
ಬೆಂಗಳೂರು, (ಮೇ 29): ಕರ್ನಾಟಕದ (Karnataka) ನೂತನ ಮುಖ್ಯಮಂತ್ರಿ ಪದಗ್ರಹಣ ಸಮಾರಂಭಕ್ಕೆ (CM Oath Ceremony) ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್‌ನಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಕಾಂಗ್ರೆಸ್ ಶಾಸಕಾಂಗ ನಾಯಕನ ಆಯ್ಕೆಗೂ ಮೊದಲೇ ಹೊಸ ಸಿಎಂ ಪ್ರಮಾಣವಚನ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆದಿವೆ. ಡಿಕೆ ಶಿವಕುಮಾರ್ (DK Shivakumar) ಅವರೇ ಮುಂದಿನ ಸಿಎಂ ಎನ್ನುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಡಿಕೆ ಶಿವಕುಮಾರ್, ಪ್ರಮಾಣವಚನ ಸ್ವೀಕಾರಕ್ಕೆ ದಿನಾಂಕ, ಸಮಯ ನೀಡುವಂತೆ ರಾಜಗುರು ದ್ವಾರಕನಾಥ್ ಗುರೂಜಿಗೆ (dwarakanath guruji) ಮನವಿ ಮಾಡಿದ್ದು, ಇದೀಗ ಅದರಂತೆ ದ್ವಾರಕನಾಥ್ ಗುರೂಜಿ ಅವರು ಡಿಕೆ ಜೂನ್ 5, 6 ಮತ್ತು 7ರಂದು ಪ್ರಮಾಣವಚನಕ್ಕೆ ಒಳ್ಳೆಯ ದಿನಗಳು ಎಂದು ಶಿವಕುಮಾರ್ ಅವರಿಗೆ ನೀಡಿದ್ದಾರೆ.
ಈ ಬಗ್ಗೆ ದ್ವಾರಕನಾಥ್ ಗುರೂಜಿ ಟಿವಿ9 ಜತೆ ಮಾತನಾಡಿದ್ದು, ಶುಭ ಘಳಿಗೆ ಬಂದಿದೆ, ಈಗಾಗಲೇ ಮುಹೂರ್ತ ಇಟ್ಟಾಗಿದೆ. ನಾಳೆ ನಾಳೆ 30 ಸಿಎಲ್ಪಿ ಸಭೆಯ ಮುಹೂರ್ತ ಕೊಟ್ಟಿದ್ದೆ. ಈಗ ಪ್ರಮಾಣ ವಚನ ಸ್ವೀಕಾರ ಮಾಡೋಕೆ ಮುಂದಿನ ತಿಂಗಳು 5, 6 ಮತ್ತು 7 ದಿನಾಂಕ ಕೊಟ್ಟಿದ್ದೇನೆ. ದೇವರ ಚಿಂತೆ, ಅನುಗೃಹದಿಂದ ಅವರಿಗೆ ಸಿಎಂ ಪದವಿ ಸಿಕ್ಕಿದೆ ಎಂದರು.
ಅಧ್ಯಕ್ಷ ರಾಗಿ ಅವನ ಕೆಲಸ ಮಾಡಿದ್ದಾರೆ. 23ರಲ್ಲೂ ಕೇಳಿದ್ದರು, ನಾನು 136 ಸೀಟು ಬರುತ್ತೆ ಅಂತ ಹೇಳಿದ್ದೆ. ಅದೇ ಸಮಯದಲ್ಲಿ ಲೋಕಸಭೆ ಎಲೆಕ್ಷನ್ ನಲ್ಲೂ ದೇಶದಲ್ಲಿ 141 ಸೀಟು ಬರುತ್ತೆ ಅಂತ ಆವತ್ತೆ ಹೇಳಿದ್ದೇ. ಡಿಕೆ ಶಿವಕುಮಾರ್ ಅಧ್ಯಕ್ಷ ಆಗಿ ಕೆಲಸ ಮಾಡಿದ್ದಾರೆ/ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಕೆಲಸ ಮಾಡಿದ್ದಾರೆ. ನ್ಯಾಯವಾಗಿ ಇಬ್ಬರು ಅಧಿಕಾರ ಹಂಚಿ ಕೊಂಡು ಹೋಗಬೇಕಿತ್ತು . ಆದ್ರೆ ಡಿಕೆ ಶಿವಕುಮಾರ್ ಗೆ ಸ್ವಲ್ಪ ತಡವಾಯಿತು.
ಕಷ್ಟ ಪಟ್ಟಿದ್ದಕ್ಕೆ ಅಧಿಕಾರ ಬಂದಿಲ್ಲವೆಂದು ಸಾಕಷ್ಟು ನೋವು ಪಟ್ಟಿದ್ದಾರೆ. ಆಗ ನಾನು ಅವರ ಗ್ರಹಗಳ ವಿದ್ಯಾಮಾನ ನೋಡಿ ಹೆದರಬೇಡ ಎಂದು ಹೇಳಿದ್ದೆ. ಹಿಂದೆ ಸಹ ಬಂದಾಗ ಹೋಮ ಮಾಡೋದಕ್ಕೆ ಹೇಳಿದ್ದೆ.ದಶಕ ಗಳ ಹಿಂದೆ ಅವರಿಗೆ ಬಂಗಾರಪ್ಪ ಕಾಲದಲ್ಲಿ ಹೇಳಿದ್ದೆ, ಏನೇ ಮಂತ್ರಿ ಪದವಿ ಕೊಟ್ಟರೂ ತೆಗೆದುಕೊಳ್ಳಲು ಹೇಳಿದ್ದೇ, ಆಗಲೂ ದಿನಾಂಕ ಕೊಟ್ಟಿದ್ದೆ. ಆಗ ಅವರಿಗೆ ಒಳ್ಳೆದಾಯ್ತು.
ಬಂಗಾರಪ್ಪ ಕಾಲದಲ್ಲಿ ನಮ್ಮ ಡಿಕೆ ಶಿವಕುಮಾರ್ ಅವರ ಜೊತೆಗಿನ ಸಂಪರ್ಕ ಶುರುವಾಗಿದ್ದು, ಆಗಿನಿಂದ ನಮ್ಮನ್ನ ಬಿಡಲಿಲ್ಲ. ಎಲ್ಲಾ ಸಮಯದಲ್ಲೂ ನಮ್ಮನ್ನ ಕೇಳುತ್ತಿದ್ದ. ಅವರ ಜಾತಕ ನೋಡಿದ್ರೆ ಬುಧಿದಿತ್ಯ ಯೋಗ ಇದೆ. ಅದೊಂದು ದೊಡ್ಡ ಯೋಗ. ಇದು ಇತ್ತಂದ್ರೆ ರಾಜನಾಗುವ ಯೋಗ, ದೊಡ್ಡ ಸ್ಥಾನ ಬರುತ್ತೆ ಅಂತ ಅಧ್ಯಯನದಿಂದ ತಿಳಿದು ಬರುತ್ತದೆ ಎಂದು ವಿವರಿಸಿದರು.
ನೀನು ಒಂದು ದಿನ ಮುಖ್ಯಮಂತ್ರಿ ಆಗಿಯೇ ಆಗುತ್ತಿಯಾ ಎಂದು ನಾನು 40 ವರ್ಷ ದ ಹಿಂದೆಯೇ ಆತನಿಗೆ ಹೇಳಿದ್ದೆ. ಈಗ ಅವರು ಮುಖ್ಯಮಂತ್ರಿ ಆಗುತ್ತಿದ್ದಾರೆ. ಎಲ್ಲವೂ ನಮ್ ಗುರುಗಳು ಅನುಗೃಹದಿಂದ ಅವರು ಸಿಎಂ ಆಗುತ್ತಿದ್ದಾರೆ. ಮುಂದಿನ ಹಾದಿ ಮುಳ್ಳಿನ ಹಾದಿ. ಈ ಮೂರು ವರ್ಷಗಳಲ್ಲಿ ಕೆಲಸ ಮಾಡಿಲ್ಲ. ಮುಂದೆ ಸಾಕಷ್ಟು ಅಭಿವೃದ್ಧಿ ಮಾಡಬೇಕು. ನಿನ್ನ ಗಮನ ಬೆಂಗಳೂರು ಅಭಿವೃದ್ಧಿ ಮಾಡಬೇಕು ಎಂದಿದ್ದೇನೆ. ದೀರ್ಘಕಾಲದ ಮುಖ್ಯಮಂತ್ರಿ ಆಗಿ ಡಿಕೆ ಶಿವಕುಮಾರ್ ಆಡಳಿತ ನಡೆಸುತ್ತಿದ್ದಾರೆ. ಅವರಿಗೆ ಶಕ್ತಿ ಇದೆ, ದೊಡ್ಡ ಶಕ್ತಿ ಇದೆ. ಅವರ ಬಗ್ಗೆ ನಿಮಗ್ಯಾರಿಗೂ ಗೊತ್ತಿಲ್ಲ . ಅವರಿಗೆ ಒಳ್ಳೆ ಗುಣ ಇದೆ, ಕೋಪ ಇದೆ. ಆದ್ರೆ ಹೃದಯ ವಿಶಾಲವಾಗಿದೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ