 ಕಿಮೀ ಮೇಲ್ಭಾಗದ ಜಾಗ) ಬಳಿಯಿಂದ ಮಾದರಿಯನ್ನು ಸಂಗ್ರಹಿಸಲಾಗಿತ್ತು ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ.

ಅರ್ಕಾವತಿ ನೀರಿನ ಮಾದರಿಗಳಲ್ಲಿ ಏನೇನು ಕಂಡುಬಂತು?

1972 ರಿಂದ ಭಾರತದಲ್ಲಿ ನಿಷೇಧಿಸಲಾಗಿರುವ ಮಾರಕ ರಾಸಾಯನಿಕ ಡಿಡಿಟಿ ಅಂಶವು ಅಪಾಯಕಾರಿ ಮಟ್ಟದಲ್ಲಿ ನೀರಿನಲ್ಲಿ ಕಂಡುಬಂದಿದೆ. ಟಿಜಿ ಹಳ್ಳಿ ಜಲಾಶಯದ 1 ಕಿಮೀ ಮೇಲ್ಭಾಗದಿಂದ ಸಂಗ್ರಹಿಸಿರುವ ಮಾದರಿಯಲ್ಲಿ, ಯುರೋಪಿಯನ್ ಒಕ್ಕೂಟದ ನೀರಿನ ಗುಣಮಟ್ಟದ ಮಾನದಂಡಗಳಿಗಿಂತಲೂ 75 ಪಟ್ಟು ಹೆಚ್ಚು ಡಿಡಿಟಿ ಸಾಂಧ್ರತೆ ಕಂಡುಬಂದಿದೆ ಎಂದು ವರದಿ ಉಲ್ಲೇಖಿಸಿದೆ.

ಹೆಕ್ಸಾವೆಲೆಂಟ್ ಕ್ರೋಮಿಯಂ ರಾಸಾಯನಿ ಕೂಡ ನೀರಿನಲ್ಲಿ ಪತ್ತೆಯಾಗಿದೆ. ಕೆನಡಾ ನೀರಿನ ಗುಣಮಟ್ಟ ಮಾರ್ಗಸೂಚಿಗಳ ಪ್ರಕಾರ, ಲೋಹದ ಲೇಪನ ಪ್ರಕ್ರಿಯೆಗಳಲ್ಲಿ ಸಾಮಾನ್ಯವಾಗಿ ಬಳಸಲಾಗುವ ಈ ರಾಸಾಯನಿಕವು, ಅರ್ಕಾವತಿ ನೀರಿನಲ್ಲಿ ಸುರಕ್ಷತಾ ಮಿತಿಗಳಿಂದಲೂ 100 ಪಟ್ಟು ಹೆಚ್ಚಿದೆ ಎಂದು ವರದಿ ತಿಳಿಸಿದೆ.

ಕೆನಡಾ ನೀರಿನ ಗುಣಮಟ್ಟ ಮಾರ್ಗಸೂಚಿಯಲ್ಲಿ ಉಲ್ಲೇಖವಾಗಿರುವುದಕ್ಕಿಂತಲೂ 16 ರಿಂದ 26 ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಪಾದರಸದ ಅಂಶ ಇರವುದೂ ಸಂಶೋಧನೆಯಿಂದ ತಿಳಿದುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಮಟ್ಟಕ್ಕಿಂತಲೂ ಇದು ಹೆಚ್ಚಾಗಿದೆ.

ಚರ್ಮರೋಗ, ಕ್ಯಾನ್ಸರ್​​ ಬರಬಹುದು!

ಈ ಹಾನಿಕಾರಕ ರಾಸಾಯನಿಕಗಳು ಮತ್ತು ಹೈಡ್ರೋಕಾರ್ಬನ್‌ಗಳು ಚರ್ಮದ ಕಿರಿಕಿರಿಯಿಂದ ತೊಡಗಿ ಕ್ಯಾನ್ಸರ್‌ವರೆಗಿನ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎನ್ನಲಾಗಿದೆ. ಎಲ್ಲಾ ಮೂರು ಕಡೆಗಳಲ್ಲಿ ಸಂಗ್ರಹಿಸಿದ ಮಾದರಿಗಳಲ್ಲಿಯೂ ಇವು ಪತ್ತೆಯಾಗಿವೆ.

ಇದನ್ನೂ ಓದಿ: ಬೆಂಗಳೂರು ರಸ್ತೆಗುಂಡಿ ನಿರ್ವಹಣೆಗೆ ಬಿಬಿಎಂಪಿ ಹೊಸ ದಾಳ: ಐಐಎಸ್​ಸಿ ತಜ್ಞರನ್ನೊಳಗೊಂಡ ಸಮಿತಿ ರಚನೆ

ಐಐಟಿ ಮದ್ರಾಸ್‌ನಲ್ಲಿರುವ ‘ಇಂಟರ್ನ್ಯಾಷನಲ್ ಸೆಂಟರ್ ಫಾರ್ ಕ್ಲೀನ್ ವಾಟರ್‌’ನಲ್ಲಿ ಕೆಸರು ಮತ್ತು ನೀರಿನ ಮಾದರಿಗಳನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ವೃಷಭಾವತಿ ನೀರಿನ ಗುಣಮಟ್ಟದ ಸಂಶೋಧನೆ ವರದಿ ಸೇರಿದಂತೆ ವಿವರವಾದ ವರದಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎನ್ನಲಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ